ಪ್ರವೇಶದ್ವಾರ:ಒಳಗೊಳ್ಳುವಿಕೆ ಶಿಕ್ಷಣ/ಪೀಠಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಒಳಗೊಳ್ಳುವಿಕೆ ಶಿಕ್ಷಣವು ಒಂದು ಶಿಕ್ಷಣ ವ್ಯವಸ್ಥೆಯಾಗಿದ್ದು ಅದರಲ್ಲಿ ವೈವಿಧ್ಯಮಯ ಅಗತ್ಯಗಳು ಹಾಗು ವಿಭಿನ್ನ ಸಾಮರ್ಥ್ಯಗಳುಳ್ಳ ಮಕ್ಕಳನ್ನು ನಿಯಮಿತ ಶಾಲೆಗಳಲ್ಲಿ ದಾಖಲಿಸಿ ಅವರಿಗೆ ನಿರ್ದಿಷ್ಟ ಅಗತ್ಯಗಳಿಗನುಗುಣವಾಗಿ ನ್ಯಾಯಸಮ್ಮತವಾದ ಅವಕಾಶಗಳನ್ನು ಒದಗಿಸಲಾಗುವುದು . ಒಂದು ಸಮುದಾಯದ ಎಲ್ಲಾ ಶಾಲಾ ಮಕ್ಕಳು ಸಾಮಾಜಿಕ -ಆರ್ಥಿಕ ಹಿನ್ನೆಲೆಯುಳ್ಳ,ಲಿಂಗತಾರತಮ್ಯ, ದೌರ್ಬಲ್ಯಗಳು, ವಿವಿಧ ಸಾಮರ್ಥ್ಯಗಳನ್ನು ಲೆಕ್ಕಿಸದೆ ಒಗ್ಗೂಡಿ ಕಲಿಯುವುದೇ ಇದರ ಆಧಾರವಾಗಿದೆ. ಒಳಗೊಳ್ಳುವಿಕೆ ಶಿಕ್ಷಣವು ಎಲ್ಲಾ ಮಕ್ಕಳ ಕಲಿಕಾ ಸಾಮರ್ಥ್ಯ ಅಂಗೀಕರಿಸುತ್ತದೆ ಮತ್ತು ಮಕ್ಕಳ ಕಲಿಕಾ ಸಾಮರ್ಥ್ಯ, ವ್ಯತ್ಯಾಸ ಗುರುತಿಸುವುದು , ಕಲಿಕೆಗೆ ಅವಕಾಶ ಒದಗಿಸುವುದು ಮತ್ತು ಶೈಕ್ಷಣಿಕ ವಿಧಾನಗಳನ್ನು ಅಭಿವೃದ್ಧಿಪಡಿಸುವದು ,ಹಾಗೂ ಎಲ್ಲಾ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಬೋಧನಾ ಸಹಾಯ ಒದಗಿಸುವುದು. ಶಾಲೆಗಳು ಮಕ್ಕಳ ವಿವಿಧ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಂಡು ,ಕಲಿಯುವ ಮಕ್ಕಳು ಎದುರಿಸುವ ಅಡೆತಡೆಗಳನ್ನು ಗುರುತಿಸಿ ಸೂಕ್ತವಾದ ಸಂಪನ್ಮೂಲಗಳು, ಅರ್ಹತೆಗಳು , ಶಾಲಾ ಸಂಘಟನೆಗಳು, ಅಧ್ಯಯನ ಯೋಜನೆ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ವಿಭಿನ್ನ ಶೈಲಿ ಹಾಗೂ ಲಯಗಳನ್ನು ಅಳವಡಿಸಿಕೊಳ್ಳುತ್ತದೆ . ಮುಂದೆ ಓದಿ