ಗುಬ್ಬಿ ಮತ್ತು ಹಣ್ಣು - ಧ್ವನಿ ಕಥೆಯ ಚಟುವಟಿಕೆ ಪುಟ
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಮುಳ್ಳುಹಿಂಡಿನಲ್ಲಿ ಬಿದ್ದ ಹಣ್ಣು ಎತ್ತಿಕೊಳ್ಳಲು ಏನೇನೋ ಸಾಹಸ ಮಾಡಿದ ಗುಬ್ಬಿಗೆ ಕೊನೆಯಲ್ಲಿ ಏನಾಯಿತು? “ಗುಬ್ಬಿ ಮತ್ತು ಹಣ್ಣು” ಪ್ರಕೃತಿ ನ್ಯಾಯದ ನಿಯಮ ಬಿಚ್ಚಿಡುವ ಕಥೆ.
ಉದ್ದೇಶಗಳು :
ಈ ಕಥೆಯ ಮೂಲಕ ಮಕ್ಕಳಿಗೆ ವಾಕ್ಯಗಳನ್ನು ಸಂಯೋಜಿಸಿ ಕಥೆಯನ್ನು ರಚಿಸುವ ಕೌಶಲ್ಯವನ್ನು ತಿಳಿಸಿಕೊಡಬಹುದು. ಇಟ್ಟ ಗುರಿಯನ್ನು ಮೆಟ್ಟಿ ನಿಲ್ಲುವವರೆಗೂ ನಿಲ್ಲಬಾರದೆಂಬ ನೀತಿಯನ್ನ ಹಾಗೂ ನಮ್ಮ ಕಾರ್ಯಕ್ಕಾಗಿ ಇನ್ನೊಬ್ಬರನ್ನ ಬಲವಂತವಾಗಿ ಬಳಸಿಕೊಳ್ಳಬಾರದೆಂಬ ನೀತಿಯನ್ನ ಮಕ್ಕಳಿಗೆ ಮನದಟ್ಟು ಮಾಡಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :
ಕಥಾ ವಸ್ತು :ಸ್ವಾರ್ಥ,ಭಾವನೆಗಳು,ಪ್ರಾಣಿ ಮತ್ತು ಪಕ್ಷಿಗಳು
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Gubbi%20Mattu%20Hannu.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆ
- ಪುರ್ ಪುರ್ ಚಟುವಟಿಕೆ
- Five little Chikadies
ಆಲಿಸುವ ಪೂರ್ವದ ಚಟುವಟಿಕೆ
- ಪ್ರಕೃತಿಯಲ್ಲಿ ನೀವು ಏನೆಲ್ಲಾ ಕಾಣುತ್ತೀರ?
- ಪ್ರಕೃತಿಯಲ್ಲಿ ಹಾರುವ ಜೀವಿಗಳಾವುವು?
- ನೀವು ಯಾವೆಲ್ಲಾ ಪಕ್ಷಿಗಳನ್ನು ನೋಡಿದ್ದೀರಾ?
- ಪಕ್ಷಿಗಳಲ್ಲಿ ಅತೀ ಚಿಕ್ಕದಾದ ಪಕ್ಷಿ ಯಾವುದು?
- ಗುಬ್ಬಿಗಳು ಯಾವೆಲ್ಲಾ ಆಹಾರವನ್ನು ತಿನ್ನುತ್ತವೆ?
ಆಲಿಸುವ ಸಮಯದ ಚಟುವಟಿಕೆ
- ಗುಬ್ಬಿ ಮರಿಗಳು ತಾಯಿ ಗುಬ್ಬಿಯ ಬಳಿ ಏನೆಂದು ಕೇಳಿಕೊಂಡವು?
- ಗುಬ್ಬಿ ಸೀಬೆ ಹಣ್ಣನ್ನು ತರಲು ಎಲ್ಲಿಗೆ ಹೋಯಿತು?
- ನಿಮ್ಮ ಪೋಷಕರು ನಿಮಗೆ ಏನೆಲ್ಲಾ ಕೊಡಿಸಿದ್ದಾರೆ?
- ಗುಬ್ಬಿ ಹಣ್ಣನ್ನು ತರುವಾಗ ಏನಾಯಿತು?
- ನಿಮ್ಮ ಕಷ್ಟದ ಸಂಧರ್ಬದಲ್ಲಿ ನೀವು ಯಾರಲ್ಲಿ ಸಹಾಯ ಬೇಡುವಿರಿ?
ಆಲಿಸಿದ ನಂತರದ ಚಟುವಟಿಕೆಗಳು
- ಗುಬ್ಬಿಗೆ ಸಹಾಯ ಮಾಡಿದ ಪ್ರಾಣಿಗಳಾವುವು?
- ಕಥೆಯನ್ನು ನಾಟಕಾಭಿನಯ ಮಾಡಿ.
- ಈ ಕಥೆಗೆ ಒಂದು ಸಂಭಾಷಣೆ ಬರೆಯಿರಿ.
- ನಿಮಗೆ ಇಷ್ಟವಾದ ಹಣ್ಣಿನ ಬಗ್ಗೆ ಪ್ರಬಂಧ ಬರೆಯಿರಿ.
- ವಿವಿಧ ವೃತ್ತಿಗಳ ಬಗ್ಗೆ ಚರ್ಚಿಸಿ.
ಪಠ್ಯಪುಸ್ತಕಕ್ಕೆ ಸಂಪರ್ಕಿಸಬಹುದು
6 ನೇ ತರಗತಿ
ಕನ್ನಡ - ಹೊಸಬಾಳು, ಮಂಗಳ ಗ್ರಹದಲ್ಲಿ ಪುಟ್ಟಿ.
7 ನೇ ತರಗತಿ
ಕನ್ನಡ - ಪರಿಸರ ಸಮತೋಲನ