ಬದಲಾವಣೆಗಳು

Jump to navigation Jump to search
೫೭ ನೇ ಸಾಲು: ೫೭ ನೇ ಸಾಲು:
===ಮೊದಲನೇ ದಿನದ ವರದಿ===

===ಮೊದಲನೇ ದಿನದ ವರದಿ===

'''ಕನ್ನಡ ವಿಷಯ ಶಿಕ್ಷಕರ ವೇದಿಕೆ ಕಾರ್ಯಾಗಾರ    ದಿನಾಂಕ : ೧೮-೧೧-೨೦೧೪ ಮೊದಲನೇ ದಿನದ ವರದಿ'''

ಕನ್ನಡ ಭಾಷಾ ಶಿಕ್ಷಕರ ವೇದಿಕೆ ಮೊದಲನೇದಿನದ ಕಾರ್ಯಾಗಾರವು ಇಂದು ದಿನಾಂಕ ೧೮-೧೧-೨೦೧೪ ರಂದು ಬೆಂಗಳೂರು ನಗರ ಜಿಲ್ಲೆಯ ರಾಜರಾಜೇಶ್ವರಿ ನಗರ ಡಯಟ್ ನಲ್ಲಿ ಮುಂಜಾನೆ ೯.೩೦ ಕ್ಕೆ ಪ್ರಾರಂಭವಾಯಿತು .ಬೆಂಗಳೂರು ನಗರ,ದಕ್ಷಿಣಕನ್ನಡ,

ಉಡುಪಿ,ಚಿಕ್ಕಬಳ್ಳಾಪುರ,ಚಿತ್ರದುರ್ಗ ಜಿಲ್ಲೆಗಳಿಂದ ಆಯ್ದ ವಿಷಯ ಶಿಕ್ಷಕರು ಈ ಕಾರ್ಯಾಗಾರದ ತರಬೇತಿಗೆ ಹಾಜರಾಗಿದ್ದರು.ಕಾರ್ಯಾಗಾರದ ಮೊದಲ ಅವಧಿಯಲ್ಲಿ ಉಪಸ್ಥಿತರಿದ್ದ  ಡಿ.ಎಸ್.ಇ.ಆರ್.ಟಿ. ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಮಂಜುನಾಥ್ ರವರು ಈ

ಕಾರ್ಯಾಗಾರದ ಉದ್ದೇಶವನ್ನು ಶಿಕ್ಷಕರಿಗೆ ವಿವರಿಸಿದರು .ಕಾರ್ಯಾಗಾರಕ್ಕೆ ಔಪಚಾರಿಕ ಸ್ವಾಗತ ಕೋರಿದ ಐ.ಟಿ.ಫಾರ್.ಚೇಂಜ್.ಕನ್ನಡ ವಿಷಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವೆಂಕಟೇಶರವರು ಕಾರ್ಯಾಗಾರದ ಐದು ದಿನಗಳಲ್ಲಿ ಶಿಕ್ಷಕರು ಪಡೆಯಬಹುದಾದ ಮಾಹಿತಿ ಮತ್ತು ನಿರ್ವಹಿಸಬೇಕಾದ ಕಾರ್ಯಗಳ ಸಂಕ್ಷಿಪ್ತ ಮಾಹಿತಿ ಒದಗಿಸಿದರು. ಎರಡನೇ ಅವಧಿಯಲ್ಲಿ ಐ.ಟಿ.ಫಾರ್. ಚೇಂಜ್ .ನಿರ್ದೇಶಕರಾದ ಶ್ರೀಯುತ ಗುರುಮೂರ್ತಿಯವರು ರಾಜ್ಯದ ಐದು ಜಿಲ್ಲೆಗಳಿಂದ ಆಗಮಿಸಿರುವ ಕನ್ನಡ ವಿಷಯ ಶಿಕ್ಷಕರ ಕಿರು ಪರಿಚಯ ಮಾಡಿಕೊಂಡು ಆನಂತರ ಪ್ರಸ್ತುತ ಕಾರ್ಯಾಗಾರದ ಉದ್ದೇಶ , ಅಂತರ್ಜಾಲದ ಅರ್ಥ,ನಿತ್ಯಜೀವನದಲ್ಲಿ ಅದರ ಮಹತ್ವ ,ತರಗತಿ ಬೋಧನೆಯಲ್ಲಿ ಅದರ ಅಳವಡಿಕೆಯ ಅಗತ್ಯತೆ, ವಿಷಯಶಿಕ್ಷಕರಿಗೆ ಅಂತರ್ಜಾಲದಿಂದ ದೊರೆಯಬಹುದಾದ ಅನುಕೂಲಗಳು ಎಲ್ಲಕ್ಕಿಂತ ಹೆಚ್ಚಾಗಿ ವ್ಯಕ್ತಿ ಸ್ವತಃ ತನ್ನ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಅಂತರ್ಜಾಲವು ಮಾಡುವ ಸಹಾಯ ಮೊದಲಾದ ವಿಷಯಗಳ ಕುರಿತು ಮನಮುಟ್ಟುವಂತೆ ವಿವರಿಸಿದರು . ಕಾರ್ಯಾಗಾರದ ಮೂರನೇ ಅವಧಿಯಲ್ಲಿ ಐ.ಟಿ.ಫಾರ್.ಚೇಂಜ್. ತಂತ್ರಜ್ಞಾನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಕೇಶ್ ರವರುಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು ಮತ್ತು

ಸಂಪನ್ಮೂಲ ಹುಡುಕುವುದು ಹೇಗೆ ಎಂಬುದನ್ನು ಪ್ರಾಯೋಗಿಕ ಉದಾಹರಣೆಗಳ ಸಹಿತ ವಿವರಿಸಿದರು. ಈ ಹಂತದಲ್ಲಿ ಎದುರಾಗುವ ಸಮಸ್ಯೆಗಳ ಕುರಿತಾದ ಶಿಕ್ಷಕರ ಎಲ್ಲ ಪ್ರಶ್ನೆಗಳಿಗೆ ಶ್ರೀ ವೆಂಕಟೇಶ್ ಮತ್ತು ಶ್ರೀ ರಾಕೇಶ್ ಉತ್ತರಿಸಿದ್ದು ಸಮರ್ಪಕವಾಗಿತ್ತು.

ಇದರ ನಾಲ್ಕನೇ ಅವಧಿಯಲ್ಲಿ ಕನ್ನಡ ಭಾಷಾ ವಿಷಯ ಸಂಪನ್ಮೂಲ ಹುಡುಕಲು ಸಿಗಬಹುದಾದ ಜಾಲ ತಾಣ ಗಳ ಕಿರು ಮಾಹಿತಿಯನ್ನು ಶ್ರೀ ವೆಂಕಟೇಶ್ ನೀಡಿದ್ದು ಅವುಗಳ  ಸಹಾಯದೊಂದಿಗೆ ತರಗತಿ ಬೋಧನೆಗೆ ಬೇಕಾದ ವಿಷಯ ಸಂಪನ್ಮೂಲ ಹುಡುಕುವ ಪ್ರಾಯೋಗಿಕ ಪ್ರಯತ್ನವನ್ನು ಶಿಕ್ಷಕರು ನಡೆಸಿ ತಾವು ಸಂಪಾದಿಸಿದ ಸಂಪನ್ಮೂಲವನ್ನು ಹೇಗೆ ಉಳಿಸಿಕೊಳ್ಳುವುದು ಎಂಬ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳಿಂದ ಪಡೆದರು. ಒಟ್ಟಾರೆಯಾಗಿ ಮೊದಲನೆಯ ದಿನದ ಕಾರ್ಯಾಗಾರ ಉತ್ತಮವಾಗಿತ್ತು.

ಧನ್ಯವಾದಗಳೊಂದಿಗೆ ,

ಮಮತಾ ಭಾಗ್ವತ್

ಸ. ಪ್ರೌ.ಶಾಲೆ ಬೇಗೂರು ಬೆಂಗಳೂರು -೬೮

===ಎರಡನೇ ದಿನದ ವರದಿ===

===ಎರಡನೇ ದಿನದ ವರದಿ===

===ಮೂರನೇ ದಿನದ ವರದಿ===

===ಮೂರನೇ ದಿನದ ವರದಿ===

ಸಂಚರಣೆ ಪಟ್ಟಿ