೬,೪೩೯ bytes added
, ೨ ತಿಂಗಳುಗಳ ಹಿಂದೆ
=== ಕಾರ್ಯಕ್ರಮದ ಅವಲೋಕನ ===
ಡಿಜಿಟಲ್ ಮಾಧ್ಯಮದ ಹೊಸ ಸಾಧ್ಯತೆಗಳ ಜೊತೆಗೆ ಕಥೆ ಹೇಳುವ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಸಮೃದ್ದಗೊಳಿಸುವ ಪ್ರಮುಖ ಉದ್ದೇಶದೊಂದಿಗೆ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಹಾಗೂ ಶಿಕ್ಷಕರ ಶಿಕ್ಷಣ ಕಾಲೇಜುಗಳು 2023-24ರ ವಾರ್ಷಿಕಾವಧಿಯಲ್ಲಿ 'ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥಾಧಾರಿತ ಬೋಧನಾ ವಿಧಾನವನ್ನು ಅಳವಡಿಸಿಕೊಳ್ಳುವ' ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಮಾಡಲು ಕರ್ನಾಟಕದಾದ್ಯಂತ CTE ಗಳು IT ಫಾರ್ ಚೇಂಜ್ನೊಂದಿಗೆ ಸಹಕರಿಸಿವೆ. ಭಾಷಾ ಬೋಧನೆ-ಕಲಿಕೆಯ ಪ್ರಕ್ರಿಯೆಗೆ ಸಹಾಯ ಮಾಡಲು ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದ್ದು ಇದರ ಪರಿಣಾಮವಾಗಿ ಶಿಕ್ಷಕರ ವೃತ್ತಿಪರ ಅಭಿವೃದ್ಧಿ (TPD) ಮೇಲೆ ಕೇಂದ್ರೀಕರಿಸುವ ಮೂಲಕ ಮೊದಲನೇ ಶೈಕ್ಷಣಿಕ ವರ್ಷದಲ್ಲಿ ಆಡಿಯೋ ಸಂಪನ್ಮೂಲಗಳನ್ನು ರಚಿಸಿ ಶಿಕ್ಷಕರ ಸಾಮರ್ಥ್ಯಗಳನ್ನು ನಿರ್ಮಿಸುವುದರ ಮೇಲೆ ಪ್ರಾಥಮಿಕವಾಗಿ ಗಮನಹರಿಸಿ ಕನ್ನಡ, ಇಂಗ್ಲಿಷ್, ಉರ್ದು ಮತ್ತು ಮರಾಠಿ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಉತ್ತಮ ಗುಣಮಟ್ಟದ ಆಡಿಯೊ ಕಥೆಗಳನ್ನು ತಯಾರಿಸಲಾಗಿದೆ ಮತ್ತು ರಾಜ್ಯದಾದ್ಯಂತ ಶಿಕ್ಷಕರಿಗೆ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳಾಗಿ ಪ್ರಕಟಿಸಲಾಗಿದೆ.
2024-25 ವರ್ಷದಲ್ಲಿ ಕಾರ್ಯಕ್ರಮದ ಹಂತವಾಗಿ ತಂತ್ರೋ-ಶಿಕ್ಷಣ ಕಾರ್ಯಾಗಾರಗಳ ಮೂಲಕ ಶಾಲಾ ಹಾಗೂ ತರಗತಿಯ ಮಟ್ಟದಲ್ಲಿ ಅನುಷ್ಠಾನವನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ. ಶಿಕ್ಷಕರ ವಿಧಾನಗಳು, ಯಶಸ್ಸುಗಳು ಮತ್ತು ಸವಾಲುಗಳ ಪರಿಣಾಮಕಾರಿತ್ವವನ್ನು ಅರ್ಥಮಾಡಿಕೊಳ್ಳುವುದು, ಸುಧಾರಣೆ ಮತ್ತು ಮರುವಿನ್ಯಾಸಕ್ಕೆ ಅಗತ್ಯವಿರುವ ಅಂಶಗಳನ್ನು ಗುರುತಿಸಲು ತರಗತಿಗಳಲ್ಲಿ ಡಿಜಿಟಲ್ ಕಥೆ ಆಧಾರಿತ ಬೋಧನಾ ವಿಧಾನ ಅನುಷ್ಠಾನವನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ.
2024-25 ರ ಶೈಕ್ಷಣಿಕ ವರ್ಷದಲ್ಲಿ ಐಟಿ ಫಾರ್ ಚೇಂಜ್ ಸಂಸ್ಥೆಯು ಬೆಂಗಳೂರು ಉತ್ತರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯೊಂದಿಗೆ (DSERT) ಸಹಭಾಗಿತ್ವದಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಭಾಷಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಕಾರ್ಯಕ್ರಮದ ಪಾತ್ರವನ್ನು ಅಧ್ಯಯನ ಮಾಡಲು ಯೋಜಿಸಿದೆ.
ಉದ್ದೇಶಿತ ಕಾರ್ಯಕ್ರಮವು ಮುಖ್ಯವಾಗಿ ಕ್ಲಸ್ಟರ್ ರಿಸೋರ್ಸ್ ಪರ್ಸನ್ಸ್ (CRP) ಅವರೊಂದಿಗೆ ಕೆಲಸ ಮಾಡುವುದನ್ನು ಒಳಗೊಂಡಿದೆ, ಅವರು ಜಿಲ್ಲೆಯ ಎರಡು ಬ್ಲಾಕ್ಗಳಲ್ಲಿ ತರಗತಿಯ ಅನುಷ್ಠಾನಕ್ಕೆ ಸಹಾಯ ಮಾಡಬಹುದು. ಸಿ. ಆರ್. ಪಿ. ಗಳು ಮತ್ತು ಶಿಕ್ಷಕರಿಗಾಗಿ ಕಾರ್ಯಾಗಾರಗಳನ್ನು ನಡೆಸಿ ಭಾಷಾ ಬೋಧನೆಯಲ್ಲಿ ಡಿಜಿಟಲ್ ಕಥಾ-ಆಧಾರಿತ ಬೋಧನಾ ವಿಧಾನವನ್ನು ಬಳಸುವ ಅಂಶಗಳನ್ನು ಚರ್ಚಿಸಲಾಗುವುದು.
=== ಕಾರ್ಯಾಗಾರದ ಉದ್ದೇಶಗಳು ===
• ಶೈಕ್ಷಣಿಕ ವರ್ಷಕ್ಕೆ TPD ಕಾರ್ಯಕ್ರಮದೊಂದಿಗೆ CRP ಗಳನ್ನು ಪರಿಚಯಿಸುವುದು.
• ಭಾಷಾ ಬೋಧನೆಯಲ್ಲಿ ಬಹುಭಾಷಾ, ಸಮನ್ವಯ ಮತ್ತು ರಚನಾತ್ಮಕ ವಿಧಾನವನ್ನು ಬಳಸಲು ಶಿಕ್ಷಕರಿಗೆ ಮಾರ್ಗದರ್ಶನ, ಮೇಲ್ವಿಚಾರಣೆ ಮತ್ತು ಅನುಕೂಲಕ್ಕಾಗಿ ಸಿಆರ್ಪಿಗಳ ಸಾಮರ್ಥ್ಯವನ್ನು ನಿರ್ಮಿಸುವಲ್ಲಿ ಡಯಟ್ ಗೆ ಬೆಂಬಲಿಸುವುದು.
• ಲಭ್ಯವಿರುವ ಸಂಪನ್ಮೂಲ ಭಂಡಾರಗಳನ್ನು ಪ್ರವೇಶಿಸಲು ಮತ್ತು ಬಳಸಿಕೊಳ್ಳಲು CRP ಗಳಿಗೆ ಸಹಾಯ ಮಾಡುವುದು.
• CRP ಗಳು ತಮ್ಮ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಗಳು ಮತ್ತು ಪ್ರಕ್ರಿಯೆಗಳನ್ನು ಸುಗಮಗೊಳಿಸಲು FOSS ಪರಿಕರಗಳ ಬಳಕೆಯೊಂದಿಗೆ ಪರಿಚಿತರಾಗಲು ಸಹಾಯ ಮಾಡಲು.