ಪ್ರಸ್ತುತ ಹರಿಹರನ ನಂಬಿಯಣ್ಣನ ರಗಳೆಯ ಕಥಾಸಾರದಂತೆ ಈತ ಪರಶಿವನ ಮಾನಸಪುತ್ರ. ಈತನನ್ನು ಪುಷ್ಪದತ್ತನೆಂದು ಕರೆದು ಪೂಜೆಗೆ ಹೂಗಳನ್ನು ಎತ್ತುವ ಕಾಯಕಕ್ಕೆ ನಿಯೋಜಿಸಲಾಗಿತ್ತು, ಒಮ್ಮೆ ಪುಷ್ಪದತ್ತ ಪಾರ್ವತಿಯ ಪೂಜೆಗಾಗಿ ಹೂ ತಿರಿಯುತ್ತಿದ್ದ ವಿಳಾಸಿನಿಯರಿಬ್ಬರನ್ನು ಕಂಡು ಮೋಹಗೊಂಡ. ಅವರೂ ಈತನಲ್ಲಿ ಅನುರಾಗ ಹೊಂದಿದರು. ಇದನ್ನು ಕಂಡ ಪಾರ್ವತೀಪರಮೇಶ್ವರರು ಭೂಲೋಕಕ್ಕೆ ಹೋಗಿ ಸಕಲಸುಖಗಳನ್ನೂ ಅನುಭವಿಸಿ ಬರುವಂತೆ ಹೇಳಿ ಆ ಮೂವರನ್ನೂ ಕಳಿಸಿಕೊಟ್ಟರು. ಅದರಂತೆ ತಿರುನಾವಲೂರಿನ ಜಡೆಯ ನಾಯನ್ನಾರ್ ಹಾಗೂ ಯಸ್ಯಜ್ಞಾನದೇವಿಯರಿಗೆ ನಂಬಿ ಎಂಬ ಹೆಸರಿನಿಂದ ಪುಷ್ಪದತ್ತ ಮಗನಾಗಿ ಹುಟ್ಟಿದ. ನಂಬಿ ಒಂದು ದಿನ ಓರಗೆಯವರೊಡನೆ ಆಟವಾಡುತ್ತಿದ್ದಾಗ ಅರಮನೆಯ ಆನೆ ಬಂದು ಆತನಿಗೆ ಪ್ರದಕ್ಷಿಣೆಯನ್ನು ಮಾಡಿ ಹಿಂತಿರುಗಿತು. ಈ ವಾರ್ತೆಯನ್ನು ಕೇಳಿದ ರಾಜ ನಂಬಿಯ ತಂದೆತಾಯಿಗಳನ್ನು ಕರೆಸಿ ಕಾರಣಿಕ ಶಿಶುವಾದ ನಂಬಿಯನ್ನು ಅಪುತ್ರವಂತನಾದ ತನಗೆ ಕೊಡಬೇಕೆಂದು ಕೇಳಿಕೊಂಡ. ಇದಕ್ಕೆ ನಂಬಿಯ ತಂದೆಯ ತಾಯಿಗಳು ಸಮ್ಮತಿಸಲಾಗಿ ನಂಬಿ ಅರಮನೆಯನ್ನು ಸೇರಿ ಕ್ರಮೇಣ ಸರ್ವಶಾಸ್ತ್ರಗಳಲ್ಲೂ ಕಲೆಗಳಲ್ಲೂ ಪರಿಣತನಾದ. | ಪ್ರಸ್ತುತ ಹರಿಹರನ ನಂಬಿಯಣ್ಣನ ರಗಳೆಯ ಕಥಾಸಾರದಂತೆ ಈತ ಪರಶಿವನ ಮಾನಸಪುತ್ರ. ಈತನನ್ನು ಪುಷ್ಪದತ್ತನೆಂದು ಕರೆದು ಪೂಜೆಗೆ ಹೂಗಳನ್ನು ಎತ್ತುವ ಕಾಯಕಕ್ಕೆ ನಿಯೋಜಿಸಲಾಗಿತ್ತು, ಒಮ್ಮೆ ಪುಷ್ಪದತ್ತ ಪಾರ್ವತಿಯ ಪೂಜೆಗಾಗಿ ಹೂ ತಿರಿಯುತ್ತಿದ್ದ ವಿಳಾಸಿನಿಯರಿಬ್ಬರನ್ನು ಕಂಡು ಮೋಹಗೊಂಡ. ಅವರೂ ಈತನಲ್ಲಿ ಅನುರಾಗ ಹೊಂದಿದರು. ಇದನ್ನು ಕಂಡ ಪಾರ್ವತೀಪರಮೇಶ್ವರರು ಭೂಲೋಕಕ್ಕೆ ಹೋಗಿ ಸಕಲಸುಖಗಳನ್ನೂ ಅನುಭವಿಸಿ ಬರುವಂತೆ ಹೇಳಿ ಆ ಮೂವರನ್ನೂ ಕಳಿಸಿಕೊಟ್ಟರು. ಅದರಂತೆ ತಿರುನಾವಲೂರಿನ ಜಡೆಯ ನಾಯನ್ನಾರ್ ಹಾಗೂ ಯಸ್ಯಜ್ಞಾನದೇವಿಯರಿಗೆ ನಂಬಿ ಎಂಬ ಹೆಸರಿನಿಂದ ಪುಷ್ಪದತ್ತ ಮಗನಾಗಿ ಹುಟ್ಟಿದ. ನಂಬಿ ಒಂದು ದಿನ ಓರಗೆಯವರೊಡನೆ ಆಟವಾಡುತ್ತಿದ್ದಾಗ ಅರಮನೆಯ ಆನೆ ಬಂದು ಆತನಿಗೆ ಪ್ರದಕ್ಷಿಣೆಯನ್ನು ಮಾಡಿ ಹಿಂತಿರುಗಿತು. ಈ ವಾರ್ತೆಯನ್ನು ಕೇಳಿದ ರಾಜ ನಂಬಿಯ ತಂದೆತಾಯಿಗಳನ್ನು ಕರೆಸಿ ಕಾರಣಿಕ ಶಿಶುವಾದ ನಂಬಿಯನ್ನು ಅಪುತ್ರವಂತನಾದ ತನಗೆ ಕೊಡಬೇಕೆಂದು ಕೇಳಿಕೊಂಡ. ಇದಕ್ಕೆ ನಂಬಿಯ ತಂದೆಯ ತಾಯಿಗಳು ಸಮ್ಮತಿಸಲಾಗಿ ನಂಬಿ ಅರಮನೆಯನ್ನು ಸೇರಿ ಕ್ರಮೇಣ ಸರ್ವಶಾಸ್ತ್ರಗಳಲ್ಲೂ ಕಲೆಗಳಲ್ಲೂ ಪರಿಣತನಾದ. |