STF - Class VIII Text Book Social Sciences Discussion

ಆತ್ಮ್ಮೀಯ ಸಮಾಜ ವಿಜ್ಞ್ನಾನ ಶಿಕ್ಷಕರೆ,

ಈ ವರ್ಷ VIII ನೇ ತರಗತಿಯ ಪಠ್ಯ ಪುಸ್ತಕವನ್ನು ಪುನರ್ ರಚಿಸಲಾಗಿದೆ. ಹೀಗೆ ಪುನರ್ ರಚಿಸಿ ಬಿಡುಗಡೆ ಮಾಡಿದಂತಹ ಪುಸ್ತಕದಲ್ಲಿ ದೋಷಗಳು ಹಾಗು ತಪ್ಪು ಗಳು ಇರುವುದು ಸಹಜ. ಶಿಕ್ಷಕರು (ಹಾಗು ಮಕ್ಕಳು ) ಈ ತಪ್ಪುಗಳನ್ನು ಗುರುತಿಸುತ್ತಾರೆ, ಆದರೆ ಈ ಮಾಹಿತಿಯನ್ನು ಪಠ್ಯ ಪುಸ್ತಕ ರಚನಾ ಸಮಿತಿಯೊಂದಿಗೆ ಹಂಚಿಕೊಳ್ಳುವ ಯಾವುದೇ ಸುಲಭ ಮಾರ್ಗ / ವ್ಯವಸ್ಥೆ ನಮಗೆ ತಿಳಿದಿಲ್ಲ. ವಿಜ್ಞಾನ ಪುಸ್ತಕದ ಬಗ್ಗೆ ಶಶಿ ಕುಮಾರ್ ರವರ, ಮತ್ತು ಗಣಿತ ಪುಸ್ತಕದ ಮೇಲೆ ರಾಜೇಶ್ ರವರ mailಗಳನ್ನು ಮೇಲಿಂಗ್ ಲಿಸ್ಟ್ ನಲ್ಲಿ ಗಮನಿಸಿ.

ಅದರೊಟ್ಟಿಗೆ, ಮುಂದಿನ ಆವೃತ್ತಿ ಪ್ರಕಟವಾಗುವ ಹೊತ್ತಿಗೆ ಪುಸ್ತಕದ ಬಗ ಪಠ್ಯ ಪುಸ್ತಕ ರಚನಾ ಸಮಿತಿಗೆ ಸರಿಯಾದ ಹಾಗು ಸಂಪೂರ್ಣವಾಗಿ ದೊರೆಯುವುದಿಲ್ಲವಾದ್ದರಿಂದ ಮುಂಬರುವ ಪುಸ್ತಕದಲ್ಲಿಯೂ ತಪ್ಪು ಮತ್ತು ದೋಷಗಳು ಮರುಕಳಿಸುತ್ತವೆ.

ಆದರೆ, STF ಗೆ ಧನ್ಯವಾದಗಳು, ಈಗ ನಾವು ನಮ್ಮ ಅಭಿಪ್ರಾಯಗಳು ಮತ್ತು ಪ್ರತಿಕ್ರಿಯೆಗಳು ಪಠ್ಯ ಪುಸ್ತಕ ರಚನಾ ಸಮಿತಿಗೆ ತಲುಪುವಂತಹ ವೇದಿಕೆಯನ್ನು ಕಲ್ಪಿಸಿದ್ದು, ಅದು ಸಾರ್ವಜನಿಕವಾಗಿ ಲಭ್ಯವಾಗಿದ್ದು , ಯಾರು ಬೇಕಾದರು ಸಲಹೆ ಸೂಚನೆಗಳನ್ನು ಸೇರಿಸಲು ಸುಲಭಮಾಡುತ್ತದೆ. ಈ ವೇದಿಕೆಯು ಆನ್ ಲೈನ್ ನಲ್ಲಿ ಲಭ್ಯವಿದ್ದು , ಇದರರ್ಥ ನಾವು ಎಲ್ಲಿಂದ ಬೇಕಾದರು, ಯಾವ ಸಂದರ್ಭದಲ್ಲಿಯಾದರೂ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು, ಇದಕ್ಕೆ, ಬೇಕಾಗಿರುವುದು ಕೇವಲ internet connection. ಬಸವಕಲ್ಯಾಣ ಅಥವ ಬೆಳ್ತಂಗಡಿ ಅಥವ ಇನ್ನಾವುದೆ ಜಿಲ್ಲೆಯಿಂದಾದರೂ ಕಳುಹಿಸಿದರೂ ಅದು ಬೆಂಗಳೂರಿನಿಂದ ಕಳಿಸಿದಷ್ಟೇ ಸಮರ್ಪಕ ಮತ್ತು ಸಮಯದಲ್ಲಿ ಸಮಿಗೆ ತಲುಪುತ್ತದೆ.

ಎಲ್ಲಾ ಅಭಿಪ್ರಾಯಗಳನ್ನು ಕೊನೆಗೆ ಸಂಗ್ರಹಿಸಿ ಅದನ್ನು ಪಠ್ಯ ಪುಸ್ತಕ ರಚನಾ ಸಮಿತಿಯೊಂದಿಗೆ ಹಂಚಿಕೊಳ್ಳುವುದು ಬಹಳ ಸುಲಭ. VIII ನೇ ತರಗತಿಯ ಪಠ್ಯ ಪುಸ್ತಕ ರಚಿಸಿದ್ದ ಶಿಕ್ಷಕ ವರ್ಗದವರು ಪಠ್ಯ ಪುಸ್ತಕದ ಬಗ್ಗೆ ಶಿಕ್ಷಕರ ಅಭಿಪ್ರಾಯಗಳನ್ನು ಓದಲು ಬಹಳ ಉತ್ಸುಕತೆಯನ್ನು ವ್ಯಕ್ತ ಪಡಿಸಿದ್ದು, ಅವಕಾಶವಿದ್ದ ಸಂದರ್ಭದಲ್ಲಿ ಸ್ಪಷ್ಟೀಕರಣ / ವಿವರಣೆ ಕೊಡಲು ಇಚ್ಚಿಸಿರುತ್ತರೆ.

ಎರಡನೆಯ ಆವೃಯ್ತ್ತಿಯ ಬಿಡುಗಡೆಯ ಮುಂಚೆ, ಪಠ್ಯ ಪುಸ್ತಕವನ್ನು ಇನ್ನು ಸುಧಾರಿಸಲು ಚರ್ಚೆ ಮತ್ತು ಅಭಿಪ್ರಾಯಗಳಿಗೆ ಹಂಚಿಕೆಗೆ ವೇದಿಕೆಯನ್ನು ಬಳಸಲು

ಚರ್ಚೆ ಮತ್ತು ಅಭಿಪ್ರಾಯ ಹಂಚಿಕೊಳ್ಳಲು ದಯವಿಟ್ಟು ಈ ಕೆಳಗಿನ ಹಂತಗಳನ್ನು ಅನುಸರಿಸಿ ( ಇದು www.Karnataeducation.org.in ನಲ್ಲಿ ನೇರವಾಗಿ ಲಭ್ಯವಿದ್ದು STF mail group ನಲ್ಲಿ ಯಲ್ಲ )

  1. VIII ನೇ ತರಗತಿಯ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪಠ್ಯ ಪುಸ್ತಕ ವಿಷಯ ಚರ್ಚೆಗೆ http://karnatakaeducation.org.in/?q=forum/61. ನಲ್ಲಿ ವೇದಿಕೆ ಸೃಷ್ಟಿಸಿದ್ದು , ಅಭಿಪ್ರಾಯ / ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳಬಹುದು ( ಅಥವ http://karnatakaeducation.org.in ನಲ್ಲಿ FORUM ನ ಮೇಲೆ ಕ್ಲಿಕ್ ಮಾಡಿದಾಗ ಎರಡು FORUM ಗಳು ಕಾಣಿಸುತ್ತವೆ. Subject teacher forum ಅನ್ನು ಆಯ್ಕೆ ಮಾಡಿದಾಗ ಅಲ್ಲಿ Maths. Science ಮತ್ತು Social Science forum ನಿಮಗೆ ಕಾಣ ಸಿಗುತ್ತದೆ)

  2. ವೆಬ್ ಸೈಟ್ ನಲ್ಲಿ Log in ಮಾಡಲು ನೀವು id – ' stfteacher ' ಮತ್ತು password ಸಹ – stfteacher ಅನ್ನು ಬಳಸಬಹುದು ( ನಿಮ್ಮದೇ ಸ್ವಂತ user id ಬೇಕಿದ್ದಲ್ಲಿ ದಯವಿಟ್ಟು tcol@itforchange.net ಗೆ ಮೇಲ್ ಹಾಕಿ, ನಿಮಗೆ id ಯನ್ನು ಸೄಷ್ಟಿಸುತ್ತ್ತೇವೆ. ನೀವು ಇದನ್ನು ಬಳಸಿ blog ಕೂಡ ಮಾಡ ಬಹುದು )

  3. page ನ ಕೆಳಗೆ ಹೋದಲ್ಲಿ ನಿಮಗೆ ಇದು ಕಾಣ ಸಿಗುತ್ತದೆ.

Add new comment

ನೀವು SUBJECT ಸೇರಿಸಿ ನಿಮ್ಮ ಅಭಿಪ್ರಾಯ/ ಪ್ರತಿಕ್ರಿಯೆಯನ್ನು ಹಂಚಿಕೊಂಡ ನಂತರ ಅದನ್ನು SAVE ಮಾಡಿ.

ದಯವಿಟ್ಟು ನಿಮ್ಮ ಹೆಸರು, ಶಾಲೆಯ ಹೆಸರು, ಫೊನ್ ನಂಬರ್, e mail id ಯನ್ನು ನಿಮ್ಮ comment ಕೆಳಗೆ ನಮೂದಿಸಿ. ಹೆಚ್ಚಿನ ಮಾಹಿತಿ ಅಥವ ಸ್ಪಷ್ಟೀಕರಣಕ್ಕೆ ಇದು ಸಹಕಾರಿಯಾಗುತ್ತದೆ. ( attachment ಗಳನ್ನು ನೋಡಿ )
ಎಲ್ಲಾ ಶಿಕ್ಷಕರು ದಯವಿಟ್ಟು ವೇದಿಕೆಯಲ್ಲಿ log in ಮಾಡಲು ಕೋರಿಕೊಳ್ಳುತ್ತೇವೆ. http://karnatakaeducation.org.in/?q=forum/61

  • ಈ ಕೆಳಗಿನ ಯಾವುದೇ ವಿಷಯದ ಮೇಲೆ ನೀವು ಪ್ರೈಕ್ರಿಯೆ / ಅಭಿಪ್ರಾಯ ವ್ಯಕ್ತ ಪಡಿಸಬೇಕಾಗಿ ವಿನಂತಿ.

  • ಪಠ್ಯ್ ಪುಸ್ತಕದಲ್ಲಿನ ದೋಷಗಳು - ಕಾಗುಣಿತ, ವ್ಯಾಕರಣ, ವಿಷಯ ಜ್ಞಾನ ದಲ್ಲಿನ ದೋಷಗಳು.

  • ವಿಷಯ ಗ್ರಹಿಕೆಗೆ ಸಹಾಯವಾಗುವಂತೆ ಸರಳಗೊಳಿಸಬಹುದಾದ ಪಠ್ಯಪುಸ್ತಕದಲ್ಲಿರುವ ಅಸ್ಪಷ್ಟ ಅಥವ ಸಂಕೀರ್ಣ ಪಠ್ಯ

  • ಸಂಕೀರ್ಣ, ಅನಾವಶ್ಯ, ಮೊದಲೆ ಎಲ್ಲಿಯಾದರು ತಿಳಿಸಿರುವ ಅಥವ ಮುಂದಿನ ಹಂತದ ತರಗತಿಯಲ್ಲಿ ತಿಳಿಸಬಹುದಾದಂತಹ etc, ಯಾವುದಾದರು ವಿಷಯ ವಸ್ತುವನ್ನು ಈ ತರಗತಿಯಲ್ಲಿ ಬಿಟ್ಟುಬಿಡ ಬಹುದದರ ಬಗ್ಗೆ ಸಲಹೆಗಳು.

  • ಇಮೇಜ್ / ಚಿತ್ರದಲ್ಲಿ ಯಾವುದಾದರು ದೋಷಗಳಿದ್ದರೆ .

  • ವಿಷಯವನ್ನು ಬೇರೆ ಯಾವುದದರು / ಸುಲಭ ರೀತ್ಯದಲ್ಲಿ ವಿಷಯವಸ್ತುವನ್ನು ಮಕ್ಕಳಿಗೆ ತಿಳಿಸಬಹುದಾಗಿದ್ದರೆ.

ನೀವು ಕನ್ನಡ ಅಥವ ಇಂಗ್ಲೀಷ್ ನಲ್ಲಿ comments ಮಾಡಬಹುದು.

ಸುಲಭವಾಗಿ ಓದಲು ಅಥವ ಹೆಚ್ಚಿನ ಗ್ರಹಿಕೆಯಲ್ಲಿ ಸಹಾಯವಾಗುವಂತಹ ಯಾವುದಾದರು ಮಾದರಿಗಳು, ಚಿತ್ರಗಳು , ವಿನ್ಯಾಸಗಳು ನಿಮ್ಮ ಗಮನಕ್ಕೆ ಬಂದಿದ್ದರೆ ಅದನ್ನು ಹಂಚಿಕೊಳ್ಳಬಹುದು.

ಏಳನೇ ತರ್ಗತಿಯ ಪಠ್ಯ ಪುಸ್ತಕಕ್ಕೆ ಹೋಲಿಸಿದಲ್ಲಿ, ವಿಷಯವಸ್ತು , ಪಠ್ಯಕ್ರಮ ಹರಿವಿನಲ್ಲಿ ಯಾವುದಾದರು ಅಂತರ ಅಥವ ಲೋಪಗಳಿದ್ದರೆ ಅದನ್ನು ತಿಳಿಸಿ.

CCE, "ಹೆಚ್ಚಿನ ಆಲೂಚನೆ" (think further) ಮೇಲಿನ ಪ್ರಶ್ನೆ ಗಳಿಗೆ ಬೆಕಾಗಿರುವ ಸಂಪನ್ಮೂಲಗಳು.

Any challenges in evaluation of a particular topic or better way of evaluating the topic.

ಯಾವುದೇ ಪ್ರತ್ಯೇಕ ವಿಶಯದ ಮೇಲೆ ಮೌಲ್ಯಮಾಪನ ಮಾಡುವ ವಿಧಾನದಲ್ಲಿ ಎದುರಾಗುವ ತೊಡಕು ಅಥವ ಮೌಲ್ಯಮಾಪನವನ್ನು ಉತ್ತಮಗೊಳಿಸುವ ವಿಧಾನಗಳು.