ಲಿಟ್ಮಸ್ ಕಾಗದದೊಂದಿಗೆ ಆಮ್ಲ ಮತ್ತು ಪ್ರತ್ಯಾಮ್ಲಗಳ ವರ್ತನೆ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಲಿಟ್ಮಸ್ ಕಾಗದದೊಂದಿಗೆ ಆಮ್ಲ ಮತ್ತು ಪ್ರತ್ಯಾಮ್ಲಗಳ ವರ್ತನೆ

ಅಂದಾಜು ಸಮಯ

40 min

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ನಿಂಬೆ ಹಣ್ಣು,
ಟೊಮೋಟೊ,
ಬೀಕರ್ ಗಳು,
ಗಾಜಿನ ಕಡ್ಡಿಗಳು,
ಕೆಂಪು ಮತ್ತು ನೀಲಿ ಲಿಟ್ಮಸ್ ಕಾಗದಗಳು,
ಸುಣ್ಣದತಿಳಿನೀರು,
ಸೋಪಿನ ದ್ರಾವಣ.

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಪ್ರಯೋಗವನ್ನು ಮಾಡುವಾಗ ಏಪ್ರಾನ್ ಧರಿಸಿರಬೇಕು.
ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ಬರಿಗೈಯಿಂದ ಮುಟ್ಟಬಾರದು.ಸಾಧ್ಯವಾದಷ್ಟು ನಿತ್ಯ ಜೀವನದಲ್ಲಿ ಬಳಸುವ ವಸ್ತುಗಳನ್ನು ಬಳಸಿದರೆ ಸೂಕ್ತ.

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  • ಮೊದಲಿಗೆ ನಿಂಬೆಹಣ್ಣಿನ ರಸವನ್ನ ಒಂದು ಬೀಕರಿನಲ್ಲಿ ಸಂಗ್ರಹಿಸಬೇಕು ಇದರಲ್ಲಿ ಸಿಟ್ರಿಕ್ ಆಮ್ಲವಿದೆ
  • ಮತ್ತೊಂದು ಬೀಕರಿನಲ್ಲಿ ಟೊಮಾಟೊ ಹಣ್ಣಿನ ರಸವನ್ನು ಸಂಗ್ರಹಿಸಬೇಕು , ಇದರಲ್ಲಿ ಆಗ್ಸೊಲಿಕ್ ಆಮ್ಲವಿದೆ .
  • ಕೆಂಪು ಮತ್ತು ನೀಲಿ ಲಿಟ್ಮಸ್ ಕಾಗದಗಳನ್ನ ಜೊತೆ ಜೊತೆಯಾಗಿ ನಾಲ್ಕು ಜೋಡಿಗಳಾಗಿ ಜೋಡಿಸಬೇಕು.
  • ಪ್ರತಿಯೊಂದು ಜೋಡಿಗು ನಾವು ಮಾಡಿಕೊಂಡಿರುವಂತಹ ದ್ರಾವಣಗಳನ್ನ ಹಾಕಿ ನೋಡಬೇಕು
  • ಮೊದಲಿಗೆ ನಿಂಬೆಹಣ್ಣಿನ ರಸವನ್ನು ಒಂದು ಹನಿ ಕೆಂಪು ಲಿಟ್ಮಸ್ ಕಾಗದ ಮೇಲೆ ಹಾಕಿ ಹಾಗು ನೀಲಿ ಬಣ್ಣದ ಲಿಟ್ಮಸ್ ಕಾಗದ ಮೇಲೆ ಹಾಕಿ ಆಗುವ ಬದಲಾವಣೆಯನ್ನು ವೀಕ್ಷಿಸಿ .
  • ತಯಾರಿಮಾಡಿಕೊಂದಿರುವ ಟೊಮಾಟೊ ರಸವನ್ನು ಮತ್ತೊಂದು ಲಿಟ್ಮಸ್ ಕಾಗದ ಜೋಡಿಯ ಮೇಲೆ ಹಾಕಿ ಬದಲಾವಣೆಯನ್ನು ವೀಕ್ಷಿಸಿ
  • ಸುಣ್ಣದತಿಳಿನೀರು ಮೂರನೆ ಲಿಟ್ಮಸ್ ಕಾಗದ ಜೋಡಿಯ ಮೇಲೆ ಹಾಕಿ ಬದಲಾವಣೆಯನ್ನು ವೀಕ್ಷಿಸಿ.
  • ಸೋಪಿನ ದ್ರಾವಣವನ್ನು ನಾಲ್ಕನೆಯ ಲಿಟ್ಮಸ್ ಕಾಗದ ಜೋಡಿಯ ಮೇಲೆ ಹಾಕಿ ಬದಲಾವಣೆಯನ್ನು ವೀಕ್ಷಿಸಿ.

ವೀಕ್ಷಣೆ - ಮೊದಲನೆಯ ಮತ್ತು ಎರಡನೆಯ ಲಿಟ್ಮಸ್ ಕಾಗದ ಜೋಡಿಗಳಲ್ಲಿ ನೀಲಿ ಬಣ್ಣದ ಲಿಟ್ಮಸ್ ಕಾಗದವು ಕೆಂಪಾಗಿ ಬದಲಾಗುತ್ತದೆ.
ಮೂರನೆಯ ಮತ್ತು ನಲ್ಕನೆಯ ಲಿಟ್ಮಸ್ ಕಾಗದ ಜೋಡಿಗಳಲ್ಲಿ ಕೆಂಪು ಬಣ್ಣದ ಲಿಟ್ಮಸ್ ಕಾಗದವು ನೀಲಿಯಾಗಿ ಬದಲಾಗುತ್ತದೆ.

ತೀರ್ಮಾನ- ನೀಲಿ ಬಣ್ಣದ ಲಿಟ್ಮಸ್ ಕಾಗದವು ಕೆಂಪಾಗಿ ಬದಲಾಗುವುದನ್ನು ನಾವು ಆಮ್ಲ ವೆಂದು ತೀರ್ಮನಿಸಬಹುದು ಹಾಗು ಕೆಂಪು ಬಣ್ಣದ ಲಿಟ್ಮಸ್ ಕಾಗದವು ನೀಲಿಯಾಗಿ ಬದಲಾಗುವುದನ್ನು ನವು ಪ್ರತ್ಯಮ್ಲ ವೆಂದು ತೀರ್ಮನಿಸಬಹುದು
ಯವುದೆ ದ್ರವ್ಯಗಳನ್ನ ನಾವು ಆಮ್ಲ ಮತ್ತು ಪ್ರತ್ಯಮ್ಲ ವೆಂದು ಗುರುತಿಸಲು ಲಿಟ್ಮಸ್ ಕಾಗದಗಳನ್ನು ಬಳಸಿ ತೀರ್ಮನಿಸಬಹುದು.

{{#ev:youtube|tvP_ahZicuA| 500|left }}


ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್