# ವಿದ್ಯಾರ್ಥಿಗಳಿಗೆ ಮೊದಲಿನ ದಿನವೇ ವ್ಯವಸಾಯದ ಭೂಮಿಗಳು ಅವರ ಊರಿನಲ್ಲಿ ಎಲ್ಲಿ ಇವೆ ಎಂದು ಮಾಹಿತಿ ಪಡೆದುಕೊಂಡು ಬರಲು ಹೇಳುವುದು.
+
# ಯಾವ ಯಾವ ಕೃಷಿಯನ್ನು ಅವರ ಊರಿನಲ್ಲಿ ಮಾಡುತ್ತಾರೆ ಎಂದು ಹಿರಿಯರಿಂದ ಮಾಹಿತಿ ಪಡೆದುಕೊಂಡು ಬರಲು ಹೇಳುವುದು.
+
# ಅವರ ಊರಿನಲ್ಲಿ ಕೃಷೀ ಭೂಮಿಗಳ ಚಿತ್ರಗಳನ್ನು ಮೊಬೈಲ್ ನಲ್ಲಿ ತೆಗೆದುಕೊಂಡು ಬರಲು ಹೇಳುವುದು.
+
# ಅವರ ಊರಿನಲ್ಲಿ ಬೀಳು ಭೂಮಿಗಳು ಎಲ್ಲಿವೆ ಎಂದು ತಿಳಿದುಕೊಂಡು ಬರಲು ತಿಳಿಸುವುದು.
+
+
ನಂತರ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಗುಂಪುಗಳನ್ನು ಮಾಡಿಕೊಂಡು ತಾವು ತಂದಿರುವ ಮಾಹಿತಿಯನ್ನು ವಿಶ್ಲೇಸಿಸಲು ಹೇಳುವುದು.
+
# ಮೊದಲಿಗೆ ಅವರ ಊರಿನ ಬೆಳೆಗಳ ಹೆಸರುಗಳನ್ನು ಬರೆಯಲು ಹೇಳುವುದು
+
# ಅವುಗಳನ್ನು ಒಣ ಬೇಸಾಯದ ಬೆಳೆಗಳು , ಗುಡ್ಡ ಪ್ರದೇಶದ ಬೆಳೆಗಳು, ಹೊಲದಲ್ಲಿ ಬೆಳೆಯುವ ಬೆಳೆಗಳು,ಎಂದು ವಿಂಗಡಿಸಲು ಹೇಳುವುದು.
+
# ಅವರ ಊರಿನಲ್ಲಿ ಬಳಕೆಯಾಗದೇ ಇರುವ ಭೂಮಿಗಳು ಇರುವ ಪ್ರದೇಶಗಳನ್ನು ಪಟ್ಟಿ ಮಾಡಲು ಹೇಳುವುದು.
+
# ಅವರ ಊರಿನಲ್ಲಿ ಅರಣ್ಯ ಪ್ರದೇಶಗಳನ್ನು ಪಟ್ಟಿ ಮಾಡಿಸುವುದು.
+
+
ಪಟ್ಟಿ ಮಾಡಿಸಿದ ನಂತರ ಅದನ್ನು ತರಗತಿಯಲ್ಲಿ ಮಂಡಿಸಲು ಹೇಳುವುದು.ಈ ಸಂದರ್ಭದಲ್ಲಿ ಭೂಬಳಕೆಯು ಅವರ ಊರುಗಳಲ್ಲಿ ಹೇಗೆ ಇದೆ ಎಂದು ಅವರಿಗೆ ಮನವರಿಕೆ ಮಾಡುತ್ತಾ , ಅವರ ಊರಿನ ಪಾಳು ಬಿದ್ದಿರುವ ಭೂ ಬಳಕೆಯ ಮಹತ್ವವನ್ನು ಅವರಿಗೆ ತಿಳಿಸುವುದು. ಅರಣ್ಯವನ್ನು ರಕ್ಷಣೆ ಮಾಡಿ ವಾತಾವರಣವನ್ನು ಕಾಪಾಡುವುದರ ಮೂಲಕ , ಕೃಷೀಗೂ ನೆರವು ಆಗುವುದರ ಮಹತ್ವವನ್ನು ತಿಳಿಸುವುದು.ಅವರ ಊರಿನಲ್ಲಿ ಸಾಗುವಳೀ ಕ್ಷೇತ್ರವು ಯಾವ ಪ್ರಮಾಣದಲ್ಲಿದೆ ಎಂದು ತಿಳಿಸಿ, ವ್ಯವಸಾಯ ಮಾಡುವುದರ ಅಗತ್ಯತೆಯನ್ನು ತಿಳಿಸುವುದು.ಕೃಷಿ ಯೋಗ್ಯವಲ್ಲದ ಭೂಮಿಯನ್ನು ಮಾತ್ರ ಕೈಗಾರಿಕೆಗಳಿಗೆ ಕೊಡುವುದರ ಅಗತ್ಯತೆಯನ್ನು ತಿಳಿಸುವುದು ಅಗತ್ಯವಾಗಿದೆ.