ಬದಲಾವಣೆಗಳು

Jump to navigation Jump to search
೧೯ ನೇ ಸಾಲು: ೧೯ ನೇ ಸಾಲು:     
=ಕವಿ ಪರಿಚಯ =
 
=ಕವಿ ಪರಿಚಯ =
 +
ಕನಕದಾಸನ ಮೊದಲ ಹೆಸರು ತಿಮ್ಮಪ್ಪನೆಂದೂ, ಧಾರವಾಡ ಜಿಲ್ಲೆಯ ಬಾಡ ಗ್ರಾಮ ಆತನ ಹುಟ್ಟೂರೆಂದು ತಿಳಿದು ಬರುತ್ತದೆ. ದಂಡನಾಯಕ ಅಥವಾ ಪಾಳೆಗಾರನೋ ಆಗಿದ್ದ ಕುರುಬಜಾತಿಯ ಬೀರಪ್ಪ ಹಾಗೂ ಆತನ ಮಡದಿ ಬುಚ್ಚಮ್ಮ ತಿರುಪತಿ ತಿಮ್ಮಪ್ಪನಿಗೆ ಹರಿಕೆ ಹೊತ್ತು ಹಡೆದದ್ದರಿಂದ ಆತನಿಗೆ ತಮ್ಮಪ್ಪ ಎಂಬ ಹೆಸರನ್ನು ಇಡಲಾಗಿತ್ತು ಎಂದು ಹೇಳುತ್ತಾರೆ. ಚಿಕ್ಕವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿಯೇ ಬೆಳೆದು, ಶಸ್ತ್ರಾಸ್ತ್ರಗಳ ವಿದ್ಯೆ ಕಲಿತು ತಂದೆಯಂತೆ ಪಾಳೆಯಗಾರನಾದ. ಮೊನೆಗಾರ ಧನಿಯಾಗಿದ್ದ ತಿಮ್ಮಪ್ಪ ಅಸಾಮಾನ್ಯ ಶೂರನಾಗಿದ್ದನೆಂದೂ, ದೊರೆಯಾಗಿದ್ದನೆಂದೂ ತಿಳಿದುಬರುತ್ತದೆ. ಒಂದು ಸಲ ಭೂ ಶೋಧನೆಯಲ್ಲಿದ್ದಾಗ ಚಿನ್ನದ ಕೊಪ್ಪರಿಗೆ ದೊರೆತದ್ದರಿಂದ ಆತನಿಗೆ ಕನಕನೆಂಬ ಹೆಸರು ರೂಢಿಗೆ ಬಂತೆಂದು ಪ್ರತೀತಿ. ದೈವಕೃಪೆಯಿಂದ ದೊರೆತ ಐಶ್ವರ್ಯದಿಂದ ಕಾಗಿನೆಲೆಯಲ್ಲಿ ದೇವಾಲಯವನ್ನು ಕಟ್ಟಿಸಿ, ಜನ್ಮಸ್ಥಳವಾದ ಬಾಡದಲ್ಲಿದ್ದ ಆದಿಕೇಶವಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ ಉತ್ಸವಗಳು ನಡೆಯುವಂತೆ ಮಾಡಿದ.
 +
 +
ಕೇಶವನ ಆರಾಧಕನಾಗಿ, ಧರ್ಮ, ಸಮಾಜ, ಸಂಸ್ಕೃತಿಯ ಹಿತಚಿಂತಕನಾಗಿ ಕಾಣಿಸಿಕೊಂಡ ಕನಕದಾಸ ನಡುಗನ್ನಡ ಕಾಲದ ಮಹತ್ವದ ಕನ್ನಡ ಕವಿಗಳಲ್ಲಿ ಒಬ್ಬ. ತನ್ನ ಅಪಾರವಾದ ಲೋಕಾನುಭವ, ಅಸಾಧಾರಣವಾದ ಪ್ರತಿಭೆ, ಸತ್ವಶೀಲವಾದ ವ್ಯಕ್ತಿತ್ವದಿಂದ - ಅದುವರೆಗೂ ಕೇವಲ ಕೀರ್ತನೆಗಳಿಗೆ ಮಾತ್ರ ಸೀಮಿತವಾಗಿದ್ದ ಹರಿದಾಸರ ಕ್ರಿಯಾಶೀಲತೆಯ ಹರವನ್ನು ಹೆಚ್ಚಿಸಿ ಕನ್ನಡ ಕಾವ್ಯ ಪ್ರಪಂಚದಲ್ಲಿ ದಾಸಸಾಹಿತ್ಯಕ್ಕೆ ಘನತೆಯನ್ನು ತಂದು ಕೊಟ್ಟದ್ದು ಕನಕದಾಸನ ಹಿರಿಮೆ. ಉಳಿದೆಲ್ಲ ದಾಸರು ಕೀರ್ತನೆಗಳ ರಚನೆಯಲ್ಲಿಯೇ ತೊಡಗಿದ್ದ ಕಾಲದಲ್ಲಿ ಕನಕದಾಸ ಉಳಿದವರ ಕೀರ್ತನೆಗಳಿಗಿಂತಲೂ ಸತ್ವಯುತವಾದ ಕೀರ್ತನೆಗಳನ್ನು ರಚಿಸಿಯೂ ಜೊತೆಗೆ
 +
# ಮೋಹನತರಂಗಿಣಿ
 +
# ರಾಮಧಾನ್ಯ ಚರಿತೆ
 +
# ನಳಚರಿತೆ
 +
# ಹರಿಭಕ್ತಿಸಾರ ಮತ್ತು
 +
# ನೃಸಿಂಹ ಸ್ತವ ಎಂಬ ಛಂದೋವೈವಿಧ್ಯತೆ ಹಾಗೂ ವಸ್ತುವೈವಿಧ್ಯತೆ - ಯಿಂದ ಕೂಡಿದ ಕಾವ್ಯಗಳನ್ನು ರಚಿಸಿ ಕನ್ನಡ ಕವಿಗಳಲ್ಲಿ ಮೊದಲಿಗ ದಾಸರಾಗಿದ್ದಾರೆ. ಸಾಂಗತ್ಯದ ವೈಭವವನ್ನು ಹೆಚ್ಚಿಸಿದ ಕೆಲವೇ ಕವಿಗಳಲ್ಲಿ ಕನಕ ಸಹ ಒಬ್ಬನಾಗಿದ್ದಾನೆ. ಮೋಹನತರಂಗಿಣಿ ಎಂಬ ಬೃಹತ್ಕಾವ್ಯ ಮತ್ತು ನೃಸಿಂಹಸ್ತವ ಎಂಬ ಲಘುಕಾವ್ಯ ಸಾಂಗತ್ಯದಲ್ಲಿ ರಚಿತವಾಗಿವೆ. ಆತ “ ಕವಿಗಳಲ್ಲಿ ದಾಸ, ದಾಸರಲ್ಲಿ ಕವಿ “ ಎಂಬ ಅಭಿದಾನಕ್ಕೆ ಪಾತ್ರನಾಗಿದ್ದಾನೆ.
 +
 
[[File:Kanakadasa art.jpg|thumb]]
 
[[File:Kanakadasa art.jpg|thumb]]
  

ಸಂಚರಣೆ ಪಟ್ಟಿ