ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  +
'''ಶಿಕ್ಷಕರೇ ಚಿಂತನೆ ಮಾಡಿ'''
    +
ಗಣಿತದ ಕಲಿವನ್ನು ಅನುಕೂಲಿಸುವ ಮೊದಲು, ಶಿಕ್ಷಕರೇ, ದಯಮಾಡಿ ಈ ಮುಂದಿನ ಕೆಲವು ಅಂಶಗಳ ಬಗ್ಗೆ ಚಿಂತನೆ ಮಾಡಿ.
 +
 +
1. ಬೋಧಿಸಬೇಕಾಗಿರುವ ಘಟಕ, ಅಗತ್ಯಪೂರ್ವಜ್ಞಾನ ಅದರ ವಿಷಯ ವ್ಯಾಪ್ತಿ, ಅದಕ್ಕೆ ಪೂರಕವಾಗಿ ಉದ್ದೇಶಗಳನ್ನು ಪಟ್ಟಿಮಾಡಿಕೊಳ್ಳಿ.
 +
 +
2. ವಿಷಯವನ್ನು ಆರಂಭಿಸುವ ಮುಂದೆ ಅದಕ್ಕೆ ಪೂರಕವಾಗಿ ಯಾವ ರೀತಿಯ ಅಭಿಪ್ರೇರಣಾ ತಂತ್ರಗಳನ್ನು ಬಳಸಿಕೊಳ್ಳಬಹುದು ಎಂಬುದನ್ನು ಆಲೋಚಿಸಿ.
 +
 +
3. ಪಠ್ಯವಿಷಯಕ್ಕೆ ಸಂಬಂಧಿಸಿದಂತೆ ನೀಡಿರುವ ಚಟುವಟಿಕೆಗಳನ್ನು ಗಮನಿಸಿ. ಅವುಗಳನ್ನು ವಿದ್ಯಾರ್ಥಿಗಳು ನಿರ್ವಹಿಸುವಂತೆ ಮಾಡುವ ಕ್ರಮಗಳನ್ನು ಯೋಜಿಸಿಕೊಳ್ಳಿ.
 +
 +
4. ಎಲ್ಲ ವಿಷಯಗಳನ್ನು ಅನುಗಮನದೊಂದಿಗೆ ಆರಂಭಿಸಿ, ಅಂದರೆ ಪ್ರಶ್ನೆಗಳು, ದೃಷ್ಠಾಂತಗಳನ್ನು ನೀಡುವುದು, ಸಮಸ್ಯಾ ಪರಿಹಾರದ ಕ್ರಮಗಳನ್ನು ವಿದ್ಯಾರ್ಥಿಗಳೇ ಗ್ರಹಿಸುವಂತೆ ಮಾಡುವುದು ಇತ್ಯಾದಿಗಳಿಗೆ ಆದ್ಯತೆಯಿರುವಂತೆ ಗಮನಹರಿಸಿ.
 +
 +
5. ಮಾದರಿ ಲೆಕ್ಕಗಳನ್ನು ಪರಿಹರಿಸುವಾಗ ಅವುಗಳನ್ನು ಬಿಡಿಸುವ ಹಂತಗಳು ಮತ್ತು ಅವುಗಳಲ್ಲಿ ಗಮನಿಸಬೇಕಾದ ವಿಶೇಷ ಅಂಶಗಳಿದ್ದಲ್ಲಿ ಅವುಗಳಿಗೆ ಹೆಚ್ಚಿನ ಒತ್ತನ್ನು ನೀಡಿ.
 +
 +
6. ವಿಷಯ ಬೋಧನೆಯಲ್ಲಿ ದೈನಂದಿನ ಜೀವನದಲ್ಲಿನ ಈ ಅಂಶಗಳು ಹೇಗೆ ಉಪಯುಕ್ತ ವಾಗುತ್ತವೆ ಮತ್ತು ಅವುಗಳಿಂದ ಗಳಿಸಬೇಕಾದ ತಿಳಿವಳಿಕೆಯ ಕಡೆಗೆ ಗಮನ ನೀಡಿ. ಕೆಲವು ವಿಷಯಗಳು ನೇರವಾಗಿ ದೈನಂದಿನ ಜೀವನಕ್ಕೆ ಸಂಬಂಧಪಡದಿರಬಹುದು ಆದರೆ ಮುಂದಿನ ವರ್ಷಗಳಲ್ಲಿ ಗಣಿತದ ಕಲಿವಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಮನನ ಮಾಡಿಕೊಡಿ.
 +
 +
7. ವಿವಿಧ ಬೋಧನಾ ಕ್ರಮಗಳಿಗೆ ಯಾವ ಅಂಶಗಳನ್ನು ಅಳವಡಿಸಿಕೊಳ್ಳಬಹುದು ಎಂಬುದನ್ನು ಮೊದಲೇ ಯೋಚಿಸಿ, ಅವುಗಳನ್ನು ತರಗತಿ ಬೋಧನೆಯಲ್ಲಿ ಅಳವಡಿಸಿಕೊಳ್ಳಿ.
 +
 +
8. ರಚನಾತ್ಮಕ ವಿಧಾನಕ್ಕೆ ಎಲ್ಲೆಲ್ಲಿ ಅವಕಾಶಗಳಿವೆಯೋ ಅಲ್ಲಿ ಅದೇ ವಿಧಾನವನ್ನು ಬಳಿಸಿ; ಇದಕ್ಕೆ ಸ್ವಲ್ಪ ಹೆಚ್ಚಿನ ಸಮಯ ಬೇಕಾಗಬಹುದು ಆದರೆ ಅದರಿಂದ ವಿದ್ಯಾರ್ಥಿಗಳು ಗಳಿಸುವ ಜ್ಞಾನ ಮಾತ್ರ ಅತೀ ಹೆಚ್ಚಿನದು ಮತ್ತು ಶಾಶ್ವತ ಕಲಿಕೆಗೆ ಪೂರಕ.
 +
 +
9. ಪ್ರಕಲ್ಪಗಳು / ಯೋಜನೆಗಳು ಇವುಗಳಿಗೆ ಪೂರಕವಾದ ಫಲಿತಾಂಶಗಳನ್ನು ಗುರ್ತಿಸಿಕೊಳ್ಳಿ ಅದರಂತೆ ವಿದ್ಯಾರ್ಥಿಗಳಿಂದಲೇ ಅವುಗಳನ್ನು ಮೂಡಿಸುವುದಕ್ಕೆ ಪ್ರಾಧಾನ್ಯತೆ ನೀಡಿ.
 +
 +
10. ಪಠ್ಯಪುಸ್ತಕದ ಅಭ್ಯಾಸಗಳಲ್ಲಿರುವ ಪ್ರತಿ ಸಮಸ್ಯೆಯನ್ನೂ ಶಿಕ್ಷಕರೇ ತರಗತಿಯಲ್ಲಿ ಪರಿಹರಿಸ ಬೇಕು ಎಂಬುದೇನೂ ಇಲ್ಲ. ಅವುಗಳನ್ನು ಪರಿಹರಿಸುವ ಬಗ್ಗೆ ತಿಳಿವಳಿಕೆ ನೀಡಿ, ಸಾಧ್ಯ ವಾದಷ್ಟೂ ವಿದ್ಯಾರ್ಥಿಗಳೇ ಸ್ವತಃ ಪರಿಹರಿಸಲು ಅವಕಾಶವನ್ನು ನೀಡಿ.
 +
 +
 +
== ಸ್ವ-ಅವಲೋಕನ ==
 +
ವೃತ್ತಿಪರವಾಗಿ ಬೆಳೆಯಬೇಕಾದರೆ, ಶಿಕ್ಷಣದ ತಿರುಳಾದ ತರಗತಿಯಲ್ಲಿನ ಆಚರಣೆಗಳನ್ನು ಸುಧಾರಿಸಿಕೊಳ್ಳುವುದು ಅಗತ್ಯ. ಇದಕ್ಕೆ ನಮ್ಮ ಆಚರಣೆಗಳನ್ನು ಬೇರೊಬ್ಬರು ಅವಲೋಕಿಸಿ ವಿಮರ್ಶಿಸುವುದಕ್ಕಿಂತ, ನಮ್ಮ ಆಚರಣೆಗಳನ್ನು ನಾವೇ ಅವಲೋಕಿಸಿ ವಿಮರ್ಶಿಸಿಕೊಂಡರೆ ಬೋಧನೆ - ಕಲಿಕೆಯು ನಮ್ಮ ನೆಲೆಗಳು ಮತ್ತಷ್ಟು ಗಟ್ಟಿಯಾಗುತ್ತದೆ. ಗುಣಮಟ್ಟದ ಕಲಿಕೆಯನ್ನು ಮಕ್ಕಳು ಸಾಧಿಸುವಲ್ಲಿ ಪ್ರೇರಕ ಪೂರಕವಾಗುತ್ತದೆ. ಇದಕ್ಕಾಗಿ ವ್ಯಯಿಸಬೇಕಾದ ಸಮಯ ಹೆಚ್ಚೇನಿಲ್ಲ. ಬೇರೆಲ್ಲ ಯೋಚನೆಗಳನ್ನು ಬದಿಗೊತ್ತಿ ವಿರಾಮ ಅನುಭವಿಸುವಾಗ ಈ ದಿನದ ತರಗತಿಯಲ್ಲಿನ ಆಚರಣೆಗಳ ಬಗ್ಗೆ ಪರ್ಯಾಲೋಚನೆ ನಡೆಸಬೇಕು. ಏನು ಮಾಡಿದೆ? ಹೇಗೆ ಮಾಡಿದೆ? ಇದರ ಪರಿಣಾಮ ಏನಾಯಿತು? ಏಕೆ ಹೀಗಾಯಿತು? ನಾನಂದುಕೊಂಡಂತೆ ಆಯಿತೆ? ಇಲ್ಲವಾದರೆ ಏಕೆ? ಹಾಗೆ ಆಗಬೇಕಾದರೆ ಮುಂದಿನ ನಡೆಯೇನು? ಈ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳುವುದಲ್ಲದೆ ಅದಕ್ಕೆ ಉತ್ತರ ಪಡೆಯುವುದೂ ಅಗತ್ಯ. ಇದನ್ನು "ಸ್ವ-ಅವಲೋಕನ", "ಸ್ವ-ವಿಮರ್ಶೆ ಹೇಗಾದರೂ ಕರೆಯಿರಿ. ಇದಕ್ಕೆ ಪೂರಕವಾಗಿ ಒಂದು ಪಶ್ನಾವಳಿ ಹಾಗೂ ಅದರ ಕೀಲಿ ಕೈ ಕೊಡುವ ಪ್ರಯತ್ನ ಇಲ್ಲಿದೆ. ಈ ಪ್ರಶ್ನಾವಳಿಗೆ ಹೆಚ್ಚಿನ ಪ್ರಶ್ನೆಗಳನ್ನು ಸೇರಿಸುವ ಸ್ವಾತಂತ್ರ ನಮಗಿದೆ.
 +
 +
ಸ್ವ-ಅವಲೋಕನ ಪಟ್ಟಿ
 +
 +
ನಿಮಗೆ ನೀಡಿರುವ ಸಂವಹನ ಕೌಶಲದ ಶ್ರೇಣಿಯನ್ನು ಗುರುತಿಸಬಹುದಾದ ಪಟ್ಟಿಯಲ್ಲಿ ಸ್ವ ವಿಮರ್ಶೆಗೆ ಸಂಬಂಧಿಸಿದಂತೆ ನಿಮ್ಮ ಸಾಮಥ್ರ್ಯಗಳನ್ನು ನೀವೇ ಮೌಲ್ಯಮಾಪನ ಮಾಡಿಕೊಳ್ಳಿರಿ. ಈ ಕೌಸಲಗಳಲ್ಲಿ ನೀವು ಅತ್ಯತ್ತಮ ಎಂದಾದರೆ 5 ಅಂಕಗಳನ್ನು ನೀಡಿ. ಏನೂ ಸಾಲದು ಎನಿಸಿದರೆ 1 ಅಂಕ ನೀಡಿ.
 +
 +
ಸ್ವ-ಅವಲೋಕನ ಪಟ್ಟಿ
 +
 +
ನಿಮಗೆ ನೀಡಿರುವ ಸಂವಹನ ಕೌಶಲದ ಶ್ರೇಣಿಯನ್ನು ಗುರುತಿಸಬಹುದಾದ ಪಟ್ಟಿಯಲ್ಲಿ ಸಂವಹನ ಸಾಮಥ್ರ್ಯಕ್ಕೆ ಸಂಬಂಧಿಸಿದಂತೆ ನಿಮ್ಮ ಸಾಮಥ್ರ್ಯಗಳನ್ನು ನೀವೇ ಮೌಲ್ಯಮಾಪನಮಾಡಿಕೊಳ್ಳಿರಿ. ಈ ಕೌಶಗಳಲ್ಲಿ ನೀವು ಅತ್ಯುತ್ತಮ ಎಂದಾದರೆ 5 ಅಂಕಗಳನ್ನು ನೀಡಿ, ಏನೂ ಸಾಲದು ಎನಿಸಿದರೆ 1 ಅಂಕ ನೀಡಿ.
 +
 +
ಸ್ವಯಂ ಮೌಲ್ಯಮಾಪನದ ಮಾಡಿಕೊಳ್ಳಲು ಕೀಲಿ ಕೈನ ಹೋಲಿಕೆ ಪಟ್ಟಿ
 +
 +
ಕ್ರ
 +
 +
ಸಂ.
 +
 +
ಅಂಕಗಳು
 +
 +
ವಿಷಯ
 +
 +
1 2 3 4 5
 +
 +
(ಇದರಲ್ಲಿ ನೀಡಿರುವ ಪ್ರಶ್ನೆಗಳಿಗೆ ತಲಾ ಗರಿಷ್ಠ ಐದರಂತೆ ಅಂಕಗಳಿವೆ ನೀವು ಪಡೆದ ಅಂಕಗಳು 80% ಮೇಲಿದ್ದರೆ ಅತ್ಯುತ್ತಮ, ಮೇಲಿದ್ದರೆ ಉತ್ತಮ, 40% ಮೇಲೆ ಇದ್ದರೆ ಸಮಾಧಾನಕರ ಹಾಗೂ 30%À ಒಳಗಿದ್ದರೆ ಸಾಲದು)
 +
 +
ಆಕರ : 1) ಚೇತನ (ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಶೈಕ್ಷಣಿನಾಯಕತ್ವ ತರಬೇತಿ) ಆರ್ ಎಂ ಎಸ್ ಎ ಬೆಂಗಳೂರು
 +
 +
2) ಶಿಕ್ಷಣದಲ್ಲಿ ಮನೋವಿಜ್ಞಾನ ಲೇಖಕ : ಶ್ರೀ ಎ.ವಿ. ಗೋವಿಂದರಾವ್
 +
 +
1. ನಾನು ಕಲಿಸಿದ ವಿಷಯ ವಸ್ತುವಿನ ಮೇಲಿನ ಪ್ರಭುತ.್ವ
 +
 +
2. ತನ್ನ ಕಲಿಕೆಯನ್ನು ಕಟ್ಟಿಕೊಳ್ಳವ ವಿದ್ಯಾರ್ಥಿಗಳಿಗಾಗಿ ಆಯ್ಕೆ ಮಾಡಿಕೊಂಡ ಚಟುವಟಿಕೆಗಳ ಸೂಕ್ತತೆ.
 +
 +
3. ವಿದ್ಯಾರ್ಥಿಗಳನ್ನು ಚಿಂತನೆಗೆ ಪ್ರಶ್ನಿಸುವ ರೀತಿ.
 +
 +
4. ಪ್ರಶ್ನಿಸಿದನಂತರ ಉತ್ತರಿಸಲು ಸೂಕ್ತ ಸಮಯಾವಕಾಶ ನೀಡುವಿಕೆ.
 +
 +
5. ವಿದ್ಯಾರ್ಥಿಗಳ ಅನಿಸಿಕೆ ಉತ್ತರಗಳನ್ನು ಪೂರ್ಣವಾಗಿ ಆಲಿಸುವುದು.
 +
 +
6. ನನಗೆ ತಿಳಿದಿರುವುದನ್ನು ಇನ್ನೊಬ್ಬರಿಗೆ ತಿಳಿಸುವ ಸಾಮಥ್ರ್ಯ
 +
 +
7. ಸಂವಹನದಲ್ಲಿ ಸಂಜ್ಞೆಗಳನ್ನು ಬಳಸುವ ಸಾಮಥ್ರ್ಯ
 +
 +
8. ವಿಷಯಕ್ಕೆ ಸೂಕ್ತ ಸಂವಹನ ಮಾಧ್ಯಮವನ್ನು ಆಯ್ಕೆ ಮಾಡುವ ಸಾಮಥ್ರ್ಯ
 +
 +
9. ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಪಾರದರ್ಶಕವಾಗಿ ನೀಡುವ ಸಾಮಥ್ರ್ಯ.
 +
 +
10. ಸಂವಹನದಲ್ಲಿ ನೀಡುವ ಸಂದೇಶದ ಉಪಯುಕ್ತತೆ, ಸ್ಪಷ್ಟತೆ/ಖಚಿತತೆ
 +
 +
11. ಮೇಲಧಿಕಾರಿಗಳಿಗೆ ವಸ್ತು ನಿಷ್ಟವಾಗಿ ವರದಿ ಮಾಡುವ ಸಾಮಥ್ರ್ಯ
 +
 +
12. ಸಂವಹನದಲ್ಲಿ ಸೂಕ್ತ ಧ್ವನಿ, ಮುಖಭಾವ, ಆಂಗಿಕ ಚಲನೆ, ನಿಲುವುಗಳ ಬಳಕೆ
 +
 +
13. ಅಂತರ್ಜಾಲ, ಮೊಬೈಲ್, ಕಂಪ್ಯೂಟರ್ ಇತ್ಯಾದಿಗಳನ್ನು ಸೂಕ್ತವಾಗಿ ಬಳಸುವ ಸಾಮಥ್ರ್ಯ
 +
 +
14. ಸಹ ಪಠ್ಯ, ಪಠ್ಯ ಪೂರಕ ವಿಚಾರಗಳನ್ನು ಸಂವಹನ ಮಾಡುವ ಸಾಮಥ್ರ್ಯ.
 +
 +
15 ವಿದ್ಯಾರ್ಥಿಗಳ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ.
 +
 +
16. ಅಗತ್ಯಕ್ಕೆ ತಕ್ಕಂತೆ ದನಿಯಲ್ಲಿ ಏರಿಳಿತಗಳ ಬಳಕೆ
 +
 +
17. ನಿರ್ದಿಷ್ಟ ಸನ್ನಿವೇಶಗಳಲ್ಲಿ ತೀವ್ರತರ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವ ಗುಣ
 +
 +
18. ಮಾತು ಮತ್ತು ಬರಹದಲ್ಲಿ ಅಗತ್ಯವಿದ್ದಲ್ಲಿ ಗಾದೆ, ನುಡಿಗಟ್ಟು, ಸೂಕ್ತಿಗಳನ್ನು ಬಳಸುವ ಸಾಮಥ್ರ್ಯ
 +
 +
19. ಅಗತ್ಯವಿದ್ದಲ್ಲಿ ಪ್ರತಿಕೂಲ ಸನ್ನಿವೇಶದಲ್ಲಿಯೂ ಸಂವಹನ ಮುಂದುವರೆಸುವ ಸಾಮಥ್ರ್ಯ
 +
 +
20. ಗುಂಪು ಅಥವಾ ಸಮೂಹ ಸಂವಹನ ನಿರ್ವಹಣೆ ಮಾಡುವ ಸಾಮಥ್ರ್ಯ
 +
 +
21. ಅಚ್ಚುಕಟ್ಟಾದ, ತಪ್ಪುಗಳಿಲ್ಲದ ಸ್ಪಷ್ಟ ಕೈಬರಹ
 +
 +
22. ಉಚಿತ ಯುಕ್ತ ರೀತಿಯ ಸಂಬೋಧನೆಗಳ ಬಳಕೆ
 +
 +
23. ಅಗತ್ಯ ಹಿಮ್ಮಾಹಿತಿ ಪಡೆಯುವ ಸಾಮಥ್ರ್ಯ
 +
 +
24. ಸಂವಹನದಲ್ಲಿ ಹೊಸತನ, ಸೃಜನಶೀಲತೆಯನ್ನು ಅಳವಡಿಸುವ ಸಾಮಥ್ರ್ಯ
 +
 +
25. ಹಸನ್ಮಮುಖಿಯಾಗಿ ಕಾರ್ಯ ನಿರ್ವಹಿಸುವ ಸಾಮಥ್ರ್ಯ

ಸಂಚರಣೆ ಪಟ್ಟಿ