ಚಕ್ರೀಯ ಚತುರ್ಭುಜಗಳು
(ಆವರ್ತಕ ಚತುರ್ಭುಜಗಳು ಇಂದ ಪುನರ್ನಿರ್ದೇಶಿತ)
Jump to navigation
Jump to search
ಉದ್ದೇಶಗಳು
- ಚಕ್ರೀಯ ಚತುರ್ಭುಜಗಳ ಬಗ್ಗೆ ಅರ್ಥಮಾಡಿಕೊಳ್ಳುವುದು
- ಅಭಿಮುಖ ಕೋನಗಳು ಪೂರಕವಾಗಿದ್ದರೆ ಮಾತ್ರ ಚತುರ್ಭುಜವು ಚಕ್ರೀಯ ವಾಗಿದೆ ಎಂದು ಊಹಿಸಲು ಸಾಧ್ಯವಾಗುತ್ತದೆ
ಅಂದಾಜು ಸಮಯ
30 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಡಿಜಿಟಲ್ ಅಲ್ಲದ: ಕಾಗದ, ಪೆನ್ಸಿಲ್, ದಿಕ್ಸೂಚಿ, ಅಳತೆಪಟ್ಟಿ, ಕೋನಮಾಪಕ
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ಶೃಂಗಗಳು, ರೇಖಾಖಂಡಗಳು, ಕೋನಗಳು, ವೃತ್ತಗಳು, ಚತುರ್ಭುಜಗಳು ಮತ್ತು ಅದರ ವಿಧಗಳು ಹಾಗಳ ಪೂರಕ ಕೋನಗಳ ಬಗ್ಗೆ ಪೂರ್ವ ಜ್ಞಾನ
ಬಹುಮಾಧ್ಯಮ ಸಂಪನ್ಮೂಲಗಳು
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಕೇಂದ್ರ O ದಿಂದ ವೃತ್ತವನ್ನು ಎಳೆಯಿರಿ.
- ವೃತ್ತದ ಪರಿಧಿಯ ಮೇಲೆ A, B, C, D ನಾಲ್ಕು ಬಿಂದುಗಳನ್ನು ತೆಗೆದುಕೊಳ್ಳಿ.
- ವೃತ್ತದ ಮೇಲೆ AB, BC, CD, DA ಯನ್ನು ಸೇರಿಸಿ.
- ವೃತ್ತದಲ್ಲಿನ ಚತುರ್ಭುಜವನ್ನು ಗುರುತಿಸಿ
- ಈ ರೀತಿಯ ಚತುರ್ಭುಜಗಳಿಗೆ ನೀವು ಏನು ಕರೆದಿದ್ದೀರಿ?
- ಚಕ್ರೀಯ ಚತುರ್ಭುಜಗಳು ಎಂದರೇನು?
- ಚಕ್ರೀಯ ಚತುರ್ಭುಜಗಳಲ್ಲಿನ ಕೋನಗಳನ್ನು ಗುರುತಿಸಿ ಮತ್ತು ಅಳೆಯಿರಿ?
- ಚಕ್ರೀಯ ಚತುರ್ಭುಜಗಳಲ್ಲಿ ಒಂದು ಜೋಡಿ ಅಭಿಮುಖ ಕೋನಗಳನ್ನು ಗುರುತಿಸಿ?
- ಚಕ್ರೀಯ ಚತುರ್ಭುಜದ ಅಭಿಮುಖ ಕೋನಗಳ ಮೊತ್ತ ಎಷ್ಟು? ನಿಮ್ಮ ತೀರ್ಮಾನವೇನು?
ಕ್ರಮ ಸಂಖ್ಯೆ | ಚತುರ್ಭುಜ | ಕೋನಗಳು | ಜೋಡಿ ಅಭಿಮುಖ ಕೋನಗಳು 1 | ಜೋಡಿ ಅಭಿಮುಖ ಕೋನಗಳು 2 | ಅಭಿಮುಖ ಕೋನಗಳು1 ರ ಮೊತ್ತ | ಜೋಡಿ ಅಭಿಮುಖ ಕೋನಗಳು 2 ರ ಮೊತ್ತ | ನಿರ್ಣಯ/ತೀರ್ಮಾನ | |||
1 | 2 | 3 | 4 | |||||||
1 |
ಮೌಲ್ಯ ನಿರ್ಣಯ ಪ್ರಶ್ನೆಗಳು
- ಚಕ್ರೀಯ ಚತುರ್ಭುಜದ ಒಂದು ಕೋನವು 30 ಡಿಗ್ರಿ ಆಗಿದ್ದರೆ, ಅದರ ಅಭಿಮುಖ ಕೋನದ ಮೌಲ್ಯ ಏನು?
- ಕೋನ B 60 ಡಿಗ್ರಿ ಆಗಿದ್ದರೆ, ಚಕ್ರೀಯ ಚತುರ್ಭುಜದ ಕೋನ D ಮೌಲ್ಯವನ್ನು ಕಂಡುಹಿಡಿಯಿರಿ?