೩,೬೦೫ bytes added
, ೩ ವರ್ಷಗಳ ಹಿಂದೆ
ಉದ್ದೇಶ
ಹದಿಹರೆಯದಲ್ಲಿ ಕಿಶೋರಿಯರಿಗೆ ಬರುವ ಸಮಸ್ಯಗಳು ಬರೀ ಒಬ್ಬರದ್ದೇ ಅಲ್ಲ, ಎಲ್ಲರಿಗೂ ಇದೇ ತರಹದ ಸಮಸ್ಯೆಗಳಿವೆ ಎಂದು ತಿಳಿಸಿ, ಹದಿಹರೆಯದ ವ್ಯಾಖ್ಯಾನವನ್ನು ತಿಳಿಸುವುದು
ಪ್ರಕ್ರಿಯೆ
ನಮ್ಮ ಪರಿಚಯವನ್ನು ಇನ್ನೊಮ್ಮೆ ಮಾಡಿಕೊಳ್ಳುವ ಮೂಲಕ ಸೆಶನ್ ಅನ್ನು ಶುರು ಮಾಡುವುದು.
ಕಟ್ಟುಪಾಡುಗಳನ್ನು ಕಿಶೋರಿಯರ ಹತ್ತಿರವೇ ಹೇಳಿಸುವುದು. (10 ನಿಮಿಷ)
ಕಿಶೋರಿಯರನ್ನು ೩ ಗುಂಪುಗಳಾಗಿ ಮಾಡಿಕೊಳ್ಳಲು, ೩ ಬೇರೆ ಬೇರೆ ಬಣ್ಣ ಫ್ರೆಂಡ್‌ಶಿಪ್ ಬ್ಯಾಂಡ್ ಅನ್ನು ಬಾಕ್ಸಿನಲ್ಲಿ ಹಾಕಿ ಅವರ ಹತ್ತಿರ ಆರಿಸಿಕೊಂಡು ಅದನ್ನು ಕೈಗೆ ಹಾಕಿಕೊಳ್ಳಲು ಹೇಳುವುದು. ಅವರು ಅದನ್ನು ಬೇರೆಯವರ ಜೊತೆಗೆ exchange ಮಾಡಿಕೊಳ್ಳುವ ಹಾಗಿಲ್ಲ. ಕ್ಲಾಸ್ ಆದ್ಮೇಲೆ ನಿಮಗಿಷ್ಟ ಬಂದ ಹಾಗೆ ಮಾಡಬಹುದು ಆದರೆ ಈಗ ಆಯಾ ಬಣ್ಣದ ಬ್ಯಾಂಡ್ ನವರು ಆಯಾ ಗುಂಪಿನ ಸದಸ್ಯರಾಗಿರುತ್ತಾರೆ ಎನ್ನುವುದನ್ನು ಅರ್ಥ ಮಾಡಿಸುವುದು. ಅವರನ್ನು ಆಯಾ ಗುಂಪಿನಲ್ಲಿ ಕುಳಿತುಕೊಳ್ಳಲು ಹೇಳುವುದು.
ಒಂದೊಂದು ಗುಂಪಿನಲ್ಲೂ ಯಾರು ಬರೆಯುತ್ತೀರ ಎಂದು ಗುರುತಿಸಿಕೊಳ್ಳಲು ಹೇಳುವುದು. ಪ್ರತಿ ಗುಂಪಿಗೆ ೩ ಬ್ರೌನ್ ಶೀಟ್ಸ್ ಮತ್ತು ಸ್ಕೆಚ್ ಪೆನ್‌ಗಳನ್ನು ಕೊಟ್ಟು, ಈ ಕೆಳಗಿನ ಅಂಶಗಳನ್ನು ಚರ್ಚಿಸಿ ಬರೆಯಲು ಹೇಳುವುದು; ೩ ಜನ ಫೆಸಿಲೇಟಟರ್ಸ್ ೩ ಗುಂಪುಗಳಲ್ಲಿ ಭಾಗವಹಿಸಬೇಕು
ಕಿಶೋರಿಯರಾಗಿ ಅವರಿಗೆ ಈ ಸ್ಠಳಗಳಲ್ಲಿ ಬರುವ ಸವಾಲುಗಳೇನು ಎನ್ನುವುದನ್ನು ತಮ್ಮ ತಮ್ಮಲ್ಲೇ ಮಾತನಾಡಿಕೊಂಡು ಬರೆಯಬೇಕು - ಕಿಶೋರಿಯರು ಓಡಾಡುವ ಬಸ್ ನಿಲ್ದಾಣ, ಮನೆಯ ಲೊಕಾಲಿಟಿ ಹಾಗು ಮನೆ.
(35 ನಿಮಿಷ)
ಇದಾದ ನಂತರ ಹಾಳೆಗಳನ್ನು ಕಲೆಕ್ಟ್ ಮಾಡಿಕೊಂಡು, ಮುಂದಿನ ವಾರ ಇವುಗಳ ಬಗ್ಗೆ ಮಾತನಾಡೋಣ, ನಮಸ್ಕಾರ ಎಂದು ಮಾತುಕತೆಯನ್ನು ಮುಗಿಸುವುದು
ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು - 3
Resources Required
Friendship bands - 3 colours - 12 each
Box to keep the friendship bands
Camera
Sketch pens - 5 sets
Brown sheets halved - 9
Time required
45 minutes
Inputs
Outputs
Charts written by Kishoris listing the challenges they face in different spaces.