ಮಾಡ್ಯೂಲ್ ೧೩ POCSO

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
(ಮಾಡ್ಯೂಲ್ ೧೨ POCSO ಇಂದ ಪುನರ್ನಿರ್ದೇಶಿತ)
Jump to navigation Jump to search

ಉದ್ದೇಶ

  • ಲೈಂಗಿಕ ಕಿರುಕುಳ ಎಂದರೇನು ಎನ್ನುವುದನ್ನು ಅರ್ಥ ಮಾಡಿಸುವುದು - (ಒಳ್ಳೆಯ ಸ್ಪರ್ಶ, ಕೆಟ್ಟ ಸ್ಪರ್ಶ, ಗೊಂದಲಮಯ ಸ್ಪರ್ಶ, ಪುರುಷಪ್ರಧಾನತೆಯಿಂದಾಗಿ ಉಂಟಾದ ಪುರುಷಾಧಿಕಾರ ಇತ್ಯಾದಿ)
  • ಹೆಣ್ಣು ಮಕ್ಕಳು ಇದರ ಬಗ್ಗೆ ಮಾತನಾಡಲು ಹಿಂಜರಿಯುವುದೇಕೆ ? (ವಿಕ್ಟಿಮ್ ದೂಷಣೆ, ಅಳುಕು/ಭಯ, ಅಪರಾಧಿ ಭಾವ, ನಾಚಿಕೆ ಇತ್ಯಾದಿ)
  • ಇದರ ಬಗ್ಗೆ ಮಾತನಾಡಬೇಕೆಂದರೆ ಅದಕ್ಕಾಗಿ ಇರುವ ದಾರಿಗಳೇನು? ಇದನ್ನು ಅರ್ಥ ಮಾಡಿಸಲು POCSO ಕಾಯ್ದೆಯ ನೆರವನ್ನು ತೆಗೆದುಕೊಳ್ಳುವುದು

ಪ್ರಕ್ರಿಯೆ

ಕುಶಲೋಪರಿಯ ಮೂಲಕ ನಮ್ಮ ಮಾತುಕತೆಯನ್ನು ಶುರು ಮಾಡುವುದು.

ಕಟ್ಟುಪಾಡುಗಳನ್ನು ಜ್ಞಾಪಿಸುವುದು - ಅವರು ಹೇಳಿಲ್ಲ ಅಂದರೆ ನಾವೇ ಒಂದೊಂದಾಗಿ ಹೇಳುವುದು.  

೧. ಏನಾದ್ರೂ ಮಾತಾಡ್ಬೇಕಿದ್ರೆ ಕೈ ಎತ್ತಿ ಮಾತಾಡೋಣ

೨. ಬೇರೆಯವರು ಮಾತಾಡ್ತಿದ್ರೆ ಅವರನ್ನ interrupt ಮಾಡೋದಾಗ್ಲಿ, ನಗೋದು, ಅಣಕ ಮಾಡೋದಾಗ್ಲಿ ಮಾಡೋದು ಬೇಡ

೩. ಎಲ್ಲಾರೂ ಭಾಗವಹಿಸಬೇಕು

೪. ನೀವು ಗಲಾಟೆ ಮಾಡ್ತ ಇದರೆ ನಾವು ಸೈಲೆಂಟ್‌ ಆಗ್ತೀವಿ. ಆಗ್ಲೂ ಮಾತಾಡ್ತ ಇದ್ರೆ ನಾವು ವಾಪಸ್‌ ಹೊರಟು ಹೋಗ್ತೀವಿ

೫. ಫೋಟೋ ತೆಗೀವಾಗ ಫೋಸ್‌ ಕೊಡಬೇಡಿ

೬. ನಾವು ನಿಮಗೆ ಎಷ್ಟು ಮರ್ಯಾದೆ  ಕೊಡ್ತಿವೋ ನಿವು ನಮಗೆ ಅಷ್ಟೇ ಮರ್ಯಾದೆ  ಕೊಡಬೇಕು 5 ನಿಮಿಷ

Confidentiality ಬಗೆಗೆ ಅವರಿಗೆ ಹೇಳುವುದು

೧. ಇಲ್ಲಿನ ಮಾತುಕತೆ ನಮ್ಮ ಮಧ್ಯವೇ ಇರಲಿ

೨. ಇಲ್ಲಿನ ಮಾತುಕತೆಯನ್ನು, ಗೆಳತಿಯರು ಹಂಚಿಕೊಂಡ ವಿಷಯಗಳನ್ನು ಹೊರಗಡೆ ಯಾರಿಗೂ ಹೇಳುವುದಿಲ್ಲ

೩. ಏನಾದರೂ ಇದ್ದಲ್ಲಿ ನಮ್ಮ ಬಳಿ, ಅಥವ ಟೀಚರ್‌ ಬಳಿ ಹಂಚಿಕೊಳ್ಳುತ್ತೇವೆ

POCSO DST ಯನ್ನು ತೋರಿಸುವುದು ೨೦ ನಿಮಿಷ

ವೀಡಿಯೋವನ್ನು ನೋಡಿಯಾದ ನಂತರ ಎಲ್ಲರಿಗೂ flash card ಕೊಟ್ಟು ಇವನ್ನು ಬರೆಯಲು ಹೇಳುವುದು. ಅವರ ಹೆಸರನ್ನು ಬರೆಯಲು ಹೇಳುವುದು.

೧. ನಮಗೆ ಈ ರೀತಿ ಆಗಿದೆ

೨. ವಿಷಯದ ಬಗ್ಗೆ ಗೊತ್ತಾಯ್ತು, ಈ ರೀತಿ ಆಗಿಲ್ಲ

೩. ಹೇಳೋದಕ್ಕೆ ಇಷ್ಟ ಇಲ್ಲ

ನೀವು ಬರೆದಿರುವುದನ್ನು ಉಲ್ಟಾ ಮಾಡಿ ನನಗೆ ಕೊಡಿ. ಮುಂದಿನ ವಾರ ಏನಾದರೂ ಚರ್ಚಿಸುವುದಿದ್ದರೇ ನಾವು ಯಾರ ಬಳಿ ಚರ್ಚಿಸಬೇಕೋ ಅವರ ಬಳಿ ಮಾತ್ರವೇ ಇದರ ಬಗ್ಗೆ ಮಾತನಾಡುತ್ತೇವೆ.

ಕಂಟೆಂಟ್‌ ಬಗ್ಗೆ ಕೇಳುವುದು. ಹೇಗಿತ್ತು ಅರ್ಥ ಆಯ್ತ ಇತ್ಯಾದಿ.

ಇದರಲ್ಲಿ ನಿಮ್ಮ ತಪ್ಪು ಏನೂ ಇಲ್ಲ. ಆದ್ದರಿಮದ ಭಯ ನಾಚಿಕೆ ಬೇಡ, ಎಂದು ಹಂಚಿಕೊಳ್ಳಲು ಪ್ರೋತ್ಸಾಹಿಸುವುದು. ೨೦ ನಿಮಿಷ

ಒಟ್ಟು ಸಮಯ

45 ನಿಮಿಷಗಳು

ಒಟ್ಟು ಫೇಸಿಲಿಟೇಟರ್‌ಗಳು: 1

ಬೇಕಾಗಿರುವ ಸಂಪನ್ಮೂಲಗಳು

  • Projector
  • Speaker
  • Laptop
  • Music to play

ಇನ್‌ಪುಟ್‌ಗಳು

POCSO video

ಔಟ್‌ಪುಟ್‌ಗಳು