ಡೊಳ್ಳುಕುಣಿತದಲ್ಲಿ ಭಾಗವಹಿಸುವ ಕಲಾವಿದರ ಸಂಖ್ಯೆಯು ಹತ್ತರಿಂದ ಇಪ್ಪತ್ತರವರೆಗೆ ಇರುತ್ತದೆ. ಡೊಳ್ಳು ಬಾರಿಸುವವರ ಸಂಖ್ಯೆಗೆ ಯಾವ ಮಿತಿಯೂ ಇಲ್ಲ. ಡೊಳ್ಳುಗಳಲ್ಲದೆ ತಾಳ ಮತ್ತು ಕೊಳಲುಗಳನ್ನೂ ಬಳಸುತ್ತಾರೆ. ತಾಳ-ಕೊಳಲುಗಳನ್ನು ನುಡಿಸುವವರು ಒಟ್ಟು ಪ್ರದರ್ಶನದ ಲಯವನ್ನು ನಿಯಂತ್ರಿಸುತ್ತಾರೆ. ಪ್ರದರ್ಶನದ ಪ್ರಾರಂಭದಲ್ಲಿ ಡೊಳ್ಳುವಾದಕರು ವೃತ್ತಾಕಾರದಲ್ಲಿ ಸಮಾನವಾದ ಶೈಲಿ ಮತ್ತು ಎತ್ತರಗಳಲ್ಲಿ (ಪಿಚ್) ಬಾರಿಸತೊಡಗುತ್ತಾರೆ. ಕ್ರಮೇಣ ಡೊಳ್ಳುಬಡಿತದ ಶಬ್ದವು ತಾರಕಕ್ಕೆ ಏರುತ್ತದೆ. ಡೊಳ್ಳುವಾದಕರು ನಿಧಾನವಾಗಿ ಕುಣಿತದ ಇನ್ನೊಂದು ಹಂತವನ್ನು ತಲುಪುತ್ತಾರೆ. ಕುಣಿತದಲ್ಲಿ ವೈವಿಧ್ಯವು ಕಾಣಿಸಿಕೊಳ್ಳುತ್ತದೆ. ಕುಣಿತ-ಬಡಿತಗಳ ಬಗೆಗಳು ಮುಗಿದ ನಂತರ, ಡೊಳ್ಳುಬಡಿತವು ನಿಂತು ಹಾಡುವಿಕೆಯು ಮೊದಲಾಗುತ್ತದೆ. ತಂಡದ ನಾಯಕನು ಕೈಯಲ್ಲಿ ತಾಳಗಳನ್ನು ಹಿಡಿದು ವರ್ತುಲದ ಮಧ್ಯೆ ನಿಲ್ಲುತ್ತಾನೆ. ಅವನು ಹಾಡುವಿಕೆಯನ್ನು ನಿಯಂತ್ರಿಸುತ್ತಾನೆ. | ಡೊಳ್ಳುಕುಣಿತದಲ್ಲಿ ಭಾಗವಹಿಸುವ ಕಲಾವಿದರ ಸಂಖ್ಯೆಯು ಹತ್ತರಿಂದ ಇಪ್ಪತ್ತರವರೆಗೆ ಇರುತ್ತದೆ. ಡೊಳ್ಳು ಬಾರಿಸುವವರ ಸಂಖ್ಯೆಗೆ ಯಾವ ಮಿತಿಯೂ ಇಲ್ಲ. ಡೊಳ್ಳುಗಳಲ್ಲದೆ ತಾಳ ಮತ್ತು ಕೊಳಲುಗಳನ್ನೂ ಬಳಸುತ್ತಾರೆ. ತಾಳ-ಕೊಳಲುಗಳನ್ನು ನುಡಿಸುವವರು ಒಟ್ಟು ಪ್ರದರ್ಶನದ ಲಯವನ್ನು ನಿಯಂತ್ರಿಸುತ್ತಾರೆ. ಪ್ರದರ್ಶನದ ಪ್ರಾರಂಭದಲ್ಲಿ ಡೊಳ್ಳುವಾದಕರು ವೃತ್ತಾಕಾರದಲ್ಲಿ ಸಮಾನವಾದ ಶೈಲಿ ಮತ್ತು ಎತ್ತರಗಳಲ್ಲಿ (ಪಿಚ್) ಬಾರಿಸತೊಡಗುತ್ತಾರೆ. ಕ್ರಮೇಣ ಡೊಳ್ಳುಬಡಿತದ ಶಬ್ದವು ತಾರಕಕ್ಕೆ ಏರುತ್ತದೆ. ಡೊಳ್ಳುವಾದಕರು ನಿಧಾನವಾಗಿ ಕುಣಿತದ ಇನ್ನೊಂದು ಹಂತವನ್ನು ತಲುಪುತ್ತಾರೆ. ಕುಣಿತದಲ್ಲಿ ವೈವಿಧ್ಯವು ಕಾಣಿಸಿಕೊಳ್ಳುತ್ತದೆ. ಕುಣಿತ-ಬಡಿತಗಳ ಬಗೆಗಳು ಮುಗಿದ ನಂತರ, ಡೊಳ್ಳುಬಡಿತವು ನಿಂತು ಹಾಡುವಿಕೆಯು ಮೊದಲಾಗುತ್ತದೆ. ತಂಡದ ನಾಯಕನು ಕೈಯಲ್ಲಿ ತಾಳಗಳನ್ನು ಹಿಡಿದು ವರ್ತುಲದ ಮಧ್ಯೆ ನಿಲ್ಲುತ್ತಾನೆ. ಅವನು ಹಾಡುವಿಕೆಯನ್ನು ನಿಯಂತ್ರಿಸುತ್ತಾನೆ. |