Changes

Jump to navigation Jump to search
8,629 bytes added ,  09:53, 9 March 2015
Line 100: Line 100:  
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''1st Day'''.
 +
 
 +
೨೦೧೪-೨೦೧೫ ರ ಎರಡನೇ ಸುತ್ತಿನ s t f ಕಾರ್ಯಕ್ರಮವು ದಿನಾಂಕ ೨೭.೦೧ ೨೦೧೪ ರಂದು ಬೆಳಗ್ಗೆ ೧೦.೩೦ಕ್ಕೆ ರಾಯಚೂರು ಜಿಲ್ಲೆಯ DIET ಕೇಂದ್ರದಲ್ಲಿ ಉದ್ಘಾಟನೆಯಾಯಿತು. ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ  ಡಿ.ಇಡಿ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀಮತಿ ಖೈರುನ್ನಿಸಾ  ಬೇಗಂ ರವರು ಮಾತನಾಡಿ ''ಈ ಅಂತರ್ಜಾಲ ವೆನ್ನುವುದು ಸಾಗರವಿದ್ದಂತೆ.ಇದನ್ನು ಎಷ್ಟು ಕಲಿತರು ಕಡಿಮೆ. ಶೈಕ್ಷಣಿಕ  ವಿಷಯಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯವು  ಈ ಅಂತರ್ಜಾಲದಲ್ಲಿದೆ. ಶಿಕ್ಷಕರೇ, ನಿಮಗೆ ಬೇಕಾದ ವಿಷಯವನ್ನು ಹೆಚ್ಚಿನ ರೀತಿಯಲ್ಲಿ ಪಡೆದುಕೊಂಡು ಬೋಧನೆಯನ್ನು ಪರಿಣಾಮಕಾರಿಯಾಗಿ ಮಾಡಲು ಸಾದ್ಯವಿದೆ.ಪಠ್ಯದಲ್ಲಿನ ಸಂಶಯಗಳಿಗೆ ಮಾಹಿತಿ ಸಂಗ್ರಹಿಸಿ ವಿಷಯ ವಿವರಣೆ ನೀಡಲು,ಸುಲಭವಾಗಿ ಅರ್ಥೈಸಲು ಈ ಅಂತರ್ಜಾಲಬಳಕೆ ತುಂಬಾನೆ ಅವಶ್ಯಕ ಎಂದು ಹೇಳಿದರು. ಈ ಕಾರ್ಯಾಕ್ರಮದ ಅತಿಥಿಗಳಾದ ಅಂಜನಪ್ಪನವರು,ಈ ಮಾಹಿತಿಯನ್ನು ನೀವೆಲ್ಲಾ ಪಡೆಯುತ್ತಿರುವುದು ಸಂತಸದ ವಿಷಯ.ಈಗಾಗಲೆ ಗಣಿತ,ಸಮಾಜ ವಿಷಯ ಭೋಧಕರಿಗೆ ತರಭೇತಿಯನ್ನು ನೀಡಿದ್ದೇವೆ.ನಿಮಗೆ ನೀಡುವ ಈ ತರಭೇತಿ ಯಶಸ್ವಿಯಾಗಲಿ ಎಂದರು. ಈ  s t f ತರಭೇತಿಯ ಸಂಪನ್ಮೂಲ ವ್ಯಕ್ತಿಗಳಾದ ಶಂಕರ ಗೌಡ,''ಈ೫ ದಿನಗಳ ಈ ತರಬೇತಿಯಲ್ಲಿ ಅಂತರ್ಜಾಲ ಬಳಕೆ ಮಾಡುವ ವಿಧಾನವನ್ನು ಕಲಿಸಲಾಗುತ್ತದೆ.ubuntu apps, ಬಗ್ಗೆ ತಿಳಿಸಿ ಅದರಲ್ಲಿ  ಪಠ್ಯದ ಸಂಶಯದ ವಿಷಯವನ್ನು ರಾಜ್ಯದ ಎಲ್ಲಾ ಶಿಕ್ಷಕರೊಂದಿಗೆ ಸಂವಹಿಸುವ ರೀತಿಯನ್ನು ತಿಳಿಸಿದರು. ಈ ಕಾರ್ಯಕ್ರಮವು ಶಿವಪುತ್ರ ಸ್ವಾಮಿ ಯವರು ಪ್ರಾರ್ಥನೆಯೊಂದಿಗೆ ಆರಂಭವಾಗಿ ಪಾಷ ರವರ  ವಂದನೆಗಳೊಂದಿಗೆ  ಮುಕ್ತಾಯವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ ರವರು ನಿರೂಪಿಸಿದರು. ಚಹಾನಂತರ ಶೀಕ್ಷಕರಿಗೆ ಗಣಕಯಂತ್ರದ on/off, desktop,apps, & UBUNTU apps ನಲ್ಲಿ ಕನ್ನಡ ಬರಹ ಬರೆಯುವ ರೀತಿಯನ್ನು ತಿಳಿಸಿದರು. ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಊಟದ ನಂತರ ತರಬೇತಿಯಲ್ಲಿ ಪಿ.ಪಿ.ಟಿ ಯ ಮುಖಾಂತರ computer, browser, googie, search engine ಗಳ ಬಗ್ಗೆ ಉದಾಹರಣೆ ನೀಡುತ್ತಾ ವಿವರಿಸಿದರು. ಜೊತೆಗೆ ಅದರಲ್ಲಿ cut—paste—save—send options ಗಳ ಬಗ್ಗೆ ತಿಳಿಸಿದರು.
 +
 
 +
'''2nd Day'''.
 +
 
 +
ಕನ್ನಡ ಭಾಷಾ ಶಿಕಕ್ಷಕರಿಗಾಗಿ  ಹಮ್ಮಿಕೊಂಡಿದ್ದ ಐದು ದಿನಗಳ ಎಸ್.ಟಿ.ಎಫ್. ತರಬೇತಿಯು ದಿನಾಂಕ: 27-01-2015 ರಿಂದ ಡಯಟ್ ಯರಮರಸ್ ನಲ್ಲಿ ಆರಂಭಗೊಂಡು  ಒಂದು ದಿನ ಯಶಸ್ವಿಯಾಗಿ ಮುಗಿದಿದ್ದು  ಎರಡನೇ ದಿನ  ದಿನಾಂಕ: 28-01-2015 ರ ವರದಿಯನ್ನು ತಮ್ಮ ಮುಂದೆ ಪ್ರಸ್ತಾಪಿಸಲು ಇಚ್ಚಿಸುತ್ತೇನೆ. ಎರಡನೇ ದಿನದ ತರಬೇತಿಯು ಬೆಳಿಗ್ಗೆ ಸರಿಯಾಗಿ 10:00 ಗಂಟೆಗೆ ಶ್ರೀಮತಿ ಶಾಂತ ಮೇಟಿ ಅವರ ಪ್ರಾರ್ಥನೆ ಯೊಂದಿಗೆ ಆರಂಭವಾಯಿತು. ಶ್ರೀ ಮೆಹಬೂಬ ಪಾಷ ಅವರು ' ಸ್ನೇಹದ ಫಲ ' ವಿಷಯದ ಕುರಿತು ಚಿಂತನೆಯನ್ನು ನಡೆಸಿಕೊಟ್ಟರು. ಶ್ರೀತಿರುಮಲೇಶ ಸ.ಶಿ.ಅವರು ಮೊದಲನೇ ದಿನದ ಸಮಗ್ರ ವಿವರಗಳನ್ನೊಳಗೊಂಡ ವರದಿ ವಾಚನ ಮಾಡಿದರು. ನಂತರ ತರಬೇತಿಯು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವರಾಜ ಅವರಿಂದ ಆರಂಭಗೊಂಡಿತು. ಮೊದಲ ಅವಧಿಯಲ್ಲಿ 'MIND MAP ' ನ ಬಳಸುವ ವಿಧಾನವನ್ನು ಅಚ್ಚುಕಟ್ಟಾಗಿ ಪರಿಚಯಿಸಿದರು. ಇದೊಂದು ವಿಶಿಷ್ಟ ತಂತ್ರಾಂಶವಾಗಿದ್ದು ಅನೇಕ ವೈವಿಧ್ಯಮಯ ವಿಷಯಗಳನ್ನು ಸೊಗಸಾಗಿ ಬಿತ್ತರಿಸುತ್ತದೆ ಎಂದು  ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟರು. ಈ ವೇಳಗೆ ಚಹಾ ವಿರಾಮವಾಗಿದ್ದರಿಂದ  ತರಬೇತಿಗೆ ಅಲ್ಪ ಬಿಡುವು ನೀಡಲಾಯಿತು. ಚಹಾ ವಿರಾಮದ ನಂತರ ನಾವೆಲ್ಲ ಮತ್ತೆ ಸೇರಿದಾಗ  ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟ 'MIND MAP 'ನ್ನು ರೂಢಿ ಮಾಡಿಕೊಂಡೆವು. ಈ ಸಂದರ್ಭದಲ್ಲಿ ನಮಗೆ ಉಂಟಾದ ಅನೇಕ ಸಮಸ್ಯೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಶಾಂತ ಚಿತ್ತದಿಂದ ಪರಿಹರಿಸುತ್ತಿದ್ದರು. MIND MAP ' ನ Practice ನಲ್ಲಿ ಸಮಯ ಕಳೆದಿದ್ದೆ ತಿಳಿಯಲಿಲ್ಲ. ಸಮಯ 01:30 ಆಗಿದ್ದರಿಂದ ಎಲ್ಲರನ್ನು ಭೋಜನಕ್ಕೆ ಬಿಡಲಾಯಿತು. ರುಚಿಕಟ್ಟಾದ ಊಟ ಸೇವಿಸಿದ ನಂತರ ಮತ್ತೊಮ್ಮೆ ತರಬೇತಿ ಕಾರ್ಯಗಾರವು ಪ್ರಾರಂಭಗೊಂಡಿತು. ಮೂರನೇ ಅವಧಿಯಲ್ಲಿ  ಮತೊರ್ವ  ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆಂಜನೇಯ ಶಿಕ್ಷಕರು SCREEN SHOT ಎನ್ನುವ ಹೊಸ Application ನ್ನು ಪರಿಚಯ ಮಾಡಿಕೊಟ್ಟರು.ಇದು ಒಂದು ಉತ್ತಮವಾದ Image Application ಆಗಿದ್ದು ಇದರಿಂದ ನಮಗೆ ಬೇಕಾದ  Image ಅಥವಾ picture ನ್ನು ಆಯ್ಕೆ ಮಾಡಿಕೊಡು ನಮ್ಮ ವಿಷಯಗಳನ್ನು ಆಕರ್ಷಿಸುವಂತೆ ಮಾಡಬಹುದು ಎಂದು ಹೇಳಿದರು.SCREEN SHOT ನ Diologue Box ನ್ನು ಅತ್ಯುತ್ತಮವಾಗಿ  ಸಂಪನ್ಮೂಲ ವ್ಯಕ್ತಿಗಳು ಹೇಳಿಕೊಟ್ಟರು. ಇದನ್ನು ಹೇಳಿ ಶಿಬಿರಾರ್ಥಿಗಳಿಗೆ  Practice ಮಾಡಲು ಅನುವು ಮಾಡಿಕೊಟ್ಟರು. ನಾವು ಅಂತರ್ಜಾಲಕ್ಕೆ ಹೋಗಿ ನಮಗೆ ಬೇಕಾದ  Image ಗಳನ್ನು  Search ಮಾಡುತ್ತ  SCREEN SHOT ಬಳಸುವ ವಿಧಾನವನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡೆವು. ಇವೆಲ್ಲವನ್ನು ರೂಢಿಮಾಡಿಕೊಳ್ಳುತ್ತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತ ಕಲಿಯುತ್ತಿರುವಾಗಲೇ ಸಮಯ ಕಳೆದಿದ್ದು ತಿಳಿಯಲಿಲ್ಲ. ಆ ವೇಳಗೆ ಸಮಯ ಸಂಜೆ 05:30 ಆಗಿದ್ದರಿಂದ ಎರಡನೇ ದಿನದ ತರಬೇತಿಯನ್ನು ಅಂತ್ಯಗೊಳಿಸಲಾಯಿತು. 
 +
 
 +
'''3rd Day'''.
 +
 
 +
'''4th Day'''.
 +
 
 +
'''5th Day'''.
    
==Batch 3==
 
==Batch 3==
1,287

edits

Navigation menu