೩೯ ನೇ ಸಾಲು:
೩೯ ನೇ ಸಾಲು:
===ಆಯ್ದಕ್ಕಿಮಾರಯ್ಯ===
===ಆಯ್ದಕ್ಕಿಮಾರಯ್ಯ===
+
ಈತನು ರಾಯಚೂರು ಜಿಲ್ಲೆಯ ಅಮರೇಶ್ವರದವನು. ತನ್ನ ಹೆಂಡತಿ ಲಕ್ಕಮ್ಮನೊಂದಿಗೆ ಕಲ್ಯಾಣಕ್ಕೆ ಬಂದನು. ಶಿವ ಭಕ್ತನಾದ ಈತನಿಗೆ ಬೇರೇನೂ ಕಾಯಕ ದೊರೆಯದಿರಲು ಭತ್ತದ ಒರಳುಗಳ ಸುತ್ತಮುತ್ತ ಸಿಡಿದು ಬಿದ್ದ ಅಕ್ಲಿಯನ್ನು ಆಯ್ದು ತಂದು ಜಂಗಮರಿಗೆ ನೀಡಿತಾನೂ ತಿನ್ನುತ್ತದ್ದನು. ಈತನಕಷ್ಟವನ್ನು ಕಂಡ ಬಸವಣ್ಣ ಮಾರಯ್ಯ ಅಕ್ಕಿ ಆಯಲು ಹೋಗುವ ಕಡೆಗಳಲ್ಲಿ ಹೇರಳವಾಗಿ ಅಕ್ಕಿಯನ್ನು ಚೆಲ್ಲಿಸಿದನು. ಇದರಿಂದಾಗಿ ಮಾರಯ್ಯ ಮೂರುದಿನಗಳಿಗೆ ಆಗುವಷ್ಟು ಅಕ್ಕಿಯನ್ನು ಆರಿಸಿ ತಂದನು. ಇದನ್ನು ಕಂಡ ಅವನ ಹೆಂಡತಿ ತಮ್ಮನ್ನು ನಿರ್ಗತಿಕರೆಂದು ಭಾವಿಸಿ ಬಸವಣ್ಣನೀವು ಅಕ್ಕಿ ಆಯಲು ಹೋಗುವ ಕಡೆ ಹೆಚ್ಚು ಅಕ್ಕಿಯನ್ನು ಚೆಲ್ಲಿಸಿದ್ದಾನೆ. ಇದು ಶಿವನಿಗೆ, ನಮ್ಮ ಕಾಯಕಕ್ಕೆ ಅವಮಾನ. ಆದುದರಿಂದ ಈ ಅಕ್ಕಿಯನ್ನೆಲ್ಲಾ ಬಸವಣ್ಣನ ಅಣಗಳದಲ್ಲಿ ಚೆಲ್ಲಿ ಲಕ್ಷ ತೊಂಭತ್ತಾರು ಸಾವಿರ ಜಂಗಮರನ್ನು ದಾಸೋಹಕ್ಕೆ ಕರೆದು ಬನ್ನಿ ಎಂದಳು. ದಿನದಂತೆ ದೊರೆತ ಅಕ್ಕಿಯಲ್ಲಿಯೇ ಲಕ್ಕಮ್ಮ ಅವರೆಲ್ಲರಿಗೂ ಬಗೆಬಗೆಯ ಅಡುಗೆ ಮಾಡಿ ತೃಪ್ತಿ ಪಡಿಸಿದಳು. ಈ ದಂಪತಿಗಳ ಭಕ್ತಿಗೆ ಶಿವ ಪ್ರತ್ಯಕ್ಷನಾಗಲೂ ಅವರು ಅವನಲ್ಲಿ ಐಕ್ಯವಾದರು. ಆಯ್ದಕ್ಕೆ ಮಾರಯ್ಯನ ಪ್ರಸಂಗ ಕಥಾಸಾಗರ, ಭೈರವೇಶ್ವರ ಕಥಾಸೂತ್ರ ರತ್ನಾಕರ, ಶಿವ ತತ್ವ ಚಿಂತಾಮಣಿ, ಚನ್ನಬಸವ ಪುರಾಣ, ಸಿಂಗಿರಾಜ ಪುರಾಣ, ಶರಣಲೀಲಾ ಮೃತ, ಬಸವೇಶ್ವರ ಷಟ್‌ಸ್ಥಲ ವಚನ ಕಥಾ ಸಾಗರ, ಅಮರಗಣಾಧೀಶ್ವರರ ಚರಿತ್ರೆಗಳು. ಶಿವ ಶರಣರ ಚರಿತ್ರೆಗಳು, ಗುರುರಾಜ ಚಾರಿತ್ರ, ಪ್ರಭುದೇವ ಪುರಾಣ, ಶರಣ ಚರಿತಾಮೃತ ಗ್ರಂಥಗಳಲ್ಲಿ ದೊರೆಯುತ್ತದೆ.
=ಶಿಕ್ಷಕರಿಗೆ ಟಿಪ್ಪಣಿ=
=ಶಿಕ್ಷಕರಿಗೆ ಟಿಪ್ಪಣಿ=