ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
  −
ಶಾಲಾ ಶಿಕ್ಷಣದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT)
  −
8ನೇ ತರಗತಿ ಸಂಪನ್ಮೂಲ ಪುಸ್ತಕ
  −
ನಿರ್ದೇಶಕರ ಸಂದೇಶ
  −
ಆತ್ಮೀಯರೇ,
  −
  −
ರಾಜ್ಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು (DSERT) ಕರ್ನಾಟಕದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ  ಬಳಕೆಯನ್ನು ಪರಿಣಾಮಕಾರಿಯಾಗಿ ಪ್ರೋತ್ಸಾಹಿಸಲು ಪ್ರೌಢಶಾಲೆಗಳಲ್ಲಿ ICT ಸೌಲಭ್ಯವನ್ನು  ಶಾಲಾ ಶಿಕ್ಷಣದಲ್ಲಿ  ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ( ICT@School )ಕಾರ್ಯಕ್ರಮದ ಅಡಿಯಲ್ಲಿ ಒದಗಿಸುತ್ತಿದೆ.
  −
  −
ಬೋಧನೆ ಮತ್ತು ಕಲಿಕೆಯಲ್ಲಿ ICTಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ನಾವು ಈ ಸಂಪನ್ಮೂಲ ಪುಸ್ತಕವನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅಭಿವೃದ್ಧಿಪಡಿಸಿದ್ದೇವೆ. ಈ ಸಂಪನ್ಮೂಲ ಪುಸ್ತಕವು ಎರಡು ಭಾಗಗಳನ್ನು ಒಳಗೊಂಡಿದೆ - ಗಣಕಯಂತ್ರದ ಸಾಕ್ಷರತೆ ಕೌಶಲ ಮತ್ತು ಗಣಕಯಂತ್ರ ಆಧಾರಿತ ಕಲಿಕೆ.. ಗಣಕಯಂತ್ರದ ಸಾಕ್ಷರತೆ ಅಧ್ಯಾಯವು ಕಲಿಕಾರ್ತಿಗಳಿಗೆ ಗಣಕಯಂತ್ರದ ವಿವಿಧ  ವಿಷಯಗಳಾದ  ಅಂತರ್ಜಾಲದ ಬಳಕೆ, ಟೆಕ್ಸ್ಟ್ ಡಾಕ್ಯುಮೆಂಟ್ ಮತ್ತು ಮೈಂಡ್‌ಮ್ಯಾಪ್ಸ್  ಡಾಕ್ಯುಮೆಂಟ್ಅನ್ನು ವಿವಿಧ ರೀತಿಯಲ್ಲಿ ರಚಿಸುವ ವಿಧಾನವನ್ನು  ಪರಿಚಯಿಸುತ್ತದೆ. ಗಣಕಯಂತ್ರ ಆಧಾರಿತ ಕಲಿಕೆಯ ಅಧ್ಯಾಯದಲ್ಲಿ ಗಣಕಯಂತ್ರದೊಂದಿಗೆ ಸಂಯೋಜಿಸಿ  ವಿವಿಧ ವಿಷಯಗಳಾದ- ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳನ್ನು  ಕಲಿಯಲು ಬಳಸುವ  ಐ.ಸಿ.ಟಿ. ಉಪಕರಣಗಳು (ICT Tools )ಮತ್ತು ಶೈಕ್ಷಣಿಕ  ತಂತ್ರಾಂಶ (Educational Software) ಬಳಕೆಯ ಬಗ್ಗೆ ಚರ್ಚೆಯಾಗುತ್ತದೆ.
  −
  −
ಶಾಲಾ ಶಿಕ್ಷಣದ ಪ್ರಕ್ರಿಯೆಗೆ ಗಣಕಯಂತ್ರ  ಪ್ರಯೋಗಾಲಯವನ್ನು ಸಂಯೋಜಿಸುವುದು ಮತ್ತು ಗಣಕಯಂತ್ರವನ್ನು  ಪಠ್ಯ  ಸಂಪನ್ಮೂಲವಾಗಿ  ಬಳಸುವಂತೆ ಮಾಡುವುದು - ಈ ಎರಡು ಮುಖ್ಯ ಉದ್ದೇಶಗಳ ಹಿನ್ನೆಲೆಯಲ್ಲಿ ಈ ಅಭ್ಯಾಸವನ್ನು    ಸಂರಚಿಸಲಾಗಿದೆ. ಈ  ಸಂಪನ್ಮೂಲ ಪುಸ್ತಕವನ್ನು  ನಾವು ರಾಷ್ಟ್ರೀಯ ಪಠ್ಯಕ್ರಮದ  ಚೌಕಟ್ಟಿನ ಶಿಫಾರಸ್ಸಿ ನೊಂದಿಗೆ ಒಗ್ಗೂಡಿಸಲು ಪ್ರಯತ್ನಿಸಿದ್ದೇವೆ. DSERTವಿಷಯ ಶಿಕ್ಷಕರ ಫೋರಂ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರೌಢಶಾಲಾ ಶಿಕ್ಷಕರ ಸಲಹೆಯಂತೆ ರಚಿಸಲಾಗಿದೆ.
  −
  −
ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ  ತಮ್ಮ ಕಲಿಕೆ ಹಾಗೂ  ದೈನಂದಿನ ಜೀವನಕ್ಕೆ  ಗಣಕಯಂತ್ರವನ್ನು  ಬಳಸುವ ಬಗ್ಗೆ  ಸಕಾರಾತ್ಮಕ ಮನೋಭಾವನೆಯನ್ನು ಮೂಡಿಸುವುದಲ್ಲದೆ  ಗಣಕಯಂತ್ರವನ್ನು  ಬಳಸುವ ಜ್ಞಾನ  ಹಾಗೂ ಮಾಹಿತಿಯನ್ನು ಪ್ರತಿನಿಧಿಸಲು ಉಪಯೋಗಿಸಬೇಕಾದ ವಿವಿಧ ವಿಧಾನಗಳ  ಬಗ್ಗೆ  ಅರಿವು ಮೂಡಿಸುವ ಉದ್ದೇಶವನ್ನು  ಸದರಿ ಪ್ರೌಢಶಾಲಾ ಪಠ್ಯ ಪುಸ್ತಕ ಹೊಂದಿದೆ. ಎಲ್ಲಾ ಶಿಕ್ಷಕರು ಗಣಕಯಂತ್ರದ ಪ್ರಯೋಗಾಲಯವನ್ನು  ಶಾಲೆಯಲ್ಲಿ ಪರಿಣಾಮಕಾರಿಯಾಗಿ ಅವರ ಸ್ವಯಂ ಅಭಿವೃದ್ಧಿಗೆ ಮತ್ತು ತರಗತಿಯಲ್ಲಿನ ಬೋಧನಾ ಕಲಿಕೆಗೆ ಬಳಸಲು ಪ್ರಾರಂಭಿಸುತ್ತಾರೆ ಎನ್ನುವುದು ನನ್ನ ಅನಿಸಿಕೆ. ಈ ಪುಸ್ತಕವನ್ನು ಬಳಸಿದ ನಂತರ ದಯವಿಟ್ಟು  ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ .ನಿಮ್ಮ ಸಲಹೆ ಸೂಚನೆಗಳಿಗೆ ಸ್ವಾ ಗತ . 
  −
ಶ್ರೀ ರಾಮ ರಾವ್, ನಿರ್ದೇಶಕರು, DSERT, ಕರ್ನಾಟಕ
  −
  −
ಸಾರ್ವಜನಿಕ ತಂತ್ರಾಂಶ ಕೇಂದ್ರ, ಐಟಿ ಫಾರ್‌ ಚೇಂಜ್ ನಿಂದ ಟಿಪ್ಪಣಿ:
  −
  −
8ನೇ ತರಗತಿ ICTಸಂಪನ್ಮೂಲ ಪುಸ್ತಕವನ್ನು ರಚಿಸುವಲ್ಲಿ ಸಾರ್ವಜನಿಕ ತಂತ್ರಾಂಶ ಕೇಂದ್ರ, IT for change ಭಾಗವಹಿಸಿರುತ್ತದೆ. ದೈನಂದಿನ ಬೋಧನೆ ಕಲಿಕೆಗೆ ICTಯನ್ನು ಸಂಯೋಜಿಸುವುದು ಈ ಪುಸ್ತಕದ ನವೀನತೆ. ಈ ಪುಸ್ತಕದ ಎರಡನೇ ಅಧ್ಯಾಯವು ಗಣಕಯಂತ್ರವನ್ನು ಬಳಸಿ ಬೋಧಿಸಬಹುದಾದಂತ ಗಣಿತ , ವಿಜ್ಞಾನ ಮತ್ತು ಸಮಾಜ ವಿಜ್ಞಾನದ ಪಾಠಗಳನ್ನು  ಪರಿಶೋಧಿಸುತ್ತದೆ. ಹೀಗೆ ಗಣಕಯಂತ್ರವನ್ನು  ಶೈಕ್ಷಣಿಕ  Tool ಆಗಿ ಸಂಯೋಜಿಸಲಾಗಿದೆ. ಶಾಲೆಯಲ್ಲಿರುವ ವಿಷಯ ಶಿಕ್ಷಕರು ಬೋಧನೆ ಕಲಿಕೆಗೆ  ICTಯನ್ನು ಸಂಯೋಜಿಸಿದಾಗ ಅವರ ವೃತ್ತಿ ಪರಿಣಿತಿಯು ವೃದ್ಧಿಯಾಗುತ್ತದೆ.
  −
  −
ಉಚಿತ ಮತ್ತು ಮುಕ್ತ ಡಿಜಿಟಲ್‌ ಸಂಪನ್ಮೂಲದ ವಿಷಯ ಮತ್ತು ಸಾಫ್ಟ್ ವೇರ್‌ ಬಳಸುವ ಮುಖಾಂತರ ICTಯು ಸಮೃದ್ಧ ಮತ್ತು ವೈವಿಧ್ಯಮಯವಾದ ಕಲಿಕಾ ಪರಿಸರವನ್ನು ಒದಗಿಸುತ್ತದೆ . ವಿವಿಧ  ದೃಶ್ಯ ಮತ್ತು ಶ್ರಾವ್ಯ ಸಂಪನ್ಮೂಲ, ಉಚಿತವಾಗಿ ಸಿಗುವ ಶೈಕ್ಷಣಿಕ ಸಾಫ್ಟ್ ವೇರ್‌ ಮತ್ತು GNU/Linux ಪ್ಲಾಟ್ ಫಾರ್ಮ್ ಉಬಂಟುವಿನಲ್ಲಿ ಕೂಡಿರುವ ಜಿಯೋಜೀಬ್ರ, ಮಾರ್ಬಲ್‌ ಮತ್ತು PhET,  ವಿಕಿಪೀಡೀಯಾದಲ್ಲಿರುವ ಉಚಿತ ವಿಷಯಗಳು ಮತ್ತು ಇತರೆ ಶೈಕ್ಷಣಿಕ ವೆಬ್‌ಸೈಟ್‌ಗಳನ್ನು  ಪರಿಶೋಧಿಸುವ ಮುಖಾಂತರ ಈ ಪ್ರಪಂಚವನ್ನು  ಕಲಿಕಾರ್ತಿಗಳ ಮುಂದಿಡಲು  ಈ ಸಂಪನ್ಮೂಲ ಪುಸ್ತಕವು  ಪ್ರಯತ್ನಿಸುತ್ತಿದೆ.
  −
  −
ಇವುಗಳೆಲ್ಲವನ್ನು ಉಚಿತವಾಗಿ ಹಂಚಿಕೊಳ್ಳಬಹುದಾಗಿರುವುದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಗಣಕಯಂತ್ರದಲ್ಲಿ  ಕಾಪಿ ಮಾಡಿಕೊಂಡು ತಮ್ಮ ಕಲಿಕೆಯನ್ನು  , ಶಾಲಾ ಕಲಿಕೆಯನ್ನೂ ಮೀರಿ  ಮುಂದುವರಿಯಬಹುದು.
  −
  −
ಬಿಂದು ತಿರುಮಲೈ, ಸಾರ್ವಜನಿಕ ತಂತ್ರಾಂಶ ಕೇಂದ್ರ, IT for change.
  −
  −
ಕೃತಜ್ಞತೆಗಳು
  −
ಈ ಪುಸ್ತಕವನ್ನು ರಚಿಸುವಲ್ಲಿ ಕೆಳಗಿನ ವ್ಯಕ್ತಿಗಳು ಮತ್ತು  ಸಂಸ್ಥೆಗಳು ಕೊಡುಗೆ ನೀಡಿರುವುದಕ್ಕಾಗಿ, DSERT ಕರ್ನಾಟಕ ಕೃತಜ್ಞತೆಗಳನ್ನು ಅರ್ಪಿಸುತ್ತದೆ.
  −
1. ಸಂಪನ್ಮೂಲ ಪುಸ್ತಕದ ರಚನಾ ಮತ್ತು ಸಂಪಾದಕ ತಂಡ: ಅನುಪಮ ಜೋಶಿ, ಬಿಂದು ತಿರುಮಲೈ, ಕೃತಿಕ ವಿಶ್ವನಾಥ್‌,  ಶ್ರೀರಂಜನಿ  ರಂಗನಾಥ್‌ IT for Change ನಿಂದ.
  −
2. ರಚನೆ ಮತ್ತು ವಿಮರ್ಶೆ ಪ್ರಕ್ರಿಯೆಗೆ  ಕೆಳಗಿನ ವ್ಯಕ್ತಿಗಳು ಮತ್ತು ಸಂಸ್ಥೆಗಳ ಕೊಡುಗೆ :
  −
1. ಡಯಟ್‌ ಉಪನ್ಯಾಸಕರು :  ಶ್ರೀ ಗೋಪಿನಾಥ್‌ ಕಲ್ಭಾಗ್‌,  ಶ್ರೀ ಅಶ್ವಿನ್‌ ಕೆ. ಬಿ.
  −
2. DSERT, ಇ-ವಿದ್ಯಾ  ಸಂಪನ್ಮೂಲ ತಂಡ
  −
3. ಅಮೇರಿಕನ್‌ ಇಂಡಿಯಾ ಫೌಂಡೇಶನ್‌
  −
4. ಸಿ- ಲ್ಯಾಂಪ್ಸ್
  −
5. ಇಂಟೆಲ್ ಮತ್ತು ಲರ್ನಿಂಗ್‌ ಲಿಂಕ್ಸ್
  −
6. ನೀತಿ ಯೋಜನೆ ಘಟಕ , ಕರ್ನಾಟಕ  ಸರ್ಕಾರ
  −
7. ವಿಷಯ ಶಿಕ್ಷಕರ ವೇದಿಕೆ- ರಾಜ್ಯ ಸಂಪನ್ಮೂಲ ವ್ಯಕ್ತಿ: ರಾಧ ಎನ್‌ ಎ, ರಾಜೇಶ್‌ ವೈ ಎನ್‌, ಶೈಲಜ ಹೆಚ್‌ ಎಲ್‌, ತಾರನಾಥ್‌  ಆಚಾರ್‌, ವಿಶ್ವನಾಥ ಕೆ ವಿ.
  −
3. ICT ಪಠ್ಯಕ್ರಮದ ಸಮಿತಿ , ಪುಸ್ತಕದ  ರಚನೆಗೆ ಅಗತ್ಯ ಚೌಕಟ್ಟು  ಹಾಗೂ ಮಾರ್ಗದರ್ಶನ  ನೀಡುವ ಮತ್ತು ವಿಮರ್ಶನಾ ಸಮಿತಿ
  −
4. ನಾವು ಉಪಯೋಗಿಸಿದ ಪರಮರ್ಶನಾ  ಪುಸ್ತಕಗಳು - ಅಮೇರಿಕನ್  ಇಂಡಿಯಾ ಫೌಂಡೇಶನ್‌ ಪುಸ್ತಕದ ಭಾಗಗಳು, ಕಂಪ್ಯೂಟರ್‌ ಮಸ್ತಿ ಬುಕ್ಸ್ ಮೊದಲ ಆವೃತ್ತಿ - 2008.
  −
5. ಆಂಗ್ಲ ಭಾಷೆಯನ್ನು ಬೋಧನೆ ಮಾಡಲು ಮಾಡ್ಯುಲ್‌ ಅನ್ನು ರಚಿಸಿರುವುದಕ್ಕಾಗಿ  ರೀಜನಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲೀಷ್ .
  −
6. ಕನ್ನಡಕ್ಕೆ ಅನುವಾದ ಮಾಡಲು, ಕನ್ನಡ ಅನುವಾದಕರು  ಹಾಗೂ  ಬೆಂಬಲ ಶ್ರೀ ಯೋಗೀಶ ವಿ, ಶ್ರೀ ಉಮೇಶ್ ಆರ್, ಶ್ರೀಮತಿ  ಎ.ಸೌಮ್ಯ ಪೊನ್ನಪ್ಪ : ಇ-ವಿದ್ಯಾ ಅಕಾಡೆಮಿ, ಬೆಂಗಳೂರು ನಗರ ಡಯಟ್‌, ಬೆಂಗಳೂರು. 
  −
7. ಮುದ್ರಣ ಮತ್ತು ಪ್ರಕಾಶನಕ್ಕೆ , ಕಿಯೋನಿಕ್ಸ್. 
  −
   
ಈ ಪುಸ್ತಕವನ್ನು ಹೇಗೆ ಬಳಸುವುದು  
 
ಈ ಪುಸ್ತಕವನ್ನು ಹೇಗೆ ಬಳಸುವುದು  
 
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಈ ಸಂಪನ್ಮೂಲದ ಪುಸ್ತಕಕ್ಕೆ  ಸ್ವಾಗತ.   
 
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಈ ಸಂಪನ್ಮೂಲದ ಪುಸ್ತಕಕ್ಕೆ  ಸ್ವಾಗತ.   

ಸಂಚರಣೆ ಪಟ್ಟಿ