GHS Motanahalli, Anganwadi
- =Objective of visit=
Discussions with Angandwadi team
ಅಂಗನವಾಡಿ ಕೇಂದ್ರಕ್ಕೆ ಬೇಟಿ.
- ಮೊಟ್ಟಮೊದಲು ಕರ್ನಾಟಕದಲ್ಲಿ ಅಂಗನವಾಡಿ ಕೇಂದ್ರ ಪ್ರಾರಂಭವಾದದ್ದು ಯಾವಾಗ ಮತ್ತು ಎಲ್ಲಿ ?
- ನರಸಿಂಗ ಪುರನಲ್ಲಿ 1976ರಲ್ಲಿ ಪ್ರಾರಂಭವಾಯಿತು.
- ಮೊಟನಹಳ್ಲಿ ಗ್ರಾಮದಲ್ಲಿ ಯಾವಾಗ ಅಂಗನವಾಡಿ ಕೇಂದ್ರ ಪ್ರಾರಂಭವಾಯಿತು?
- ಸುಮಾರು 80 ವರ್ಷಗಳ ಹಿಂದೆ.
- ಮೋಟನಳ್ಳಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಗಳೆಷ್ಟು?
- 5 ಅಂಗನವಾಡಿ ಕೇಂದ್ರಗಳಿವೆ.
- ಮೋಟನಳ್ಳಿ ಗ್ರಾಮದಲ್ಲಿರುವ ಅಂಗನವಾಡಿಯಲ್ಲಿ ಎಷ್ಟು ಜನ ಕೆಲಸ ನಿರ್ವಹಿಸುತ್ತಿರಿ?
- ಅಂಗನವಾಡಿಯಲ್ಲಿ 2 ಕೆಲಸ ಮಾಡುತ್ತಾರೆ.
- ಅಂಗನವಾಡಿ ಶಿಕ್ಷಕಿಯರ ಹೆಸರು:
- ನರಸಮ್ಮ
- ಅಂಗನವಾಡಿ ಸಹಾಯಕಿ ಹೆಸರು:
- ಅಂಗನವಾಡಿ ಸಹಾಯಕಿ ಕಾಶಮ್ಮ
- ಅಂಗನವಾಡಿಯ ಉದ್ದೇಶಗಳು:
- ಶಾಲಾ ಪೂರ್ವ ಶಿಕ್ಷಣ ನಿಡುವುದು,
ಪೌಷ್ಟಿಕ ಆಹಾರ ವಿತರಣೆ ಸೇವೆ ಅರೋಗ್ಯ ತಪಾಸಣೆ ಮಾಡುವುದು,
ರೋಗ ನಿರೋಧಕ ಚುಚ್ಚು ಮದ್ದು ಹಾಕುವುದು.
- ಕೆಲಸವನ್ನು ಯಾವ ರೀತಿ ಹಂಚಿಕೆ:
- ಶಿಕ್ಷಕಿಯು ಮಕ್ಕಳಿಗೆ ಅಕ್ಷರ ಕಲಿಸುವುದು, ಸಂಖ್ಯೆ ಕಲಿಸುವುದು ಹಾಗೂ ಆಟಗಳನ್ನು ಆಡಿಸುವುದು.
- ಅಂಗನವಾಡಿ ಕೇಂದ್ರಕ್ಕೆ ದಾಖಲಾಗಿರುವ ಮಕ್ಕಳ ಸಂಖ್ಯೆ :
- 40 ಮಕ್ಕಳು
- ಅಂಗನವಾಡಿ ಕೇಂದ್ರದಿಂದ ಸಮಾಜಕ್ಕೆ ಆಗುವ ಲಾಭಗಳು
- ಅಂಗನವಾಡಿ ಕೇಂದ್ರದಿಂದ ಮಕ್ಕಳಿಗೆ ಪೂರ್ವ ಶಿಕ್ಷಣ ಸಿಗುತ್ತದೆ ಮತ್ತು ವಿವಿದ ಆರೋಗ್ಯ ಸೇವೆಗಳ ಸೌಲಭ್ಯ ಸಿಗುತ್ತವೆ.
- ಅಂಗನವಾಡಿಗೆ ಹೊಸದಾಗಿ ಬಂದ ಯೋಜನೆಗಳು:
- ಬಾಗ್ಯಲಕ್ಷ್ಮೀ ಯೋಜನೆ, ಬಾಲ ಸಂಜೀವಿ ಯೋಜನೆ,
- ಅಂಗನವಾಡಿಯ ಸಮಸ್ಯೆಗಳು :
- ಕಟ್ಟಡ ಸಮಸ್ಯೆ, ನೀರಿನ ಸಮಸ್ಯೆ, ಗ್ಯಾಸ್ ಸಮಸ್ಯೆ, ಕಂಪೋಂಡ್ ಇಲ್ಲದಿರುವುದು.
- ಒಂದು ವರ್ಷದಲ್ಲಿ ಪೋಲಿಯೋ ಎಷ್ಟು ಬಾರಿ ಹಾಕುತ್ತಾರೆ?
- ಒಂದು ವರ್ಷದಲ್ಲಿ ಎರಡು ಬಾರಿ.
- ಅಂಗನವಾಡಿಯಲ್ಲಿ ಆಟದ ಸಾಮಗ್ರಿಗಳು :
- ಸೆಂಗದ ಆಟ, ಚೆಂಡು ಆಟ, ಹುಣಸೆ ಬೀಜದ ಆಟ, ಚಿಲಪಿಲಿ ರೂಪದ ಆಟ.
- ಜನನ ಮರಣ ದಾಖಲೆ, ಗರ್ಬೀಣಿಯರಿಗೆ, ಬಾಣಂತಿಯರಿಗೆ ಪೌಷ್ಟಿಕ ಆಹಾರ ನಿಡುತ್ತಾರೆ.
ಎಷ್ಟು ವರ್ಷದ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ದಾಖಲು ಮಾಡಿಕೊಳಗಳುತ್ತೀರಿ? - ಐದು ವರ್ಷದದೊಳಗಿನ ಮಕ್ಕಳನ್ನು ದಾಖಲೆ ಮಾಡಿ ಕೊಳ್ಳುತ್ತಾರೆ.
- ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಎಷ್ಟು ಗಂಟೆಗೆ ಬರುತ್ತಾರೆ ಮತ್ತು ಬಿಡುವುದು ಯಾವಾಗ?
- ಬೆಳಿಗ್ಗೆ 9.30 ಕ್ಕೆ ಬರುತ್ತಾರೆ 1.30 ಕ್ಕೆ ಬಿಡುತ್ತೇವೆ.* ಮಕ್ಕಳಿಗೆ ಯಾವ ಯಾವ ಆಹಾರ ನೀಡುತ್ತಾರೆ? - ಸೋಮವಾರ ಬೆಳಿಗ್ಗೆ 10 ಗಂಟೆಗೆ ಹಾಲು 11 ಗಂಟೆಗೆ ಗೋದಿ ಸಜ್ಜಕ 1 ಗಂಟೆಗೆ ಉಪ್ಪೀಟು ನೀಡಲಾಗುತ್ತದೆ. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮೊಳಕೆಕಾಳು ನೀಡುತ್ತಾರೆ. 1 ಗಂಟೆಗೆ ಉಪ್ಪಿಟ್ಟು ನೀಡಲಾಗುತ್ತದೆ. ಹೀಗೆ ಪ್ರತಿ ದಿನ ಬದಲಾಣೆಯೊಂದಿಗೆ ಆಹಾರ ನೀಡಲಾಗುತ್ತದೆ.
- ಅಂಗನವಾಡಿ ಶಿಕ್ಷಕಿಯರ ಇತರ ಕಾರ್ಯಗಳು ಯಾವುವು ?
- ಜನಗಣತಿ ಕಾರ್ಯ ನಿರ್ವಹಿಸುವುದು ಚುನಾವಣೆಯಲ್ಲಿ BLO ಕಾರ್ಯ ನಿರ್ವಹಿಸುವುದು. ಜನನ ಮತ್ತು ಮರಣ ದಾಖಲೆಯನ್ನು ಮಾಡಿಕೊಂಡು ಬರುವುದು. ಗರ್ಬೀಣಿಯರಿಗೆ ಮತ್ತು ಬಾಣಂತಿಯರಿಗೆ ಪೌಷ್ಡಿಕ ಆಹಾರ ವಿತರಣೆ ಮಾಡುವುದು. ಭಾಗ್ಯಲಕ್ಷ್ಮೀ ಬಾಂಡ್‌ಗಳ ಬಗ್ಗೆ ಮಾಹಿತಿ ಒದಗಿಸುವುದು.
- ನಿಮ್ಮ ವೇತನವನ್ನು ಯಾವ ರೀತಿ ನೀಡುತ್ತಾರೆ?
- ಬ್ಯಾಂಕ ಖಾತೆಯ ಮೂಲಕ ಜಮಾ ಮಾಡುತ್ತಾರೆ.
- ಮಕ್ಕಳಿಗೆ ಯಾವ ರೀತಿ ಆಟ ಆಡಿಸುತ್ತೀರಿ?
- ಅಭಿನಯ ಗೀತೆ, ಹೊರಾಂಗಣ ಆಟ, ಒಳಾಂಗಣ ಆಟ ಆಡಿಸಲಾಗುತ್ತದೆ.
- ಶಾಲೆಗೆ ಮತ್ತು ಅಂಗನವಾಡಿಗೆ ಇರುವ ಸಂಬಂದವೇನು?
- ಅಂಗನವಾಡಿಯಲ್ಲಿ ಕಲಿತ ಮಕ್ಕಳು ಭಯವಿಲ್ಲದೆ ಶಾಲೆಗೆ ಹೋಗುತ್ತಾರೆ.
Learnings
Album