ಚತುರ್ಭುಜದ ಕರ್ಣಗಳ ಛೇದಕ ಬಿಂದುವಿನಲ್ಲಿನ ಕೋನಗಳ ಮೊತ್ತ
ಕರ್ಣವು ರೇಖಾಖಂಡವಾಗಿದ್ದು ಬಹುಭುಜಾಕೃತಿಯ ಶೃಂಗವನ್ನು ಪಾರ್ಶ್ವವಲ್ಲದ ಶೃಂಗಗಳಿಗೆ ಸೇರಿಸುತ್ತದೆ. ಚತುರ್ಭುಜದ ಈ ಎರಡು ಕರ್ಣಗಳು ಕೋನವನ್ನು ಉಂಟುಮಾಡುತ್ತದೆ, ಈ ಚಟುವಟಿಕೆಯು ಈ ಕೋನಗಳ ಗುಣಲಕ್ಷಣವನ್ನು ಅನ್ವೇಷಿಸುತ್ತದೆ.
ಕಲಿಕೆಯ ಉದ್ದೇಶಗಳು:
ಚತುರ್ಭುಜದ ಕರ್ಣಗಳ ಛೇದಕ ಬಿಂದುವಿನಲ್ಲಿನ ಕೋನಗಳ ಮೊತ್ತವು 360 ಡಿಗ್ರಿ ಆಗಿರುತ್ತದೆ ಎಂದು ಅರ್ಥಮಾಡಿಕೊಳ್ಳುವುದು.
ಅಂದಾಜು ಸಮಯ
4೦ ನಿಮಿಷಗಳು
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳು,ಛೇದಿಸುವ ರೇಖೆಗಳು, ಶೃಂಗಾಭಿಮುಖ ಕೋನಗಳು ಮತ್ತು ತ್ರಿಭುಜಗಳ ಗುಣಲಕ್ಷಣಗಳ ಪೂರ್ವ ಜ್ಞಾನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್
ಬಹುಮಾಧ್ಯಮ ಸಂಪನ್ಮೂಲಗಳು
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
1. ಚತುರ್ಭುಜದ ವಿವಿಧ ನಿಯತಾಂಕಗಳನ್ನು ಅನ್ವೇಷಿಸಿ - ಚತುರ್ಭುಜವನ್ನು ರಚಿಸುವ ರೇಖಾಖಂಡಗಳ ಉದ್ದ, ಚತುರ್ಭುಜದ ಕೋನಗಳು, ಕರ್ಣಗಳ ಉದ್ದ
2. ಚತುರ್ಭುಜದ ಎರಡು ಕರ್ಣಗಳು ಹೇಗಿರುತ್ತವೆ?
3. ಈ ಕರ್ಣಗಳ ಛೇದಕ ಹಂತದಲ್ಲಿ ಎಷ್ಟು ಕೋನಗಳು ರೂಪುಗೊಳ್ಳುತ್ತವೆ?
4. ಎಷ್ಟು ಕೋನಗಳು ಸಮವಾಗಿವೆ, ಅವುಗಳನ್ನು ಏನೆಂದು ಕರೆಯಲಾಗುತ್ತದೆದು?
5. ಎರಡು ಛೇದಕ ರೇಖೆಗಳಲ್ಲಿನ ಕೋನಗಳ ಮೊತ್ತ ಎಷ್ಟು?
ಮೌಲ್ಯ ನಿರ್ಣಯ ಪ್ರಶ್ನೆಗಳು
1. ಇಲ್ಲಿ ಕೊಟ್ಟಿರುವ ಲಕ್ಷಣವು ಯಾವುದೇ ಚತುರ್ಭುಜಕ್ಕೂ ಅನ್ವಯಿಸುತ್ತದೆಯೇ?