೨,೫೮೨ bytes added
, ೧೧ ವರ್ಷಗಳ ಹಿಂದೆ
ತಂತ್ರಾಶವನ್ನು ಇಂದಿನ ಡಿಜಿಟಲ್ ಸಮಾಜದಲ್ಲಿ ಪಾಲ್ಗೊಳ್ಳುವ ಮೂಲಭೂತ ನಿರ್ಮಾಣ ಘಟಕವೆಂದು ಪರಿಗಣಿಸಬಹುದು .ವಿಶಾಲ ಜಗತ್ತಿನ ಭವಿಷ್ಯಕ್ಕಾಗಿ ಡಿಜಿಟಲ್ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವ ಪ್ರವೇಶಾವಕಾಶ ಅಗತ್ಯವಾಗಿದೆ . ತಂತ್ರಾಂಶವು ಬಳಕೆದಾರ ಸಮುದಾಯದಿಂದ ನಿರ್ಮಾಣವಾದದ್ದು, ಅದನ್ನು ಮುಕ್ತವಾಗಿ ಹಂಚಿಕೊಳ್ಳಬಹುದು , ಪರಿವರ್ತಿಸಬಹುದು ಮತ್ತು ಅವಶ್ಯಕತೆಯಂತೆ ಆಧುನಿಕಗೊಳಿಸಿ ಪಾಲ್ಗೊಳ್ಳಲು ಪ್ರವೇಶಾಧಿಕಾರ ಸಾಧ್ಯತೆ ಒದಗಿಸಬಹುದು. ಇಂತಹ ತಂತ್ರಾಶವನ್ನು ಸಾರ್ವಜನಿಕ ತಂತ್ರಾಶ ಎಂದು ಕರೆಯಬಹುದು ಹಾಗೂ ಉಚಿತ ತಂತ್ರಾಂಶ ಮುಕ್ತ ಸಂಪನ್ಮೂಲ ತಂತ್ರಾಂಶ ಎಂತಲೂ ಕರೆಯಬಹುದು.
ಸಾರ್ವಜನಿಕ ತಂತ್ರಾಂಶ ಇದು ಸಾರ್ವಜನಿಕ ಸ್ವಭಾವ ಹಾಗೂ ಒಡೆತನ ಮತ್ತು ಹಿಡಿತ ಇದಕ್ಕೆ ಒತ್ತು ನೀಡಿದೆ. ಇದಕ್ಕೆ ಜಾಗತಿಕ ಪ್ರವೇಶದ ಖಾತರಿ ಹಾಗು ರಚನೆ ಮತ್ತು ಮಾರ್ಪಾಡಿಸುವ ಬೆಂಬಲ ಇದರ ಪ್ರಮುಖ ಅಂಶಗಳಾಗಿವೆ. ಹೆಚ್ಚು ಡಿಜಿಟಲ್ ಆಗುತ್ತಿರುವ ಸಮಾಜದಲ್ಲಿ , ಅರ್ಥಪೂರ್ಣ ಪಾಲ್ಗೊಳ್ಳುವಿಕೆಯಲ್ಲಿ ತಂತ್ರಾಂಶ ಸಂಪನ್ಮೂಲ ಪ್ರವೇಶಾಧಿಕಾರ ಮುಖ್ಯವಾಗಿರುತ್ತದೆ ಹಾಗೂ ಇದು ಒಂದು ಹಕ್ಕೆಂದು ಪರಿಗಣಿಸಬಹುದು.ಇಂತಹ ತಂತ್ರಾಂಶ ಸಂಪನ್ಮೂಲಗಳು ಲಭ್ಯವಿರುವುದರಿಂದ ರಚನಾತ್ಮಕ ಕಲಿಕೆಗೆ ಅಗಾಧ ಸಾಧ್ಯತೆಗಳನ್ನು ಒದಗಿಸುತ್ತವೆ.