ಐಸಿಟಿ ವಿದ್ಯಾರ್ಥಿ ಪಠ್ಯ/ಶಬ್ದಕೋಶವನ್ನು ಕಟ್ಟಲು ಕನಾಗ್ರಾಮ್‌

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
(ICT student textbook/Help build your vocabulary with Kanagram ಇಂದ ಪುನರ್ನಿರ್ದೇಶಿತ)
Jump to navigation Jump to search

English

ಐಸಿಟಿ ವಿದ್ಯಾರ್ಥಿ ಪಠ್ಯ
ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 1ರ ತಪಶೀಲ ಪಟ್ಟಿ ಶಬ್ದಕೋಶವನ್ನು ಕಟ್ಟಲು ಕನಾಗ್ರಾಮ್‌ ಜಿಯೋಜಿಬ್ರಾದೊಂದಿಗೆ ೧ನೇ ಹಂತದ ಗಣಿತವನ್ನು ಅನ್ವೇಷಿಸಿ

Jumbling the word
In this activity, you will play 'jumbled' word game, and identify meaningful words from a jumble of the letters. You will also create simple word lists for a category of words.

ಉದ್ದೇಶಗಳು

  1. ನಿಮ್ಮ ಮತ್ತು ನಿಮ್ಮ ಸ್ನೇಹಿತರ ಪದ ಭಂಡಾರವನ್ನು ಪರೀಕ್ಷಿಸಲು ಶಬ್ದ ಪಟ್ಟಿಗಳೊಂದಿಗೆ ಆಟ
  2. ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಉಪಕರಣದೊಂದಿಗೆ ಹೊಸ ಪದ ಭಂಡಾರಗಳನ್ನು ನಿರ್ಮಿಸಿ

ಮುಂಚೆಯೇ ಇರಬೇಕಾದ ಕೌಶಲಗಳು

  1. ಐ.ಸಿ.ಟಿ ಪರಿಕರಗಳ ಬಳಕೆ

ನಿಮಗೆ ಯಾವ ಸಂಪನ್ಮೂಲಗಳು ಬೇಕಿವೆ

  1. ಕೆಲಸ ಮಾಡುತ್ತಿರುವ ಪ್ರಯೋಗಾಲಯ ಹಾಗು ಪ್ರೊಜೆಕ್ಟರ್‌
  2. ಉಬುಂಟು ಹೊಂದಿರುವ ಕಂಪ್ಯೂಟರ್‌
  3. ಉಬುಂಟು ಕೈಪಿಡಿ
  4. ಲಿಬ್ರೆ ಆಫೀಸ್‌ ಕೈಪಿಡಿ
  5. ಕನಾಗ್ರಾಮ್‌ ಕೈಪಿಡಿ

ನೀವು ಯಾವ ಕೌಶಲಗಳನ್ನು ಕಲಿಯುವಿರಿ

  1. ಶೈಕ್ಷಣಿಕ ತಂತ್ರಾಂಶ ಅನ್ವಯಕಗಳಲ್ಲಿ ಸಂಚರಣೆ
  2. ಇಂಗ್ಲೀಷ್‌ ಹಾಗು ಕನ್ನಡದಲ್ಲಿ ವಿವಿಧ ಪದಗಳ ವರ್ಗಗಳಿಗೆ ಪದಭಂಡಾರ ಪಟ್ಟಿಗಳನ್ನು ಸೃಷ್ಟಿಸುವುದು.

ವಿವರವಾದ ಹಂತಗಳೊಂದಿಗೆ ಚಟುವಟಿಕೆಯ ವಿವರಣೆ

ಶಿಕ್ಷಕರ ನೇತೃತ್ವದ ಚಟುವಟಿಕೆ

  1. ನಿಮ್ಮ ಶಿಕ್ಷಕರು ಕನಗ್ರಾಮ್ ಅನ್ನು ಹೇಗೆ ಬಳಸಬೇಕು ಮತ್ತು ಹೇಗೆ ಮಿಶ್ರಣಮಾಡಿದ ಪದವನ್ನು ಸರಿಯಾಗಿ ಊಹಿಸುವುದು ಎಂಬುದನ್ನು ತೋರಿಸುತ್ತದೆ.
  2. ಪದ ವರ್ಗಕ್ಕೆ ಪದಭಂಡಾರದ ಪಟ್ಟಿಯನ್ನು ನೀವು ಹೇಗೆ ರಚಿಸಬಹುದು ಮತ್ತು ಪ್ರತಿ ಪದಕ್ಕೂ 'ಸುಳಿವನ್ನು' ಹೇಗೆ ಒದಗಿಸಬಹುದು ಎಂಬುದನ್ನು ಅವರು ತೋರಿಸುತ್ತಾರೆ.

ವಿದ್ಯಾರ್ಥಿ ಚಟುವಟಿಕೆಗಳು

  1. ನಿರ್ದಿಷ್ಟ ವಸ್ತು ಸಂಗ್ರಹಕ್ಕಾಗಿ ನಿಮ್ಮ ಪದಭಂಡಾರವನ್ನು ಪರಿಶೀಲಿಸಲು ನೀವು ಕನಾಗ್ರಾಮ್‌ನೊಂದಿಗೆ ಕೆಲಸ ಮಾಡಬಹುದು
  2. ನೀವು ಕರ್ನಾಟಕದ ಉತ್ಸವಗಳು, ನೀರಿನ ಸೆಲೆಗಳು, ಸಸ್ಯಗಳು, ತರಕಾರಿಗಳು, ಹೂವುಗಳು, ಜಿಲ್ಲೆಗಳು, ತಾಲ್ಲೂಕುಗಳು ಇತ್ಯಾದಿಗಳಿಗೆ ಪದಭಂಡಾರ ಪಟ್ಟಿಯನ್ನು ರಚಿಸಬಹುದು.
  3. ನೀವು ಕವಿತೆಗೆ ಪದಭಂಡಾರವನ್ನು ರಚಿಸಬಹುದು. In the Bazaars of Hyderabad.
  4. ನೀವು ಕನ್ನಡ ಭಾಷೆಯಲ್ಲಿ ಒಂದು ಕವಿತೆಯ ಪದಭಂಡಾರವನ್ನು ರಚಿಸಬಹುದು

ಪೋರ್ಟ್‌ಪೋಲಿಯೋ

  1. ನೀವು ರಚಿಸಿದ ಪದಭಂಡಾರ ಪಟ್ಟಿಗಳು (ನೀವು ಇದನ್ನು ರಚಿಸಬಹುದು ಮತ್ತು ಪಠ್ಯ ದಸ್ತಾವೇಜಿನಲ್ಲಿ ಉಳಿಸಬಹುದು, ಕೋಷ್ಟಕ ರೂಪದಲ್ಲಿ, ಕೆಳಗಿನಂತೆ:
    1. ಪದಗಳ ವರ್ಗ (ಉದಾ. ಜಿಲ್ಲಾ ಹೆಸರುಗಳು)
    2. ಸರಿಯಾದ ಪದ (ಉದಾ ದಾವಣಗೆರೆ)
    3. ತಿರುಚಿದ ಪದ (ಉದಾ. ರೆಗೆವದಾಣ)
    4. ಸುಳಿವು (ಬೆಣ್ಣೆ ದೋಸೆಯ ಊರು)