parent and teacher diologe
ಮಕ್ಕಳ ಶ್ಯೆಕ್ಷಣಿಕ ಪ್ರಗತಿ ಕುರಿತು ಶಿಕ್ಷಕರು ಮತ್ತು ಪೂಷಕರ ನಡುವೆ ಸಂವಾದ ನಡೆಸುವುದು . ಸ್ನೇಹಿತರ ಅನಿಸಿಕೆಗಳನ್ನು ಅಧರಿಸಿ ಹೂಸದಾಗಿ ಅನೇಕ ತಿದ್ದುಪಡಿಮಾಡಿ ಇದನ್ನು ಬ್ಲಾಗ್ ಹಾಕಲಾಗಿದೆ ನಿಮ್ಮ ಸಲಹೆ ಸೂಚನೆಗಳನ್ನು ಬಯಸುತ್ತೆನೆ. ರವೀಂದ್ರನಾಥ chtradurga
ಪ್ರಕಲ್ಪ : ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಶಿಕ್ಷಕ ಹಾಗೂ ಪೋಷಕರ ನಡುವೆ ಸಂವಾದ ಏರ್ಪಡಿಸುವುದು.
ಶಾಲೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೋಮ್ಮಲಿಂಗನಹಳ್ಳಿ ,ಮೊಳಕಾಲ್ಮುರು ತಾಲ್ಲೂಕು ಚಿತ್ರದುರ್ಗ ಜಿಲ್ಲೆ
ಅಧ್ಯಯನಕಾರರು:
ಶ್ರೀ ಕೆ. ಗುರುಪ್ರಸಾದ ಬಿ. ಅರ್,ಪಿ, ಮೊಳಕಾಲ್ಮುರು ತಾಲ್ಲೂಕು ಚಿತ್ರದುರ್ಗ
ಶ್ರೀ ಟಿ.ಜಿ.ರಾಜಶೇಖರ , ಬಿ. ಅರ್,ಪಿ, ಮೊಳಕಾಲ್ಮುರು ತಾಲ್ಲೂಕು ಚಿತ್ರದುರ್ಗ
ಅವಧಿ: ನಾಲ್ಕು ತಿಂಗಳು೨೦೦೯ರಲ್ಲಿ
ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ತರುವ ನಿಟ್ಟಿನಲ್ಲಿ ಶೈಕ್ಷಣಿಕ ನಾಯಕತ್ವ ಅಭಿವ್ರಧ್ದಿ ಕಾರ್ಯಕ್ರಮದ ಅಡಿಯಲ್ಲಿ ಬಿ. ಅರ್,ಪಿ/ಸಿ.ಅರ್.ಪಿ ಗಳಿಗೆ ೨೦ ದಿನಗಳ, ೫ ಹಂತಗಳಲ್ಲಿ ತರಬೇತಿಯನ್ನು ನೀಡಲಾಯಿತು. ಇದರ ಅನ್ವಯ ತರಬೇತಿಪಡೆದ ಬಿ. ಅರ್,ಪಿ/ಸಿ.ಅರ್.ಪಿ ಗಳು ತಮ್ಮ ವ್ಯಾಪ್ತಿಯ ಒಂದು ಶಾಲೆಯಲ್ಲಿ ಪ್ರಕಲ್ಪವನ್ನು ಅನುಷ್ಟಾನಗೊಳಿಸಬೇಕಾಗಿತ್ತು
೫ ಹಂತಗಳಲ್ಲಿ ತರಬೇತಿಯ ಅವಧಿಯಲ್ಲಿ ಪ್ಪ್ರಕಲ್ಪದ ಉದ್ದೇಶ, ಏನು, ಏಕೆ, ಯಾರು, ಎಲ್ಲಿ, ಯಾವಾಗ, ಹೇಗೆ ಎನ್ನುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಅದ್ಯಯನಕಾರರು ತಮ್ಮ ಅಯ್ದ ಶಾಲೆಗೆ ಬೇಟಿ ನೀಡಿ ಭಾಗಿದಾರರೊಡನೆ (9ಎಸ್.ಡಿ.ಎಮ್.ಸಿ ಸದಸ್ಯರು, 1ಮುಖ್ಯಶಿಕ್ಷಕರು, 6ಸಹಶಿಕ್ಷಕರು ,40 ಪೋಷಕರ ಮತ್ತು16 ಮಕ್ಕಳು) ಸಂವಾದನಡೆಸಲಾಯಿತು. ಶಾಲೆಯನ್ನು ಪರಿಶೀಲಿಸಿದಾಗ ಅಲ್ಲಿ ಈ ಕೆಳಗಿನ ಅಂಶಗಳನ್ನು ಗಮನಿಸಿದೆವು .
-
ಪೋಷಕರಿಗೆ ಶಾಲೆಗೆ ಬರಲು ಆಸಕ್ತಿಯಿಲ್ಲದಿರುವುದು.
-
ಸಮಯದ ಅಭಾವವಿರುವುದು .
-
ಕೆಲಸದ ಒತ್ತಡ
-
ನಿರಕ್ಷರತೆ
-
ಶಿಕ್ಷಕರಿಗೆ ಎಲ್ಲಾ ಗೊತ್ತು .ನಮಗೇನೂ ಗೊತ್ತಿಲ್ಲ ಎಂಬ ಭಾವನೆ
-
ನಾನೇನಾದ್ರೂ ಶಾಲೆಯಲ್ಲಿ ಹೇಳಿದ್ರೆ ಮಗುವಿಗೇನಾದ್ರೂ ತೊಂದರೆಯಾಗುವುದು ಎಂಬ ಭಾವನೆ
-
ವಿಷಯ ತಿಳಿಸಲು ಮುಕ್ತ ವಾತಾವರಣ ಇಲ್ಲದಿರುವುದು
ಭಾಗೀದಾರರು
-
ಶಿಕ್ಷಕರು - ೦೬
-
ಮುಖ್ಯಶಿಕ್ಷಕರು - ೦೧
-
ಎಸ್.ಡಿ.ಎಮ್. ಸಿ ಅಧ್ಯಕ್ಷರು- ೦೧
-
ಎಸ್.ಡಿ.ಎಮ್. ಸಿ ಸದಸ್ಯರು - ೦೭
-
ತಂದೆ/ತಾಯಿಗಳು - ೪೫
-
ಗ್ರಾಮಪಂಚಾಯಿತಿ ಸದಸ್ಸರು - ೦೩.
-
ಯುವಕ ಸಂಘದ ಸದಸ್ಸರು - ೦೪
-
ಸ್ವಸಹಾಯ ಸಂಘದ ಸದಸದಸರು - ೦೪
ಮೊದಲ ಬೇಟಿಯಲ್ಲಿ ಶಾಲೆಯ ಪ್ರತಿಯೊಂದು ತರಗತಿಯ ಮಕ್ಕಳ (ಕಲಿವಿನ ಸಾಮರ್ಥ್ಯ ) ಪ್ರಗತಿಯನ್ನು ಕುರಿತು ಪರಿಶೀಲನೆ ಮಾಡಲಾಯಿತು. ಮಕ್ಕಳ ಮೌಲ್ಯಮಾಪನ ಪಟ್ಟಿ
ಕ್ರಮ ಸಂಖ್ಯೆ |
ಮಗುವಿನ ಹೆಸರು |
ಕನ್ನಡ
|
ಇಂಗ್ಲೀಷ್
|
ಗಣಿತ
|
ಬಳಸಿದ ಸಲಕರಣೆಗಳು
ಬುದ್ದಿಮಂಥನ
ಪ್ರಕ್ರೀಯ ನಕ್ಷೆ
ಎಪ್ ಜಿ ಡಿ ಇದರ ಆಧಾರದ ಮೇಲೆ ಶಿಕ್ಷಕರು ತಮ್ಮಗುರಿಯನ್ನು ನಿಗದಿಪಡಿಸಿಕೊಳ್ಳಲಾಯಿತು. ಶಾಲೆ ಶೈಕ್ಷಣಿಕ ಪ್ರಗತಿಯ ಕುರಿತು ಭಾಗೀದಾರರಿಗೆ ಮನವರಿಕೆ ಮಾಡಿಕೊಡಲಾಯಿತು. ಶಾಲೆ ಶೈಕ್ಷಣಿಕ ಪ್ರಗತಿಯತ್ತ ಮುನ್ನೆಡೆಯಲು ಶಾಲೆಯ ಭೌತಿಕ. ಶೈಕ್ಷಣಿಕ,ಮತ್ತು ಹಾಗೂ ಭಾವನಾತ್ಮಕ ಅಂಶಗಳು ಮಹತ್ವವನ್ನು ಪಡೆದಿದೆ. ಹಾಗಾಗಿ ಈ ಕೆಳಕಂಡ ಅಂಶಗಳು.
-
ಕೂಠಡಿ ಕೋಣೆಗಳ ಸ್ವಚ್ಚತೆ
-
ಟಿ.ಎಲ್.ಎಮ್.ತಯಾರಿಸಿಕೂಳ್ಳುವಿಕೆ
-
ಸಂಪನ್ನೂಲ ಸಾಹಿತ್ಯ ಗಳ ಕ್ರೋಡಿಕರಣ
-
ಕ್ರೀಡಾ ಸಾಮಗ್ರಿಗಳ ಕ್ರೋಡಿಕರಣ
-
ದಾನಿಗಳಿಂದ ವಿವಿಧ ಸಾಮಗ್ರಿಗಳ ಸಂಗ್ರಹ
-
ಗ್ರಂಥಾಲಯ ಪುಸ್ತಕಗಳ ಬಳಕೆ.
ಭಾವನಾತ್ಮಕ:
ಭೌತಿಕ:
-
ಎಸ್.ಡಿ.ಎಮ್.ಸಿ.ಸಭೆ.
-
ತಾಯಂದಿರ ಸಭೆ.
-
ಪೋಷಕರ ಸಭೆ. .
-
ಮುಖ್ಯಶಿಕ್ಷಕರ/ಸಹಶಿಕ್ಷಕರ ಸಭೆ.
-
ಧಾನಿಗಳ/ಶಿಕ್ಷಣ ಆಶಕ್ತರ ಸಭೆ.
-
ಆರೋಗ್ಯ ಕಾರ್ಯಕರ್ತರು/ಅಂಗನವಾಡಿ ಕಾರ್ಯಕರ್ತರ ಸಭೆ.
-
ಚುನಾಯಿತ ಪ್ರತಿನಿಧಿಗಳ ಸಭೆ.
ಶೈಕ್ಷಣಿಕ ಅಂಶಗಳು:
-
ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ
-
ಟಿ.ಎಲ್.ಎಮ್.ತಯಾರಿಕಾ ಕಾರ್ಯಗಾರ
-
ಸಂಪನ್ಮೂಲ ಸಾಹಿತ್ಯ ಗಳ ಸಂಗ್ರಹ
-
ಮಕ್ಕಳ ಆರೋಗ್ಯ ತಪಾಸಣೆ
-
ಎಮ್.ಡಿ.ಪಿ ಕೆಲವು ಕ್ಲಿಪಿಂಗಗಳನ್ನು ತೋರಿಸುವುದು.
ಸಮುದಾಯವನ್ನು ಶಾಲೆಯ ಕಡೆ ಸಳೆಯಲು ಪೋಷಕರಿಗೆ ಕ್ರೀಡಾಕೂಟಗಳನ್ನು ( running race , musical chair , lemon and spoon etc...)ರಂಗೋಲಿ ,ರಸಪ್ರಶ್ನೆ ಇತ್ಯಾದಿ ಕಾರ್ಯಕ್ರಮಗಳ ಆಯೋಜನೆ ಮಾಡಲಾಯಿತು. ಸಮುದಾಯದತ್ತ ಶಾಲೆ ಕಾರ್ಯಕ್ರಮದಂದು ಪೋಷಕರು ತಮ್ಮ ಮಕ್ಕಳು ಶಿಕ್ಷಕರ ಜೊತೆಯಲ್ಲಿ ಶೈಕ್ಷಣಿಕ ಅಂಶಗಳ ಕುರಿತು ಚರ್ಚೆ ನಡೆಸುವ ಅವಕಾಶ ಮಾಡಿಕೂಡಲಾಯಿತು. ಮಕ್ಕಳಿಗೆ ಪ್ರತಿ ಶುಕ್ರವಾರ ರಸಪ್ರಶ್ನೆ ,ಸಾಂಸ್ಕೃತಿಕ ಇತ್ಯಾದಿ ಕಾರ್ಯಕ್ರಮಗಳ ಆಯೋಜನೆ ಮಾಡಲಾಯಿತು. ಎಸ. ಡಿ ಎಮ್ ಸಿ ಯವರಿಗೆ ಉತ್ತಮ ಶಾಲೆಗಳ ಭೇಟಿ ಏರ್ಪಡಿಸಲಾಯಿತು.
ಈ ಎಲ್ಲಾ ಕಾರ್ಯಕ್ರಮಗಳಿಂದ ಪ್ರಭಾವಿತರಾದ ಸಮುದಾಯದವರನ್ನು ದಿನಕಳೆದಂತೆ ಶಾಲೆಯ ಕಡೆಗೆ ಕರೆತರುವಲ್ಲಿ ಸಫಲತೆಯನ್ನು ಪಡೆಯಲಾಯಿತು.ಶಾಲೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಫೋಷಕರು ತಮ್ಮ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಗಮನಿಸಿದರು. ಹಾಗೂ ಶಿಕ್ಷಕರೂಂದಿಗೆ ಸಂವಾದ ನಡೆಸಿದರು. ಶಾಲೆಯ ಪ್ರಗತಿಗೆ ತಮ್ಮ ಕೈಲಾದ ಸಹಾಯ ಒದಗಿಸಲು ಮನಸ್ಸು ಮಾಡಿದರು. ಈ ಪ್ರಕಲ್ಪ ದ ಅವದಿಯಲ್ಲಿ ೭-೮ ಬಾರಿ ಶಾಲೆಗೆ ಭೇಟಿನೀಡಲಾಯಿತು. ಸಮುದಾಯದವರೂಡನೆ ಸಂವಾದ /ಸಂಪರ್ಕ ಇಟ್ಟುಕೂಳ್ಳಲಾಗಿತ್ತು
ಈ ಪ್ರಕಲ್ಪದ ನಂತರ ಈ ಎಲ್ಲಾ ಕಾರ್ಯಕ್ರಮಗಳ ಮುಂದುವರಿಕೆ ಕಾರ್ಯ ನಡೆಯುತ್ತಿದೆ.ಅ ಶಾಲೆಯ ನಿರಂತರ ಸಂಪರ್ಕ ಇಟ್ಟುಕೂಳ್ಳಲಾಗಿದೆ.ಅವರಿಗೆ ಮಾಹಿತಿ , ಮಾರ್ಗದರ್ಶನ , ಸಲಹೆ ಸೂಚನೆ, ಸಂಪನ್ಮೂಲ ಸಾಹಿತ್ಯ, ನಿರಂತರವಾಗಿ ನೀಡಲಾಗುತ್ತಿದೆ. ಶಾಲೆಗೆ ಸಂಬಂದ ಪಟ್ಟ ಇಲಾಖೆ, ಜನಪ್ರತಿನಿದಿಗಳು, ಅಧಿಕಾರಿಗಳು, ಸಮುದಾಯ,ದಾನಿಗಳ ಜೊತೆ ನಿರಂತರ ಸಂಪರ್ಕ ಇಟ್ಟುಕೂಳ್ಳಲಾಗಿದೆ. ಎಲ್ಲ ಶಿಕ್ಷಕರು ಮತ್ತು ಮಕ್ಕಳು ತಮ್ಮ ಜವಾಬ್ದಾರಿಯನ್ನು ಅರಿತು ತಮ್ಮ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರತಿ ತಿಂಗಳ ಎರಡನೆ ಶನಿವಾರ ಫೋಷಕರ ಸಭೆ ನಡೆಸಲಾಗುತ್ತಿದೆ. ಎರಡು ತಿಂಗಳಿಗೊಮ್ಮೆ ನಡೆಯುವ ತಾಯಂದಿರ ಸಬೆಯಲ್ಲಿ ಗರಿಷ್ಟಪ್ರಮಾಣದಲ್ಲಿ ಮಾತೆಯರು ಭಾಗವಹಿಸುತ್ತಿದ್ದಾರೆ .
ಶಾಲೆಯ ಎಲ್ಲಾ ಶಿಕ್ಷಕರು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಲು ತೊಡಗಿರುತ್ತಾರೆ. ಶಾಲೆಯ ಆಗು ಹೋಗುಗಳ ಬಗ್ಗೆ ಸಮುದಾಯ ಗಮನಹರಿಸುತ್ತಿದೆ.ಶಾಲೆಗಳ ಬೇಕು-ಬೇಡಗಳ ಬಗ್ಗೆ ಗಮನಕೊಡುತ್ತಿದ್ದಾರೆ.ಶಾಲೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಸಮುದಾಯ ಸಕ್ರೀಯವಾಗಿ ಭಾಗವಹಿಸುತ್ತಿದೆ.
ಪ್ರಕಲ್ಪದ ಅವದಿಯಲ್ಲಿ ಶಾಲೆಗೆ
-
೫೦೦ ರೂಪಾಯಿಗಳ ಕ್ರೀಡಾ ಸಾಮಗ್ರಿಗಳ ಸಂಗ್ರಹಣೆ
-
೧೦೦೦ ರೂಪಾಯಿಗಳ ಶಾಲೆಗೆ ಬೇಕಾಗುವ ಸಮಾಗ್ರಿಗಳ ಕೂಡುಗೆ.
ಶಾಲೆಯಲ್ಲಿನ ಗ್ರಂಥಾಲಯದಲ್ಲಿರುವ ಎಲ್ಲಾ ಪುಸ್ತಕ ಗಳು ಎಲ್ಲರಿಗೊ ಸಿಗುವಂತೆ ಪ್ರದರ್ಶನ ಮಾಡಿ, ಅವುಗಳ ಬಳಕೆ ಮಾಡುವಂತೆ ಅನುಕೂಲಮಾಡಿಕೂಡಲಾಗಿದೆ.
ಶಾಲೆಯಲ್ಲಿರುವ ಗ್ರಂ ಶಾಲಾಶಿಕ್ಷಕರು/ಸಮುದಾಯದ ನಡುವೆ ಇರುವ ಕೆಲವು ತಪ್ಪು ಕಲ್ಪನೆಗಳು/ ನಂಬಿಕೆಗಳು , ಅನಿಸಕೆಗಳು ದೂರವಾಗಲು ಸಹಕಾರಿಯಾಗಿದೆ. ಸಮುದಾಯದೂಂದಿಗೆ ನಮ್ಮ ಜ್ನಾನವನ್ನು ಹಂಚಿಕೂಳ್ಳಲು ಪೂರಕವಾಯಿತು. ಶಿಕ್ಷಕರು /ಶಾಲೆಯ ಬಗ್ಗೆ ಗೌರವ ಭಾವನೆಉಂಟಾಯಿತು. ಸಾಧನೆ ಮಾಡಿದ ಮಗುವಿನ ತಂದೆ/ತಾಯಿಗಳ ಅನುಭವವನ್ನು ಹಂಚಿಕೂಳ್ಳಲು ಉತ್ತಮ ವೇದಿಕೆಯನ್ನು ಒದಗಿಸುವುದು. ಸಮುದಾಯದ ಸಂಘಟನೆಯು ಕಲಿಕೆಯ ಗುಣಮಟ್ಟ ಸುದಾರಣೆಗೆ ಅತ್ಯಂತ ಪೂರಕವಾದ ಅಂಶವಾಗಿದೆ. ಶಾಲಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪೂಷಕರು ಪಾಲ್ಗೋಳ್ಳುವುದನ್ನು ಉತ್ತೇಜಿಸಲು ಉತ್ತಮ ಪೂಷಕ ಪ್ರಶಸ್ತಿ ನೀಡುವ ವ್ವವಸ್ತೆ ಮಾಡಲಾಗಿದೆ. ಮಕ್ಕಳ ಶಾಲೇತರ ಅವಧಿಯ ಕಲಿಯುವ ಅವಧಿಯನ್ನು ಉತ್ತಮಪಡಿಸಲು ಗ್ರಾಮದ ಯುವಮಿತ್ರರ ಸಹಾಯ ಪಡೆಯುವುದು. (ಮನೆಪಾಠ. ಇತರೆ ಚಟುವಟಿಕೆ ಗಳು). ಸಮುದಾಯವು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯ ಭಾಗವಹಿಸುವಂತೆ ಮಾಡಲು ಅನೇಕ (ಸಮುದಾಯದತ್ತ ಶಾಲೆ, ತಿಂಗಳಿಗೂಮ್ಮೆ ಪೂಷಕರು ಸಭೆ) ಅವಕಾಶಮಾಡಿ ಕೂಡುವುದು. ಪ್ರತಿನಿತ್ಯ ಪ್ರತಿಮಗುವು ಸ್ವಚ್ಛವಾಗಿ ಶಾಲೆಗೆ ಬರುವಂತಾಗಬೇಕು.ಎಂದು ತಾಯಂದಿರ ಸಭೆಯಲ್ಲಿ ಮಾಡಿಕೂಂಡ ಮನವಿಯ ಪ್ರಕಾರ ಮಕ್ಕಳು ಶಾಲೆಗೆ ಹಾಜರಾಗುತ್ತಿರುವುದು ಸಂತಸದ ವಿಚಾರವಾಗಿದೆ. ಪಾಲಕರ ಮನೆ ಮನೆ ಭೇಟಿ ನಿರಂತರವಾಗಿ ಸಾಗುತ್ತಿದೆ.
ರವೀಂದ್ರನಾಥ
Attachment | Size |
---|---|
ravindranatha.odt | 31.67 KB |
NARRATIVE FINAL.odt | 76.44 KB |
NARRATIVE FINAL.odt | 87.08 KB |
- ravindranatha's blog
- Log in to post comments