೧೦,೪೧೯ bytes added
, ೩ ತಿಂಗಳುಗಳ ಹಿಂದೆ
=== ಸಂಪೂರ್ಣ ದೈಹಿಕ ಪ್ರತಿಕ್ರಿಯೆ (TPR) ಎಂದರೆ ಏನು? ===
1960ರ ದಶಕದಲ್ಲಿ ಡಾ. ಜೇಮ್ಸ್ ಆಸ್ಟರ್ ರಚಿಸಿದ ಭಾಷಾ ಬೋಧನಾ ವಿಧಾನವೇ ಸಂಪೂರ್ಣ ದೈಹಿಕ ಪ್ರತಿಕ್ರಿಯೆ (TPR). ಇದು ಭಾಷಾ ಕಲಿಕೆಯನ್ನು ದೈಹಿಕ ಚಲನೆಗಳೊಂದಿಗೆ ಸಂಯೋಜಿಸುತ್ತದೆ. TPR ನಲ್ಲಿ ಶಿಕ್ಷಕರು ತಾವು ಕಲಿಸುತ್ತಿರುವ ಭಾಷೆಯಲ್ಲಿ ಆಜ್ಞೆಗಳನ್ನು ನೀಡುತ್ತಾರೆ ಮತ್ತು ವಿದ್ಯಾರ್ಥಿಗಳು ಆ ಆಜ್ಞೆಗಳಿಗೆ ಅನುಗುಣವಾದ ದೈಹಿಕ ಚಲನೆಗಳೊಂದಿಗೆ ಪ್ರತಿಕ್ರಿಯಿಸುತ್ತಾರೆ. TPR ನ ಮುಖ್ಯ ಕಲ್ಪನೆಗಳೆಂದರೆ:
# ಹೆಚ್ಚು ನೀವು ಏನನ್ನಾದರೂ ಅಭ್ಯಾಸ ಮಾಡಿದಷ್ಟೂ, ಅದನ್ನು ನೀವು ಉತ್ತಮವಾಗಿ ನೆನಪಿಟ್ಟುಕೊಳ್ಳಬಹುದು.
# ದೈಹಿಕ ಕ್ರಮಗಳು ಭಾಷೆಯನ್ನು ಕಲಿಯಲು ಮೆದುಳನ್ನು ಸಿದ್ಧಪಡಿಸಲು ಸಹಾಯ ಮಾಡುತ್ತವೆ.
# ಆನಂದದಾಯಕ ಮತ್ತು ಆರಾಮದಾಯಕ ಕಲಿಕಾ ವಾತಾವರಣವು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಗೆ ಸಹಾಯ ಮಾಡುತ್ತದೆ.
TPR ತರಗತಿಯಲ್ಲಿ ಶಿಕ್ಷಕರು ಕಲಿಸಲು ನಿರ್ಧರಿಸಿದ ಭಾಷೆಯಲ್ಲಿ ಮಾತನಾಡುತ್ತಾರೆ ಮತ್ತು ವಿದ್ಯಾರ್ಥಿಗಳು ಕ್ರಿಯೆಗಳ ಮೂಲಕ ಪ್ರತಿಕ್ರಿಯಿಸುತ್ತಾರೆ. ಈ ವಿಧಾನವು ಹೊಸದಾಗಿ ಕಲಿಯುವವರಿಗೆ ಉಪಯುಕ್ತವಾಗಿದೆ ಏಕೆಂದರೆ ಇದು ಅವರ ಆಲಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು, ಸೂಚನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಭಾಷೆಯನ್ನು ಮಾತನಾಡಲು ಪ್ರಾರಂಭಿಸುವ ಮೊದಲು ಅದಕ್ಕೆ ಪ್ರತಿಕ್ರಿಯಿಸಲು ಸಹಾಯ ಮಾಡುತ್ತದೆ.
=== ಆಲಿಸುವ ಕೌಶಲ್ಯಗಳನ್ನು ವೃದ್ದಿಸಲು TPR ಚಟುವಟಿಕೆಗಳನ್ನು ಏಕೆ ಬಳಸಬೇಕು? ===
# TPR ಚಟುವಟಿಕೆಗಳು ಆಲಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಹಲವಾರು ಪ್ರಯೋಜನಗಳನ್ನು ನೀಡಬಹುದು:
# TPR ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತದೆ ಅಲ್ಲದೇ ಕಲಿಕೆಯನ್ನು ವಿನೋದ ಮತ್ತು ಸ್ಮರಣೀಯವಾಗಿಸುತ್ತದೆ. ಇದು ದೊಡ್ಡ ತರಗತಿಗಳಲ್ಲಿ ಗಮನವನ್ನು ಇರಿಸಲು ಸಹಾಯ ಮಾಡುತ್ತದೆ.
# ವಿದ್ಯಾರ್ಥಿಗಳು ಪದಗಳ ಬದಲಿಗೆ ಕ್ರಿಯೆಗಳೊಂದಿಗೆ ಪ್ರತಿಕ್ರಿಯಿಸುತ್ತಾರೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೊಸ ಭಾಷೆಯನ್ನು ಕಲಿಯುವ ಬಗ್ಗೆ ಆತಂಕವನ್ನು ಕಡಿಮೆ ಮಾಡುತ್ತದೆ.
# TPR ಚಟುವಟಿಕೆಗಳು ಕೇಳಿಸಿಕೊಳ್ಳುವಿಕೆ, ನೋಡುವಿಕೆ ಮತ್ತು ಚಲಿಸುವಿಕೆಯನ್ನು ಬಳಸಿಕೊಳ್ಳುತ್ತದೆ. ವಿಭಿನ್ನ ಕಲಿಕೆಯ ಶೈಲಿಗಳನ್ನು ಒದಗಿಸುತ್ತದೆ ಮತ್ತು ವಿವಿಧ ಇಂದ್ರಿಯಗಳ ಮೂಲಕ ಭಾಷೆಯನ್ನು ಬಲಪಡಿಸುತ್ತವೆ.
# ವಿದ್ಯಾರ್ಥಿಗಳು ಅರ್ಥೈಸಿಕೊಂಡಿದ್ದಾರೆಯೇ ಎಂಬುದನ್ನ ವಿದ್ಯಾರ್ಥಿಗಳ ಕ್ರಿಯೆಗಳನ್ನು ವೀಕ್ಷಿಸುವ ಮೂಲಕ ಔಪಚಾರಿಕ ಪರೀಕ್ಷೆ ನೀಡದೆಯೇ ಶಿಕ್ಷಕರು ತ್ವರಿತ ಪ್ರತಿಕ್ರಿಯೆ ನೀಡಬಹುದು.
# TPR ಚಟುವಟಿಕೆಗಳಿಗೆ ಕನಿಷ್ಠ ಸಂಪನ್ಮೂಲಗಳು ಅಗತ್ಯವಿದ್ದು ಸೀಮಿತ ಸಾಮಗ್ರಿಗಳು ಅಥವಾ ತಂತ್ರಜ್ಞಾನದೊಂದಿಗೆ ಸುಲಭವಾಗಿ ನಡೆಸಬಹುದು.
# ಒಂದೇ ತರಗತಿಯಲ್ಲಿನ ವಿವಿಧ ಭಾಷೆಯ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ TPR ಚಟುವಟಿಕೆಗಳನ್ನು ಹೊಂದಿಸಬಹುದು.
# ಪದಗಳನ್ನು ಕ್ರಿಯೆಗಳಿಗೆ ಹೊಂದಿಕೆ ಮಾಡುವ ಮೂಲಕ TPR ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಶಬ್ದಕೋಶ ಮತ್ತು ವ್ಯಾಕರಣವನ್ನು ಉತ್ತಮವಾಗಿ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆಯಲ್ಲದೇ ದೀರ್ಘಾವಧಿಯಲ್ಲಿ ಭಾಷೆಯನ್ನು ಸ್ವಾಧೀನ ಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
=== ಆಲಿಸುವಿಕೆಗಾಗಿ TPR ಚಟುವಟಿಕೆಗಳ ಉದಾಹರಣೆಗಳು. ===
ಕೆಳಗಿನ ಚಟುವಟಿಕೆಗಳನ್ನು ವಿವಿಧ ಪ್ರಾವೀಣ್ಯತೆ ಮಟ್ಟಗಳು ಮತ್ತು ತರಗತಿಯ ಸಂದರ್ಭಗಳಿಗೆ ಸರಿಹೊಂದುವಂತೆ ಅಳವಡಿಸಿಕೊಳ್ಳಬಹುದು. TPR ವಿಧಾನದೊಂದಿಗೆ ವಿದ್ಯಾರ್ಥಿಗಳು ಹೆಚ್ಚು ಆರಾಮದಾಯಕವಾಗುವಂತೆ ಸರಳ ಆಜ್ಞೆಗಳೊಂದಿಗೆ ಪ್ರಾರಂಭಿಸಲು ಮತ್ತು ಕ್ರಮೇಣ ಸಂಕೀರ್ಣತೆಯನ್ನು ಹೆಚ್ಚಿಸಲು ಮರೆಯದಿರಿ.
{| class="wikitable"
|'''ಕ್ರ.ಸಂ'''
|'''ಚಟುವಟಿಕೆಯ ಹೆಸರು'''
|'''ಚಟುವಟಿಕೆಯ ವಿವರಣೆ'''
|'''ಮಾದರಿ'''
|-
|1
|ಸೈಮನ್/ಸಲ್ಮಾ ಹೇಳುತ್ತಾರೆ.
|"ಸೈಮನ್/ ಸಲ್ಮಾ ಹೇಳುತ್ತಾರೆ" ಎಂದು ಹೇಳಿದ ನಂತರ ನೀಡುವ ಸೂಚನೆಗಳನ್ನು ಮಾತ್ರ ವಿದ್ಯಾರ್ಥಿಗಳು ಅನುಸರಿಸುವ ಕ್ಲಾಸಿಕ್ TPR ಆಟ.
|ಉದಾ: "ಸಲ್ಮಾ ಹೇಳ್ತಾರೆ ನಿಮ್ಮ ಮೂಗು ಮುಟ್ಟಿ " "ಸಲ್ಮಾ ಹೇಳ್ತಾರೆ ಕೈ ಮೇಲೆತ್ತಿ" "ಒಂದು ಬಾರಿ ಚಪ್ಪಾಳೆ ತಟ್ಟಿ" (ವಿದ್ಯಾರ್ಥಿಗಳು ಇದಕ್ಕೆ ಪ್ರತಿಕ್ರಿಯಿಸಬಾರದು).
|-
|2
|ಕ್ರಿಯಾತ್ಮಕ ಹಾಡು
|ಆಲಿಸುವಿಕೆಯೊಂದಿಗೆ ದೈಹಿಕ ಕ್ರಿಯೆಗಳನ್ನು ಒಳಗೊಂಡಿರುವ ಹಾಡನ್ನು ಬಳಸುವುದು.
|ಉದಾ: “ಹುಬ್ಬಳ್ಳಿಯ ನಿಂಗವ್ವ, ಕೊಪ್ಪಳಕ್ಕೆ ಬಂದಾಳ, ಕೈಗೆ ಬಳೆ ಹಾಕ್ಯಾಳ ಹೀಂಗ್ ಹೀಂಗ್ ತೋರ್ಸ್ಯಾಳೆ, ಹಿಂಗೂ ಹಿಂಗೂ ಹಿಂಗೂ ತೋರ್ಸ್ಯಾಳೆ”
|-
|3
|ಕ್ರಿಯಾಧಾರಿತ ಕಥೆ
|ಸರಳವಾದ ಕಥೆಯನ್ನು ಹೇಳುವುದು ಕಥೆಯಲ್ಲಿ ಬರುವ ಕ್ರಿಯೆಗಳನ್ನು ವಿದ್ಯಾರ್ಥಿಗಳು ನಿರ್ವಹಿಸುವಂತೆ ಸೂಚಿಸುವುದು.
|ಉದಾ: "ಹುಡುಗನು ಉದ್ಯಾನವನಕ್ಕೆ ನಡೆದನು (ವಿದ್ಯಾರ್ಥಿಗಳು ಸ್ಥಳದಲ್ಲಿ ನಡೆಯುತ್ತಾರೆ). ಅವನು
ನಾಯಿಯನ್ನು ನೋಡಿ ಗಾಬರಿಯಾದನು (ನಾಯಿಯನ್ನು ನೋಡಿ ಗಾಬರಿಯಾದಂತೆ ನಟಿಸುತ್ತಾರೆ).
ನಾಯಿಯು ಜೋರಾಗಿ ಬೊಗಳಿತು (ಬೊಗಳುವ ಸನ್ನೆಗಳನ್ನು ಮಾಡುತ್ತಾರೆ)."
|-
|4
|ಸೂಚನೆಗಳನ್ನು ಪಾಲಿಸುವುದು
|ವಿದ್ಯಾರ್ಥಿಗಳು ಅನುಸರಿಸಲು ಸೂಚನೆಗಳ ಸರಣಿಯನ್ನು ನೀಡುವುದು.
|ಉದಾ:"ಬಾಗಿಲ ಕಡೆಗೆ ನಡೆಯಿರಿ" "ಹಿಂದಕ್ಕೆ ತಿರುಗಿ" “ನಿಮ್ಮ ಬಲಕ್ಕೆ ತಿರುಗಿ" “ಪೂರ್ವ ದಿಕ್ಕಿಗೆ ಮುಖಮಾಡಿ" "ನಿಮ್ಮ ಆಸನಕ್ಕೆ ಹಿಂತಿರುಗಿ” “ಬಲಗೈ ಮೇಲೆ ಮಾಡಿ” “ಎಡಕ್ಕೆ ತಿರುಗಿ” “ಜಿಗಿಯಿರಿ”
|-
|5
|TPR ಟೆಲಿಫೋನ್
|ವಿದ್ಯಾರ್ಥಿಗಳು ಅನುಸರಿಸಲು ನಿರ್ದೇಶನಗಳನ್ನು
ನೀಡುವುದು.
|ಉದಾ: ಎಲ್ಲರೂ ಒಂದು ಸಾಲಿನಲ್ಲಿ ಹಿಂತಿರುಗಿ ನಿಲ್ಲುತ್ತಾರೆ. ಮೊದಲವನಿಗೆ ಮಾತ್ರ ಕಾಣುವಂತೆ ಕ್ರಿಯೆಯನ್ನು ತೋರಿಸುವುದು. ನಂತರದವನಿಗೆ ಕ್ರಿಯೆಯನ್ನ ತೋರಿಸಿಸುವುದು ಆತ ಕ್ರಿಯೆಗಳನ್ನು ವೀಕ್ಷಿಸಿ ಪುನರಾವರ್ತಿಸುತ್ತಾನೆ. ಹೀಗೆ ಎಲ್ಲರೂ ಮಾಡಿ ಕೊನೆ ಕ್ರಿಯೆಯನ್ನುಹೋಲಿಕೆ ಮಾಡುವುದು.
|}
=== ಸಂಬಂದಿತ ಪುಟಗಳು ಮತ್ತು ಚಟುವಟಿಕೆಗಳು. ===