ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಚಿಪ್ಪಳಿ ಎನ್ನುವ ಗ್ರಾಮದಲ್ಲಿ ನೆಲೆಸಿ ಅಡಿಕೆಯ ವ್ಯವಸಾಯ ಮತ್ತು ವ್ಯವಹಾರದಲ್ಲಿ ತೊಡಗಿರುವ ಮಾಧವ ಮಣಿಪಾಲ ವಿಶ್ವವಿದ್ಯಾಲಯದಿಂದ ಭಾಷಾ ತತ್ತ್ವಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ.ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಇವರು ರಂಗಭೂಮಿಯ ಇತಿಹಾಸ, ಕಲಾಮೀಮಾಂಸೆ ಮತ್ತು ತತ್ತ್ವಶಾಸ್ತ್ರಗಳ ಅಧ್ಯಾಪನ ಮಾಡುತ್ತಾರೆ. ಈ ಅಭ್ಯಾಸಕ್ರಮದಲ್ಲಿ ಬಳಸುವ ಸುಂದರ್ ಸರುಕ್ಕೈ ಅವರ "ಮಕ್ಕಳಿಗಾಗಿ ತತ್ತ್ವಚಿಂತನೆ" ಮುಂತಾದ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾವ್ಯ, ತತ್ತ್ವ ಮತ್ತು ಭಾಷೆಯ ಕುರಿತ ಇವರ ಪುಸ್ತಕ "ನುಡಿಯೊಡಲು" ಪ್ರಕಟಗೊಂಡಿದೆ. | ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಚಿಪ್ಪಳಿ ಎನ್ನುವ ಗ್ರಾಮದಲ್ಲಿ ನೆಲೆಸಿ ಅಡಿಕೆಯ ವ್ಯವಸಾಯ ಮತ್ತು ವ್ಯವಹಾರದಲ್ಲಿ ತೊಡಗಿರುವ ಮಾಧವ ಮಣಿಪಾಲ ವಿಶ್ವವಿದ್ಯಾಲಯದಿಂದ ಭಾಷಾ ತತ್ತ್ವಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ.ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಇವರು ರಂಗಭೂಮಿಯ ಇತಿಹಾಸ, ಕಲಾಮೀಮಾಂಸೆ ಮತ್ತು ತತ್ತ್ವಶಾಸ್ತ್ರಗಳ ಅಧ್ಯಾಪನ ಮಾಡುತ್ತಾರೆ. ಈ ಅಭ್ಯಾಸಕ್ರಮದಲ್ಲಿ ಬಳಸುವ ಸುಂದರ್ ಸರುಕ್ಕೈ ಅವರ "ಮಕ್ಕಳಿಗಾಗಿ ತತ್ತ್ವಚಿಂತನೆ" ಮುಂತಾದ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾವ್ಯ, ತತ್ತ್ವ ಮತ್ತು ಭಾಷೆಯ ಕುರಿತ ಇವರ ಪುಸ್ತಕ "ನುಡಿಯೊಡಲು" ಪ್ರಕಟಗೊಂಡಿದೆ. |