ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
GHGHS module 9
೧ ನೇ ಸಾಲು: ೧ ನೇ ಸಾಲು: −
f
+
== ಸಾರಾಂಶ ==
 +
ಹಿಂದಿನ ಎರಡು ವಾರಗಳಲ್ಲಿ ಕಿಶೊರಿಯರು ಮಹಿಳೆಯರನ್ನು ಮತ್ತು ಪುರುಷರನ್ನು ಜಾಹೀರಾತುಗಳಲ್ಲಿ ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ಚರ್ಚಿಸಿದ್ದಾರೆ. ಈ ವಾರದ ಮಾತುಕತೆಯಲ್ಲಿ ಕಿಶೋರಿಯರು ನಟ-ನಟಿಯರ ಸಂದರ್ಶನಗಳಲ್ಲಿ ಕೇಳುವ ಪ್ರಶ್ನೆಗಳಲ್ಲಿನ ವ್ತತ್ಯಾಸಗಳನ್ನು ಗುರುತಿಸುತ್ತಾರೆ. ಅದಷ್ಟೇ ಅಲ್ಲದೇ ಅವರ ಮೇಲೆ ಕುಟುಂಬದಲ್ಲಿರುವ ಯಾರಿಗೆ ಎಷ್ಟು ಅಧಿಕಾರ ಇದೆ ಎಂದು ಗುರುತಿಸುತ್ತಾರೆ. ಈ ಚಟುವಟಿಕೆಗಳ ಮೂಲಕ ಕುಟುಂಬದಲ್ಲಿ ಅವರ ಸ್ಥಾನಮಾನಗಳ ಬಗ್ಗೆ ಚರ್ಚಿಸುವುದು ಈ ಮಾಡ್ಯೂಲಿನ ಉದ್ದೇಶ.
 +
 
 +
ಮುಖ್ಯ ಫೆಸಿಲಿಟೇಟರ್: ಅಪರ್ಣ
 +
 
 +
ಕೊ-ಫೆಸಿಲಿಟೇಟರ್‌ಗಳು: ಅನುಷಾ, ಕಾರ್ತಿಕ್‌, ಶ್ರೇಯಸ್
 +
 
 +
== ಊಹೆಗಳು ==
 +
# ಹಿಂದಿನ ವಾರಗಳ ನಮ್ಮ ಚರ್ಚೆಗಳ ನಂತರ ಅವರು ಮನೆಯಲ್ಲಿ ಟಿ.ವಿ ಅಥವಾ ಇನ್ನಿತರೆ ಮಾಧ್ಯಮಗಳ ಮೂಲಕ ತೋರಿಸುವ ಜಾಹಿರಾತುಗಳನ್ನು ಹಾಗು ತಾರೆಯರ ಸಂದರ್ಶನಗಳನ್ನು ನೋಡಿರಬಹುದು/ನೋಡಿಲ್ಲದಿರಬಹುದು.
 +
# ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ಅವರಲ್ಲಿ ಹಲವರಿಗೆ ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ.
 +
# ಕೆಲವು ಕಿಶೋರಿಯರು ಸ್ವಪ್ರೇರಣೆಯಿಂದಲೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಇವರ ಧ್ವನಿಯನ್ನು ಹೆಚ್ಚಿಸುತ್ತಾ ಚರ್ಚೆಯನ್ನು ಅಡ್ಡಿಪಡಿಸುವ ಧ್ವನಿಗಳನ್ನು ಮಟ್ಟ ಹಾಕಬೇಕಿದೆ.
 +
# ಮನೆಯಲ್ಲಿ ಟಿ.ವಿ ಇಲ್ಲದೆ ಅಥವಾ ಮನೆಯವರು ಸಿನೆಮಾಗಳಿಗೆ ಕರೆದುಕೊಂಡು ಹೋಗದಿರುವ ಕಾರಣಗಳಿಂದ ಕೆಲವರು ಜಾಹಿರಾತುಗಳನ್ನು ನೋಡದೆ ಇರಬಹುದು.
 +
# ದಿನೇ ದಿನೇ‌ ನಮ್ಮ ಹಾಗು ಅವರ ನಡುವಿನ ವಿಶ್ವಾಸದ ಮಟ್ಟ ಹೆಚ್ಚುತ್ತಿದೆ ಹಾಗಾಗಿ ಈ ಹಂತದಲ್ಲಿ ನಾವು ಸೂಕ್ಷ್ಮ ವಿಷಯಗಳನ್ನು ಚರ್ಚಿಸಬಹುದಾಗಿದೆ.
 +
 
 +
== ಉದ್ದೇಶ ==
 +
• ಕಿಶೋರಿಯರು ತಮ್ಮ ದೈನಂದಿನ ಬದುಕಿನಲ್ಲಿ ಪ್ರಶ್ನಿಸದೇ ಇರುವ ಪುರುಷಪ್ರಧಾನ ರಚನೆ ಹಾಗು ಸ್ತ್ರೀ-ಪುರುಷ ಚಿತ್ರಣದ ಮೇಲೆ ಅದರ ಪರಿಣಾಮದ ಬಗ್ಗೆ ಚರ್ಚಿಸುವುದು.
 +
 
 +
• ಪುರುಷ ಪ್ರಧಾನತೆ ಹಾಗು ಮಾಧ್ಯಮಗಳು ಹೇಗೆ ಒಂದಕ್ಕೊಂದು ಪೂರಕವಾಗಿವೆ ಹಾಗು ಒಂದನ್ನೊಂದು ಪುಷ್ಟೀಕರಿಸುತ್ತಿವೆ ಎಂಬುದರ ಬಗ್ಗೆ ಅರಿವು ಮೂಡಿಸುವುದರ ಮೂಲಕ ಅವರ ಸ್ವ-ಚಿತ್ರಣದ ಬಗ್ಗೆ ಯೋಚಿಸಲು ಪ್ರೇರೇಪಿಸುತ್ತೇವೆ.  
 +
 
 +
• ಕಿಶೋರಿಯರ ಮೇಲೆ ಕುಟುಂಬದಲ್ಲಿರುವ ಯಾರಿಗೆ ಎಷ್ಟು ಅಧಿಕಾರ ಇದೆ ಹಾಗು ಕುಟುಂಬದಲ್ಲಿ ಕಿಶೋರಿಯರ ಸ್ಥಾನಮಾನಗಳ ಬಗ್ಗೆ ಚರ್ಚಿಸುವುದು. (Circle of Influence Venn  Diagram activity)
 +
 
 +
== ಪ್ರಕ್ರಿಯೆ  ==
 +
ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ನೆನಪಿಸುವುದು.
 +
 
 +
ಹಿಂದಿನ ವಾರದ ಮಾತುಕತೆಯನ್ನು ಜ್ಞಾಪಿಸುವುದು. '''(೧೦ ನಿಮಿಷ)'''
 +
 
 +
ಕನ್ನಡ ಚಲನಚಿತ್ರ ನಟ-ನಟಿಯರ ಸಂದರ್ಶನಗಳನ್ನು (ಉ.ದಾ. ರಚಿತಾ ರಾಮ್‌, ಪುನೀತ್‌ ರಾಜ್‌ಕುಮಾರ್‌, ರಾಧಿಕಾ ಪಂಡಿತ್,  ಯಶ್‌) ತೋರಿಸುವುದು.
 +
 
 +
ಸಂದರ್ಶನಗಳಲ್ಲಿ ನಟರಿಗೆ ಯಾವ ತರಹದ ಪ್ರಶ್ನೆಗಳನ್ನು ಕೇಳಲಾಯಿತು, ನಡಿಯರಿಗೆ ಯಾವ ತರಹದ ಪ್ರಶ್ನೆಗಳನ್ನು ಕೇಳಲಾಯಿತು, ಪ್ರಶ್ನೆಗಳಲ್ಲಿನ ವ್ಯತ್ಯಾಸಗಳ ಬಗ್ಗೆ ತರಗತಿಯಲ್ಲಿಯೇ ಚರ್ಚಿಸುವುದು. '''(೨೫ ನಿಮಿಷ)'''
 +
 
 +
ಇದಾದ ನಂತರ ೪ ಗುಂಪುಗಳನ್ನು ಮಾಡಿಕೊಳ್ಳುವುದು. ಪ್ರತಿ ಗುಂಪಿನ ಜೊತೆ ಒಬ್ಬ ಫೆಸಿಲಿಟೇಟರ್‌ ಇರುತ್ತಾರೆ. '''(5 ನಿಮಿಷ)'''
 +
 
 +
ಈ ಗುಂಪಿನಲ್ಲಿ ಕಿಶೋರಿಯರು ಅವರ ಕುಟುಂಬದಲ್ಲಿರುವ ಸದಸ್ಯರನ್ನು, ಅವರ ಮೇಲೆ ಸದಸ್ಯರಿಗೆ ಇರುವ ಅಧಿಕಾರ ಮತ್ತು ಪ್ರಭಾವವನ್ನು ಮೊದಲೇ ನಿರ್ಧರಿಸಿದ  ವೃತ್ತಾಕಾರದಲ್ಲಿ ಕತ್ತರಿಸಿದ ಹಾಳೆಗಳ ಮೂಲಕ ಚಾರ್ಟಿನ ಮೇಲೆ ಪ್ರಸ್ತುತ ಪಡಿಸುತ್ತಾರೆ.  ಈ ವೃತ್ತಗಳು ೩ ವಿವಿಧ ಬಣ್ಣಗಳಲ್ಲಿರುತ್ತವೆ ಹಾಗು ಬೇರೆ ಬೇರೆ ಗಾತ್ರದಲ್ಲಿರುತ್ತವೆ. ಅತಿ ದೊಡ್ಡ ವೃತ್ತ ಅಂದರೆ ಅಧಿಕಾರ ಮತ್ತು ಪ್ರಭಾವ ಜಾಸ್ತಿ ಅದರಂತೆ ಅತಿ ಚಿಕ್ಕ ವೃತ್ತ ಅಂದರೆ ಅಧಿಕಾರ ಮತ್ತು ಪ್ರಭಾವ ಕಮ್ಮಿ. ಕುಟುಂಬದಲ್ಲಿರುವ ಪ್ರತಿ ಸದಸ್ಯರಿಗೂ ಕಿಶೋರಿಯರು ಈ ಚಟುವಟಿಕೆಯನ್ನು ಮಾಡುತ್ತಾರೆ. ಕುಟುಂಬದ ಮಹಿಳಾ ಸದಸ್ಯರು ಹಾಗು ಪುರುಷ ಸದಸ್ಯರು ಸಮಾನ ಅಧಿಕಾರ ಮತ್ತು ಪ್ರಭಾವ ಹೊಂದಿದ್ದರೆ ಅವರನ್ನು ಬೇರೆ ಬೇರೆ ವ್ರತ್ತದ ಮೂಲಕ ಪ್ರಸ್ತುತ ಪಡಿಸುವುದು.
 +
 
 +
ಕಿಶೋರಿಯರ ಕುಟುಂಬದಲ್ಲಿರುವ ಸದಸ್ಯರು ಹಾಗು ಅವರ ಅಧಿಕಾರ ಮತ್ತು ಪ್ರಭಾವದ ಕ್ರಮವನ್ನು ಫೆಸಿಲಿಟೇಟರ್‌ಗಳು ಪಟ್ಟಿ ಮಾಡಿಕೊಳ್ಳುತ್ತಾರೆ.
 +
 
 +
ಗುಂಪಿನಲ್ಲಿರುವ ಎಲ್ಲ ಕಿಶೋರಿಯರು ಈ ಚಟುವಟಿಕೆಯಲ್ಲಿ ಭಾಗವಹಿಸಿದ ನಂತರ ಇವುಗಳ ಬಗ್ಗೆ ಮುಂದಿನ ವಾರ ಮಾತನಾಡೋಣ ಎಂದು ಮಾತುಕಥೆಯನ್ನು ಮುಗಿಸುವುದು. '''(೩೫ ನಿಮಿಷಗಳು)''' 
 +
 
 +
== ಬೇಕಾದ ಸಂಪನ್ಮೂಲಗಳು ==
 +
• ಕಂಪ್ಯೂಟರ್‌/ಲ್ಯಾಪ್‌ಟಾಪ್‌ - ೧
 +
 
 +
• ಪ್ರೊಜೆಕ್ಟರ್‌ - ೧
 +
 
 +
• ಸ್ಪೀಕರ್‌ - ೧
 +
 
 +
• ಕ್ಯಾಮೆರಾ - ೧
 +
 
 +
• ಚಾರ್ಟ್‌ - ೪
 +
 
 +
• ಸ್ಕೆಚ್‌ ಪೆನ್ನುಗಳು
 +
 
 +
• ಅಧಿಕಾರ ಮತ್ತು ಪ್ರಭಾವವನ್ನು ಪ್ರತಿನಿಧಿಸಲು ವೃತ್ತಾಕಾರದಲ್ಲಿ ಕತ್ತರಿಸಿದ ೩ ಗಾತ್ರದ ೩ ಬಣ್ಣಗಳ (ನೀಲಿ, ಬಿಳಿ, ಗುಲಾಬಿ) ಹಾಳೆಗಳು
 +
 
 +
== ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ==
 +
ಒಬ್ಬ ಮುಖ್ಯ ಫೆಸಿಲಿಟೇಟರ್‌, ಮೂರು ಸಹಾಯಕ ಫೆಸಿಲಿಟೇಟರ್‌ಗಳು
 +
 
 +
== ಒಟ್ಟು ಸಮಯ ==
 +
೮೦ ನಿಮಿಷ
 +
 
 +
== ಇನ್‌ಪುಟ್‌ಗಳು ==
 +
ನಟ, ನಟಿಯರ ಸಂದರ್ಶನಗಳು
 +
 
 +
== ಔಟ್‌ಪುಟ್‌ಗಳು ==
 +
ಕಿಶೋರಿಯರು ಪ್ರಸ್ತುತಪಡಿಸಿದ  Circle of Influence ಚಾರ್ಟ್‌ಗಳು
೪೪೧

edits