ಕರ್ನಾಟಕ ಪ್ರಾಕೃತಿಕ ವಿಭಾಗಗಳು ಮೈದಾನಗಳು
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಚಿತ್ರ:Karnataka Prakrutika Vibhagagalu - Maidanagalu.mm
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಪ್ರಮುಖ ಪರಿಕಲ್ಪನೆಗಳು #1
ಮೈದಾನ ಪ್ರದೇಶ
ಕರ್ನಾಟಕದ ಮೈದಾನ ಪ್ರದೇಶಗಳಲ್ಲಿ ಎರಡು ವಿಧಗಳು
- ಉತ್ತರದ ಮೈದಾನ(ಜಿಲ್ಲೆಗಳು ;ಬೀದರ್,ಬಿಜಾಪುರ,ಗುಲ್ಬರ್ಗ,ಯಾದಗಿರಿ,ಗದಗ,ಕೊಪ್ಪಳ,ರಾಯಚೂರ,ಬಳ್ಳಾರಿ,ಹಾವೇರಿ,ಬಾಗಲಕೋಟೆ,ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯ ಕೆಲಭಾಗಗಳು.)
- ದಕ್ಷಿಣದ ಮೈದಾನ:(ಜಿಲ್ಲೆಗಳು ;ದಾವಣಗೆರೆ,ಚಿತ್ರದುರ್ಗ,ತುಮಕೂರು,ಕೋಲಾರ,ಚಿಕ್ಕ ಬಳ್ಳಾಪೂರ,ಮಂಡ್ಯ,ಮೈಸೂರು,ಚಾಮರಾಜ ನಗರ.)
ಕಲಿಕೆಯ ಉದ್ದೇಶಗಳು
- ಕರ್ನಾಟಕದ ಮೈದಾನ ಪ್ರದೇಶದ ವಿಸ್ತೀರ್ಣ,ಸ್ವರೂಪ ಮತ್ತು ಲಕ್ಷಣಗಳನ್ನು ತಿಳಿಯುವದು.
- ಕರ್ನಾಟಕದ ಮೈದಾನ ಪ್ರದೇಶದ ವಿಭಾಗಗಳನ್ನು ಅರಿಯುವರು.
- ಮೈದಾನ ಪ್ರದೇಶದ ಬೆಟ್ಟಗುಡ್ಡಗಳು,ನದಿಗಳು,ಜಿಲ್ಲೆಗಳನ್ನು ಮತ್ತು ಜಲಪಾತಗಳನ್ನು ನಕ್ಷೆಯಲ್ಲಿ ಗುರುತಿಸುವದು.
- ಮೈದಾನ ಪ್ರದೇಶಗಳ ವೃತ್ತಿ ಮತ್ತು ಬೆಳೆಗಳ ಬಗ್ಗೆ ತಿಳಿಯುವುದು.
- ಉತ್ತರದ ಮೈದಾನ ಮತ್ತು ದಕ್ಷಿಣದ ಮೈದಾನಗಳ ವ್ಯತ್ಯಾಸಗಳನ್ನು ಪಟ್ಟಿ ಮಾಡುವುದು.
- ಮೇಲಿನ ಅಂಶಗಳನ್ನು ತಮ್ಮ ಪ್ರದೇಶದೊಂದಿಗೆ ಹೋಲಿಸುವುದು.
ಶಿಕ್ಷಕರ ಟಿಪ್ಪಣಿ
ಮೈದಾನ ಪ್ರದೇಶದ ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದ ಇತರ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮೈದಾನ ಪ್ರದೇಶಗಳ ಭೌಗೋಳಿಕ ಲಕ್ಷಣಗಳು,ವೃತ್ತಿಗಳು,ಬೆಳೆಗಳು,ಜನರ ಜೀವನ ವಿಧಾನ ,ಸಂಸ್ಕೃತಿ ಇತ್ಯಾದಿಗಳು ಹೊಸದಾಗಿರುತ್ತವೆ.ಕಾರಣ ಶಿಕ್ಷಕರು ಚಿತ್ರಗಳು.ವಿಡಿಯೋಗಳು ಹಾಗೂ ಚರ್ಚೆಯ ಮೂಲಕ ಸ್ಥಳೀಯ ಸನ್ನಿವೇಶಗಳ ಹೋಲಿಕೆಗಳು ಮತ್ತು ವ್ಯತ್ಯಾಸಗಳ ಬಗ್ಗೆ ತಿಳಿಸುವುದು.
ಚಟುವಟಿಕೆಗಳು #1
ಕಲಿಕಾ ನಿಲ್ದಾಣ ಚಟು ವಟಿಕೆ ಮೈದಾನ ಪ್ರದೇಶದ ವಿವಿಧ ಅಂಶಗಳ ಬಗ್ಗೆ ೫-೬ ಕಲಿಕಾ ನಿಲ್ದಾಣಗಳನ್ನು ರೂಪಿಸುವುದು
- ಅಂದಾಜು ಸಮಯ- ೪೦ ನಿಮಿಷ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಚಿತ್ರಗಳು,ವಿಡಿಯೋಗಳು
- ಪೂರ್ವಾಪೇಕ್ಷಿತ/ಸೂಚನೆಗಳು,ಇದ್ದರೆ
- ಗುಂಪು ಚರ್ಚೆಯಲ್ಲಿ ಇರುವ ಚಿತ್ರಗಳನ್ನು ಮತ್ತು ಮಾಹಿತಿಗಳನ್ನು ಗಮನವಿಟ್ಟು ವೀಕ್ಷಿಸುವುದು ಗಮನಿಸಿದ ಅಂಶಗಳನ್ನುಟಿಪ್ಪಣಿ ಮಾಡುವುದು ಚರ್ಚೆ ವಿಷಯಾಂತರವಾಗದಿರಲಿ.
- ಬಹುಮಾಧ್ಯಮ ಸಂಪನ್ಮೂಲಗಳು-ಗಣಕಯಂತ್ರ,ಪ್ರೊಜೆಕ್ಟರ್
- ಪ್ರಸಕ್ತ ಸ್ಥಳೀಯ ಸಂಪರ್ಕಗಳು-ಜನರು,ಸ್ಥಳಗಳು ಮತ್ತು ವಸ್ತುಗಳು,ಸ್ಥಳೀಯ ವೃತ್ತಿಗಳ ಹಾಗೂ ಬೆಳೆಗಳ ಪಟ್ಟಿ
- ಅಂತರ್ಜಾಲದ ಸಹವರ್ತನೆಗಳು-ಮೊದಲೇ ಸಂಗ್ರಹಿಸಿದ ಲಿಂಕ್ ಗಳ ಬಳಕೆ
- ವಿಧಾನ
- ಚರ್ಚೆಯ ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಪ್ರಾದೇಶಿಕ ಲಕ್ಷಣಗಳು,ಬೆಳೆಗಳು,ವೃತ್ತಿಗಳ,ವಾಯುಗುಣ,ಸಾರಿಗೆ,ಸಂಸ್ಕೃತಿಗಳ ಬಗೆಗಿರುವ ಪೂರ್ವಜ್ಞಾನವನ್ನು ಪ್ರಶ್ನೆಗಳ ಮೂಲಕ ಪರೀಕ್ಷಿಸುವುದು. ನಂತರ ಪಠ್ಯಾಧಾರಿತವಾಗಿ ಕೆಳಗಿನ ಅಂಶಗಳ ಬಗ್ಗೆ ಚರ್ಚಿಸುವುದು.ಅಂಶಗಳ ಬಗ್ಗೆ ೫-೬ ಕಲಿಕಾ ನಿಲ್ದಾಣಗಳನ್ನು ರೂಪಿಸುವುದು.
- ಚಿತ್ರಗಳನ್ನು ಮತ್ತು ಮಾಹಿತಿಗಳನ್ನು ಗಮನವಿಟ್ಟು ವೀಕ್ಷಿಸುವುದು,ಗಮನಿಸಿದ ಅಂಶಗಳನ್ನು ಟಿಪ್ಪಣಿ ಮಾಡುವಂತೆ ಸೂಚಿಸುವುದು.
- ವಿದ್ಯಾರ್ಥಿಗಳನ್ನು ೪-೫ ಗುಂಪುಗಳಾಗಿ ವಿಂಗಡಿಸುವುದು.
- ಒಂದೊಂದು ಗುಂಪಿಗೆ ಒಂದೊಂದು
- ವಿಷಯವನ್ನು ಚರ್ಚಿಸಲು ಸೂಚಿಸುವುದು. ಉದಾ :
- ಮೈದಾನ ಪ್ರದೇಶಗಳ ಭೌಗೋಳಿಕ ಲಕ್ಷಣಗಳು
- ಉತ್ತರದ ಮೈದಾನ ಪ್ರದೇಶಗಳ-ಭೂಸ್ವರೂಪಗಳು,ಸಸ್ಯವರ್ಗ,ಬೆಳೆಗಳು,ನದಿಗಳು,ಜಲಪಾತಗಳು ಮತ್ತು ಉತ್ತರದ ಮೈದಾನ ಪ್ರದೇಶಗಳ ಜಿಲ್ಲೆಗಳು
- ದಕ್ಷಿಣದ ಮೈದಾನ ಪ್ರದೇಶಗಳ-ಭೂಸ್ವರೂಪಗಳು,ಸಸ್ಯವರ್ಗ,ಬೆಳೆಗಳು,ನದಿಗಳು,ಜಲಪಾತಗಳು ಮತ್ತು ದಕ್ಷಿಣದ ಮೈದಾನ ಪ್ರದೇಶಗಳ ಜಿಲ್ಲೆಗಳು
ಈ ಮೇಲಿನ ಅಂಶಗಳನ್ನು ಮತ್ತು ಸ್ಥಳೀಯ ಅಂಶಗಳನ್ನು ಹೋಲಿಸು ವುದು.
- ವಿದ್ಯಾರ್ಥಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು.
- ವಿದ್ಯಾರ್ಥಿಗಳ ಮಂಡನೆಯನ್ನುಅವಲೋಕಿಸಿ ಶಿಕ್ಷಕರು ತಮ್ಮ ವಿವರಣೆಯನ್ನು ನೀಡುವುದರ ಮೂಲಕ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸುವುದು.
- ವಿದ್ಯಾರ್ಥಿಗಳು ಚರ್ಚಿಸಲು ಅನುಕೂಲವಾಗಲು ಪ್ರಶ್ನೆಗಳ ಪಟ್ಟಿಯನ್ನು ಒದಗಿಸುವುದು.
- ಅಗತ್ಯವಾದ ಹಿಮ್ಮಾಹಿತಿ ನೀಡುವುದು.
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ನೀವಿರು ವ ಪ್ರದೇಶ ಯಾವ ಜಿಲ್ಲೆಯಲ್ಲಿ ದೆ ?
- ಮಲೆನಾಡಿನ ಯಾವ ದಿಕ್ಕಿಗೆ ಮೈದಾನ ಪ್ರದೇಶವಿದೆ ?
- ಮೈದಾನ ಪ್ರದೇಶದಲ್ಲಿ ಯಾವ ನದಿಗಳ ಜಲಾನಯನ ಪ್ರದೇಶವಿದೆ ?
- ಮೈದಾನ ಪ್ರದೇಶಗಳನ್ನು ಎಷ್ಟು ಭಾಗಗಳಾಗಿ ವಿಂಗಡಿಸಲಾಗಿದೆ ?
- ಉತ್ತರದ ಮೈದಾನಗಳ ಪ್ರಸಿದ್ಧ ಜಲಪಾತಗಳಾವುವು ?
- ಉತ್ತರದ ಮೈದಾನಗಳ ಜಿಲ್ಲೆಗಳನ್ನು ಹೆಸರಿಸಿ .
- ಉತ್ತರದ ಮೈದಾನಗಳನ್ನು ಬಿಸಿಲನಾಡು ಎಂದು ಏಕೆ ಕರೆಯು ತ್ತಾರೆ?
- ದಕ್ಷಿಣದ ಮೈದಾನದಲ್ಲಿ ಹೆಚ್ಚಾಗಿ ಕಂಡು ಬರು ವ ಮಣ್ಣು ಯಾವುದು ?
- ಏಷ್ಯಾ ಖಂಡದಲ್ಲಿರು ಅತಿ ದೊಡ್ಡ ಏಕಶಿಲಾ ಬೆಟ್ಟ ಯಾವುದು ?
- ದಕ್ಷಿಣದ ಮೈದಾನದಲ್ಲಿ ಕಂಡು ಬರು ವ ಬೆಟ್ಟಗಳಾವುವು ?
- ಮಳೆ ನೆರಳಿನ ಪ್ರದೇಶ ಎಂದರೇನು ?
- ದಕ್ಷಿಣದ ಮೈದಾನದಲ್ಲಿರು ವನದಿಗಳನ್ನು ಹೆಸರಿಸಿ.
- ದಕ್ಷಿಣದ ಮೈದಾನದ ಬೆಳೆಗಳನ್ನು ಹೆಸರಿಸಿ.
- ದಕ್ಷಿಣದ ಮೈದಾನದ ಜಿಲ್ಲೆಗಳನ್ನು ಹೆಸರಿಸಿ.
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಚರ್ಚಿಸು ವಾಗ ಈ ಕೆಳಗಿನ ಅಂಶಗಳನ್ನಾಧರಿಸಿ ವಿದ್ಯಾರ್ಥಿಗಳ ವಿಷಯ ಗ್ರಹಿಕೆ ಸ್ವಯಂ ಕಲಿಕಾ ಸಾಮರ್ಥ್ಯ ವನ್ನು ಅವಲೋಕಿಸು ವುದು .
ವಿಷಯ ಮಂಡನೆ
ತೊಡಗಿಸಿಕೊಳ್ಳುವಿಕೆ
ವಿಷಯದ ಬಗ್ಗೆ ಪೂ ರ್ವ ಜ್ಞಾನ
ಸ್ಥಳೀಯ ಅಂಶಗಳ ಬಗೆಗಿನ ಜ್ಞಾನ
- ಪ್ರಶ್ನೆಗಳು
- ಉತ್ತರದ ಮೈದಾನಗಳಲ್ಲಿ ಬಿಸಿಲು ಹೆಚ್ಚಾಗಿರಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿ.
- ಕಡಿಮೆ ಮಳೆ ವ್ಯವಸಾಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ?ಉದಾಹರಣೆ ಕೊಡಿ.
- ದಕ್ಷಿಣದ ಮೈದಾನಗಳು ಏಕೆ ಮಳೆ ನೆರಳಿನ ಪ್ರದೇಶಗಳಾಗಿವೆ?
- ದಕ್ಷಿಣದ ಮೈದಾನ ಮತ್ತು ಉತ್ತರದ ಮೈದಾನಗಳಿಗೆ ಏನು ವ್ಯತ್ಯಾಸಗಳಿವೆ ?
ಚಟುವಟಿಕೆಗಳು #2. ಕರ್ನಾಟಕದ ಪ್ರಾಕೃತಿಕ ನಕ್ಷೆಯಲ್ಲಿ ಮೈದಾನ ಪ್ರದೇಶಗಳ ಬೆಟ್ಟಗುಡ್ಡ, ಜಲಪಾತಗಳುಹಾಗೂ ನದಿಗಳನ್ನು ಗುರುತಿಸುವುದು
- ಅಂದಾಜು ಸಮಯ :- ೧-೨ ದಿನ
- ಬೇಕಾಗು ವ ಪದಾರ್ಥಗಳು ಅಥವ ಸಂಪನ್ಮೂ ಲಗಳು :ಕಾರ್ಡಶೀಟ್ ಗಳು , ಮಾರ್ಕರ್ /ಸ್ಕೆಚ್ ಪೆನ್
- ಪೂ ರ್ವಾಪೇಕ್ಷಿತ/ ಸೂ ಚ ನೆಗಳು , ಇದ್ದರೆ :ಕರ್ನಾಟಕದ ಪ್ರಾಕೃತಿಕ ನಕ್ಷೆಯನ್ನು ಗಮನವಿಟ್ಟು ವೀಕ್ಷಿಸು ವುದು .
- ಬಹು ಮಾಧ್ಯಮ ಸಂಪನ್ಮೂ ಲಗಳು :ಪ್ರೊಜೆಕ್ಟರ್ ,ಕರ್ನಾಟಕದ ಪ್ರಾಕೃತಿಕ ನಕ್ಷೆ
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು :ಕರ್ನಾಟಕದ ಪ್ರಾಕೃತಿಕ ನಕ್ಷೆಯ ಲಿಂಕ್
- ವಿಧಾನ:ಕರ್ನಾಟಕದ ಪ್ರಾಕೃತಿಕ ನಕ್ಷೆಯನ್ನು ಐದು ನಿಮಿಷಗಳ ಕಾಲ ವೀಕ್ಷಿಸಿ ಕೊಟ್ಟಿರು ವ ಕಾರ್ಡಶೀಟ್ನಲ್ಲಿ ಕರ್ನಾಟಕದ ನಕ್ಷೆ ರಚಿಸಿ,ಮೈದಾನ ಪ್ರದೇಶಗಳಲ್ಲಿ ರು ವ ಬೆಟ್ಟ ಗು ಡ್ಡ, ಜಲಪಾತಗಳು ಹಾಗೂ ನದಿಗಳನ್ನು ಗು ರು ತಿಸು ವುದು .
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು :
ಚಟುವಟಿಕೆಗಳು # 3
ಯಾವ ಬೆಳೆಗಳಿಗೆ ಯಾವ ಮಣ್ಣು ಸೂಕ್ತ? ಮತ್ತು ಏಕೆ? ಈ ಕುರಿತು ಮಾಹಿತಿ ಸಂಗ್ರಹಿಸಿ
- ಅಂದಾಜು ಸಮಯ:- ೧-೨ ದಿನ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:ಕಾರ್ಡಶೀಟ್ಗಳು,ಮಾರ್ಕರ್/ಸ್ಕೆಚ್ ಪೆನ್
- ಪೂರ್ವಾಪೇಕ್ಷಿತ/ಸೂಚನೆಗಳು,ಇದ್ದರೆ :
- ನಿಮ್ಮಊರಿನಲ್ಲಿರುವ ರೈತರನ್ನು ಸಂದರ್ಶಿಸಿ,ಮಾಹಿತಿ ಸಂಗ್ರಹಿಸಿ.
- ಅಂತರ್ಜಾಲ,ಗ್ರಂಥಾಲಯಗಳ ಮೂಲಕ ಮಾಹಿತಿ ಸಂಗ್ರಹಿಸಿ.
- ಬಹು ಮಾಧ್ಯಮ ಸಂಪನ್ಮೂಲಗಳು:ಪ್ರೊಜೆಕ್ಟರ್
- ಪ್ರಸಕ್ತ ಸ್ಥಳೀಯ ಸಂಪರ್ಕಗಳು-ಜನರು,ಸ್ಥಳಗಳು ಮತ್ತು ವಸ್ತುಗಳು:ಸ್ಥಳೀಯ ವ್ಯವಸಾಯ,ರೈತರು.
- ಅಂತರ್ಜಾಲದ ಸಹವರ್ತನೆಗಳು :ಅಗತ್ಯವಿದೆ .
- ವಿಧಾನ:ನಿಮ್ಮ ಊರಿನಲ್ಲಿರುವ ರೈತರನ್ನು ಸಂದರ್ಶಿಸಿ,ಮಾಹಿತಿ ಸಂಗ್ರಹಿಸಿ.ಅಂತರ್ಜಾಲ,ಗ್ರಂಥಾಲಯಗಳ ಮೂಲಕ ಮಾಹಿತಿ ಸಂಗ್ರಹಿಸಿ,ಕಾರ್ಡಶೀಟ್ ನಲ್ಲಿ ಪಟ್ಟಿ ಮಾಡುವುದು.
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:
- ನೀವಿರುವ ಪ್ರದೇಶದ ಬೆಳೆಗಳಾವವು?
- ವ್ಯವಸಾಯಕ್ಕೆ ಯಾವ ಅಂಶಗಳು ಅಗತ್ಯ?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು:---
- ನೀವು ವಾಸಿಸುವ ಸ್ಥಳ ಯಾವ ಬೆಳೆಗಳಿಗೆ ಪ್ರಸಿದ್ಧ?
- ನಿಮ್ಮ ಪ್ರದೇಶದಲ್ಲಿ ಕಂಡು ಬರುವ ಮಣ್ಣು ಯಾವುದು?
ಪರಿಕಲ್ಪನೆ #
ಕಲಿಕೆಯ ಉದ್ದೇಶಗಳು
ಶಿಕ್ಷಕರ ಟಿಪ್ಪಣಿ
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಯೋಜನೆಗಳು
ನೀವಿರುವ ಪ್ರದೇಶ ಯಾವ ಪ್ರಾಕೃತಿಕ ವಿಭಾಗದಲ್ಲಿ ಬರುತ್ತದೆ? ನಿಮ್ಮ ಪ್ರದೇಶದ ಭೂಸ್ವರೂಪಗಳು , ವಾಯುಗುಣ ,ಮಣ್ಣು,ಬೆಳೆಗಳು ,ಸಾರಿಗೆ ,ವೃತ್ತಿ,ಸಾಂಸ್ಕೃತಿಕ ಆಚರಣೆಗಳು ,ಸ್ಥಳೀಯ ಇತಿಹಾಸ ಹಾಗೂ ಪ್ರಸಿದ್ಧ ಸ್ಥಳಗಳ ಬಗ್ಗೆ ಚಿತ್ರಗಳು ಹಾಗೂ ವಿಷಯ ಸಂಗ್ರಹಿಸಿ ಬರೆಯಿರಿ.
ಸಮುದಾಯ ಆಧಾರಿತ ಯೋಜನೆಗಳು
ಮಲೆನಾಡು ಮತ್ತು ಕರಾವಳಿ ಪ್ರದೇಶಗಳಿಗೆ ಹೋಲಿಸಿದರೆ ಮೈದಾನ ಪ್ರದೇಶಗಳು ಸಾರಿಗೆ ವ್ಯವಸ್ಥೆ ಹೇಗೆ ಮತ್ತು ಏಕೆ ಅನುಕೂಲಕರ ?ಈ ಕುರಿತು ಊರಿನ ಹಿರಿಯರೊಂದಿಗೆ ಚರ್ಚಿಸಿ ಬರೆಯಿರಿ.
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ