ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
d
+
== ಸಾರಾಂಶ ==
 +
ಕಿಶೋರಿಯರು ಹೊಸ ಹೆಜ್ಜೆ ಹೊಸ ದಿಶೆ ತಂಡದ ಜೊತೆಗೆ ಬಹಳ ದಿನಗಳಿಂದ ಮಾತುಕತೆಯಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಜೊತೆ ಜೊತೆಗಿನ ಪಯಣದ ಸಮಯಯದಲ್ಲಿ ಅವರು ಅವರ ವಿಚಾರ ಸರಣಿಯನ್ನು ವ್ಯಕ್ತಪಡಿಸುವ ರೀತಿಯೂ ಕೂಡ ಸುಧಾರಿಸಿದೆ. ಈ ವಾರದ ಮಾಡ್ಯೂಲ್‌ನ ಸಮಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಇರುವುದರಿಂದ, ಕಿಶೋರಿಯರಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಅವರು ಎಲ್ಲ ಮಹಿಳೆಯರಿಗೂ ಏನನ್ನು ಆಶಿಸುತ್ತಾರೆ ಹಾಗು ಏನು ಬದಲಾದರೆ ಮಹಿಳೆಯರಿಗೆ ಒಳ್ಳೆಯದು ಉತ್ತಮ ಎಂದು ಅವರಿಗೆ ಅನಿಸುತ್ತದೆ ಎಂದು ಬರೆಯುತ್ತಾರೆ. ಇದರ ಜೊತೆಗೆ ಅವರು ಈ ವರ್ಷ ಶಾಲಾ ಗೈರು ಹಾಜರಿಗೆ ಕಾರಣಗಳನ್ನು ಕೂಡ ಬರೆಯುತ್ತಾರೆ.
 +
 
 +
ಫೆಸಿಲಿಟೇಟರ್‌: ಅಪರ್ಣ,
 +
 
 +
ಕೊ-ಫೆಸಿಲಿಟೇಟರ್‌ಗಳು: ಅನುಷಾ,  ಕಾರ್ತಿಕ್‌
 +
 
 +
== ಊಹೆಗಳು ==
 +
1. ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ಅವರಲ್ಲಿ ಹಲವರಿಗೆ ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ.
 +
 
 +
2. ಇತ್ತೀಚೆಗೆ ಹಲವರು ಶಾಲೆಗೆ ಗೈರು ಹಾಜರಾಗುವುದು ಹೆಚ್ಚಾಗಿದೆ.
 +
 
 +
3. ಕೆಲವು ಕಿಶೋರಿಯರು ಸ್ವಪ್ರೇರಣೆಯಿಂದಲೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಇವರ ಧ್ವನಿಯನ್ನು ಹೆಚ್ಚಿಸುತ್ತಾ ಚರ್ಚೆಯನ್ನು ಅಡ್ಡಿಪಡಿಸುವ ಧ್ವನಿಗಳನ್ನು ಮಟ್ಟ ಹಾಕಬೇಕಿದೆ.
 +
 
 +
4. ದಿನೇ ದಿನೇ‌ ನಮ್ಮ ಹಾಗು ಅವರ ನಡುವಿನ ವಿಶ್ವಾಸದ ಮಟ್ಟ ಹೆಚ್ಚುತ್ತಿದೆ ಹಾಗಾಗಿ ಈ ಹಂತದಲ್ಲಿ ನಾವು ಸೂಕ್ಷ್ಮ ವಿಷಯಗಳನ್ನು ಚರ್ಚಿಸಬಹುದಾಗಿದೆ.
 +
 
 +
5. ಗುಂಪುಗಳನ್ನು ನಿಯಂತ್ರಿಸುವ ಕಿಶೋರಿಯರಿದ್ದಾರೆ, ಅವರು ಬೇರೆ ಕಿಶೋರಿಯನ್ನು ಭಾಗವಹಿಸಲು ಬಿಡುತ್ತಿಲ್ಲ. ಅವರನ್ನು ಗಮನಿಸಬೇಕಿದೆ.
 +
 
 +
6. ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶಿಕ್ಷಕರು ಪಾಠಗಳನ್ನು ಮುಗಿಸಲು ನಮಗೆ ನಿಗದಿ ಪಡಿಸಿದ ತರಗತಿಗಳನ್ನು ಉಪಯೋಗಿಸಿಕೊಳ್ಳಬಹುದು. ಇದರಿಂದ ನಮಗೆ ಕಡಿಮೆ ಸಮಯ ಸಿಗಬಹುದು.
 +
 
 +
== ಉದ್ದೇಶ ==
 +
ಹೊಸ ಹೆಜ್ಜೆ ಹೊಸ ದಿಶೆಯಲ್ಲಿ ಇದುವರೆಗೂ ಆದ ಕಲಿಕೆಯನ್ನು ಪ್ರತಿಬಿಂಬಿಸುವಂತೆ ಮಹಿಳಾ ದಿನಾಚರಣೆಯ ಆಶಯಗಳನ್ನು ವ್ಯಕ್ತಪಡಿಸುವಂತೆ ಮಾಡುವುದು.
 +
 
 +
== ಪ್ರಕ್ರಿಯೆ ==
 +
ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕರ ನಮ್ಮ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ನೆನಪಿಸುವುದು. '''(೧೦ ನಿಮಿಷ)'''
 +
 
 +
ಮಹಿಳಾ ದಿನಾಚರಣೆಯ ಬಗ್ಗೆ ಫೆಸಿಲಿಟೇಟರ್‌ ಮಾತನಾಡುತ್ತಾರೆ.
 +
 
 +
ಇದಾದ ನಂತರ ಪ್ರತಿ ಕಿಶೋರಿಗೂ ಒಂದೊಂದು ಪೋಸ್ಟ್‌ ಕಾರ್ಡ್‌ಗಳನ್ನು ಕೊಡುವುದು. ಅದರಲ್ಲಿ ಮಹಿಳಾ ದಿನಾಚರೆಣೆಯ ಅಂಗವಾಗಿ ಅವರು ಮಹಿಳೆಯರಿಗಾಗಿ ಏನನ್ನು ಆಶಿಸುತ್ತಾರೆ ಅಥವಾ ಏನು ಬದಲಾದರೆ ಅವರಿಗೆ ಉತ್ತಮ ಎಂದು ಬರೆಯಲು ಹೇಳುವುದು. '''(೨೦ ನಿಮಿಷ)'''
 +
 
 +
ಎಲ್ಲರೂ ಬರೆದಾದ ನಂತರ ಅವರಿಗೆ ಹಾಳೆಗಳನ್ನು ಕೊಟ್ಟು ಅವರು ಈ ಶೈಕ್ಷಣಿಕ ವರ್ಷದಲ್ಲಿ ಅವರು ಯಾವ ಯಾವ ಕಾರಣಕ್ಕೆ ಶಾಲೆಗೆ ಗೈರು ಹಾಜರಾಗಿದ್ದಾರೆ ಎಂದು ಬರೆಯಲು ಹೇಳುವುದು. '''(೨೦ ನಿಮಿಷ)'''
 +
 
 +
ಎರಡೂ ಚಟುವಟಿಕೆಗಳು ಮುಗಿದ ನಂತರ ನಮ್ಮ ಮಾತುಕಥೆಯನ್ನು ಮುಗಿಸುವುದು.
 +
 
 +
== ಬೇಕಾದ ಸಂಪನ್ಮೂಲಗಳು ==
 +
• ಕ್ಯಾಮೆರಾ ಹಾಗು ಟ್ರೈಪಾಡ್‌ - ೧
 +
 
 +
• ಪೊಸ್ಟ್‌ ಕಾರ್ಡ್‌ಗಳು - ೨೯
 +
 
 +
• A4 ಹಾಳೆಗಳು – ೨೯
 +
 
 +
== ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ==
 +
ಒಬ್ಬ ಮುಖ್ಯ ಫೆಸಿಲಿಟೇಟರ್‌, ಇಬ್ಬರು ಸಹಾಯಕ ಫೆಸಿಲಿಟೇಟರ್‌ಗಳು
 +
 
 +
== ಒಟ್ಟು ಸಮಯ ==
 +
೫೦ ನಿಮಿಷ
 +
 
 +
== ಇನ್‌ಪುಟ್‌ಗಳು ==
 +
 
 +
== ಔಟ್‌ಪುಟ್‌ಗಳು ==
 +
ಕಿಶೋರಿಯರು ಬರೆದ ಮಹಿಳಾ ದಿನಾಚರೆಣೆಯ ಆಶಯಗಳು
 +
 
 +
ಕಿಶೋರಿಯರು ಬರೆದ ಗೈರು ಹಾಜರಿಯ ಕಾರಣಗಳು
೪೦೭

edits

ಸಂಚರಣೆ ಪಟ್ಟಿ