Digital story telling GHS Ejipura March 2016
Visited Places
Canara Bank
ಪ್ರಸ್ತುತ ಮಾನವನ ಜೀವನದಲ್ಲಿ ಬ್ಯಾಂಕ್‌ನೊಂದಿಗಿನ ವ್ಯವಹಾರವು ಅತಿ ಪ್ರಮುಖ ಮತ್ತು ಮಹತ್ವದ್ದಾಗಿದೆ. ಪಠ್ಯಕ್ರಮದ ಪಾಠದ ಜೊತೆ ಪ್ರತ್ಯಕ್ಷವಾಗಿ ಬ್ಯಾಂಕಿನ ಕಾರ್ಯಚಟುವಟಿಕೆಗಳನ್ನು ಪರಿಚಯ ಮಾಡಿಸುವ ಉದ್ದೇಶದಿಂದ 'ಶಿಕ್ಷಕರ ಕಲಿಕಾ ಸಮೂದಾಯದಡಿಯಲ್ಲಿ 'ವಿದ್ಯುನ್ಮಾನ ಕಥಾ ಪ್ರಸ್ತುತಿ ಕಾರ್ಯಕ್ರಮ'ವನ್ನು ಹಮ್ಮಿಕೊಂಡು ನಮ್ಮ ಶಾಲೆಗೆ ಪಕ್ಕದಲ್ಲಿರುವ ವಿವೇಕನಗರದ ಕೆನರಾ ಬ್ಯಾಂಕಿಗೆ ಭೇಟಿ ನೀಡಿ ನಮ್ಮ ಅನುಭವ ಮತ್ತು ಅನಿಸಿಕೆಯನ್ನು ವಿದ್ಯುನ್ಮಾನ ಕಥಾ ಪ್ರಸ್ತುತಿಯ ಮೂಲಕ ಹಂಚಿಕೊಳ್ಳಲಾಯಿತು.ನೈಜ ಕಲಿಕೆಯ ಪರಿಣಾಮವಾಗಿ ಮಕ್ಕಳಲ್ಲಿ ಆತ್ಮವಿಶ್ವಾಸ,ಸಮಾಜದ ಜೊತೆಗಿನ ಒಡನಾಟ,ಸಂಘಟನಾ ಕೌಶಲ,ಪರಸ್ಪರ ಚರ್ಚೆ, ಮೊದಲಾದ ಪ್ರಕ್ರಿಯೆಗಳಿಗೆ ಪ್ರೋತ್ಸಾಹ ದೊರೆತು ಕಲಿಕೆಗೆ ಮತ್ತಷ್ಟು ಉತ್ತೇಜನಕಾರಿಯಾಗಿದೆ.
Kai Magga
ಭಾರತ ದೇಶದ ಪ್ರಮುಖ ಉಡುಗೆಯಾದ ಸೀರೆ. ಸೀರೆ ತಯಾರಿಸುವ ಘಟಕಕ್ಕೆ ದಿನಾಂಕ 25.02.2015 ರಂದು ಭೇಟಿ ಮಾಡಲಾಯಿತು . ಅಲ್ಲಿ ಸೀರೆ ತಯಾರು ಮಾಡುವ ಸ್ಥಳಕ್ಕೆ ಹೋಗಲಾಯಿತು ಅಲ್ಲಿ ನೂಲಿನಿಂದ ಸೀರೆಯನ್ನು ಹೇಗೆ ತಯಾರು ಮಾಡ್ತಾರೆ ಮತ್ತು ಬಣ್ಣ ಬಣ್ಣದ ದಾರಗಳನ್ನು ಬಳಸಿ ಹೇಗೆ ಡಿಸೈನ್ ಮಾಡ್ತಾರೆ ಎಂಬುವದರ ಬಗ್ಗೆ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಸಂಪೂರ್ಣವಾಗಿ ವಿವರಿಸಿದರು .
ಇದಕ್ಕೆ ಸಂಭಂದಿಸಿದ ವಿಡಿಯೋ ಮತ್ತು ಚಿತ್ರಗಳನ್ನು ಕೆಳಕಾಣಿಸಿದ ಲಿಂಕನ್ನು ಒತ್ತುವದರ ಮೂಲಕ ಮಾಹಿತಿಯನ್ನು ತಿಳಿದುಕೊಳ್ಳಬಹುದು .
Police station
'ಪೋಲೀಸ್' ಎಂಬ ಹೆಸರು ಕೇಳಿದ ತಕ್ಷಣ ಮನದ ಮೂಲೆಯಲೆಲ್ಲೋ ಅಳುಕಾಗುತ್ತದೆ. ಮಕ್ಕಳಂತು ಮತ್ತಷ್ಟು ಹೆದರುವುದರಲ್ಲಿ ಅನುಮಾನವಿಲ್ಲ. ಇಂತಹ ಸಂದರ್ಭದಲ್ಲಿ ಪಠ್ಯಕ್ರಮದ ಪಾಠದ ಜೊತೆ ಪ್ರತ್ಯಕ್ಷವಾಗಿ ಪೋಲೀಸ್ ಸಿಬ್ಬಂದಿಗಳ ಕಾರ್ಯಚಟುವಟಿಕೆಗಳನ್ನು ಪರಿಚಯ ಮಾಡಿಸುವ ಉದ್ದೇಶದಿಂದ 'ಶಿಕ್ಷಕರ ಕಲಿಕಾ ಸಮೂದಾಯದಡಿಯಲ್ಲಿ 'ವಿದ್ಯುನ್ಮಾನ ಕಥಾ ಪ್ರಸ್ತುತಿ ಕಾರ್ಯಕ್ರಮ'ವನ್ನು ಹಮ್ಮಿಕೊಂಡು ನಮ್ಮ ಶಾಲೆಯ ೯ನೇ ತರಗತಿಯ ಮಕ್ಕಳು ಶಾಲೆಗೆ ಪಕ್ಕದಲ್ಲಿರುವ ವಿವೇಕನಗರದ ಪೋಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಗಳನ್ನು ಸಂಗ್ರಹಿಸಿ ಅನುಭವ ಮತ್ತು ಅನಿಸಿಕೆಯನ್ನು 'ವಿದ್ಯುನ್ಮಾನ ಕಥಾ ಪ್ರಸ್ತುತಿ'ಯ ಮೂಲಕ ಹಂಚಿಕೊಳ್ಳಲಾಯಿತು.ನೈಜ ಕಲಿಕೆಯ ಪರಿಣಾಮವಾಗಿ ಮಕ್ಕಳಲ್ಲಿ ಆತ್ಮವಿಶ್ವಾಸ,ಸಮಾಜದ ಜೊತೆಗಿನ ಒಡನಾಟ,ಸಂಘಟನಾ ಕೌಶಲ,ಪರಸ್ಪರ ಚರ್ಚೆ, ಮೊದಲಾದ ಪ್ರಕ್ರಿಯೆಗಳಿಗೆ ಪ್ರೋತ್ಸಾಹ ದೊರೆತು ಕಲಿಕೆಗೆ ಮತ್ತಷ್ಟು ಉತ್ತೇಜನಕಾರಿಯಾಯಿತು ಮತ್ತು ಪೋಲೀಸ್ ಸಿಬ್ಬಂದಿಗಳ ಮೇಲಿನ ಭಯ ಮಾಯವಾಗಿ ಈ ಮಕ್ಕಳು ಸಹ ಪೋಲೀಸ್ ಹುದ್ದೆಗೆ ಸೇರಿ ಸಮಾಜ ಸೇವೆ ಮಾಡುವ ಅಭಿಲಾಷೆ ವ್ಯಕ್ತಪಡಿಸಿದರು.
Post office
ಪ್ರಸ್ತುತ ಜೀವನದಲ್ಲಿ ಅಂಚೆ ಕಚೇರಿಯ ವ್ಯವಹಾರ ಮತ್ತು ವಹಿವಾಟನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ. ಪಠ್ಯಕ್ರಮದ ಪಾಠದ ಜೊತೆ ಪ್ರತ್ಯಕ್ಷವಾಗಿ ಅಂಚೆಕಚೇರಿಯ ಕಾರ್ಯಚಟುವಟಿಕೆಗಳನ್ನು ಪರಿಚಯ ಮಾಡಿಸುವ ಉದ್ದೇಶದಿಂದ 'ಶಿಕ್ಷಕರ ಕಲಿಕಾ ಸಮೂದಾಯದಡಿಯಲ್ಲಿ 'ವಿದ್ಯುನ್ಮಾನ ಕಥಾ ಪ್ರಸ್ತುತಿ ಕಾರ್ಯಕ್ರಮ'ವನ್ನು ಹಮ್ಮಿಕೊಂಡು ನಮ್ಮ ಶಾಲೆಗೆ ಪಕ್ಕದಲ್ಲಿರುವ ವಿವೇಕನಗರದ ಅಂಚೆ ಕಚೇರಿಗೆ ಭೇಟಿ ನೀಡಿದ ನಮ್ಮ ಅನುಭವ ಮತ್ತು ಅನಿಸಿಕೆಯನ್ನು ವಿದ್ಯುನ್ಮಾನ ಕಥಾ ಪ್ರಸ್ತುತಿಯ ಮೂಲಕ ಹಂಚಿಕೊಳ್ಳಲಾಯಿತು.ಕುತೂಹಲಕಾರಿಯಾದ ಅಂಚೆರವಾನೆ,ಶೀಘ್ರ ಅಂಚೆ,ವಿದೇಶಿ ಹಣದ ರವಾನೆ ಅಂಚೆ ATM,ವಿವಿಧ ಸೌಲಭ್ಯಗಳು ಮೊದಲಾದವುಗಳ ನೈಜ ಕಲಿಕೆಯ ಪರಿಣಾಮವಾಗಿ ಮಕ್ಕಳಲ್ಲಿ ಆತ್ಮವಿಶ್ವಾಸ,ಸಮಾಜದ ಜೊತೆಗಿನ ಒಡನಾಟ,ಸಂಘಟನಾ ಕೌಶಲ,ಪರಸ್ಪರ ಚರ್ಚೆ, ಮೊದಲಾದ ಪ್ರಕ್ರಿಯೆಗಳಿಗೆ ಪ್ರೋತ್ಸಾಹ ದೊರೆತು ಕಲಿಕೆಗೆ ಮತ್ತಷ್ಟು ಉತ್ತೇಜನಕಾರಿಯಾಗಿದೆ
Pranidhaya sanga
ಪ್ರಾಣಿಗಳ ರಕ್ಷಣೆ ಪ್ರತಿಯೊಬ್ಬರ ಹೋಣೆ . ಪ್ರಾಣಿಗಳ ರಕ್ಷಣೆ ಹೇಗೆ ಮಾಡಬೇಕು ಯಾವ ಯಾವ ಸಾಕು ಪ್ರಾಣಿಗಳನ್ನು ಸಾಕಬೇಕು, ಯಾವ ಯಾವ ತಳಿಯ ಪ್ರಾಣಿಗಳಿವೆ, ಅವುಗಳಿಗೆ ಆಹಾರ ಪದ್ದತಿಗಳೇನು, ಯಾವ ಉದ್ದೇಶಕ್ಕಾಗಿ ಸಾಕಬೇಕು , ಅವುಗಳಿಂದ ಪ್ರಯೋಜನವೇನು , ಅವುಗಳಿಂದ ಔಷಧಿಯನ್ನು ತಯಾರಿಸಿ ಯಾವ ಯಾವ ಖಾಯಿಲೆಗಳಿಗೆ ನಿಡುತ್ತಾರೆ ಎಂಬುವುದನ್ನು ಮತ್ತು ಪಕ್ಷಿಗಳ ರಕ್ಷಣೆ ಹೇಗೆ ಮಾಡಬೇಕು ಎಂಬುವದರ ಕುರಿತು ಪ್ರಾಣಿದಯ ಸಂಘದ ಅಧಿಕಾರಿಗಳ ಸಂಪೂರ್ಣವಾಗಿ ೯ನೇ ತರಗತಿಯ ಮಕ್ಕಳಿಗೆ ವಿವಿರವಾಗಿ ಉತ್ತರಿಸಿದರು . ಪ್ರಾಣಿಗಳ ರಕ್ಷಣೆ ಸರಪಳಿ ಇದ್ದಂತೆ -