Changes

Jump to navigation Jump to search
no edit summary
Line 4: Line 4:  
If district has prepared new agenda then it can be shared here
 
If district has prepared new agenda then it can be shared here
 
===See us at the Workshop===
 
===See us at the Workshop===
 +
 +
'''22/12/2014 to 27/12/2014'''
 +
 
{{#widget:Picasa
 
{{#widget:Picasa
 
|user=
 
|user=
Line 14: Line 17:  
}}
 
}}
 
===Workshop short report===
 
===Workshop short report===
 +
 +
'''1st Day. 22/12/2014'''
 +
 +
ಚಾಮರಾಜನಗರ ಜಿಲ್ಲೆಯ HTF (ಮುಖ್ಯ ಶಿಕ್ಷಕರ ವೇದಿಕೆ)  ಐದು ದಿನಗಳ ಪ್ರಥಮ ಹಂತದ ಕಾರ್ಯಾಗಾರವು  ಡಯಟ್ ನಲ್ಲಿ ದಿನಾಂಕ:22-12-1014 ರಂದು ಪ್ರಾರಂಭವಾಯಿತು. ಈ ಕಾರ್ಯಾಗಾರವನ್ನು ಡಯಟ್ ನ ಪ್ರಾಂಶುಪಾಲರಾದ ಶ್ರೀಮತಿ ಗೀತಾಂಬ ಮೇಡಂ ರವರು ಉದ್ಘ್ಹಾಟಿಸಿ, ಈ ಕಾರ್ಯಾಗಾರವು  ತಂತ್ರಜ್ಞಾನ ಬಳಸಿ ಉತ್ತಮ ಶೈಕ್ಷಣಿಕ ನಾಯಕತ್ವ ರೂಪಿಸುವಲ್ಲಿ  ಮುಖ್ಯ ಶಿಕ್ಷಕರಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಬೆಳಗಿನ  ಮೊದಲ ಅವಧಿಯಲ್ಲಿ ಡಯಟ್ ನ ನೋಡಲ್ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ– ಶ್ರೀ ಟಿ.ವಿ ಸಿದ್ದರಾಜಾಚಾರಿ ರವರು ಮುಖ್ಯ ಶಿಕ್ಷಕರ ವೇದಿಕೆಯ ಉದ್ದೇಶಗಳನ್ನು ತಿಳಿಸುತ್ತಾ ಕಾರ್ಯಾಗಾರವನ್ನು ಪರಿಚಯಿಸಿದರು ಹಾಗೆಯೇ ಗುಂಡ್ಲುಪೇಟೆ,ಚಾಮರಾಜನಗರ, ಹನೂರು,ಕೊಳ್ಳೇಗಾಲ, ಯಳಂದೂರು ತಾಲ್ಲೂಕಿನಿಂದ ಆಗಮಿಸಿರುವ ಮುಖ್ಯ ಶಿಕ್ಷಕರಿಂದ ಮಾಹಿತಿ ಮತ್ತು ನಿರೀಕ್ಷೆಗಳನ್ನು ಪಟ್ಟಿ ಮಾಡಲಾಯಿತು. ಎರಡನೇ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿ ಎಂ.ಪಿ ಮಂಜಣ್ಣ ಅವರು ಎಲ್ಲಾ  ಮುಖ್ಯ ಶಿಕ್ಷಕರಿಗೆ E-mail id creat  ಮಾಡುವ ಬಗ್ಗೆ ಉದಾಹರಣೆ ಸಮೇತ ತಿಳಿಸಿದರು. ನಂತರ 32 ಮುಖ್ಯ ಶಿಕ್ಷಕರುಗಳೂ ತಮ್ಮ e-mail id ಯನ್ನು ತಾವೇ ಸ್ರುಷ್ಟಿಸಿದ್ದು ವಿಶೇಷವಾಗಿತ್ತು  ಈ ಪ್ರಕ್ರಿಯೆಗೆ ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಕುಮಾರ್,ನಾಗರಾಜು,ಮಹದೇವ ಕುಮಾರ್ ರವರು ಸಹಕರಿಸಿದರು. ಮಧ್ಯಾಹ್ನ ಊಟದ ನಂತರ ಮೂರನೇ ಅವಧಿಯಲ್ಲಿ ಅಂತರ್ಜಾಲ (internet) ಬಳಕೆ ಬಗ್ಗೆ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಯಾದ ಎಂ.ಪಿ ಮಂಜಣ್ಣ ರವರು ನೀಡಿದರು ಹಾಗು ವಿವಿಧ ವೆಬ್ ತಾಣಗಳನ್ನು(website) ಪರಿಚಯಿಸಿ, ಬ್ರೌಸಿಂಗ್ (browsing) ಮಾಡುವ ವಿಧಾನವನ್ನುತಿಳಿಸಿದರು. ನಂತರ ಮುಖ್ಯ ಶಿಕ್ಷಕರೆಲ್ಲರೂ ಅಭ್ಯಾಸ ನಡೆಸಿದರು ಈ ಅಭ್ಯಾಸಕ್ಕೆ  ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಕುಮಾರ್,ನಾಗರಾಜು,ಮಹದೇವ ಕುಮಾರ್ ರವರು ಸಹಕರಿಸಿದರು. ಚಹಾ ವಿರಾಮದ ನಂತರ ನಾಲ್ಕನೇ ಅವಧಿಯಲ್ಲಿ ಮುಖ್ಯ ಶಿಕ್ಷಕರನ್ನು ಆಯಾ ತಾಲ್ಲೂಕುವಾರು ತಂಡಗಳನ್ನು ರಚಿಸಿ ಪ್ರತಿ ತಂಡಗಳಿಗೆ ಒಬ್ಬರು ನಾಯಕರನ್ನು ಗುರುತಿಸಲಾಯಿತು. ಒಂದೊಂದು ತಂಡಕ್ಕೂ ಒಂದೊಂದು ಶೈಕ್ಷಣಿಕ ವಿಷಯಗಳನ್ನು ನೀಡಿ ಪ್ರತೀ ದಿನ ಒಂದೊಂದು ತಂಡವು ಮಂಡನೆ ಮಾಡಿ ಪರಸ್ಪರ ಚರ್ಚಿಸಿ ಶೈಕ್ಷಣಿಕ ಆಡಳಿತಕ್ಕೆ ಅನುಕೂಲಕರವಾದ ಪರಿಹಾರಗಳನ್ನು ಕಂಡುಕೊಳ್ಳಲು ನಿರ್ಧರಿಸಲಾಯಿತು ಈ ಪ್ರಕ್ರಿಯೆಯನ್ನು ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜು, ಚಂದ್ರಕುಮಾರ್, ಮಹದೇವಕುಮಾರ್ ರವರು ನಡೆಸಿಕೊಟ್ಟರು.
 +
ಅಂತಿಮವಾಗಿ tux typing ಅನ್ನು ಪರಿಚಯಿಸಿ ಅಭ್ಯಾಸ ಮಾಡಿಸಲಾಯಿತು.
 +
 +
'''2nd Day. 23/12/2014'''
 +
 +
ಚಾಮರಾಜನಗರ ಜಿಲ್ಲಾ  ಮಟ್ಟದ HTF ಕಾರ್ಯಾಗಾರದ ಎರಡನೇ ದಿನ ಮೊದಲ ಅಧಿವೇಶನದಲ್ಲಿ ಮೊದಲನೇ ದಿನದ ತರಬೇತಿಯ ಹಿಮ್ಮಾಹಿತಿಯನ್ನು ಗುಂಡ್ಲುಪೇಟೆ ತಾಲ್ಲೂಕಿನ ತಂಡದವರು ನೀಡಿದರು. ನಂತರ ಡಯಟ್ ನ ಹಿರಿಯ ಉಪನ್ಯಾಸಕರು ಹಾಗೂ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀ ಟಿ.ವಿ ಸಿದ್ದರಾಜಾಚಾರಿ ರವರು ಪ್ರಸ್ತುತ ದಿನ ಕಾರ್ಯಾಗಾರದಲ್ಲಿ ನಡೆಯುವ ಕಾರ್ಯಕ್ರಮಗಳ ಪಟ್ಟಿಯನ್ನು ನೀಡಿದರು. ನಂತರ ಸಂಪನ್ಮೂಲ ವ್ಯಕ್ತಿ ಮಹದೇವ ಕುಮಾರ್ ರವರು tux typing,tux paint ಅನ್ನು ಪರಿಚಯಿಸಿದರು, ಉಳಿದ ಸಂಪನ್ಮೂಲ ವ್ಯಕ್ತಿಗಳ  ಸಹಾಯದಿಂದ ಶಿಕ್ಷಕರು ಮುಖ್ಯ ಅಭ್ಯಾಸ ನಡೆಸಿದರು. ಎರಡನೇ ಅಧಿವೇಶನದಲ್ಲಿ ಜಿಲ್ಲಾ ಅರ್.ಎಂ.ಎಸ್.ಎ ಕಚೇರಿಯ ತಾಂತ್ರಿಕ ಸಹಾಯಕರಾದ  ಶ್ರೀ ಶಿವಶಂಕರ್ ರವರನ್ನು HRMS ಬಗ್ಗೆ ಮಾಹಿತಿ ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಲಾಗಿತ್ತು, ಅವರು ಅಂತರ್ಜಾಲ ಬಳಸಿ ಹೆಚ್ ಆರ್ ಎಂ ಸ್ ಮೂಲಕ ಶಾಲಾ ಸಿಬ್ಬಂದಿ ವರ್ಗದವರ ವೇತನದ ಬಿಲ್ಲು ಮಾಡುವ ಬಗೆ, ಸೇವಾ ವಿವರವನ್ನು ಅಳವಡಿಸುವ ಬಗೆ, ಮುಂತಾದವುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಅಲ್ಲದೆ ಶಿಬಿರಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಅವರ ಸಮಸ್ಯೆಗಳನ್ನು ಪರಿಹರಿಸಿದರು. ನಂತರ ಶಿಬಿರಾರ್ಥಿಗಳು ಅಂತರ್ಜಾಲ ಬಳಸಿ ಅಭ್ಯಾಸ ನಡೆಸಿದರು. ಮಧ್ಯಾಹ್ನ ಊಟದ ನಂತರ ಮೂರನೆಯ ಅಧಿವೇಶನದಲ್ಲಿ  ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಕುಮಾರ್ ರವರು ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡಿ ಸೂಕ್ತ ಶೈಕ್ಷಣಿಕ ಮಾಹಿತಿಗಳನ್ನು ಹುಡುಕುವ,ಡೌನ್ ಲೋಡ್ ಮಾಡುವ ಬಗೆಯನ್ನು ತಿಳಿಸಿದರು. ನಂತರ ನಮ್ಮ ಶೈಕ್ಷಣಿಕ ಚಟುವಟಿಕೆಗಳಿಗೆ  ಪೂರಕವಾಗಿರುವ ಸಿ ಸಿ ಇ ಮಾಹಿತಿ ,ಮಾದರಿ ಪ್ರಶ್ನೆಪತ್ರಿಕೆಗಳು,ಮಾದರಿ ಪಾಠ ಯೋಜನೆ, ಘಟಕ ಯೋಜನೆ,ವಾರ್ಷಿಕ ಯೋಜನೆಗಳನ್ನು ನೋಡುವ ಹಾಗೂ ತೆಗೆದುಕೊಳ್ಳುವ ಬಗ್ಗೆ  ಮುಖ್ಯ ಶಿಕ್ಷಕರು ಅಭ್ಯಾಸ ಮಾಡಿದರು. ಟೀ ವಿರಾಮದ ನಂತರ ನಾಲ್ಕನೇ ಅಧಿವೇಶನದಲ್ಲಿ ಸಂಪನ್ಮೂಲ ವ್ಯಕ್ತಿಯಾದ ನಾಗರಾಜುರವರು ವಿಜ್ಞಾನದ ಪ್ರಯೋಗಗಳು ಮತ್ತು  ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪಾಠೋಪಕರಣಗಳನ್ನು ಅಂತರ್ಜಾಲದಲ್ಲಿ ತೋರಿಸಿ ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಬೋಧಿಸುವ ಬಗ್ಗೆ ತಿಳಿಸಿದರು. ನಂತರ ಶಿಬಿರಾರ್ಥಿಗಳೆಲ್ಲರೂ ಇ ಮೇಲ್ ಮೂಲಕ ಪರಸ್ಪರ ಮಾಹಿತಿ ಹಂಚಿಕೊಳ್ಳುವ ಮೂಲಕ ಉತ್ಸಾಹದಿಂದ ಅಭ್ಯಾಸಿಸಿದರು.
 +
 +
'''3rd Day. 24/12/2014'''
 +
 +
ಚಾಮರಾಜನಗರ ಜಿಲ್ಲಾ  ಮಟ್ಟದ HTF ಕಾರ್ಯಾಗಾರದ ಮೂರನೇ ದಿನದ  ಮೊದಲ ಅಧಿವೇಶನದಲ್ಲಿ ಎರಡನೇ ದಿನದ ತರಬೇತಿಯ ಹಿಮ್ಮಾಹಿತಿಯನ್ನು ಚಾಮರಾಜನಗರ ತಾಲ್ಲೂಕಿನ ತಂಡದವರು ನೀಡಿದರು. ನಂತರ ಡಯಟ್ ನ ಹಿರಿಯ ಉಪನ್ಯಾಸಕರು ಹಾಗೂ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀ ಟಿ.ವಿ ಸಿದ್ದರಾಜಾಚಾರಿ ರವರು ಪ್ರಸ್ತುತ ದಿನ ಕಾರ್ಯಾಗಾರದಲ್ಲಿ ನಡೆಯುವ ಕಾರ್ಯಕ್ರಮಗಳ ಪಟ್ಟಿಯನ್ನು ನೀಡಿದರು. ನಂತರ ಸಂಪನ್ಮೂಲ ವ್ಯಕ್ತಿ ಎಂ.ಪಿ ಮಂಜಣ್ಣ ಅವರು ಉಬಂಟು  ೧೪.೦೪ ನ ಬಗ್ಗೆ ಮಾಹಿತಿ ನೀಡಿ ubuntu office ನ ಪರಿಕರಗಳನ್ನು ಪರಿಚಯಿಸಿ , ubuntu ,microsoft ಅನ್ನು ಪರಸ್ಪರ ಹೋಲಿಕೆ ಮಾಡಿ, ತಿಳಿಸಲಾಯಿತು. ಟೀ ನಂತರ ಎರಡನೇ ಅಧಿವೇಶನದಲ್ಲಿ ಚಾಮರಾಜನಗರ ತಾಲ್ಲೂಕಿನ ಮುಖ್ಯ ಶಿಕ್ಷಕರ ತಂಡದವರು ''ಶಿಕ್ಷಣದ ಗುರಿಗಳು'' ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು ಹಾಗೆಯೇ ಉಳಿದ ತಾಲ್ಲೂಕಿನ ಮುಖ್ಯ ಶಿಕ್ಷಕರು ಈ ಚರ್ಚೆಯಲ್ಲಿ ಪಾಲ್ಗೊಂಡು ಶಿಕ್ಷಣದ ಗುರಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಈ ವಿಷಯ ಚರ್ಚೆಯನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ನಾಗರಾಜು ಮತ್ತು ಶ್ರೀ ಚಂದ್ರಕುಮಾರ್ ರವರು ನಿರ್ವಹಿಸಿದರು. ನಂತರ ಸಂಪನ್ಮೂಲ ವ್ಯಕ್ತಿ ಎಂ.ಪಿ ಮಂಜಣ್ಣ ರವರು ಉಬಂಟು office ನ ಪರಿಕರಗಳಾದ libre office writer, libre office math,libre office draw, libre office calc, ಗಳನ್ನು ಪರಿಚಯಿಸಲಾಯಿತು. ನಂತರ ಮುಖ್ಯ ಶಿಕ್ಷಕರೆಲ್ಲರೂ ಉತ್ಸಾಹದಿಂದ ಉಳಿದ ಸಂಪನ್ಮೂಲ ವ್ಯಕ್ತಿಗಳ ನೆರವಿನಿಂದ ಅಭ್ಯಾಸ ನಡೆಸಿದರು. ಮಧ್ಯಾಹ್ನ ಊಟದ ನಂತರದ ಮೂರನೇ ಅಧಿವೇಶನದಲ್ಲಿ ಮೊದಲು ಶಿಬಿರಾರ್ಥಿಗಳೆಲ್ಲರೂ ಉತ್ಸಾಹದಿಂದ ಪರಸ್ಪರ ಉತ್ಸಾಹದಿಂದ ಒಬ್ಬರಿಗೊಬ್ಬರು ಬ್ರೌಸ್ ಮಾಡಿ ಮೈಲ್ ಮೂಲಕ ಪರಸ್ಪರ ಸಂದೇಶಗಳನ್ನು,ಲೇಖನಗಳನ್ನು ರವಾನಿಸಿದರು. ನಂತರ ಸಂಪನ್ಮೂಲ ವ್ಯಕ್ತಿ ಎಂ.ಪಿ ಮಂಜಣ್ಣ ಹಾಗೂ ಮಹದೇವ ಕುಮಾರ್ ರವರು KOER ಪರಿಚಯಿಸಿದರು ಹಾಗೂ ಅಲ್ಲಿನ ಶೈಕ್ಷಣಿಕ ಅವಕಾಶಗಳ ಬಗ್ಗೆ ಸುದೀರ್ಘವಾಗಿ ವಿವರಣೆ ನೀಡಿದರು ಹಾಗೂ  ಮುಖ್ಯ ಶಿಕ್ಷಕರೆಲ್ಲರೂ ಉತ್ಸಾಹದಿಂದ ಉಳಿದ ಸಂಪನ್ಮೂಲ ವ್ಯಕ್ತಿಗಳ ನೆರವಿನಿಂದ ಅಭ್ಯಾಸ ನಡೆಸಿದರು. ನಾಲ್ಕನೇ ಅಧಿವೇಶನದಲ್ಲಿ ಗುಂಡ್ಲುಪೇಟೆ ಮುಖ್ಯ ಶಿಕ್ಷಕರ ತಂಡದವರು ಶಾಲಾ ನಾಯಕರಲ್ಲಿ  ಧನಾತ್ಮಕ ದ್ರುಷ್ಟಿಕೋನ ಬೆಳೆಸುವುದು, ಸಹಕಾರಿಯಾಗಿ ಕೈ-ಮಿಂಗ್-ಚಂಗ್ ಸಾಹಿತ್ಯ, ಹಾಗೂ          ಶಾಲಾ ಕಾಣ್ಕೆ ಕುರಿತಂತೆ ವಿಚಾರ ಮಂಡಿಸಿದರು ಹಾಗೆಯೇ ಉಳಿದ ತಾಲ್ಲೂಕಿನ ಮುಖ್ಯ ಶಿಕ್ಷಕರು ಶಾಲಾ ಕಾಣ್ಕೆ ಬಗ್ಗೆ ತಮ್ಮ ತಮ್ಮ ವಿಚಾರಗಳನ್ನು ಮಂಡಿಸಿದರು. ನಂತರ ಕೋಯರ್ ನಲ್ಲಿ ವಿಷಯ ಸಂಪನ್ಮೂಲಗಳ ಬಗ್ಗೆ ಹುಡುಕಾಟ ಪ್ರಾರಂಭವಾಯಿತು, ನಂತರ ಈ ದಿನದ ಎಲ್ಲಾ ಕಲಿತ ವಿಷಯಗಳ ಬಗ್ಗೆ  ಮತ್ತೊಮ್ಮೆ ಸಂಪನ್ಮೂಲ ವ್ಯಕ್ತಿಗಳ ನೆರವಿನಿಂದ ಮುಖ್ಯ ಶಿಕ್ಷಕರು ಅಭ್ಯಾಸ ನಡೆಸಿದರು ಹಾಗೂ ತಮ್ಮ ಕಲಿಕಾ ಸಮಸ್ಯೆಗಳನ್ನು ಪರಿಹರಿಸಿಕೊಂಡರು.
 +
 +
'''4th Day. 26/12/2014'''
 +
 +
ಚಾಮರಾಜನಗರ ಜಿಲ್ಲಾ  ಮಟ್ಟದ HTF ಕಾರ್ಯಾಗಾರದ ನಾಲ್ಕನೇ ದಿನದ  ಮೊದಲ ಅಧಿವೇಶನದಲ್ಲಿ ಮೂರನೇ ದಿನದ ತರಬೇತಿಯ ಹಿಮ್ಮಾಹಿತಿಯನ್ನು(feedback)ಕೊಳ್ಳೇಗಾಲ  ತಾಲ್ಲೂಕಿನ ತಂಡದವರು ನೀಡಿದರು. ನಂತರ ಡಯಟ್ ನ ಹಿರಿಯ ಉಪನ್ಯಾಸಕರು ಹಾಗೂ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀ ಟಿ.ವಿ ಸಿದ್ದರಾಜಾಚಾರಿ ರವರು ಪ್ರಸ್ತುತ ದಿನ ಕಾರ್ಯಾಗಾರದಲ್ಲಿ ನಡೆಯುವ ಕಾರ್ಯಕ್ರಮಗಳ ಪಟ್ಟಿಯನ್ನು ನೀಡಿದರು. ನಂತರ ಸಂಪನ್ಮೂಲ ವ್ಯಕ್ತಿ ಎಂ.ಪಿ ಮಂಜಣ್ಣ ಅವರು ಸಾರ್ವಜನಿಕ ಶೈಕ್ಷಣಿಕ ತತ್ರಾಂಶ - ಉಬಂಟುವಿನ ಶೈಕ್ಷಣಿಕ ಪರಿಕರಗಳಾದ  (Education Tools) Geo Gebra, Kana Gram, Kletters, Ktouch, KwordQuiz, Marble,Tux math ಗಳನ್ನು ಪರಿಚಯಿಸಿದರು. ಎರಡನೇ ಅಧಿವೇಶನದಲ್ಲಿ ಉಬಂಟುವಿನ ಶೈಕ್ಷಣಿಕ ಪರಿಕರಗಳನ್ನು ಮುಖ್ಯ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳ ನೆರವಿನಿಂದ ಅಭ್ಯಾಸ ನಡೆಸಿದರು. ಈ ಸಂದರ್ಭದಲ್ಲಿ ಉಂಟಾದ ಸಮಸ್ಯೆಗಳನ್ನು ಪರಿಹರಿಸಿಕೊಂಡರು. ನಂತರ ಸಂಪನ್ಮೂಲ ವ್ಯಕ್ತಿ ಎಂ.ಪಿಮಂಜಣ್ಣ ಮತ್ತು ಚಂದ್ರಕುಮಾರ್ ರವರು ಉಬಂಟುವಿನ ಮತ್ತೊಂದು ಶೈಕ್ಷಣಿಕ ಪರಿಕರವಾದ Science ವಿಭಾಗದಲ್ಲಿನ Kalgebra, Kalzium, Kstars, Stellarium,  ಅನ್ನು ಪರಿಚಯಿಸಲಾಯಿತು. phET ಅನ್ನು ಮುಖ್ಯವಾಗಿ ಪರಿಚಯಿಸಿ ಅಲ್ಲಿನ Simulations ಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಶಿಬಿರಾರ್ಥಿಗಳು ಅಭ್ಯಾಸ ನಡೆಸಿದರು. ಮಧ್ಯಾಹ್ನ ಊಟದ ನಂತರದ ಮೂರನೇ ಅಧಿವೇಶನದಲ್ಲಿ ಮೊದಲು ಶಿಬಿರಾರ್ಥಿಗಳೆಲ್ಲರೂ ಉತ್ಸಾಹದಿಂದ ಪರಸ್ಪರ ಉತ್ಸಾಹದಿಂದ ಒಬ್ಬರಿಗೊಬ್ಬರು ಬ್ರೌಸ್ ಮಾಡಿ ಮೈಲ್ ಮೂಲಕ ಪರಸ್ಪರ ಸಂದೇಶಗಳನ್ನು,ಲೇಖನಗಳನ್ನು ರವಾನಿಸಿದರು ಹಾಗೂ ಶೈಕ್ಷಣಿಕ ಪರಿಕರಗಳನ್ನು ಅಭ್ಯಸಿಸಿದರು. ನಂತರ ಯಳಂದೂರು  ತಾಲ್ಲೂಕಿನ ಮುಖ್ಯ ಶಿಕ್ಷಕರ ತಂಡದವರು'' ಪ್ರಭಾವ ವಲಯ ಮತ್ತು ಕಾಳಜಿ ವಲಯ'' ಎಂಬ ಶೈಕ್ಷಣಿಕ ವಿಷಯವನ್ನು ಕುರಿತು ವಿಚಾರ ಮಂಡಿಸಿದರು. ಶಾಲೆಯ ಗುಣಾತ್ಮಕ ಬೆಳವಣಿಗೆಯಲ್ಲಿ ಮುಖ್ಯ ಶಿಕ್ಷಕರ ಪ್ರಭಾವ ಮತ್ತು ಕಾಳಜಿಯ ಬಗ್ಗೆ ಹಲವಾರು ಮುಖ್ಯ ಶಿಕ್ಷಕರು ತಮ್ಮದೆ ಆದ ವಿಚಾರಗಳನ್ನು ಮಂಡಿಸಿದರು ಈ ಅಧಿವೇಶನವನ್ನು ಸಂಪನ್ಮೂಲ ವ್ಯಕ್ತಿಗಳಾದ  ಶ್ರೀ ನಾಗರಾಜು ಮತ್ತು ಶ್ರೀ ಮಹದೇವಕುಮಾರ್ ರವರು ನಿರ್ವಹಿಸಿದರು. ಟೀ ವಿರಾಮದ ನಂತರ ನಾಲ್ಕನೇ ಅಧಿವೇಶನದಲ್ಲಿ ಸಂಪನ್ಮೂಲ ವ್ಯಕ್ತಿ ಶ್ರೀ ಎಂ.ಪಿ ಮಂಜಣ್ಣ ಅವರು ಗೂಗಲ್ ನಲ್ಲಿನ ಪರಿಕರಗಳಾದ  (Google Apps ) Google +, Google Trnslate, Google store, Google Map, You tube, Google Drive, Google search, ಗಳನ್ನು ಪರಿಚಯಿಸಿ,  ಮುಖ್ಯ ಶಿಕ್ಷಕರು ಹೇಗೆ ತಮ್ಮ ಶಾಲಾ ಆಡಳಿತದಲ್ಲಿ ಈ ಗೂಗಲ್ ಪರಿಕರಗಳನ್ನು ಯಶಸ್ವಿಯಾಗಿ ಬಳಸಬಹುದೆಂಬುದನ್ನು ಉದಹರಣೆಗಳ ಮೂಲಕ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕರೆಲ್ಲರೂ ಆಸಕ್ತಿಯಿಂ  ಉಳಿದ ಸಂಪನ್ಮೂಲ ವ್ಯಕ್ತಿಗಳ ನೆರವಿನಿಂದ ಅಭ್ಯಾಸ ನಡೆಸಿದರು.
 +
                             
 +
'''5th Day. 27/12/2014'''
 +
 +
ಚಾಮರಾಜನಗರ ಜಿಲ್ಲಾ  ಮಟ್ಟದ HTF ಕಾರ್ಯಾಗಾರದ ಐದನೇ ದಿನದ  ಮೊದಲ ಅಧಿವೇಶನದಲ್ಲಿ  ನಾಲ್ಕನೇ ದಿನದ ತರಬೇತಿಯ ಹಿಮ್ಮಾಹಿತಿಯನ್ನು(feedback) (ಕಲಿಕಾ ಅವಲೋಕನ) ಹನೂರು ಶೈಕ್ಷಣಿಕ ತಾಲ್ಲೂಕಿನ ಮುಖ್ಯ ಶಿಕ್ಷಕ  ತಂಡದವರು ನೀಡಿದರು. ನಂತರ ಡಯಟ್ ನ ಹಿರಿಯ ಉಪನ್ಯಾಸಕರು ಹಾಗೂ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀ ಟಿ.ವಿ ಸಿದ್ದರಾಜಾಚಾರಿ ರವರು ಅಂತಿಮ ದಿನದ ಕಾರ್ಯಾಗಾರದಲ್ಲಿ ನಡೆಯುವ ಕಾರ್ಯಕ್ರಮಗಳ ಪಟ್ಟಿಯನ್ನು ನೀಡಿದರು. ನಂತರ ಮುಖ್ಯ ಶಿಕ್ಷಕರು ಗೂಗಲ್ ನ  ಪರಿಕರಗಳನ್ನು (Apps) ಬಳಸಿ ಅಭ್ಯಾಸ ನಡೆಸಿದರು. ಈ ಸಂಬಂಧ ಪರಿಕರಗಳನ್ನು ಬಳಸುವಾಗಿನ ಸಮಸ್ಯೆಗಳನ್ನು ಪರಿಹರಿಸಿಕೊಂಡರು.
 +
ಟೀ ವಿರಾಮದ ನಂತರ ಎರಡನೆಯ ಅಧಿವೇಶನದಲ್ಲಿ  ಕುರಿತು ಸಂಪನ್ಮೂಲ ವ್ಯಕ್ತಿ ಎಂ.ಪಿ ಮಂಜಣ್ಣ ಅವರು  ಪಿಕಾಸ  (picasa) ಕುರಿತು ಮಾಹಿತಿ ನೀಡಿದರು ಇದರಲ್ಲಿ ಶಾಲೆಗೆ ಸಂಬಂದಿಸಿದ ಫೋಟೋಗಳನ್ನು ಅಪ್ ಲೋಡ್ ಮಾಡಿ ಆಲ್ಬಮ್ ಮಾಡುವ ವಿಧಾನ, shar ಮಾಡುವ ವಿಧಾನಗಳನ್ನು ಉದಾಹರಣೆ ಮೂಲಕ ತಿಳಿಸಿದರು. ನಂತರ ಮುಖ್ಯ ಶಿಕ್ಷಕರು ಉಳಿದ ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಪಿಕಾಸ ಬಳಸುವ ಬಗ್ಗೆ ಅಭ್ಯಾಸ ನಡೆಸಿದರು. ಮಧ್ಯಾಹ್ನ ಊಟದ ನಂತರದ ಮೂರನೇ ಅಧಿವೇಶನದಲ್ಲಿ ಮೊದಲು ಶಿಬಿರಾರ್ಥಿಗಳೆಲ್ಲರೂ ಉತ್ಸಾಹದಿಂದ ಪರಸ್ಪರ ಉತ್ಸಾಹದಿಂದ ಒಬ್ಬರಿಗೊಬ್ಬರು ಬ್ರೌಸ್ ಮಾಡಿ ಮೈಲ್ ಮೂಲಕ ಪರಸ್ಪರ ಸಂದೇಶಗಳನ್ನು,ಲೇಖನಗಳನ್ನು ರವಾನಿಸಿದರು ಹಾಗೂ ಕೋಯರ್ ಅಭ್ಯಸಿಸಿದರು. ನಂತರ ಸಂಪನ್ಮೂಲ ವ್ಯಕ್ತಿ ಚಂದ್ರಕುಮಾರ್ ಮತ್ತು ಮಹದೇವ ಕುಮಾರ್ ರವರು ಐಸಿಟಿ ಲ್ಯಾಬ್ ನಿರ್ವಹಣೆ, ವಿಷಯ ಶಿಕ್ಷಕರಿಗೆ ಐಸಿಟಿ ಅಳವಡಿಕೆಯಲ್ಲಿ ಬೆಂಬಲ ನೀಡುವ ಬಗ್ಗೆ, ಆರ್ ಎಂ ಎಸ್ ಎ ಅನುದಾನ ಬಳಕೆ ಬಗ್ಗೆ, ಲ್ಯಾಪ್ ಟಾಪ್ ಖರೀದಿಯ ಬಗ್ಗೆ  ಮಾಹಿತಿ ನೀಡಿದರು. ಟೀ ವಿರಾಮದ ನಂತರ ಯಳಂದೂರು ತಾಲ್ಲೂಕಿನ ಮುಖ್ಯ  ಶಿಕ್ಷಕರ ತಂಡದವರು ''ಭಾಗೀದಾರರ ಸಹಭಾಗಿತ್ವ ''ಎಂಬ ಶೈಕ್ಷಣಿಕ ವಿಷಯ ಕುರಿತು ವಿಚಾರ ಮಂಡನೆ ಮಾಡಿದರು, ಸುಧೀರ್ಘ ಕಾಲ ಈ ವಿಷಯದ ಬಗ್ಗೆ ಚರ್ಚೆ ನಡೆದು ಅನೇಕ ಶಾಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ನಂತರ ತರಬೇತಿಯ ಐದು ದಿನಗಳ ಕಲಿಕೆಯನ್ನು ಪುನರಾವಲೋಕನ ಮಾಡಾಲಾಯಿತು. ಕಲಿಕೆಯಲ್ಲಿ ಉಂಟಾದ ಸಮಸ್ಯೆಗಳಿಗೆ ಹಾಗೂ ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಡಯಟ್ ನ ಹಿರಿಯ ಉಪನ್ಯಾಸಕರು ಹಾಗೂ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀ ಟಿ.ವಿ ಸಿದ್ದರಾಜಾಚಾರಿ ರವರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿದರು.
 +
    
==Batch 2==
 
==Batch 2==
1,287

edits

Navigation menu