ನೀವು ಪ್ರಾರಂಭದಲ್ಲಿ ಉಬಂಟುವನ್ನು ಆಯ್ಕೆ ಮಾಡಿದಾಗ, ಪಕ್ಕದ ಚಿತ್ರದಲ್ಲಿ ತೋರಿಸಿರುವಂತೆ ಲಾಗಿನ್ ಪರದೆ ಕಾಣುತ್ತದೆ. ನಿಮ್ಮ ಬಳಕೆದಾರ ಹೆಸರನ್ನು ಆಯ್ಕೆಮಾಡಿ, ನಿಮ್ಮ ಪಾಸ್ ವರ್ಡ್ ಅನ್ನು ಟೈಪ್ ಮಾಡಿದಾಗ ಡೆಸ್ಕ್ ಟಾಪ್ ಕಾಣಿಸಿಕೊಳ್ಳುತ್ತದೆ.
+
Edubuntu : ಇದು ನಿಮ್ಮ ಕಂಪ್ಯೂಟರ್ ಡೆಸ್ಕ್‌ಟಾಪ್‌ನ್ನು ನಿಮ್ಮದೇ ಭಾಷೆಯಲ್ಲಿ ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ. ಡೆಸ್ಕ್‌ಟಾಪ್ ನ ಮೇಲಿನ ಎಡಬದಿಯಲ್ಲಿ ಎಲ್ಲಾ ಅನ್ವಯಕಗಳ ಪಟ್ಟಿಯನ್ನು ನೀಡಲಾಗಿರುತ್ತದೆ.
+
ಸ್ಥಳಗಳು (PLACES) : ಈ ಮೂಲಕ ಕಂಪ್ಯೂಟರ್‌ನ ಹಾರ್ಡ್‌ಡಿಸ್ಕು, ಸಿಡಿ, ಡಿವಿಡಿ ಅಥವಾ ಪೆನ್‌ಡ್ರೈವ್‌ಗಳನ್ನು ನೋಡಬಹುದು. ಡಿಜಿಟಲ್ ಕ್ಯಾಮೆರಾ ಕಾರ್ಡುಗಳು ಮತ್ತು ಎಂಪಿ3 ಪ್ಲೇಯರ್‌ಗಳು ಸಹ ಇಲ್ಲಿ ಕಾಣುತ್ತವೆ.
+
ಅನ್ವಯಕಗಳು (Application) : ಅನ್ವಯಕಗಳ ಪಟ್ಟಿಯು ಶಿಕ್ಷಣ, ಕಛೇರಿ, ಅಂತರ್ಜಾಲ ಮತ್ತು ಆಟಗಳ ಉಪಪಟ್ಟಿಯನ್ನು ಹೊಂದಿರುತ್ತದೆ. ಪ್ರತಿಯೊಂದು ಉಪಪಟ್ಟಿಯು ಹಲವು ಅನ್ವಯಕಗಳನ್ನು ಹೊಂದಿರುತ್ತದೆ, ಅವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಕಲಿಯಬಹುದು.
+
“ಸ್ವ-ಕಲಿಕೆ” ತಂತ್ರಜ್ಞಾನ ಕಲಿಕೆಗೆ ಇರುವ ಪ್ರಮುಖ ಅವಕಾಶವಾಗಿದೆ.