ಬದಲಾವಣೆಗಳು

Jump to navigation Jump to search
೨೬ ನೇ ಸಾಲು: ೨೬ ನೇ ಸಾಲು:     
====ಶಿಕ್ಷಕರಿಗೆ ಟಿಪ್ಪಣಿ====
 
====ಶಿಕ್ಷಕರಿಗೆ ಟಿಪ್ಪಣಿ====
 +
'''ಪ್ಲಾಸ್ಟಿಕ್:'''
 +
ಪ್ಲಾಸ್ಟಿಕ್  ಗಳು ಮಾನವ ನಿರ್ಮಿತ ರಾಸಾಯನಿಕ ಕೃತಕವಸ್ತುಗಳು, ಇವು ಸಾವಯವ ಪಾಲಿಮರ್ ಗಳು, ನೈಸರ್ಗಿಕವಾಗಿ ದೊರೆಯುವುದಿಲ್ಲ.
 +
ಪ್ರಾಚೀನ ಕಾಲದಲ್ಲಿ ಅಂದರೆ ಕ್ರಿ.ಶ.೧೬೦೦ ರಲ್ಲಿ ಮಧ್ಯಅಮೇರಿಕಾದಲ್ಲಿ ನೈಸರ್ಗಿಕ ರಬ್ಬರನ್ನು ಉಪಯೋಗಿಸುವ ಮೂಲಕ ಬಳಕೆಗೆ ತಂದರು.
 +
ಮೊದಲು ಬಳಕೆಗೆ ತಂದ ಪ್ಲಾಸಟಿಕ್ ಗಳನ್ನು ಮೊಟ್ಟೆ ಮತ್ತು ರಕ್ತದಲ್ಲಿನ ಪ್ರೋಟೀನ್ ಗಳನ್ನು ಸಂಶ್ಲೇಷಿಸಿ ತಯಾರು ಮಾಡುತ್ತಿದ್ದರು , ದನದ ಕೊಂಬುಗಳನ್ನು ಕಿಟಕಿಗಳನ್ನು ತಯಾರು ಮಾಡಲು ಬಳಸುತ್ತಿದ್ದರು.
 +
ನಂತರ ಕ್ರಿ.ಶ.೧೮೦೦ರಲ್ಲಿ ಚಾರ್ಲ್ಸ್ ಗುಡ್ಇಯರ್ ರಬ್ಬರಿನ ವಲ್ಕನೀಕರಣದ ಮೂಲಕ ಆದುನಿಕವಾಗಿ ಪ್ಲಾಸಟಿಕ್ ಗಳನ್ನು ತಯಾರು ಮಾಡುವ ವಿಧಾನವನ್ನು ತಿಳಿಸಿದನು.
 +
ಮೊದಲು ತಯಾರಾದ ಪ್ಲಾಸ್ಟಿಕ್ ಎಂದರೆ ಬೆಕಲೈಟ್, ಕ್ರಿ.ಶ ೧೯೦೦ ರಲ್ಲಿ ಬೆಲ್ಜಿಯಂ ನ ಲಿಯೋ ಬೆಕ್ಲ್ಯಾಂಡ್ ಮೊದಲ ಬಾರಿಗೆ ಸಂಶ್ಲೇಷಿತ ಪ್ಲಾಸ್ಟಿಕ್ ನ್ನು ತಯಾರಿಸಿದನು.
 +
ಇವುಗಳ ಬಳಕೆಯ ಉದ್ದೇಶಗಳೆಂದರೆ ಇವು ತುಂಬಾ ಹಗುರ, ಬಲಿಷ್ಟ, ಸುಲಭವಾಗಿ ಬೇಕಾದ ಬಣ್ಣದಲ್ಲಿ ಬೇಕಾದ  ಆಕಾರಕ್ಕೆ ಎರಕ ಒಯ್ಯಬಹುದು ಮತ್ತು ಅತಿ ಕಡಿಮೆ ಬೆಲೆಯಲ್ಲಿ ದೊರೆಯುವ ವಸ್ತುಗಳಾಗಿವೆ.
 +
ಇವುಗಳ ಮುಖ್ಯವಾದ ಗುಣವೆಂದರೆ ರಾಸಾಯನಿಕವಾಗಿ ಇತರ ವಸ್ತುಗಳೊಂದಿಗೆ ವರ್ತಿಸುವುದಿಲ್ಲ.
 +
ಪ್ಲಾಸ್ಟಿಕ್ ಗಳ ಗುಣಗಳು ಮತ್ತು ರಚನೆಯ ಆಧಾರದ ಮೇಲೆ ಪ್ಲಾಸ್ಟಿಕ್ ಗಳನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ.
 +
ಥರ್ಮೋಪ್ಲಾಸ್ಟಿಕ್ ಗಳು ಮತ್ತು ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್ ಗಳು
 +
'''ಥರ್ಮೋಪ್ಲಾಸ್ಟಿಕ್''' : ಕಾಯಿಸಿದಾಗ ಮೃದುತ್ವ ಹೊಂದಿ ಆಕಾರ ಕಳೆದುಕೊಂಡು ತಂಪುಗೊಳಿಸಿದಾಗ ಮೊದಲಿನ ಆಕಾರಕ್ಕೆ ಬರುವ ಪ್ಲಾಸ್ಟಿಕ್ ಗಳು
 +
ಉದಾ: ಪಿ.ವಿ.ಸಿ, ಪಾಲಿಸ್ಟೈರಿನ್, ಪಾಲಿ ಪ್ರೊಪೈಲಿನ್, ಪಾಲಿಥಿನ್ , ಇತ್ಯಾದಿ. .
 +
'''ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್''' : ಕಾಯಿಸಿದಾಗ ಆಕಾರಕಳೆದುಕೊಂಡು ತಂಪುಗೊಳಿಸಿದಾಗ ಶಾಶ್ವತವಾಗಿ ಗಡುಸಾಗುವ ಪ್ಲಾಸ್ಟಿಕ್ ಗಳು.
 +
ಉದಾ: ಬೆಕಲೈಟ್, ಮೆಲಮೈನ್, ಎಪಾಕ್ಸಿರಾಳಗಳು
 +
'''ವ್ಯತ್ಯಾಸ:'''
 +
'''ಥರ್ಮೋಪ್ಲಾಸ್ಟಿಕ್'''
 +
# ಕರಗಿಸಬುದು
 +
# ಯಾವ ಆಕಾರಕ್ಕೆ ಬೇಕಾದರೂ  ಎಷ್ಟು ಬಾರಿಯಾದರೂ ಅಚ್ಚು ಹಾಕಬಹುದು
 +
# ಹಲವಾರು ಬಾರಿ ಕರಗಿಸಿ ಬೇಕಾದ ಬಣ್ಣ ಬಳಸಿ ಬೇಕಾದ ಆಕಾರಕ್ಕೆ ಅಚ್ಚು ಹಾಕಬಹುದು
 +
# ಇದನ್ನು ಪುನರ್ ಬಳಕೆ ಮಾಡಬಹುದು
 +
'''ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್'''
 +
# ಕರಗಿಸಲು ಸಾಧ್ಯವಲ್ಲ
 +
# ಬೇಕಾದ ಆಕಾರಕ್ಕೆ ಒಮ್ಮೆ ಮಾತ್ರ ಅಚ್ಚು ಹಾಕಬಹುದು
 +
# ಪದೇ ಪದೇ ಕರಗಿಸಿ ಬಣ್ಣ ಹಾಕಿ ಬದಲಿಸಲು ಸಾಧ್ಯವಿಲ್ಲ
 +
# ಇದನ್ನು ಪುನರ್ ಬಳಕೆ ಮಾಸಲು ಸಾಧ್ಯವಿಲ್ಲ
 +
 +
'''ಪ್ಲಾಸ್ಟಿಕ್ ನ ಗುಣಗಳು ಮತ್ತು ಉಪಯೋಗ:'''
 +
#ಪ್ಲಾಸ್ಟಿಕ್ ನ ಗುಣಗಳನ್ನು ತಯಾರಿಕೆ ಗೆ ಬಳಸಿರುವ ಸಾವಯವ ಪಾಲಿಮರ್ ನ ಗಡುಸುತನ, ಸಾಂದ್ರತೆ, ಮತ್ತು ಬೆಂಕಿ ನಿರೋಧಕತೆ, ಸಾವಯವ ಸಂಯುಕ್ತಗಳ ಬಳಕೆ ಯ ಮೇಲೆ ತಿಳಿಯ ಬಹುದಾಗಿದೆ.
 +
#ಪ್ಲಾಸ್ಟಿಕ್ ಗಳು ಬಿಸಿಯಾಗಿದ್ದಾಗ ಬೇಕಾದ ಆಕಾರಕ್ಕೆ , ಗಾತ್ರಕ್ಕೆ ಅಚ್ಚು ಹಾಕಬಹುದು
 +
#ಹೆಚ್ಚಿನ ಖರ್ಚಿಲ್ಲದೆ ಹಗುರ ಹಾಗೂ ಬೇರೆ ಬೇರೆ ಬಣ್ಣಗಳಲ್ಲಿ ದೊರೆಯುತ್ತವೆ
 +
#ಅವುಗಳ ಬೆಲೆ ಲೋಹಗಳಿಗಿಂತ ಕಡಿಮೆ
 +
#ಅವುಗಳು ಗಟ್ಟಿಯಾಗಿರುತ್ತವೆ, ದೀರ್ಘ ಬಾಳಿಕೆ ಬರುತ್ತವೆ. ತುಕ್ಕು ಹಿಡಿಯುವುದಿಲ್ಲ
 +
#ಅವುಗಳು ಶಾಖ ಮತ್ತು ವಿದ್ಯತ್ ನ ಅವಾಹಕ ವಸ್ತುಗಳು
 +
#ಅವುಗಳ ಕರಗುವ ಬಿಂದು ಬಹಳ ಕಡಿಮೆ
 +
 +
'''ಪ್ಲಾಸ್ಟಿಕ್ ನ ಅನಾನುಕೂಲಗಳು:'''
 +
#ಪ್ಲಾಸ್ಟಿಕ್ ಗಳನ್ನು ಉರಿಸುವುದರಿಂದ ವಾತಾವರಣಕ್ಕೆ ವಿಷಾನಿಲಗಳು ಬಿಡುಗಡೆ ಮಾಡುತ್ತವೆ, ಇದರಿಂದ ವಾಯು ಮಾಲಿನ್ಯ ಉಂಟಾಗುತ್ತದೆ.
 +
#ಪ್ಲಾಸ್ಟಿಕ್ ಬ್ಯಾಗ್ ಮತ್ತು ಕ್ಯಾನ್ ಗಳಲ್ಲಿ ಆಹಾರ ಸಂಗ್ರಹಿಸುವುದು ಬಹಳ ಅಪಾಯಕಾರಿ.
 +
#ಬೇಡವಾದ ಪ್ಲಾಸ್ಟಿಕ್ ಪದಾರ್ಥಗಳ ಸಂಗ್ರಹಣೆಯು ರೋಗ ಕಾರಕಗಳ ಬೆಳವಣಿಗೆಯನ್ನು ಹೆಚ್ಚಿಸುವುದು
 +
#ಪ್ಲಾಸ್ಟಿಕ್ ಗಳು ಮಣ್ಣಿನಲ್ಲಿ ನೀರಿನ ಒಸರುವಿಕೆಯನ್ನು ಕಡಿಮೆ ಮಾಡುತ್ತದೆ, ಇದರಿಂದ ಅಂತರ್ಜಲ ಪ್ರಮಾಣ ಕಡಿಮೆಯಾಗುತ್ತದೆ.
 +
#ಪ್ಲಾಸ್ಟಿಕ್ ಗಳು ಜೈವಿಕ ವಿಘಟನೆಗೆ ಒಳಪಡುವುದಿಲ್ಲ, ಇವು ಪರಿಸರ ಸ್ನೇಹಿಯಲ್ಲ
 +
#ಪ್ರಾಣಿಗಳು ಪ್ಲಾಸಟಿಕ್ ವಸ್ತುಗಳಲ್ಲಿನ ಆಹಾರವನ್ನು ಸೇವಿಸ ಸಾವನ್ನಪ್ಪುತ್ತವೆ
 +
 +
''''''ಪ್ಲಾಸ್ಟಿಕ್ ಬಳಸುವಾಗ ಮುನ್ನೆಚ್ಚರಿಕೆಗಳು:''''''
 +
#ಪ್ಲಾಸ್ಟಿಕ್ ವಸ್ತುಗಳನ್ನು ಸುಡಬಾರದು
 +
#ಪ್ಲಾಸ್ಟಿಕ್ ಗಳನ್ನು ಉಪಯೋಗಿಸಿದ ನಂತರ ಎಲ್ಲೆಂದರಲ್ಲಿ ಎಸೆಯ ಬಾರದು
 +
#ವಸ್ತುಗಳನ್ನು ಕೊ೦ಡುಕೊಳ್ಳುವಾಗ ಬಟ್ಟೆ ಚೀಲ ಅಥವಾ ಗೋಣಿದಾರದ ಬ್ಯಾಗ್ ಗಳನ್ನು ಬಳಸಿ
 +
#ಪ್ಲಾಸ್ಟಿಕ್ ಗಳನ್ನು ಪುನರ್ ಬಳಕೆಗಾಗಿ ಶುಷ್ಕವಾಗಿ ಮತ್ತು ಸ್ವಚ್ಛವಾಗಿಡಿ.
 +
#ಪ್ಲಾಸ್ಟಿಕ್ ನಿಂದಾಗುವ ತೊಂದರೆಗಳನ್ನು ತಪ್ಪಿಸಲು ಈ ಕೆಳಗಿನ ನಾಲ್ಕು ಅಂಶಗಳನ್ನು ಅನುಸರಿಸಿ : ರೆಡ್ಯೂಸ್, ರೀ ಯೂಸ್, ರೀ ಸೈಕಲ್ ಮತ್ತು ರಿ ಕವರ್.
 +
#ಜೈವಿಕ ವಿಘಟನೆಯಾಗುವ ಪ್ಲಾಸ್ಟಿಕ್ ಗಳನ್ನು ಬಳಸಿ.
    
====ಚಟುವಟಿಕೆ ಸಂಖ್ಯೆ ====
 
====ಚಟುವಟಿಕೆ ಸಂಖ್ಯೆ ====
೧೧೫

edits

ಸಂಚರಣೆ ಪಟ್ಟಿ