ಗಣಿತ ಒಂದು ಭಾಷೆ: ಹಲವು ಗಣಿತಶಾಸ್ತ್ರಜ್ಞರು ಗಣಿತದ ಪ್ರಕ್ರಿಯೆಯನ್ನು ಒಂದು ಕಲೆಯೆಂದು, ಕಾವ್ಯವೆಂದು ಬಣ್ಣಿಸಿದ್ದಾರೆ.ಬರ್ಟ್ರಾಂಡ್ ರಸ್ಸಲ್ ಪ್ರಕಾರ “ಗಣಿತವು ಕೇವಲ ಸತ್ಯವನ್ನಲ್ಲದೆ ಅತ್ಯುನ್ನತ ಸೌಂದರ್ಯವನ್ನೂ ಹೊಂದಿರುತ್ತದೆ. ಆ ಸೌಂದರ್ಯವು ಶಿಲ್ಪಕಲೆಯಂತೆ ಶೀತಲ ಮತ್ತು ಧೃಢವಾಗಿದ್ದು, ಉತ್ಕೃಷ್ಟ ಕಲೆ ತೋರಿಸಬಹುದಾದ ಮಹೋನ್ನತ ಪರಿಶುದ್ದತೆ ಮತ್ತು ಪರಿಪೂರ್ಣತೆಯ ಸಾಮರ್ಥ್ಯವನ್ನು ಹೊಂದಿದೆ ”.ಇತರೆ ಗಣಿತಜ್ಞರು ಮತ್ತು ವಿಜ್ಞಾನಿಗಳು ಬ್ರಹ್ಮಾಂಡದ ಆಗುಹೋಗುಗಳನ್ನು ವಿವರಿಸುವಲ್ಲಿ ಗಣಿತಶಾಸ್ತ್ರದ ಅನೂಹ್ಯ ಪಾತ್ರದ ಬಗ್ಗೆ ವಿವರಿಸಿದ್ದಾರೆ. ಗಣಿತವು ಕಲೆ ಮತ್ತು ಸೌಂದರ್ಯದ ಲಕ್ಷಣಗಳನ್ನು ಹೊಂದಿದ್ದರೂ ಸಹ, ಗಣನೆಯ ಮತ್ತು ಗಣಿತದ ಕ್ರಿಯಾತ್ಮಕ ಜ್ಞಾನ ಸಮಾಜದಲ್ಲಿ ಜ್ಞಾನ ವಿನಿಮಯದ ದೃಷ್ಟಿಯಿಂದ ಅತ್ಯವಶ್ಯವಾದ ಒಂದು ಕೌಶಲ್ಯ. | ಗಣಿತ ಒಂದು ಭಾಷೆ: ಹಲವು ಗಣಿತಶಾಸ್ತ್ರಜ್ಞರು ಗಣಿತದ ಪ್ರಕ್ರಿಯೆಯನ್ನು ಒಂದು ಕಲೆಯೆಂದು, ಕಾವ್ಯವೆಂದು ಬಣ್ಣಿಸಿದ್ದಾರೆ.ಬರ್ಟ್ರಾಂಡ್ ರಸ್ಸಲ್ ಪ್ರಕಾರ “ಗಣಿತವು ಕೇವಲ ಸತ್ಯವನ್ನಲ್ಲದೆ ಅತ್ಯುನ್ನತ ಸೌಂದರ್ಯವನ್ನೂ ಹೊಂದಿರುತ್ತದೆ. ಆ ಸೌಂದರ್ಯವು ಶಿಲ್ಪಕಲೆಯಂತೆ ಶೀತಲ ಮತ್ತು ಧೃಢವಾಗಿದ್ದು, ಉತ್ಕೃಷ್ಟ ಕಲೆ ತೋರಿಸಬಹುದಾದ ಮಹೋನ್ನತ ಪರಿಶುದ್ದತೆ ಮತ್ತು ಪರಿಪೂರ್ಣತೆಯ ಸಾಮರ್ಥ್ಯವನ್ನು ಹೊಂದಿದೆ ”.ಇತರೆ ಗಣಿತಜ್ಞರು ಮತ್ತು ವಿಜ್ಞಾನಿಗಳು ಬ್ರಹ್ಮಾಂಡದ ಆಗುಹೋಗುಗಳನ್ನು ವಿವರಿಸುವಲ್ಲಿ ಗಣಿತಶಾಸ್ತ್ರದ ಅನೂಹ್ಯ ಪಾತ್ರದ ಬಗ್ಗೆ ವಿವರಿಸಿದ್ದಾರೆ. ಗಣಿತವು ಕಲೆ ಮತ್ತು ಸೌಂದರ್ಯದ ಲಕ್ಷಣಗಳನ್ನು ಹೊಂದಿದ್ದರೂ ಸಹ, ಗಣನೆಯ ಮತ್ತು ಗಣಿತದ ಕ್ರಿಯಾತ್ಮಕ ಜ್ಞಾನ ಸಮಾಜದಲ್ಲಿ ಜ್ಞಾನ ವಿನಿಮಯದ ದೃಷ್ಟಿಯಿಂದ ಅತ್ಯವಶ್ಯವಾದ ಒಂದು ಕೌಶಲ್ಯ. |