ಬೇಸಿಕ್ Ubuntu ಕೈಪಿಡಿ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search

ಬೇಸಿಕ್ ubuntu ಕೈಪಿಡಿ ಡೌನ್ ಲೊಡ್ ಮಾಡಲು ಇಲ್ಲಿ ಒತ್ತಿ

ಉಬಂಟು ಅಪರೇಟಿಂಗ್‌ ಸಿಸ್ಟಮ್‌

ನೀವು ಪ್ರಾರಂಭದಲ್ಲಿ ಉಬಂಟುವನ್ನು ಆಯ್ಕೆ ಮಾಡಿದಾಗ, ಪಕ್ಕದ ಚಿತ್ರದಲ್ಲಿ ತೋರಿಸಿರುವಂತೆ ಲಾಗಿನ್‌ ಪರದೆ ಕಾಣುತ್ತದೆ.

Ubuntu basic one.png


ಲಾಗಿಂಗ್ ಇನ್ :

ನಿಮ್ಮ ಬಳಕೆದಾರ ಹೆಸರನ್ನು ಆಯ್ಕೆಮಾಡಿ, ನಿಮ್ಮ ಪಾಸ್‌ ವರ್ಡ್ ಅನ್ನು ಟೈಪ್‌ ಮಾಡಿದಾಗ ಡೆಸ್ಕ್ ಟಾಪ್ ಕಾಣಿಸಿಕೊಳ್ಳುತ್ತದೆ. ಡೆಸ್ಕ್ ಟಾಪ್ ಡೆಸ್ಕ್ ಟಾಪ್ ಪರದೆಯ ಮೇಲೆ ಐಕಾನ್ಸ್(ಯಾವುದಾದರೂ ಇದ್ದಲ್ಲಿ), ವಿಂಡೋಸ್(ಯಾವುದಾದರೂ ಪ್ರೋಗ್ರಾಮ್ ಬಳಸಿದ್ದಲ್ಲಿ) ಮತ್ತು ಮೆನುಗಳನ್ನು ನೀವು ನೋಡಬಹುದು.

Ubuntu basic two.png


ಪ್ಯಾನೆಲ್ಸ್ (ಅಂಕಣಗಳು)

ಎರಡು ಅಂಕಣಗಳು ಕಾಣುತ್ತವೆ- ಒಂದು ಪರದೆಯ ಮೇಲ್ಭಾಗದಲ್ಲಿ ಮತ್ತೊಂದು ಪರದೆಯ ಕೆಳಭಾಗದಲ್ಲಿ. ಪರದೆಯ ಮೇಲ್ಭಾಗದ ಅಂಕಣದಲ್ಲಿ ಐಕಾನ್ಸ್ ಮತ್ತು ಮೆನುಗಳಿರುತ್ತವೆ. ಕೆಳಭಾಗದ ಅಂಕಣದಲ್ಲಿ ಚಾಲನೆಯಲ್ಲಿರುವ ಪ್ರೋಗ್ರಾಮ್‌ಗಳನ್ನು ನೀವು ನೋಡಬಹುದು.

ಮೆನುಗಳು

ಪರದೆಯ ಮೇಲ್ಭಾಗದಲ್ಲಿ ಕಾಣುವ ಎರಡು ಮೆನುಗಳನ್ನು (ಅಪ್ಲಿಕೇಷನ್ಸ್, ಸ್ಥಳಗಳು) ಮುಖ್ಯ ಮೆನುಗಳೆಂದು ಕರೆಯುತ್ತಾರೆ. ಇವು ಪರದೆಯ ಮೇಲೆ ನಿತ್ಯವೂ ಇರುತ್ತವೆ.

ಅಪ್ಲಿಕೇಷನ್ಸ್ ಮೆನು ಪರದೆಯ ಮೇಲ್ಭಾಗದ ಎಡ ಭಾಗದಲ್ಲಿದ್ದು, ಗಣಕಯಂತ್ರದಲ್ಲಿರುವ ಎಲ್ಲಾ ಪ್ರೋಗ್ರಾಮ್‌ಗಳ (ಆಪ್ಸ್) ಪಟ್ಟಿಯನ್ನು ಹೊಂದಿರುತ್ತದೆ.

ಪ್ಲೇಸಸ್(ಸ್ಥಳದ) ಮೆನು ಅಪ್ಲಿಕೇಷನ್ಸ್ ಮೆನುವಿನ ಪಕ್ಕದಅಲ್ಲಿದ್ದು, ಹಾರ್ಡ್ ಡಿಸ್ಕ್ , ಸಿಡಿ / ಡಿವಿಡಿ ಅಥವಾ ಪೆನ್ ಡ್ರೈವ್ಸ್ ಗಳನ್ನು ಬಳಸಲು ಅನುಮತಿಸುತ್ತದೆ. ಡಿಜಿಟಲ್ ಕ್ಯಾಮೆರಾಗಳು ಮತ್ತು ಎಂಪಿ 3 ಪ್ಲೇಯರ್ಸ್ ಗಳನ್ನು ಸಂಪರ್ಕಿಸಿದಾಗ ಅವುಗಳ ಪಟ್ಟಿ ಯೂ ಸಹ ಇಲ್ಲಿ ಪ್ರದರ್ಶಿತವಾಗುತ್ತದೆ.

ಪ್ಲೇಸಸ್ ಮೆನು ಇದು ಗಣಕಯಂತ್ರದ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ, ಕಾಲ ಮತ್ತು ದಿನಾಂಕವನ್ನು ಬದಲಾಯಿಸಲು, ಎಡಗೈ ವ್ಯಕ್ತಿಗೆ ಅನುಕೂಲವಾಗುವಂತೆ ಮೌಸ್ ಗುಂಡಿಯನ್ನು ಬದಲಿಸಲು ಇತ್ಯಾದಿ.


Ubuntu basic three.png


ಇದು ಎರಡು ಉಪ-ಮೆನುಗಳನ್ನು ಹೊಂದಿದೆ. ಅವುಗಳೆಂದರೆ ಆದ್ಯತೆಗಳು (Preferences) : ಈ ಮೆನು ನಿಮ್ಮ ಗಣಕಯಂತ್ರವು ನೀವು ಬಯಸಿದ ರೀತಿ ಕಾಣಲು ಮತ್ತು ನಿಮ್ಮ ಇಚ್ಛೆ ಅಥವಾ ಆದ್ಯತೆಯಂತೆ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.


ಕಡತ ಮತ್ತು ಫೋಲ್ಡರ್‌ಗಳ ನಿರ್ವಹಣೆ :

ನೀವು ಒಂದು ಕಾಗದದ ಮೇಲೆ ಪ್ರಬಂಧ ಅಥವಾ ಚಿತ್ರವನ್ನು ಮಾಡಿದಾಗ ಅದನ್ನು ನೀವು ಭವಿಷ್ಯದಲ್ಲಿ ನೋಡಲು ಇಡುತ್ತೀರಿ ಅಲ್ಲವೆ? ಇಂತಹವುಗಳನ್ನು ಸಾಮಾನ್ಯವಾಗಿ ಹಾರ್ಡ್ ಬೌಂಡ್ ಫೋಲ್ಡರ್‌ನಲ್ಲಿ ಹಾಕುತ್ತೀರಿ. ಹಾಗೆಯೇ ಒಂದು ಪ್ರಬಂಧಕ್ಕಿಂತ ಹೆಚ್ಚು ಪ್ರಬಂಧಗಳನ್ನಾಗಲಿ , ಚಿತ್ರಗಳನ್ನಾಗಲ್ಲಿ, ಹೊಂದಿದ್ದರೆ, ಎಲ್ಲಾ ಪ್ರಬಂಧಗಳಿಗೆ ಒಂದು ಫೋಲ್ಡರ್ ಮತ್ತು ಎಲ್ಲಾ ಚಿತ್ರಗಳಿಗೆ ಇನ್ನೊಂದು ಫೋಲ್ಡರ್‌ ಹೊಂದಿರುತ್ತೀರಿ ಅಲ್ಲವೇ ? ಗಣಕಯಂತ್ರದಲ್ಲಿ ಈ ರೀತಿ ವ್ಯವಸ್ಥೆಗೆ ನೀವು ಏನು ಮಾಡುತ್ತೀರಿ? ಕಾಗದ ಪತ್ರಗಳನ್ನು ಶೇಖರಿಸುವ ಹಾಗೆ ಇಲ್ಲಿ ಮಾಡುಬಹುದೆ ? ಹೌದು ಖಂಡಿತವಾಗಿ. ನೀವು ಗಣಕಯಂತ್ರದಲ್ಲಿ ಏನೇನು ಮಾಡಿರುತ್ತೀರೊ ಅದೆಲ್ಲವನ್ನು ಒಂದೇ ಕಡತದಲ್ಲಿ ಶೇಖರಿಸಿಡಬಹುದು. ಪ್ರತಿಯೊಂದು ಕಾರ್ಯಕ್ರಮದ ದೃಶ್ಯಾವಳಿ , ಹಾಡು ಮತ್ತು ದಾಖಲೆಗಳನ್ನು ಕಡತವಾಗಿ ಶೇಖರಿಸಿಡಬಹುದು. ಒಂದು ಫೋಲ್ಡರ್‌ನಲ್ಲಿ ಈ ರೀತಿಯ ಅನೇಕ ಕಡತಗಳನ್ನು ಹಾಕಬಹುದು. ಫೋಲ್ಡರ್‌ಗಳಲ್ಲಿ ಇತರೆ ಫೋಲ್ಡರ್‌ಗಳನ್ನೂ ಸಹ ಹಾಕಬಹುದು, ಇವುಗಳನ್ನು ಉಪ-ಫೋಲ್ಡರ್‌ಗಳೆಂದು ಕರೆಯುತ್ತಾರೆ. ಫೋಲ್ಡರ್‌ಗಳನ್ನು " ಡೈರೆಕ್ಟರೀಸ್‌ಗಳು" ಎಂದೂ ಸಹ ಕರೆಯುತ್ತಾರೆ. ಗಣಕಯಂತ್ರದಲ್ಲಿ ಕಡತ ಮತ್ತು ಫೋಲ್ಡರ್‌ಗಳನ್ನು ಎಲ್ಲಿ ಶೇಖರಿಸಿಟ್ಟಿರುತ್ತಾರೆ ನಿಮಗೆ ಗೊತ್ತೇ? ಇವುಗಳನ್ನು ಡಿಸ್ಕ್ ನಲ್ಲಿ ಶೇಖರಿಸಿರುತ್ತಾರೆ. (ನೀವು ಹಾರ್ಡ್ ವೇರ್ ಅಧ್ಯಾಯದಲ್ಲಿ ಕಲಿತಿರುವ ಹಾರ್ಡ್ ಡಿಸ್ಕ್ , ಪೆನ್ ಡ್ರೈವ್, ಸಿಡಿಗಳ ಬಗ್ಗೆ ನೆನಪಿಸಿಕೊಳ್ಳಿ).

ಈ ಎಲ್ಲಾ ಕಡತಗಳನ್ನು ಮತ್ತು ಫೋಲ್ಡರ್‌ಗಳನ್ನು ನಿರ್ವಹಣೆ ಮಾಡಲು ನಮಗೆ ಒಂದು ಫೈಲ್ ಮ್ಯಾನೇಜರ್ ಬೇಕಾಗುತ್ತದೆ. (ಇದನ್ನು ಫೈಲ್ ಬ್ರೌಸರ್‌ ಎಂದೂ ಸಹ ಕರೆಯುತ್ತಾರೆ). ಫೈಲ್ ಮ್ಯಾನೇಜರ್ ಅಥವಾ ಫೈಲ್ ಬ್ರೌಸರ್ ಗಣಕಯಂತ್ರದ ಕಾರ್ಯಯೋಜನೆಯಾಗಿದ್ದು ಇದು ಕಡತಗಳೊಂದಿಗೆ ಕೆಲಸ ಮಾಡಲು user interface ಅನ್ನು ಒದಗಿಸುತ್ತದೆ. ವಿಂಡೋಸ್ ಬಳಸುವ ಫೈಲ್ ಮ್ಯಾನೇಜರ್ ಅನ್ನು ವಿಂಡೋಸ್ ಎಕ್ಸ್ ಫ್ಲೋರರ್‌ ಎನ್ನುತ್ತಾರೆ ಮತ್ತು ಉಬಂಟುವಿನಲ್ಲಿ ಬಳಸುವ ಫೈಲ್ ಮ್ಯಾನೇಜರ್ / ಬ್ರೌಸರ್‌ ಅನ್ನು ನಾಟಿಲಸ್ (Nautilus) ಎನ್ನುತ್ತೇವೆ.

Ubuntu basic four.png