Mysore Division Workshop Summary

From Karnataka Open Educational Resources
Revision as of 14:55, 3 August 2015 by Rakesh (talk | contribs)
(diff) ← Older revision | Latest revision (diff) | Newer revision → (diff)
Jump to navigation Jump to search

ಮೈಸುರು ವಿಭಾಗ ಹಂತದ ಎಂ. ಆರ್. ಪಿ. ತರಬೇತಿ ಕಾರ್ಯಗಾರ

ಆತ್ಮೀಯಾ ಮಂಜುನಾಥ್ ಸರ್, ಮೈಸೂರ ವಿಭಾಗದ ವಿಜ್ಞಾನ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರ ಯಶಸ್ವಿಯಾಗಿ ಮುಗಿದಿದ್ದು, ಈ ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ತಾವು ಕಲಿತಿರುವ ವಿಷಯವನ್ನು ಜಿಲ್ಲಾ ಹಂತದಲ್ಲಿ ಶಿಕ್ಷಕರಿಗೆ ಕಲಿಸಲು ಹೊರಟಿದ್ದಾರೆ. ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಮೈಸೂರ ವಿಭಾಗದ ತರಬೇತಿಯ ಬಗ್ಗೆ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಬಯಸುತ್ತೇನೆ.

ಮೈಸೂರ ವಿಭಾಗದ ೪ ಜನ ಎಸ್.ಆರ್. ಪಿ. ಗಳಲ್ಲಿ 4 ಜನ ಎಸ್.ಆರ್. ಪಿ.ಗಳು ಭಾಗವಹಿಸಿರುತ್ತಾರೆ (ಶ್ರೀ ದರ್ಶನ ಯು.ಸಿ ಸರ್ ಇವರು ಗೈರು ಹಾಜರಾಗಿದ್ದಾರೆ) ಬಂದಿರುವ ಎಲ್ಲಾ ಎಸ್.ಆರ್. ಪಿ. ಗಳು ತುಂಬಾ ಉತ್ಸುಹಕರಾಗಿ ಶಿಕ್ಷಕರಿಗೆ ತರಬೇತಿಯನ್ನು ನೀಡಿದರು.

ಮೊದಲಿಗೆ ಮೈಸೂರ ವಿಭಾಗದ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳ ಕಾರ್ಯಗಾರದ ಎಲ್ಲ ವ್ಯವಸ್ಥೆಗಳು ಚೆನ್ನಾಗಿದ್ದವು, ಈ ಕಾರ್ಯಗಾರಕ್ಕೆ ಮೈಸೂರ, ಚಾಮರಾಜನಗರ ,ಚಿಕ್ಕಮಂಗಳೂರ,ದಕ್ಷಿಣ ಕನ್ನಡ , ಕೊಡಗು ,ಮಂಡ್ಯ ಮತ್ತು ಉಡುಪಿ ಜಿಲ್ಲೆಯಿಂದ ಸಂಪನ್ಮೂಲ ವ್ಯಕ್ತಿಗಳು ಬಂದಿದ್ದರು.

ಮೊದಲನೇ ದಿನ : ದಕ್ಷಿಣ ಕನ್ನಡ ಜಿಲ್ಲೆಯಿಂದ ಯಾವ ಶಿಕ್ಷಕರು ತರಬೇತಿಗೆ ಬಂದಿರಿರಲಿಲ್ಲ ಮಧ್ಯಾಹ್ನ ಅವಧಿಯಲ್ಲಿ ೩ ಜನ ಶಿಕ್ಷಕರು ತರಬೇತಿಗೆ ಬಂದರು . ಈ ತರಬೇತಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ CBZ ಶಿಕ್ಷಕರು ಬಂದಿದ್ದರು ಆದರೆ ೩ ಜನ ಶಿಕ್ಷಕರು ಮಾತ್ರ PCM ಶಿಕ್ಷಕರು ಬಂದಿದ್ದರು ಅವರು ಸಹ ವಿಜ್ಞಾನದಲ್ಲಿ ಭೌತಶಾಸ್ತ್ರ ವಿಷಯ ಬೋಧನೆ ಮಾಡುವ ಶಿಕ್ಷಕರಾಗಿದ್ದರಿಂದ ಇಲ್ಲಿ ಯಾವುದೇ ತರಹದ ಸಮಸ್ಯೆಯೂ ಆಗಲಿಲ್ಲ.


ಎರಡನೇ ದಿನ : ಡಯಟ್ ನ ಉಪನ್ಯಾಸಕರು ಸೇರಿದಂತೆ ಸಂಪೂರ್ಣ ೩೦ ಜನ ಶಿಕ್ಷಕತು ತರಬೇತಿಯಲ್ಲಿ ಪಾಲ್ಗೊಂಡಿದ್ದರು . ಈ ದಿನ ತುಂಬಾ ವಿಜ್ಞಾನಕ್ಕೆ ಸಂಬಂದಪಟ್ಟಂತೆ ಚರ್ಚೆಗಳು ನಡೆಯಿತು , ಕೆಲವು ಚರ್ಚಿಸಿದ ವಿಷಯಗಳು
- ಈ ತರಬೇತಿಯು ನಮಗೆ ಮೊದಲೇ ಅದುದ್ದಾಗಿದೆ ಆದ್ದರಿಂದ ಮುಂದೆ ಏನು ಮಾಡಬೇಕು ?
- ಪ್ರಯೋಗ ಮಾಡುವ ವಿಧಾನ ಎಲ್ಲರಿಗೂ ಗೊತ್ತಿರುವ ವಿಷಯ
- ಚಟುವಟಿಕೆಗೆ ಸಮಯ ಪೂರಕವಾಗುವದಿಲ್ಲ ಜೋತೆಗೆ ಪಠ್ಯ ಮುಗಿಸುವದು ಸಹ ಆಗುವದಿಲ್ಲ .
- ಯಾವ ಶಿಕ್ಷಕರಿಗೆ ತರಬೇತಿ ನಿಡಬೇಕು (ಖಾಸಗಿ ಶಾಲೆ, ಮುರಾರ್ಜಿ ದೇಸಾಯಿ , ಇತರೆ)
ಇದಾದ ನಂತರ ಎಲ್ಲಾ ಚರ್ಚೆಗಳಿಗೆ ಪರಿಹಾರ ಕಂಡುಕೊಳ್ಳಲಾಯಿತು .


ಮೂರನೇ ದಿನ : ವಿಜ್ಞಾನ ಪ್ರಯೋಗಾಲಯ ದಿನದ ಚಟುವಟಿಕೆಯನ್ನು CTE ಮಂಗಳೂರ ನಲ್ಲಿ ನಡೆಯಿತು . ಜೋತೆಗೆ ಪ್ರಯೋಗಾಲಯದ ವಿಡಿಯೋಗಳನ್ನು ವಿಕ್ಷೀಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.


ನಾಲ್ಕನೇ ದಿನ : ಮುಂಜಾನೆ ಸಮಯ 08:30 CTE ಮಂಗಳೂರ ನಿಂದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಬೇಟಿ ನಿಡಲಾಯಿತು ಸುಮಾರು ೦೩ ಗಂಟೆಯ ವರೆಗು ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮೋದಲಿಗೆ ಪ್ರೋಫೆಸರ್ ರವರನ್ನು ಬೇಟಿ ಮಾಡಿ ಅವರಿಂದ ವಿಜ್ಞಾನಕ್ಕೆ ಸಂಭಂದಪಟ್ಟಂತೆ ಹಲವಾರು ವಿಷಯಗಳ ಮಾಹಿತಿಯನ್ನು ತಿಳಿದುಕೊಳ್ಳಲಾಯಿತು ಅವರ ಮಾತಿನಿಂದ ಹಲವಾರು ಶಿಕ್ಷಕರು ತುಂಬಾ ಖುಷಿ ಪಟ್ಟರು . ನಂತರದಲ್ಲಿ ಪ್ರಯೋಗಗಳನ್ನು ಮಾಡುತ್ತಾ ವಿಜ್ಞಾನ ಕ್ಷೇತ್ರಕ್ಕೆ ಕಾಲಿಟ್ಟಂತೆ ಭಾವಿತರಾದರು .

3D ಚಲನಚಿತ್ರವನ್ನು ನೋಡಲಾಯಿತು . ಆದಾದ ನಂತರ ಉದ್ಯಾನವನದಲ್ಲಿ ಹಲವಾರು ಪ್ರಾಣಿ ಪಕ್ಷೀಗಳ ಆಕೃತಿಯನ್ನು ನೋಡಲಾಯಿತು .
ಮಧ್ಯಾಹ್ನ ಅವಧಿಯನ್ನು PhET ನ ಮೂಲಕ ಚಟುವಟಿಯನ್ನು ತಯಾರಿಸಲಾಯಿತು .


ಐದನೇ ದಿನ : ೫ ದಿನಗಳ ಕಾರ್ಯಗಾರ ಮುಗಿದ ನಂತರ ಬೇರೆ ಬೇರೆ ಜಿಲ್ಲೆಯ ಶಿಕ್ಷಕರನ್ನು ತುಲನೆ ಮಾಡಿ ನೊಡಿದಾಗ ಬಂದಿರುವ ಎಲ್ಲ ಶಿಕ್ಷಕರಿಗೆ ಕಂಪ್ಯೂಟರ ಬಳಕೆಯ ಜ್ಞಾನ ಹೊಂದಿದ್ದಾರೆ , ಅಲ್ಲದೆ ಬಂದಿರುವ ಎಲ್ಲಾ ಶಿಕ್ಷಕರು ತುಂಬಾ ಆಸಕ್ತಿಯಿಂದ ಭಾಗವಹಿಸಿ ಮುಂದೆ ನಡೆಯಲಿರುವ ಜಿಲ್ಲಾ ಹಂತದ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ ಅದಕ್ಕೆ ಬೇಕಾಗಿರುವ ಸಂಪನ್ಮೂಲಗಳೊಂದಿಗೆ ಸಿದ್ದರಾಗಿದ್ದೆವೆ ಎಂಬ ಮಾಹಿತಿಯನ್ನು ನಿಡಿದರು .

ಒಟ್ಟಾರೆ ೫ ಜನ ಶಿಕ್ಷಕರ ಲ್ಯಾಪಟಾಪ್ ಗಳಿಗೆ ಉಬುಂಟು ಸಾಪ್ಟವೇರ್ Install ಮಾಡಲಾಗಿದೆ .

ಕಾರ್ಯಗಾರ ಸ್ಥಳದ ವ್ಯವಸ್ಥೆಗಳು ಬಹಳ ಅಚ್ಚುಕಟ್ಟಾಗಿದ್ದು, ಯಾವುದೇ ರೀತಿಯ ಅನಾನುಕೂಲಗಳಾಗದಂತೆ ನೋಡಿಕೊಳ್ಳಲಾಯಿತು, ಇದಕ್ಕಾಗಿ ಮಂಗಳೂರ CTE ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ.

ಈ ಕಾರ್ಯಾಗಾರದ ಎಲ್ಲಾ ವ್ಯವಸ್ಥೆಗಳು ಸಮಯಕ್ಕೆ ಸರಿಯಾಗಿ ಲಭ್ಯವಾಗಲು ಶ್ರಮಿಸಿದ ಶ್ರೀ ಕುಮಾರಸ್ವಾಮಿ ಸರ್ ನಮ್ಮ ತಂಡದ ಪರವಾಗಿ ಧನ್ಯವಾದಗಳು ಸರ್.

ಈ ಕಾರ್ಯಾಗಾರವು ಅಚ್ಚುಕಟ್ಟಾಗಿ ಮುಗಿಯುದಕ್ಕೆ ಪರೋಕ್ಷವಾಗಿ ಪ್ರೇರಣೆ ನೀಡಿದ ನಿಮಗೆ ನಮ್ಮ ತಂಡದ ಪರವಾಗಿ ಕೃತಜ್ಞತೆಗಳು .

ಧನ್ಯವಾದಗಳು
ಅಶೋಕ