ಮುದ್ದಣನವರ ಪ್ರಥಮಕೃತಿ ‘ರತ್ನಾವತೀ ಕಲ್ಯಾಣ’. ನಂತರದಲ್ಲಿ ಮೂಡಿದ್ದು ‘ಕುಮಾರ ವಿಜಯ’(ಯಕ್ಷಗಾನ ಕೃತಿಗಳು). ತಮ್ಮ ಮಾರ್ಗದರ್ಶಕ ಗುರುಗಳಾದ ಸುಬ್ಬರಾಯರಿಗೆ ಕುಂದಾಪುರಕ್ಕೆ ವರ್ಗಾವಣೆಯಾದಾಗ ಅವರ ಸಾನಿಧ್ಯ ಬಯಸಿದ ಮುದ್ದಣ್ಣ ತಾವೂ ವರ್ಗ ಮಾಡಿಸಿಕೊಂಡರು.ಮುಂದೆ ಸಂಸ್ಕೃತ ಕಲಿಯಲು ಪ್ರಾರಂಭಿಸಿದರು. ಅದ್ಭುತ ರಾಮಾಯಣವನ್ನು ಹೇಳಿಸಿಕೊಂಡು ಹಳಗನ್ನಡದಲ್ಲಿ ರಚನೆ ಮಾಡಿದರು. ಮೈಸೂರಿನ ‘ಕಾವ್ಯಮಂಜರಿ ಪತ್ರಿಕೆ’ಯ ಸಂಪಾದಕರಲ್ಲಿ ಪ್ರಕಟಣೆಯ ಕೋರಿಕೆ ಸಲ್ಲಿಸಿ ಕರ್ತೃ ಗೊತ್ತಿಲ್ಲವೆಂದು ತಿಳಿಸಿದರು. ಈ ಕೃತಿ 1895ರಲ್ಲಿ ಪತ್ರಿಕೆಯಲ್ಲಿ ಪ್ರಕಟಗೊಂಡು ಸಂತೋಷ ಪಟ್ಟರು. ‘ಶ್ರೀರಾಮ ಪಟ್ಟಾಭಿಷೇಕಂ’ ಎಂಬ ಕೃತಿಯನ್ನು ಷಟ್ಪದಿಯಲ್ಲಿ ರಚಿಸಿದರು. ಮಹಾಲಕ್ಷ್ಮಿ ಎಂಬ ಕವಯಿತ್ರಿ ಹೆಸರಿನಲ್ಲಿ ಈ ಕೃತಿ ಪ್ರಕಟಣೆಗೊಂಡಿತು. ಎರಡೂ ಪುಸ್ತಕಗಳೂ ಮದರಾಸು ವಿಶ್ವವಿದ್ಯಾಲಯದ ಪರೀಕ್ಷೆಗಳಿಗೆ ಪಠ್ಯಪುಸ್ತಕಗಳಾದವು. ಕೃತಿಕಾರನ ಹೆಸರು ತಿಳಿಸದಿದ್ದುದರಿಂದ ಮುದ್ದಣನವರಿಗೆ ಇದಕ್ಕೆ ಸಲ್ಲಬೇಕಾದ ಹಣ ಮಾತ್ರ ಸಲ್ಲಲಿಲ್ಲವೆಂಬುದು ದುರಂತವೇ ಸರಿ. | ಮುದ್ದಣನವರ ಪ್ರಥಮಕೃತಿ ‘ರತ್ನಾವತೀ ಕಲ್ಯಾಣ’. ನಂತರದಲ್ಲಿ ಮೂಡಿದ್ದು ‘ಕುಮಾರ ವಿಜಯ’(ಯಕ್ಷಗಾನ ಕೃತಿಗಳು). ತಮ್ಮ ಮಾರ್ಗದರ್ಶಕ ಗುರುಗಳಾದ ಸುಬ್ಬರಾಯರಿಗೆ ಕುಂದಾಪುರಕ್ಕೆ ವರ್ಗಾವಣೆಯಾದಾಗ ಅವರ ಸಾನಿಧ್ಯ ಬಯಸಿದ ಮುದ್ದಣ್ಣ ತಾವೂ ವರ್ಗ ಮಾಡಿಸಿಕೊಂಡರು.ಮುಂದೆ ಸಂಸ್ಕೃತ ಕಲಿಯಲು ಪ್ರಾರಂಭಿಸಿದರು. ಅದ್ಭುತ ರಾಮಾಯಣವನ್ನು ಹೇಳಿಸಿಕೊಂಡು ಹಳಗನ್ನಡದಲ್ಲಿ ರಚನೆ ಮಾಡಿದರು. ಮೈಸೂರಿನ ‘ಕಾವ್ಯಮಂಜರಿ ಪತ್ರಿಕೆ’ಯ ಸಂಪಾದಕರಲ್ಲಿ ಪ್ರಕಟಣೆಯ ಕೋರಿಕೆ ಸಲ್ಲಿಸಿ ಕರ್ತೃ ಗೊತ್ತಿಲ್ಲವೆಂದು ತಿಳಿಸಿದರು. ಈ ಕೃತಿ 1895ರಲ್ಲಿ ಪತ್ರಿಕೆಯಲ್ಲಿ ಪ್ರಕಟಗೊಂಡು ಸಂತೋಷ ಪಟ್ಟರು. ‘ಶ್ರೀರಾಮ ಪಟ್ಟಾಭಿಷೇಕಂ’ ಎಂಬ ಕೃತಿಯನ್ನು ಷಟ್ಪದಿಯಲ್ಲಿ ರಚಿಸಿದರು. ಮಹಾಲಕ್ಷ್ಮಿ ಎಂಬ ಕವಯಿತ್ರಿ ಹೆಸರಿನಲ್ಲಿ ಈ ಕೃತಿ ಪ್ರಕಟಣೆಗೊಂಡಿತು. ಎರಡೂ ಪುಸ್ತಕಗಳೂ ಮದರಾಸು ವಿಶ್ವವಿದ್ಯಾಲಯದ ಪರೀಕ್ಷೆಗಳಿಗೆ ಪಠ್ಯಪುಸ್ತಕಗಳಾದವು. ಕೃತಿಕಾರನ ಹೆಸರು ತಿಳಿಸದಿದ್ದುದರಿಂದ ಮುದ್ದಣನವರಿಗೆ ಇದಕ್ಕೆ ಸಲ್ಲಬೇಕಾದ ಹಣ ಮಾತ್ರ ಸಲ್ಲಲಿಲ್ಲವೆಂಬುದು ದುರಂತವೇ ಸರಿ. |