ಸಪುರ ಹಗ್ಗದ ಒಂದು ತುದಿಯನ್ನು ಯಾವುದಾದರೂ ಆಧಾರಕ್ಕೆ (ಕಂಬ್ಬಕ್ಕೆ ) ಕಟ್ಟಿ. ಹಗ್ಗ ಕ್ಷಿತಿಜೀಯವಾಗಿರುವಂತೆ ಇನ್ನೊಂದು ತುದಿಯನ್ನು ಹಿಡಿದು ಹಗ್ಗದ ನೇರಕ್ಕೆ ಲಂಬವಾಗಿ ಮೇಲಕ್ಕೂ ಕೆಳಕ್ಕೂ ಅಲುಗಾಡಿಸುತ್ತಿರಿ. ಆಗ ತರಂಗಗಳು ಉತ್ಪಿತ್ತಿಯಾಗುತ್ತವೆ. ನಿಮ್ಮ ಕೈ ಹತ್ತಿರ ಉತ್ಪತ್ತಿ ಆದ ತರಂಗಗಳು ಹಗ್ಗದ ಗುಂಟ ಇನ್ನೊಂದು ತುದಿಯತ್ತ ಸಾಗಿದಂತೆ ಕಾಣಿಸುತ್ತದೆ. ಈ ನಮೂನೆಯ ತರಂಗಗಳೇ ಅಡ್ಡ ತರಂಗಗಳು.