ಸಂಗೀತಗಾರರ ತಂಡದಲ್ಲಿ ಗಾಯಕನ ಸಂಗಡ ಡೊಳ್ಳು, ತಾಳ ಮತ್ತು ಚೌಗಡಿಗಳನ್ನು ನುಡಿಸುವ ವಾದಕರಿರುತ್ತಾರೆ. ಉಳಿದವರು ಹಾಡುವಿಕೆಯಲ್ಲಿ ನೆರವಾಗುತ್ತಾರೆ. ಈ ಹಾಡುಗಳು ಪೌರಾಣಿಕವಾದ ಕಥನವೋ ಅಥವಾ ದೇವರನ್ನು ಹೊಗಳುವ ಗೀತೆಗಳೋ ಆಗಿರುತ್ತವೆ. ಅವುಗಳಲ್ಲಿ ಕೆಲವಕ್ಕೆ ನೀತಿಕಥೆಯ ನೆಲೆಗಳೂ ಇರುತ್ತವೆ. ‘ಹಾಲುಮತ ಪುರಾಣ’, ‘ಅನಸೂಯ ಪುರಾಣ’, ‘ಪಾಂಡವರ ಪದ’, ‘ಮಾರ್ಕಂಡೇಯ ಚರಿತೆ’ ಮತ್ತು ‘ನಿಂಬೆಕ್ಕನ ಪದ’ಗಳು ಈ ಗಾಯಕರು ಹಾಡುವ ಪದಗಳಲ್ಲಿ ಕೆಲವು. ಅವೆಲ್ಲವನ್ನೂ ‘ಡೊಳ್ಳಿನ ಪದಗಳು’ ಎಂದೇ ಕರೆಯುತ್ತಾರೆ. ‘ಬೀರಲಿಂಗೇಶ್ವರನ ಪದ’ವು ಬಹಳ ಜನಪ್ರಿಯವಾದ ಹಾಡು. ಈಚೆಗೆ ಡೊಳ್ಳುಕುಣಿತದ ಪ್ರದರ್ಶನಗಳನ್ನು ಸಾಕ್ಷರತಾಪ್ರಚಾರ ಮುಂತಾದ ಸರ್ಕಾರೀ ಕಾರ್ಯಕ್ರಮಗಳ ಪ್ರಚಾರಕ್ಕಾಗಿಯೂ ಬಳಸಿಕೊಳ್ಳುತ್ತಿದ್ದಾರೆ. [[File:Dollu-kunitha.jpg|thumb|ಡೊಳ್ಳುಕುಣಿತ]] | ಸಂಗೀತಗಾರರ ತಂಡದಲ್ಲಿ ಗಾಯಕನ ಸಂಗಡ ಡೊಳ್ಳು, ತಾಳ ಮತ್ತು ಚೌಗಡಿಗಳನ್ನು ನುಡಿಸುವ ವಾದಕರಿರುತ್ತಾರೆ. ಉಳಿದವರು ಹಾಡುವಿಕೆಯಲ್ಲಿ ನೆರವಾಗುತ್ತಾರೆ. ಈ ಹಾಡುಗಳು ಪೌರಾಣಿಕವಾದ ಕಥನವೋ ಅಥವಾ ದೇವರನ್ನು ಹೊಗಳುವ ಗೀತೆಗಳೋ ಆಗಿರುತ್ತವೆ. ಅವುಗಳಲ್ಲಿ ಕೆಲವಕ್ಕೆ ನೀತಿಕಥೆಯ ನೆಲೆಗಳೂ ಇರುತ್ತವೆ. ‘ಹಾಲುಮತ ಪುರಾಣ’, ‘ಅನಸೂಯ ಪುರಾಣ’, ‘ಪಾಂಡವರ ಪದ’, ‘ಮಾರ್ಕಂಡೇಯ ಚರಿತೆ’ ಮತ್ತು ‘ನಿಂಬೆಕ್ಕನ ಪದ’ಗಳು ಈ ಗಾಯಕರು ಹಾಡುವ ಪದಗಳಲ್ಲಿ ಕೆಲವು. ಅವೆಲ್ಲವನ್ನೂ ‘ಡೊಳ್ಳಿನ ಪದಗಳು’ ಎಂದೇ ಕರೆಯುತ್ತಾರೆ. ‘ಬೀರಲಿಂಗೇಶ್ವರನ ಪದ’ವು ಬಹಳ ಜನಪ್ರಿಯವಾದ ಹಾಡು. ಈಚೆಗೆ ಡೊಳ್ಳುಕುಣಿತದ ಪ್ರದರ್ಶನಗಳನ್ನು ಸಾಕ್ಷರತಾಪ್ರಚಾರ ಮುಂತಾದ ಸರ್ಕಾರೀ ಕಾರ್ಯಕ್ರಮಗಳ ಪ್ರಚಾರಕ್ಕಾಗಿಯೂ ಬಳಸಿಕೊಳ್ಳುತ್ತಿದ್ದಾರೆ. [[File:Dollu-kunitha.jpg|thumb|ಡೊಳ್ಳುಕುಣಿತ]] |