೧ ನೇ ಸಾಲು: |
೧ ನೇ ಸಾಲು: |
− | ದ
| + | == ಸಾರಾಂಶ == |
| + | ನಮ್ಮ ಮಾತುಕತೆಯನ್ನು ಪ್ರಾರಂಭಿಸಿದಾಗಿನಿಂದ ಕಿಶೋರಿಯರು ಹದಿಹರೆಯ, ಹದಿಹರೆಯದ ಸಮಸ್ಯೆಗಳು/ ಕಾಳಜಿಗಳು, ದೇಹದ ಚಿತ್ರಣ, ಪುರುಷ ಪ್ರಧಾನತೆ ಇತ್ಯಾದಿಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಇವುಗಳ ಜೊತೆಗೆ ಅವರು ಯೋಚನಾ ಸರಣಿಯನ್ನು ಅಭಿವ್ಯಕ್ತಪಡಿಸಲು ಕೂಡ ತೊಡಗಿದ್ದಾರೆ ಹಾಗು 'ನಾನು ಯಾರು, ನನ್ನ ಕುಟುಂಬದಲ್ಲಿ ನನ್ನ ಸ್ಥಾನಮಾನ ಏನು ಎಂದು ಕೂಡ ತಿಳಿದುಕೊಂಡಿದ್ದಾರೆ. ಈ ವಾರ ಅವರು ಅವರ ಕಲಿಕೆಯನ್ನು ಪ್ರತಿಬಿಂಬಿಸುವಂತೆ ಆಡಿಯೋ ಸಂದರ್ಶನಗಳು ಹಾಗು ವಾಕ್ಸ್ ಪಾಪ್ಗಳನ್ನು ಮಾಡುತ್ತಾರೆ. |
| + | |
| + | ಮುಖ್ಯ ಫೆಸಿಲಿಟೇಟರ್: ಕಾರ್ತಿಕ್ |
| + | |
| + | ಕೊ-ಫೆಸಿಲಿಟೇಟರ್ಗಳು: ಅನುಷಾ, ಶ್ರೇಯಸ್ |
| + | |
| + | == ಊಹೆಗಳು == |
| + | # ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ಅವರಲ್ಲಿ ಹಲವರಿಗೆ ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ. |
| + | # ಇತ್ತೀಚೆಗೆ ಹಲವರು ಶಾಲೆಗೆ ಗೈರು ಹಾಜರಾಗುವುದು ಹೆಚ್ಚಾಗಿದೆ. |
| + | # ಕೆಲವು ಕಿಶೋರಿಯರು ಸ್ವಪ್ರೇರಣೆಯಿಂದಲೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಇವರ ಧ್ವನಿಯನ್ನು ಹೆಚ್ಚಿಸುತ್ತಾ ಚರ್ಚೆಯನ್ನು ಅಡ್ಡಿಪಡಿಸುವ ಧ್ವನಿಗಳನ್ನು ಮಟ್ಟ ಹಾಕಬೇಕಿದೆ. |
| + | # ದಿನೇ ದಿನೇ ನಮ್ಮ ಹಾಗು ಅವರ ನಡುವಿನ ವಿಶ್ವಾಸದ ಮಟ್ಟ ಹೆಚ್ಚುತ್ತಿದೆ ಹಾಗಾಗಿ ಈ ಹಂತದಲ್ಲಿ ನಾವು ಸೂಕ್ಷ್ಮ ವಿಷಯಗಳನ್ನು ಚರ್ಚಿಸಬಹುದಾಗಿದೆ. |
| + | # ಹಿಂದಿನ ವಾರ ಬರೀ ೫ ಕಿಶೋರಿಯರಿಂದ ಕಿರು ನಾಟಕ ಮಾಡಿಸಿರುವುದರಿಂದ ಉಳಿದ ಕಿಶೋರಿಯರಿಗೆ ತಮ್ಮನ್ನೂ ಇದರಲ್ಲಿ ತೊಡಗಿಸಿಕೊಳ್ಳಬೇಕೆಂದು ಅನಿಸಿದೆ. |
| + | |
| + | == ಉದ್ದೇಶ == |
| + | ಹೊಸ ಹೆಜ್ಜೆ ಹೊಸ ದಿಶೆಯಲ್ಲಿ ಇದುವರೆಗೂ ಆದ ಕಲಿಕೆಯನ್ನು ಪ್ರತಿಬಿಂಬಿಸುವಂತೆ ಆಡಿಯೋ ೫ ಸಂದರ್ಶನಗಳು ಹಾಗು ೪ ವಾಕ್ಸ್ ಪಾಪ್ಗಳನ್ನು ಮಾಡುವುದು. |
| + | |
| + | == ಪ್ರಕ್ರಿಯೆ == |
| + | ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ನಮ್ಮ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ನಾವೇ ನೆನಪಿಸುವುದು. '''(೧೦ ನಿಮಿಷ)''' |
| + | |
| + | ಹಿಂದಿನ ವಾರಗಳಲ್ಲಿ ಚರ್ಚಿಸಿರುವ ಪುರುಷ ಪ್ರಧಾನತೆಯನ್ನು ನೆನಪಿಸುವುದು. |
| + | |
| + | ಸಂದರ್ಶನಗಳಿಗಾಗಿ ಆಯ್ಕೆ ಮಾಡಿದ ೫ ಕಿಶೋರಿಯರನ್ನು ಒಬ್ಬರಾದ ಮೇಲೆ ಒಬ್ಬರಂತೆ ಬೇರೆ ಕೋಣೆಯಲ್ಲಿ ಸಂದರ್ಶಿಸುವುದು. '''(೪೦ ನಿಮಿಷ)''' |
| + | |
| + | ===== ಸಂದರ್ಶನ ===== |
| + | '''ಉದ್ದೇಶ''' |
| + | |
| + | ಹದಿಹರೆಯ ಮತ್ತು ನಾನತ್ವದ ಪರಿಕಲ್ಪನೆ ಹೇಗಿದೆ ಎಂದು ಅರ್ಥ ಮಾಡಿಕೊಳ್ಳುವುದು. ಇದರಲ್ಲಿ ಸಮಾಜದ ಭಾಗ ಎಷ್ಟಿದೆ ಹಾಗು ಹೊಸ ಹೆಜ್ಜೆ ಹೊಸ ದಿಶೆಯ ಪರಿಣಾಮ ಏನು ಎಂದು ಅರಿಯುವುದು. (ಪುರುಷ ಪ್ರಧಾನತೆಯ ಅಂಶಗಳ ಬಗೆಗಿನ ಅರಿವು ಹೇಗೆ ಅವರ ಅಭಿವ್ಯಕ್ತಿಗೆ ಪೂರಕವಾಗಿದೆ) |
| + | |
| + | '''ಪ್ರಶ್ನೆಗಳು :''' |
| + | |
| + | • ನಿಮ್ಮ ಹೆಸರೇನು? ಯಾವ ಶಾಲೆ? ಎಷ್ಟನೇ ತರಗತಿ? |
| + | |
| + | • ನಿಮ್ಮ ಶಾಲೆ ಬಗ್ಗೆ ನಿಮಗೆ ತುಂಬಾ ಇಷ್ಟ ಆಗುವ ಅಂಶ ಏನು? ಯಾಕೆ? |
| + | |
| + | • ನೀವು ಇತ್ತೀಚೆಗೆ ಯಾವ ಫಿಲ್ಮ್ ನೋಡಿದೆ? ಏನು ಇಷ್ಟ ಆಯಿತು? |
| + | |
| + | • ನೀವು ಹೊಸಬರಿಗೆ ನಿಮ್ಮನ್ನು ಪರಿಚಯ ಮಾಡ್ಕೋಬೇಕು ಅಂದ್ರೆ ಏನಂತ ಮಾಡ್ಕೋತೀರ? (ಪ್ರೋಬ್ - ಬೇರೆ ಬೇರೆ ವಯಸ್ಸು, ಪಾತ್ರಗಳು) |
| + | |
| + | • ಯಾವುದಾದರೂ ವಿಷಯದಲ್ಲಿ ನನ್ನನ್ನು ಮೀರಿಸುವವರು ಬೇರೆ ಯಾರಿಲ್ಲ ಅಂದರೆ, ಅದು ಯಾವ ವಿಷಯ/ಕೌಶಲ/ಸಾಮರ್ಥ್ಯ? |
| + | |
| + | • ನೀವು ಇನ್ನು ೨೦ ವರ್ಷಗಳಲ್ಲಿ ನಿಮಗೆ ಇಷ್ಟ ಬಂದ ಹಾಗೆ ಜೀವನ ಮಾಡುತ್ತಿದ್ದೀರ ಅಂದರೆ, ಅದು ಹೇಗಿರುತ್ತೆ? (ಪ್ರೋಬ್ - ಎಲ್ಲಿ, ಹೇಗೆ, ಜೊತೆಗೆ ಯಾರು ಇರುತ್ತಾರೆ) |
| + | |
| + | • ಈ ವಯಸ್ಸಿನ ನೀವು, ಈಗಿನ ನಿಮಗೆ ಏನಾದರೂ ಹೇಳಬಹುದು ಎಂದಾದರೆ, ಅದು ಏನು? ಯಾಕೆ? |
| + | |
| + | • ನಿಮಗೆ ಹಾಗು ನಿಮ್ಮ ಸ್ನೇಹಿತರಿಗೆ ಇರುವ ಮೂರು ಸಮಸ್ಯೆಗಳು ಹಾಗು ಖುಷಿಗಳು ಏನಂತ ಹೇಳಲು ಆಗುತ್ತ? ಯಾಕೆ? |
| + | |
| + | • ಈ ಸಮಸ್ಯೆಗಳನ್ನು ನೀವೆ ಪರಿಹಾರ ಮಾಡಿಕೊಳ್ಳಲು ನಿಮಗೆ ಎಲ್ಲಾ ರೀತಿಯ ಬೆಂಬಲವಿದೆ ಎಂದರೆ, ನೀವು ಹೇಗೆ ಪರಿಹಾರ ಮಾಡುತ್ತೀರ? |
| + | |
| + | • ಈ ರೀತಿಯ ಪರಿಹಾರಗಳನ್ನು ಕಂಡುಹಿಡಿದುಕೊಳ್ಳಲು ನಿಮಗೆ ಹೇಗೆ ಗೊತ್ತಾಯಿತು? |
| + | |
| + | • ಇನ್ನೂ ಏನಾದ್ರು ಹೇಳಬೇಕು ಅಂತ ಅನ್ಸುತ್ತಾ? |
| + | |
| + | ಇದೇ ಸಮಯದಲ್ಲಿ ಇನ್ನೊಬ್ಬ ಫೆಸಿಲಿಟೀಟರ್ ಕಿಶೋರಿಯರ ಜೊತೆ ವಾಕ್ಸ್ ಪಾಪ್ಗಳನ್ನು ಮಾಡುತ್ತಾರೆ. (ಸುಮಾರು ೫ ಕಿಶೋರಿಯರು ಒಂದು ಗುಂಪಿನಲ್ಲಿ) '''(೬೦ ನಿಮಿಷ)''' |
| + | |
| + | '''ವಾಕ್ಸ್ ಪಾಪ್ ಪ್ರಶ್ನೆಗಳು :''' |
| + | |
| + | '''ವಾಕ್ಸ್ ಪಾಪ್ ೧ :''' |
| + | |
| + | 1. ನಿಮ್ಮ ಹೆಸರೇನು? ಎಷ್ಟನೇ ತರಗತಿ? |
| + | |
| + | 2. ಗಂಡು ಮಕ್ಕಳು ಮಾಡೋ ಕೆಲಸಗಳನ್ನೆಲ್ಲಾ ಹೆಣ್ಣು ಮಕ್ಕಳು ಮಾಡಲು ಸಾಧ್ಯಾನೇ ಇಲ್ಲ ಅಂತ ಹೇಳ್ತಾರೆ, ಇದು ನಿಜಾನಾ? ಇದರ ಬಗ್ಗೆ ನೀವು ಏನು ಏನು ಹೇಳ್ತೀರ? |
| + | |
| + | 3. ಹೌದು ಎಂದರೆ - ನಿಮಗೆ ಎಲ್ಲಾ ಶಕ್ತಿ ಇದ್ದು, ಒಂದು ವೇಳೆ ಗಂಡು ಮಕ್ಕಳು ಎಲ್ಲಾ ಕೆಲಸಗಳನ್ನು ಮಾಡಬಹುದು ಅಂದರೆ, ನೀವು ಏನು ಮಾಡ್ತೀರ? |
| + | |
| + | 4. ಇಲ್ಲ ಎಂದರೆ - ಆದ್ರೂನೂ ಯಾಕೆ ಹೀಗೆ ಹೇಳ್ತಾರೆ ಅಂತ ನಿಮಗೆ ಅನಿಸುತ್ತೆ? |
| + | |
| + | '''ವಾಕ್ಸ್ ಪಾಪ್ ೨ :''' |
| + | |
| + | 1. ನಿಮ್ಮ ಹೆಸರೇನು? ಎಷ್ಟನೇ ತರಗತಿ? |
| + | |
| + | 2. ಒಂದನೇ ಕ್ಲಾಸಿಗೆ ಬರುವ ಹೆಣ್ಣುಮಕ್ಕಳ ಸಂಖ್ಯೆ ಹತ್ತನೇ ಕ್ಲಾಸಿಗೆ ಬರುವಷ್ಟರಲ್ಲಿ ಕಡಿಮೆ ಆಗಿರುತ್ತೆ ಅಂತ ಹೇಳ್ತಾರೆ. ಇದಕ್ಕೆ ಏನು ಕಾರಣಗಳು ಇರುತ್ತೆ ಅನ್ಸುತ್ತೆ? |
| + | |
| + | 3. ಈ ರೀತಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಆಗಬಾರದು ಅಂದ್ರೆ ಏನೇನು ಮಾಡಬಹುದು ಅನ್ಸುತ್ತೆ? |
| + | |
| + | '''ವಾಕ್ಸ್ ಪಾಪ್ ೩ :''' |
| + | |
| + | 1. ನಿಮ್ಮ ಹೆಸರೇನು? ಎಷ್ಟನೇ ತರಗತಿ? |
| + | |
| + | 2. ಜೀವನದಲ್ಲಿ ಹುಡುಗಿಯರು ಹಾಗು ಹುಡುಗರನ್ನು ಹೋಲಿಸಿದರೆ ಯಾರಿಗೆ ಜಾಸ್ತಿ ಕಷ್ಟ ಬರುತ್ತೆ? |
| + | |
| + | 3. ಹುಡುಗಿಯರಿಗೆ - ಯಾವ ಥರದ ಕಷ್ಟಗಳು ಬರುತ್ತೆ? |
| + | |
| + | 4. ಹುಡುಗರಿಗೆ - ಯಾವ ಥರದ ಕಷ್ಟಗಳು ಬರುತ್ತೆ? |
| + | |
| + | 5. ಇಬ್ಬರಿಗೂ - ಯಾವ್ಯಾವ ಥರದ ಕಷ್ಟಗಳು ಬರುತ್ತೆ? |
| + | |
| + | '''ವಾಕ್ಸ್ ಪಾಪ್ ೪ :''' |
| + | |
| + | 1. ನಿಮ್ಮ ಹೆಸರೇನು? ಎಷ್ಟನೇ ತರಗತಿ? |
| + | |
| + | 2. ಜೀವನದಲ್ಲಿ ನೀವು ಏನು ಬೇಕಿದ್ರು ಆಗಬಹುದು ಅಂತ ಇದ್ದರೆ ನೀವು ಏನಾಗಲು ಇಷ್ಟ ಪಡುತ್ತೀರಿ? |
| + | |
| + | 3. ಯಾಕೆ ? |
| + | |
| + | 4. ಹಾಗೆ ಆಗಲು ನೀವು ಏನು ಮಾಡಬೇಕು ? |
| + | |
| + | ಸಂದರ್ಶನಗಳ ನಡೆಯುತ್ತಿರುವ ಸಮಯದಲ್ಲಿ ಇನ್ನೊಬ್ಬ ಫೆಸಿಲಿಟೇಟರ್ ಉಳಿದ ಕಿಶೋರಿಯರಿಗೆ ಈ ಕೆಳಗಿನ ಚಿತ್ರಗಳನ್ನು ತೋರಿಸಿ ಅವುಗಳಲ್ಲಿ ಇರುವ ವ್ಯಕ್ತಿಗಳು ಮತ್ತು ವಸ್ತುಗಳನ್ನು |
| + | |
| + | ಅವರ ಗುಂಪುಗಳಲ್ಲಿ ಪಟ್ಟಿ ಮಾಡಲು ಹೇಳುವುದು. |
| + | |
| + | ಸಂದರ್ಶನಗಳು ಮುಗಿದ ನಂತರ ನಮ್ಮ ಮಾತುಕಥೆಯನ್ನು ಮುಗಿಸುವುದು. |
| + | |
| + | ಬೇಕಾದ ಸಂಪನ್ಮೂಲಗಳು |
| + | |
| + | • ಆಡಿಯೋ ರೆಕಾರ್ಡರ್ಗಳು - ೪ |
| + | |
| + | • ಕ್ಯಾಮೆರಾ - ೧ |
| + | |
| + | • ಚಾರ್ಟ್ - ೧ |
| + | |
| + | • ಸ್ಕೆಚ್ ಪೆನ್ನುಗಳು |
| + | |
| + | • ಖಾಲಿ ಹಾಳೆಗಳು |
| + | |
| + | ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು |
| + | |
| + | - ಒಬ್ಬ ಮುಖ್ಯ ಫೆಸಿಲಿಟೇಟರ್, ಇಬ್ಬರು ಸಹಾಯಕ ಫೆಸಿಲಿಟೇಟರ್ಗಳು |
| + | |
| + | ಒಟ್ಟು ಸಮಯ |
| + | |
| + | ೮೦ ನಿಮಿಷ |
| + | |
| + | ಇನ್ಪುಟ್ಗಳು |
| + | |
| + | ಕಿಶೋರಿಯರ ಸಂದರ್ಶನದ ಪ್ರಶ್ನೆಗಳು |
| + | |
| + | ಔಟ್ಪುಟ್ಗಳು |
| + | |
| + | ಕಿಶೋರಿಯರ ಸಂದರ್ಶನ ಹಾಗು ವಾಕ್ಸ್ ಪಾಪ್ ಕಡತಗಳು |