ಮಾಡ್ಯೂಲ್-೨ ಆಡಿಯೋ ರೆಕಾರ್ಡಿಂಗ್‌ ಬೇಸಿಕ್ಸ್‌

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಉದ್ದೇಶ:

  • ಆಡಿಯೋ ರೆಕಾರ್ಡಿಂಗ್‌ನ ಮೂಲಭೂತ ಪರಿಚಯ ವಿನೋದ ಮತ್ತು ಸುಲಭ ರೀತಿಯಲ್ಲಿ (ಚಿಹ್ನೆಗಳು - ರೆಕಾರ್ಡ್, ಪ್ಲೇ, ವಿರಾಮ ಮತ್ತು ಸ್ಟಾಪ್)
  • ಹಿಂದಿನ ತರಗತಿಗಳಲ್ಲಿ ಅವರು ಬಳಸಲಿರುವ ಆಡಿಯೋ ರೆಕಾರ್ಡರ್ (ಜೂಮ್) ಅನ್ನು ಪರಿಚಯಿಸುವುದು

ಪ್ರಕ್ರಿಯೆ:

ಕುಶಲೋಪರಿಯ ಮೂಲಕ ಸೆಷನ್‌ನ ಪ್ರಾರಂಭ ಮಾಡೋದು (ಹಾಯ್ ಹಲೋ ಹೇಗಿದಿರಿ, ಊಟ ಎಲಾರು ಮಾಡುದ್ರಾ???...) ನಾವು ಯಾರು ಅನ್ನೊದು ನೆನಪಿದಿಯಾ ನಮ್ಮಹೆಸರೇನು ಕೇಳೊದು. ನಾವು ಕೆಲವು ಕಟ್ಟುಪಾಡುಗಳನ್ನು ಅಥವ ನಿಯಮಗಳನ್ನು ಮಾಡಿಕೊಳೋಣ)

  • ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ
  • ಬೇರೆಯವರು ಮಾತಾಡ್ತಿದ್ರೆ ಅವರನ್ನ ಅಡ್ಡ ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ
  • ಎಲ್ಲಾರೂ ಭಾಗವಹಿಸಬೇಕು
  • ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ
  • ಫೋಟೋ ತೇಗೆಯುವಾಗ ಫೋಸ್‌ ಕೊಡಬಾರದು
  • ನಾವು ನಿಮಗೆ ಎಷ್ಟು ಮರ್ಯಾದೆ ಕೊಡ್ತಿವೋ, ನೀವು ನಮಗೆ ಅಷ್ಟೇ ಮರ್ಯಾದೆ ಕೊಡಬೇಕು

ಕಳೆದ ವಾರ ಈ ತರಗತಿಯಲ್ಲಿ ಏನು ಮಾಡಿದ್ವಿ ಅಂತ ನೆನಪಿದಯಾ ಅಂತಾ ಕೇಳಿ ನೆನಪು ಮಾಡಿಸುವುದು. (ಈ ವೇಳೆ ಪ್ರೊಜೆಕ್ಟರ್ ಮತ್ತು ಸ್ಪೀಕರ್ ಸಿದ್ಧವಾಗಿರಬೇಕು) 10 mins

ಈಗ ನಾವು ಒಂದು ಚಟುವಟಿಕೆ ಮಾಡೋಣ, ಅದಕ್ಕಾಗಿ ನಾವು ೪ ಗುಂಪುಗಳಾಗಿ ಮಾಡೋಣ. ಅದಕ್ಕೆ ಗುಬ್ಬಿ, ಗಿಣಿ, ನವಿಲು, ಮತ್ತೆ ಮೈನಾ ಅಂತ ಹೆಸರಿಡೋಣ.

೨ ಗುಂಪು ತರಗತಿಯಲ್ಲೆ ಇರುತ್ತವೆ, ಇನ್ನು ಬೇರೆ ಎರಡು ಗುಂಪು ಗ್ರಂಥಾಲಯ ಮತ್ತು ಕಂಪ್ಯೂಟರ್ ಲ್ಯಾಬ್ ಗೆ ಅನುಷಾ ಕರೆದುಕೊಂಡು ಹೋಗುತ್ತಾರೆ.05 mins

ಗುಂಪು ಚಟುವಟಿಕೆ:

  • ಪ್ರತಿಯೊಂದು ಗುಂಪಿಗೆ play, pause, record ಹಾಗು stop ಇರುವ ಒಂದು ಸೆಟ್ ಚಿತ್ರಗಳನ್ನು ನೀಡಲಾಗುವುದು.
  • ಅವರು ಈ ಚಿಹ್ನೆಗಳನ್ನು ಎಲ್ಲಿ ಎಲ್ಲಿ ನೋಡಿದ್ದಾರೆ ಮತ್ತು ಅದು ಏನು ಮಾಡುತ್ತದೆ ಎಂಬುದನ್ನು ಚರ್ಚಿಸಿ, ಚಾರ್ಟ್ ಪೇಪರ್‌ನಲ್ಲಿ ಬರೆಯುತ್ತಾರೆ.
  • ಗುಂಪಿನವರಿಂದ ಒಬ್ಬ ಅಥವ ಇಬ್ಬರು ಬಂದು ದೊಡ್ಡ ಗುಂಪಿನಲ್ಲಿ ಪ್ರಸ್ತುತಪಡಿಸಬೇಕು. 20 mins

ಎಲ್ಲಾ ಗುಂಪುಗಳು ತರಗತಿಗೆ ಮರಳಿದ ನಂತರ, ೪ ಗುಂಪಿನವರು ತಾವು ಬರೆದ ವಿಷಯವನ್ನು ಪ್ರಸ್ತುತಪಡಿಸುತ್ತಾರೆ.

ನಂತರ, ಅವರು ಹೇಳಿದ್ದನ್ನು ಆಧರಿಸಿ, ನೀವು ಹೇಳಿದ್ದೇನು ಸರಿಯಾಗಿದೆ, ಆದರೆ ಇದನ್ನು ಇನ್ನೂ ಸ್ಪಷ್ಟವಾಗಿ ತಿಳಿಯಲು, ಪ್ರಸ್ತುತಪಡಿಸುವ ಮಾಧ್ಯಮ ಬಟನ್ ಪ್ರೆಸೆಂಟೇಶನ್ ಬಳಸಿ ನೋಡೋಣ ಎಂದು ವಿವರಿಸುವುದು.15 mins

ಮಾಧ್ಯಮ ಬಟನ್ ವಿವರಣೆ:
  1. ರೆಕಾರ್ಡ್ - ಮೈಕ್ ಬಳಸಿದ ತಕ್ಷಣ ಸುತ್ತಲಿನ ಎಲ್ಲ ಧ್ವನಿಗಳನ್ನು ದಾಖಲಿಸುತ್ತದೆ.
  2. ಪ್ಲೇ - VLC ಪ್ಲೇಯರ್ ಬಳಸುವುದು.
  3. ಪಾಸ್ - VLC ಪ್ಲೇಯರ್ ಬಳಸುವುದು.
  4. ಸ್ಟಾಪ್ - VLC ಪ್ಲೇಯರ್ ಬಳಸುವುದು.

ಇದರ ಬಳಿಕ play, pause, record, stop ನ ಕಾರ್ಯಗಳನ್ನು ನಾನು ವಿವರಿಸುತ್ತೇನೆ, ಅವರು ಅದನ್ನು ಜೋರಾಗಿ ಹೇಳುತ್ತಾರೆ. (ನಾನು ಒಬ್ಬರಿಗೊಬ್ಬರು ಪ್ರಶ್ನೆ ಕೇಳುವಂತೆ ಸನ್ನಿವೇಶ ನೀಡುತ್ತೇನೆ, ಅವರು ಜವಾಬು ನೀಡುತ್ತಾರೆ) 15 mins

ನಂತರ, ನಾವು ತೊಗೊಂಡುಹೋಗಿರೋ ಎರಡು ರೆಕಾರ್ಡರ್‌ಗಳನ್ನು ಒಂದು ಕಡೆಗೆ ಒಬ್ಬೊಬ್ಬರಿಗೂ ನೀಡುತ್ತೇವೆ ಮತ್ತು ಅದನ್ನು ನೋಡಲು ಹೇಳುತ್ತೇವೆ. (ರೆಕಾರ್ಡರ್‌ನ ಫೋಟೋ ಪ್ರೊಜೆಕ್ಟರ್‌ನಲ್ಲಿ ತೋರಿಸಲಾಗುವುದು) 10 mins

ಇನ್ನೂ ಸಮಯ ಇದ್ದರೆ ಮುಂದಿನ ಹಂತವಾಗಿ ರೆಕಾರ್ಡ್ ಮಾಡಿಸೋದು.

ಚಟುವಟಿಕೆ:
  • ೬ ಜನ ಸ್ವಯಂಸೇವಕರನ್ನು ಆಯ್ಕೆ ಮಾಡೋಣ.
  • ೬ ಜನ ಆಯ್ಕೆ ಆದ ನಂತರ, ಅವರನ್ನು ಹೊರಗೆ ಕರೆದೊಯ್ದು ಅನುಷಾ ಬ್ರೀಫ್ ಮಾಡುತ್ತಾರೆ.
    1. ನಿನ್ನ ಹೆಸರೇನು?
    2. ಯಾವ ಶಾಲೆ, ಎಷ್ಟನೇ ತರಗತಿ?
    3. ಇಷ್ಟವಾದ ಬಣ್ಣ?
    4. ಇಷ್ಟವಾದ ಚಿತ್ರ?
    5. ಇಷ್ಟವಾದ ಜಾಗ?

ಒಬ್ಬರು ಕೇಳುತ್ತಾರೆ, ಇನ್ನೊಬ್ಬರು ಉತ್ತರಿಸುತ್ತಾರೆ, Play, pause, record, ಮತ್ತು stop ಅನ್ನು ಸರಿಯಾದ ಸಂದರ್ಭಗಳಲ್ಲಿ ಹೇಳಬೇಕು.

ಮೂರು ಗುಂಪಿನ ರೆಕಾರ್ಡಿಂಗ್ ಆದ ತಕ್ಷಣ, ಅವರ ಧ್ವನಿಯನ್ನು ಕೇಳಿಸಿ, ಹೇಗನಿಸಿತು? ಎಂದು ಕೇಳುವುದು. (ಚನ್ನಾಗಿತ್ತು, ಮತ್ತಷ್ಟು ಉತ್ತಮ ಮಾಡಬಹುದು, ಧ್ವನಿ ಸ್ಪಷ್ಟವಾಗಬೇಕು ಎಂದು ಉತ್ತರಿಸಬಹುದು) ಇನ್ನು ಚನ್ನಾಗಿ ರೆಕಾರ್ಡ್ ಮಾಡೋದು ಹಾಗೇ, ನಾವು ಮುಂದಿನ ತರಗತಿಗಳಲ್ಲಿ ಇನ್ನಷ್ಟು ಕಲಿಯೋಣ ಎಂದು ಹೇಳಿ ಮುಗಿಸುವುದು.

ಬೇಕಾಗಿರುವ ವಸ್ತುಗಳು:

  • ರೆಕಾರ್ಡರ್ - 2, ಪಲ್ಸ್ ಬ್ಯಾಟರಿಗಳು
  • ಪ್ರೊಜೆಕ್ಟರ್
  • ಸ್ಪೀಕರ್
  • ಚಾರ್ಟ್ ಪೇಪರ್ - ಕಟ್ ಮಾಡಿದವು
  • ಚಿಹ್ನೆಗಳ ಪ್ರಿಂಟೌಟ್‌ಗಳು
  • ಗ್ಲೂ ಸ್ಟಿಕ್
  • ಸ್ಕೆಚ್ ಪೆನ್
  • ಪ್ರಸ್ತುತತೆಗಳು ಮತ್ತು ರೆಕಾರ್ಡರ್‌ನ ಚಿತ್ರ
  • ಒಟ್ಟು ಫೆಸಿಲಿಟೇಟರ್‌ಗಳು - 3

ಇನ್‌ಪುಟ್‌ಗಳು:

  • play, pause, record, stop ಇರುವ ಚಿತ್ರಗಳ ಸೆಟ್
  • PPT

ಔಟ್‌ಪುಟ್‌ಗಳು:

  • ಕಿಶೋರಿಯರು ಬರೆದ ಚಾರ್ಟ್ ಶೀಟ್ಸ್
  • ಕಿಶೋರಿಯರು ಮಾಡಿದ ರೆಕಾರ್ಡಿಂಗ್‌ಗಳು