ಕೋನದ ಉಂಟಾಗುವಿಕೆಯನ್ನು ಪರಿಚಯಿಸಲಾಗುತ್ತಿದೆ
(ಕೋನದ ರಚನೆಯನ್ನು ಪರಿಚಯಿಸಲಾಗುತ್ತಿದೆ ಇಂದ ಪುನರ್ನಿರ್ದೇಶಿತ)
Jump to navigation
Jump to search
ಬಾಹುಗಳ ಉದ್ದವನ್ನು ಲೆಕ್ಕಿಸದೆ ಒಂದು ಬಿಂದುವಿನಲ್ಲಿ ಎರಡು ರೇಖೆಗಳ ಸಾಪೇಕ್ಷ ಬಾಗುವಿಕೆಯಲ್ಲಿ ಉಂಟಾಗುವ ಕೋನದ ಪರಿಕಲ್ಪನೆಯನ್ನು ಅನ್ವೇಷಣೆಯ ವಿಧಾನದಲ್ಲಿ ಚರ್ಚಿಸಲಾಗಿದೆ.
ಉದ್ದೇಶಗಳು
- ಕೋನದ ಪರಿಕಲ್ಪನೆಗೆ ಮಕ್ಕಳನ್ನು ಪರಿಚಯಿಸುವುದು
ಅಂದಾಜು ಸಮಯ
೩೦ ನಿಮಿಷ
ಬೇಕಾಗುವ ಸಂಪನ್ಮೂಲಗಳು
- ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
- ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್.
- ಜಿಯೋಜಿಬ್ರಾ ಕಡತ : "ಕೋನದ ರಚನೆಯ ಪರಿಚಯ"
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
ಕರ ನಿರತ ಚಟುವಟಿಕೆಯ ಮೊದಲು(ಆಯ್ಕೆಗೆ ಬಿಟ್ಟದ್ದು - ಮಕ್ಕಳು ನಿಗದಿತ ಬಿಂದುವಿನ ಸುತ್ತಲು ತಿರುಗಿಸಲು ಎರಡು ದಾರದ ತುಂಡುಗಳನ್ನು ಬಳಸಬಹುದು ಅಥವಾ ದಾರದಿಂದ ಕಟ್ಟಿದ ಎರಡು ಕಡ್ಡಿಗಳನ್ನು ಬಳಸಬಹುದು).
- ಕೋನದ ರಚನೆ
- ಕೋನದ ರಚನೆಯನ್ನು ಪ್ರದರ್ಶಿಸಲು ಕಡತವನ್ನು ಬಳಸಿ
- ರೇಖಾಖಂಡ ತಿರುಗುವಿಕೆಯು ಕೋನವನ್ನು ಹೇಗೆ ಬದಲಾಯಿಸುತ್ತದೆ ಎಂದು ಕೇಳಿ
- ಎಷ್ಟು ಕೋನಗಳು ರೂಪುಗೊಂಡಿವೆ ಎಂದು ಕೇಳಿ
- ಕೋನಗಳನ್ನು ಅಳೆಯಿರಿ
- ಈ ಕೋನವನ್ನು ನೀವು ಹೇಗೆ ಅಳೆಯುತ್ತೀರಿ?
- ಮಕ್ಕಳು ಹೇಳಿದಂತೆ ಎರಡೂ ಕೋನಗಳನ್ನು ಅಳೆಯಿರಿ
- ಕೋನದ ಅಳತೆಗಳಲ್ಲಿ ಏನಾದರೂ ವ್ಯತ್ಯಾಸವಿದೆಯೇ ಎಂದು ಕೇಳಿ
- ಪ್ರದಕ್ಷಿಣಾಕಾರವಾಗಿ(ಎಡದಿಂದ ಬಲಕ್ಕೆ) / ಅಪ್ರದಕ್ಷಿಣಾಕಾರವಾಗಿ(ಬಲದಿಂದ ಎಡಕ್ಕೆ) ಮಾಪನದ ರೀತಿನೀತಿಯನ್ನು ಉಲ್ಲೇಖಿಸಿ
- ಸರಳಾಧಿಕ/ ಬಾಹ್ಯ ಕೋನವನ್ನು ಉಲ್ಲೇಖಿಸಿ
- ಅಳತೆ ಮಾಡಿದ ಎರಡು ಕೋನಗಳ ನಡುವೆ ಸಂಬಂಧವಿದೆಯೇ?
- ಕೋನದ ಅಳತೆಯು ರೇಖಾಖಂಡ ಉದ್ದದಿಂದ ಸ್ವಾವಲಂಬಿಯಾಗಿದೆ
ಕೋನವು ರೇಖಾಖಂಡದ ಉದ್ದವನ್ನು ಅವಲಂಬಿಸಿರುತ್ತದೆಯೇ?- ತೋರಿಸಲು ರೇಖಾಖಂಡಗಳನ್ನು ಎಳೆಯಿರಿ.
ಮೌಲ್ಯ ನಿರ್ಣಯ ಪ್ರಶ್ನೆಗಳು
ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ
- ವಿವಿಧ ರೀತಿಯ ಕೋನಗಳು ಯಾವುವು?
- ಒಂದು ಬಿಂದುವಿನಲ್ಲಿ ಎರಡು ರೇಖಾಖಂಡಗಳನ್ನು ಸೇರಿದಾಗ ಎಷ್ಟು ಕೋನಗಳು ರೂಪುಗೊಳ್ಳುತ್ತವೆ?
- ಒಂದು ಬಿಂದುವಿನಲ್ಲಿ ರೂಪುಗೊಂಡ ಒಟ್ಟು ಕೋನದ ಅಳತೆ ಏನು?
- ಕೋನಗಳನ್ನು ಅಳೆಯಲು ಬಳಸುವ ರೂಢಿ ಯಾವುದು?