ಕೆಂಪು ರೈನ್ ಕೋಟ್ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಮನುಗೆ ಅಪ್ಪ, ಅಮ್ಮ ಮಳೆಗಾಲದ ಹೊಸ ಮೇಲಂಗಿ ಕೊಡಿಸಿದ್ದಾರೆ. ಅದನ್ನು ಹಾಕಿಕೊಳಲು ಮನುಗೆ ಆತುರವೊ ಆತುರ. ಆದರೆ ಮಳೆ ಬರದೆ ಸತಾಯಿಸುತ್ತಿದೆ. ಅವನೀಗ ಮಳೆಗಾಗಿ ಕಾದು ಕುಳಿತಿದ್ದಾನೆ.

ಉದ್ದೇಶಗಳು :

ಮಕ್ಕಳಿಗೆ ವಿವಿಧ ಕಾಲಮಾನಗಳು ಹಾಗೂ ಅದರ ಲಕ್ಷಣಗಳ ಕುರಿತು ತಿಳಿಸಬಹುದಲ್ಲದೇ ಕಾಲಮಾನಕ್ಕೆ ತಕ್ಕಂತೆ ಅನುಸರಿಸಬೇಕಾದ ಆರೋಗ್ಯ ಕ್ರಮಗಳ ಬಗ್ಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.

ಕಥಾ ವಸ್ತು : ಕುಟುಂಬ ,ಪರಿಸರ ಮತ್ತು ವಾತಾವರಣ ,ಆರೊಗ್ಯ ಮತ್ತು ಸ್ವಚ್ಚತೆ

ಗುರುತು ಪಟ್ಟಿ : ಪ್ರಾಥಮಿಕ ಹಂತ, ತರಗತಿ ತರಗತಿ ೧,೨,೩,೪,೫,

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Kempu%20Rain%20Coat.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಶಗಳು
  1. ಮಕ್ಕಳಿಗೆ ತಿಳಿದಿರುವ ಕಾಲಮಾನಗಳ ಕುರಿತು ಚರ್ಚಿಸುವುದು.
  2. ಮಕ್ಕಳಿಗೆ ಇಷ್ಟವಾದ ಕಾಲ ಯಾವುದು ಮತ್ತು ಏಕೆ ಎಂದು ಮಾತನಾಡಲು ಅವಕಾಶ ನೀಡುವುದು.
  3. ವಿವಿಧ ಕಾಲಗಳ ಗುಣಲಕ್ಷಣಗಳನ್ನು ಗುಂಪಿನಲ್ಲಿ ಚರ್ಚಿಸುವುದು.
  4. ಮಳೆ ಬರುವ ಮುನ್ಸೂಚನೆಗಳನ್ನು ಚರ್ಚಿಸುವುದು.