| ಉಡುಪಿ ಜಿಲ್ಲೆಯ ಸಮಾಜವಿಜ್ಞಾನ ಶಿಕ್ಷಕರ ಎರಡನೆಯ ತಂಡದ STF ತರಬೇತಿಯನ್ನು ದಿನಾಂಕ 16.12.2013 ರಿಂದ 20/12/2013 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಮೊದಲ ದಿನದ ತರಬೇತಿಯ ವರದಿಯನ್ನು ತಮ್ಮ ಮುಂದಿಡಲು ಸಂತೋಷಪಡುತ್ತೇನೆ.ಪೂರ್ವಾಹ್ನ 9.30ಕ್ಕೆ ಸರಿಯಾಗಿ ಸರಕಾರಿ ಪದವಿಪೂರ್ವ ಕಾಲೇಜು ಹೊಸಂಗಡಿಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿಯವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ತರಬೇತಿ ಆರಂಭಗೊಂಡಿತು.ಎಲ್ಲರನ್ನು ತರಬೇತಿಗೆ ಆತ್ಮೀಯವಾಗಿ ಸ್ವಾಗತಿಸಿಕೊಂಡ ತರಬೇತಿಯ ಸಂಯೋಜಕರಾದ ಡಯಟ್ ಹಿರಿಯ ಉಪನ್ಯಾಸಕ ಶ್ರೀರಂಗಧಾಮಪ್ಪರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ತರಬೇತಿಯ ಧ್ಯೇಯೋದ್ದೇಶಗಳನ್ನು ಶಿಬಿರಾರ್ಥಿಗಳ ಮುಂದಿಟ್ಟರು.ಸಮಯಪಾಲನೆ, ಸ್ವಚ್ಛತೆ, ಕರ್ತವ್ಯಪಾಲನೆಗಳ ಕುರಿತು ಸಾಮಾನ್ಯ ಸೂಚನೆಗಳನ್ನು ನೀಡಿದರು.ಸಂಪನ್ಮೂಲವ್ಯಕ್ತಿ ಶ್ರೀ ಮಹಾಬಲೇಶ್ವರ ಭಾಗ್ವತ್ ಕಾರ್ಯಕ್ರಮ ನಿರ್ವಹಿಸಿದ್ದು ಸಂಪನ್ಮೂಲವ್ಯಕ್ತಿಗಳಾದ ಶ್ರೀ ಸದಾನಂದ್ ಬೈಂದೂರು,ಶ್ರೀ ಪ್ರದೀಪ್ ಉಪಸ್ಥಿತರಿದ್ದರು. ಮೊದಲ ಅವಧಿಯಲ್ಲಿ ಶಿಬಿರಾರ್ಥಿಗಳ ಪರಿಚಯದ ಬಳಿಕ ಇಮೇಲ್ ID ಖಾತೆ ತೆರೆಯಲು,ನೋಡಲು, mail ಮಾಡಲು, ತರಬೇತಿ ನೀಡಲಾಯಿತು.ನಂತರ ಪ್ರತಿಯೊಬ್ಬ ಕಲಿಕಾರ್ಥಿಯ ವಿವರಗಳನ್ನು (google form)ನಲ್ಲಿkoerನಲ್ಲಿ ದಾಖಲಿಸಲಾಯಿತು.ಚಹಾ ವಿರಾಮದ ಬಳಿಕ ಎರಡನೆಯ ಅವಧಿಯ ಪ್ರಾರಂಭ.ಈ ಅವಧಿಯಲ್ಲಿ ರಂಗಧಾಮಪ್ಪ ಸರ್ ರವರು ಎಸ್.ಟಿ.ಎಫ್.ನ ಮಹತ್ವದ ಕುರಿತಾಗಿ ವಿವರಿಸುತ್ತಾ, ತಂತ್ರಜ್ಞಾನ ಬಳಕೆಯ ಕೌಶಲವನ್ನು ಹೆಚ್ಚಿಸುವಲ್ಲಿ ,ಮಾಹಿತಿ ಸಂಗ್ರಹಿಸುವ ಸಾಮರ್ಥವನ್ನು ಬೆಳೆಸುವಲ್ಲಿ,ಸಮಾಜವಿಜ್ಞಾನ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ,ಶಿಕ್ಷಕರ ವೃತ್ತಿಪರತೆಯನ್ನು ಹೆಚ್ಚಿಸಿ ಶಿಕ್ಷಕರನ್ನು ಕ್ರಿಯಾಶೀಲರನ್ನಾಗಿಸುವಲ್ಲಿ ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಎಸ್.ಟಿ.ಎಫ್ ನ ಪ್ರಾಮುಖ್ಯತೆ ಹಾಗೂ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು, ಕಲಿಕೆಯನ್ನು ತರಗತಿಯ ಆಚೆಗೂ ವಿಸ್ತರಿಸುವುದು,ಮಕ್ಕಳನ್ನು ಕಂಠಪಾಠದಿಂದ ಮುಕ್ತಗೊಳಿಸುವುದು ಇತ್ಯಾದಿ ಎನ್.ಸಿ.ಎಫ್.೨೦೦೫ ರ ಗುರಿಗಳನ್ನು ಈಡೇರಿಸುವಲ್ಲಿ STFನ ಅಗತ್ಯತೆಗಳನ್ನು ಮನದಟ್ಟು ಮಾಡಿದರು. ಈ ತರಬೇತಿ ಕೇವಲ ಕಂಪ್ಯೂಟರ್ ಸಾಕ್ಷರತೆಗಾಗಿ ಅಲ್ಲ ,ಕೌಶಲಗಳಿಸಲು .ಆದ್ದರಿಂದ ಎಲ್ಲರೂ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕೆಂಬ ಕಿವಿಮಾತನ್ನು ಹೇಳಿದರು.ಎಡುಬುಂಟುವನ್ನು ಪರಿಚಯಿಸುತ್ತಾ ಇದು ವೈರಸ್ ಮುಕ್ತ, ಉಚಿತ,೩೦೦೦ಕ್ಕಿಂತಲೂ ಹೆಚ್ಚುAplication ಗಳನ್ನು ಹೊಂದಿದೆ,ಹೊಸಹೊಸ operating systemಗಳನ್ನುಸೇರಿಸಿಕೊಳ್ಳುತ್ತಿದೆ,ಪ್ರಪಂಚದ ಎಲ್ಲಾ ಕಡೆ ಮತ್ತು ವೇಗವಾಗಿ ಬಳಕೆಮಾಡಬಹುದಾದ ವೈಶಿಷ್ಟ್ಯತೆ ಹೊಂದಿದೆ ಎಂದರು.ನಂತರದ ಅವಧಿಯಲ್ಲಿ ಮಹಾಬಲೇಶ್ವರ ಭಾಗ್ವತ್ ಇಂಗ್ಲಿಷ್ ,ಕನ್ನಡ ಟೈಪಿಂಗ್ ಮಾಡುವ ವಿಧಾನ ಹಾಗೂ ಹಂತಗಳನ್ನು ತಿಳಿಸಿಕೊಟ್ಟರು.Folder create ಮಾಡುವುದು,ಹೆಸರಿಸುವುದು,file save ಮಾಡುವುದು,save as ,desktop ಅಥವಾ placesನಲ್ಲಿ save ಮಾಡುವುದು, ಕನ್ನಡ ಟೈಪಿಂಗ್ ನಲ್ಲಿ ಅಕ್ಷರಗಳ ಬಳಕೆಗಾಗಿ KOER ನ ಸಹಾಯ ಪಡೆಯುವುದು ಇತ್ಯಾದಿಗಳನ್ನು ತಿಳಿದುಕೊಳ್ಳಲಾಯಿತು.ಊಟದ ವಿರಾಮದ ಬಳಿಕ ಟೈಪಿಂಗ್ ಮಾಡುವ ಕ್ರಮ,document save ಮಾಡುವುದು , Internetಗೆ ಪ್ರವೇಶ ಮಾಡುವುದು,Inbox ನಲ್ಲಿ ನ message ,file, photo, ಚಿತ್ರಗಳನ್ನು ನೋಡುವುದು, ,reply ಮಾಡುವುದು,forward ಮಾಡುವುದು,compose ಮಾಡುವುದು , compose ನಲ್ಲಿ ವಿಳಾಸ set ಮಾಡುವುದು,ಬದಲಾಯಿಸುವುದು,sign out ಮಾಡುವುದು ಇತ್ಯಾದಿಗಳ ಕುರಿತು ಶ್ರೀ ಪ್ರದೀಪ್ ರವರು ಮಾಹಿತಿ ನೀಡಿದರು,ಕಲಿಕೆ ದೃಢ ಪಟ್ಟ ಬಳಿಕ ಚಹಾ ವಿರಾಮ.ತದನಂತರ ಅಂತರ್ಜಾಲದಲ್ಲಿ ಸಂಪನ್ಮೂಲಗಳನ್ನು, ಚಿತ್ರಗಳನ್ನು ಹುಡುಕುವುದು ಮತ್ತು download ಮಾಡುವುದು,save ಮಾಡುವುದು,copyಮಾಡಿ ಬೇಕಾದ ದಾಖಲೆಗಳೊಂದಿಗೆ ಚಿತ್ರಗಳನ್ನು paste ಮಾಡುವುದು ಇತ್ಯಾದಿಗಳನ್ನು ಕಲಿಯಲಾಯಿತು.ಒಟ್ಟಿನಲ್ಲಿ ಹೇಳುವುದಾದರೆ ಸಂಪನ್ಮೂಲ ವ್ಯಕ್ತಿಗಳೆಲ್ಲರೂ ಸೇರಿ ಕಲಿಕಾರ್ಥಿಗಳತ್ತ ವಯಕ್ತಿಕ ಗಮನ ನೀಡಿ ಕಲಿಸುತ್ತಿರುವ ಈ ತರಬೇತಿಯಲ್ಲಿ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ ತೊಡಗಿಸಿ ಕೊಂಡಿರುವುದು ತರಬೇತಿಯ ಅನಿವಾರ್ಯತೆ ಹಾಗೂ ಸಫಲತೆಗೆ ಸಾಕ್ಷಿಯಾಗಿತ್ತು.'''ವರದಿ:ಶಾಲಿನಿ ಎನ್. ಶೆಟ್ಟಿ ,ಸ.ಸಂ.ಪ್ರೌ.ಶಾಲೆ, ಅಜ್ಜರಕಾಡು.ಉಡುಪಿ'''''' | | ಉಡುಪಿ ಜಿಲ್ಲೆಯ ಸಮಾಜವಿಜ್ಞಾನ ಶಿಕ್ಷಕರ ಎರಡನೆಯ ತಂಡದ STF ತರಬೇತಿಯನ್ನು ದಿನಾಂಕ 16.12.2013 ರಿಂದ 20/12/2013 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಮೊದಲ ದಿನದ ತರಬೇತಿಯ ವರದಿಯನ್ನು ತಮ್ಮ ಮುಂದಿಡಲು ಸಂತೋಷಪಡುತ್ತೇನೆ.ಪೂರ್ವಾಹ್ನ 9.30ಕ್ಕೆ ಸರಿಯಾಗಿ ಸರಕಾರಿ ಪದವಿಪೂರ್ವ ಕಾಲೇಜು ಹೊಸಂಗಡಿಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿಯವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ತರಬೇತಿ ಆರಂಭಗೊಂಡಿತು.ಎಲ್ಲರನ್ನು ತರಬೇತಿಗೆ ಆತ್ಮೀಯವಾಗಿ ಸ್ವಾಗತಿಸಿಕೊಂಡ ತರಬೇತಿಯ ಸಂಯೋಜಕರಾದ ಡಯಟ್ ಹಿರಿಯ ಉಪನ್ಯಾಸಕ ಶ್ರೀರಂಗಧಾಮಪ್ಪರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ತರಬೇತಿಯ ಧ್ಯೇಯೋದ್ದೇಶಗಳನ್ನು ಶಿಬಿರಾರ್ಥಿಗಳ ಮುಂದಿಟ್ಟರು.ಸಮಯಪಾಲನೆ, ಸ್ವಚ್ಛತೆ, ಕರ್ತವ್ಯಪಾಲನೆಗಳ ಕುರಿತು ಸಾಮಾನ್ಯ ಸೂಚನೆಗಳನ್ನು ನೀಡಿದರು.ಸಂಪನ್ಮೂಲವ್ಯಕ್ತಿ ಶ್ರೀ ಮಹಾಬಲೇಶ್ವರ ಭಾಗ್ವತ್ ಕಾರ್ಯಕ್ರಮ ನಿರ್ವಹಿಸಿದ್ದು ಸಂಪನ್ಮೂಲವ್ಯಕ್ತಿಗಳಾದ ಶ್ರೀ ಸದಾನಂದ್ ಬೈಂದೂರು,ಶ್ರೀ ಪ್ರದೀಪ್ ಉಪಸ್ಥಿತರಿದ್ದರು. ಮೊದಲ ಅವಧಿಯಲ್ಲಿ ಶಿಬಿರಾರ್ಥಿಗಳ ಪರಿಚಯದ ಬಳಿಕ ಇಮೇಲ್ ID ಖಾತೆ ತೆರೆಯಲು,ನೋಡಲು, mail ಮಾಡಲು, ತರಬೇತಿ ನೀಡಲಾಯಿತು.ನಂತರ ಪ್ರತಿಯೊಬ್ಬ ಕಲಿಕಾರ್ಥಿಯ ವಿವರಗಳನ್ನು (google form)ನಲ್ಲಿkoerನಲ್ಲಿ ದಾಖಲಿಸಲಾಯಿತು.ಚಹಾ ವಿರಾಮದ ಬಳಿಕ ಎರಡನೆಯ ಅವಧಿಯ ಪ್ರಾರಂಭ.ಈ ಅವಧಿಯಲ್ಲಿ ರಂಗಧಾಮಪ್ಪ ಸರ್ ರವರು ಎಸ್.ಟಿ.ಎಫ್.ನ ಮಹತ್ವದ ಕುರಿತಾಗಿ ವಿವರಿಸುತ್ತಾ, ತಂತ್ರಜ್ಞಾನ ಬಳಕೆಯ ಕೌಶಲವನ್ನು ಹೆಚ್ಚಿಸುವಲ್ಲಿ ,ಮಾಹಿತಿ ಸಂಗ್ರಹಿಸುವ ಸಾಮರ್ಥವನ್ನು ಬೆಳೆಸುವಲ್ಲಿ,ಸಮಾಜವಿಜ್ಞಾನ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ,ಶಿಕ್ಷಕರ ವೃತ್ತಿಪರತೆಯನ್ನು ಹೆಚ್ಚಿಸಿ ಶಿಕ್ಷಕರನ್ನು ಕ್ರಿಯಾಶೀಲರನ್ನಾಗಿಸುವಲ್ಲಿ ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಎಸ್.ಟಿ.ಎಫ್ ನ ಪ್ರಾಮುಖ್ಯತೆ ಹಾಗೂ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು, ಕಲಿಕೆಯನ್ನು ತರಗತಿಯ ಆಚೆಗೂ ವಿಸ್ತರಿಸುವುದು,ಮಕ್ಕಳನ್ನು ಕಂಠಪಾಠದಿಂದ ಮುಕ್ತಗೊಳಿಸುವುದು ಇತ್ಯಾದಿ ಎನ್.ಸಿ.ಎಫ್.೨೦೦೫ ರ ಗುರಿಗಳನ್ನು ಈಡೇರಿಸುವಲ್ಲಿ STFನ ಅಗತ್ಯತೆಗಳನ್ನು ಮನದಟ್ಟು ಮಾಡಿದರು. ಈ ತರಬೇತಿ ಕೇವಲ ಕಂಪ್ಯೂಟರ್ ಸಾಕ್ಷರತೆಗಾಗಿ ಅಲ್ಲ ,ಕೌಶಲಗಳಿಸಲು .ಆದ್ದರಿಂದ ಎಲ್ಲರೂ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕೆಂಬ ಕಿವಿಮಾತನ್ನು ಹೇಳಿದರು.ಎಡುಬುಂಟುವನ್ನು ಪರಿಚಯಿಸುತ್ತಾ ಇದು ವೈರಸ್ ಮುಕ್ತ, ಉಚಿತ,೩೦೦೦ಕ್ಕಿಂತಲೂ ಹೆಚ್ಚುAplication ಗಳನ್ನು ಹೊಂದಿದೆ,ಹೊಸಹೊಸ operating systemಗಳನ್ನುಸೇರಿಸಿಕೊಳ್ಳುತ್ತಿದೆ,ಪ್ರಪಂಚದ ಎಲ್ಲಾ ಕಡೆ ಮತ್ತು ವೇಗವಾಗಿ ಬಳಕೆಮಾಡಬಹುದಾದ ವೈಶಿಷ್ಟ್ಯತೆ ಹೊಂದಿದೆ ಎಂದರು.ನಂತರದ ಅವಧಿಯಲ್ಲಿ ಮಹಾಬಲೇಶ್ವರ ಭಾಗ್ವತ್ ಇಂಗ್ಲಿಷ್ ,ಕನ್ನಡ ಟೈಪಿಂಗ್ ಮಾಡುವ ವಿಧಾನ ಹಾಗೂ ಹಂತಗಳನ್ನು ತಿಳಿಸಿಕೊಟ್ಟರು.Folder create ಮಾಡುವುದು,ಹೆಸರಿಸುವುದು,file save ಮಾಡುವುದು,save as ,desktop ಅಥವಾ placesನಲ್ಲಿ save ಮಾಡುವುದು, ಕನ್ನಡ ಟೈಪಿಂಗ್ ನಲ್ಲಿ ಅಕ್ಷರಗಳ ಬಳಕೆಗಾಗಿ KOER ನ ಸಹಾಯ ಪಡೆಯುವುದು ಇತ್ಯಾದಿಗಳನ್ನು ತಿಳಿದುಕೊಳ್ಳಲಾಯಿತು.ಊಟದ ವಿರಾಮದ ಬಳಿಕ ಟೈಪಿಂಗ್ ಮಾಡುವ ಕ್ರಮ,document save ಮಾಡುವುದು , Internetಗೆ ಪ್ರವೇಶ ಮಾಡುವುದು,Inbox ನಲ್ಲಿ ನ message ,file, photo, ಚಿತ್ರಗಳನ್ನು ನೋಡುವುದು, ,reply ಮಾಡುವುದು,forward ಮಾಡುವುದು,compose ಮಾಡುವುದು , compose ನಲ್ಲಿ ವಿಳಾಸ set ಮಾಡುವುದು,ಬದಲಾಯಿಸುವುದು,sign out ಮಾಡುವುದು ಇತ್ಯಾದಿಗಳ ಕುರಿತು ಶ್ರೀ ಪ್ರದೀಪ್ ರವರು ಮಾಹಿತಿ ನೀಡಿದರು,ಕಲಿಕೆ ದೃಢ ಪಟ್ಟ ಬಳಿಕ ಚಹಾ ವಿರಾಮ.ತದನಂತರ ಅಂತರ್ಜಾಲದಲ್ಲಿ ಸಂಪನ್ಮೂಲಗಳನ್ನು, ಚಿತ್ರಗಳನ್ನು ಹುಡುಕುವುದು ಮತ್ತು download ಮಾಡುವುದು,save ಮಾಡುವುದು,copyಮಾಡಿ ಬೇಕಾದ ದಾಖಲೆಗಳೊಂದಿಗೆ ಚಿತ್ರಗಳನ್ನು paste ಮಾಡುವುದು ಇತ್ಯಾದಿಗಳನ್ನು ಕಲಿಯಲಾಯಿತು.ಒಟ್ಟಿನಲ್ಲಿ ಹೇಳುವುದಾದರೆ ಸಂಪನ್ಮೂಲ ವ್ಯಕ್ತಿಗಳೆಲ್ಲರೂ ಸೇರಿ ಕಲಿಕಾರ್ಥಿಗಳತ್ತ ವಯಕ್ತಿಕ ಗಮನ ನೀಡಿ ಕಲಿಸುತ್ತಿರುವ ಈ ತರಬೇತಿಯಲ್ಲಿ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ ತೊಡಗಿಸಿ ಕೊಂಡಿರುವುದು ತರಬೇತಿಯ ಅನಿವಾರ್ಯತೆ ಹಾಗೂ ಸಫಲತೆಗೆ ಸಾಕ್ಷಿಯಾಗಿತ್ತು.'''ವರದಿ:ಶಾಲಿನಿ ಎನ್. ಶೆಟ್ಟಿ ,ಸ.ಸಂ.ಪ್ರೌ.ಶಾಲೆ, ಅಜ್ಜರಕಾಡು.ಉಡುಪಿ'''''' |