ಆಗ್ನಿ ಶಾಮಕ ಠಾಣೆ (Fire station) ಎಂಬ ಹೆಸರು ಮಕ್ಕಳು ಕೇವಲ ತರಗತಿಯಲ್ಲಿ ಪಠ್ಯದಲ್ಲಿ ಮಾತ್ರ ಕೇಳಿರುತ್ತಾರೆ ಜೋತೆಗೆ ಟಿ.ವಿ.ಯಲ್ಲಿ ನೋಡಿರುತ್ತಾರೆ . ಇಲ್ಲಿ ಪಠ್ಯಕ್ರಮದ ಪಾಠದ ಜೊತೆ ಪ್ರತ್ಯಕ್ಷವಾಗಿ ಆಗ್ನೀಶಾಮಕ ಸಿಬ್ಬಂದಿಗಳ ಕಾರ್ಯಚಟುವಟಿಕೆಗಳನ್ನು ಪರಿಚಯ ಮಾಡಿಸುವ ಉದ್ದೇಶದಿಂದ 'ಶಿಕ್ಷಕರ ಕಲಿಕಾ ಸಮೂದಾಯದಡಿಯಲ್ಲಿ 'ವಿದ್ಯುನ್ಮಾನ ಕಥಾ ಪ್ರಸ್ತುತಿ ಕಾರ್ಯಕ್ರಮ'ವನ್ನು ಹಮ್ಮಿಕೊಂಡು ನಮ್ಮ ಶಾಲೆಯ ೯ನೇ ತರಗತಿಯ ಮಕ್ಕಳು ಶಾಲೆಗೆ ಪಕ್ಕದಲ್ಲಿರುವ ಜಯನಗರ ಆಗ್ನೀ ಶಾಮಕ ಠಾಣೆಗೆ ಭೇಟಿ ನೀಡಿ ವಿಚಾರಗಳನ್ನು ಸಂಗ್ರಹಿಸಿ ಅನುಭವ ಮತ್ತು ಅನಿಸಿಕೆಯನ್ನು 'ವಿದ್ಯುನ್ಮಾನ ಕಥಾ ಪ್ರಸ್ತುತಿ'ಯ ಮೂಲಕ ಹಂಚಿಕೊಳ್ಳಲಾಯಿತು.ನೈಜ ಕಲಿಕೆಯ ಪರಿಣಾಮವಾಗಿ ಮಕ್ಕಳಲ್ಲಿ ಆತ್ಮವಿಶ್ವಾಸ,ಸಮಾಜದ ಜೊತೆಗಿನ ಒಡನಾಟ,ಸಂಘಟನಾ ಕೌಶಲ,ಪರಸ್ಪರ ಚರ್ಚೆ, ಮೊದಲಾದ ಪ್ರಕ್ರಿಯೆಗಳಿಗೆ ಪ್ರೋತ್ಸಾಹ ದೊರೆತು ಕಲಿಕೆಗೆ ಮತ್ತಷ್ಟು ಉತ್ತೇಜನಕಾರಿಯಾಯಿತು ಮತ್ತು ಅವರು ಮಾಡುವ ಕಾರ್ಯಗಳನ್ನು ಪ್ರಯೋಗದ ಮೂಲಕ ಎಲ್ಲರಿಗೂ ತೋರಿಸಲಾಯಿತು .