ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
ಮುಕ್ತ ಶೈಕ್ಷಣಿಕ ಸಂಪನ್ಮೂಲ
'ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005'ರ ಬಗ್ಗೆ ನಿಮಗೆ ತಿಳಿದಿದೆ, ಇದು ಹೇಳುವುದೇನೆಂದರೆ ಶಿಕ್ಷಣ ಸಂದರ್ಭೋಚಿತ, ಅಂತರ್ಗತ ಮತ್ತು ಅರ್ಥಪೂರ್ಣವಾಗಿರಬೇಕು ಎನ್ನುವುದನ್ನು. ನಿಮ್ಮ ಪಠ್ಯಕ್ರಮದ ಶಿಕ್ಷಣ ವಿಭಾಗದಲ್ಲಿ ನೀವು ಈಗಾಗಲೇ ರಚನಾತ್ಮಕ ಕಲಿಕಾ ಮಾದರಿಗಳ ಬಗ್ಗೆ ಅಧ್ಯಯನ ಮಾಡಿರುವಿರಿ. ಈ ವಿಚಾರಗಳು ಸತ್ಯ, ಪ್ರಶಿಕ್ಷಕರಿಗೆ ಮತ್ತು ಪ್ರಶಿಕ್ಷಣಾರ್ಥಿಗಳಿಗೆ ಸೂಕ್ತ ಸಂಪನ್ಮೂಲಗಳು ಲಭ್ಯವಿರಬೇಕು. ಈ ಸಂಪನ್ಮೂಲಗಳು ಸಂದರ್ಭೋಚಿತವಾಗಿ ಸುಲಭವಾಗಿ ಸಿಗುವಂತೆ ಇರಬೇಕು ಮತ್ತು ಕಲಿಕಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಅವುಗಳನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶವಿರಬೇಕು. ಪ್ರಸ್ತುತ, ಅನೇಕ ಸಂದರ್ಭಗಳಲ್ಲಿ ಶಿಕ್ಷಕರಿಗೆ ಪಠ್ಯಪುಸ್ತಕವೇ ಅತ್ಯಂತ ಮುಖ್ಯವಾದ ಸಂಪನ್ಮೂಲವಾಗಿದೆ, ಆದರೆ ಅದೊಂದೇ ಸಂಪನ್ಮೂಲವಲ್ಲ. ಪಠ್ಯಪುಸ್ತಕ ಸೀಮಿತ ಸಂಪನ್ಮೂಲವನ್ನು ಹೊಂದಿರುತ್ತದೆ ಮತ್ತು ವರ್ಷಕ್ಕೆ ಒಂದು ಬಾರಿ ರಚಿಸಲಾಗುವುದು ಮತ್ತು ಕೆಲವು ಚಿಂತನೆಗಳನ್ನು ಪ್ರತಿನಿಧಿಸುತ್ತದೆ. ಇದು ಹೆಚ್ಚು ಪಠ್ಯ ಆಧಾರಿತವಾಗಿರುತ್ತದೆ ಮತ್ತು ಸಿಮೀತ ಆಡಿಯೋ ಮತ್ತು ವೀಡಿಯೋ ಸಂಪನ್ಮೂಲಗಳನ್ನು ಹೊಂದಿದ್ದು ಮಕ್ಕಳ ಬಹುಕಲಿಕಾ ಅವಶ್ಯಕತೆಗಳಿಗೆ ಅನುಗುಣವಾಗಿಲ್ಲದಿರಬಹುದು. ವಿದ್ಯುನ್ಮಾನ ವಲ್ಲದ ಸಂಪನ್ಮೂಲಗಳು ಲಭ್ಯವಿದ್ದು ವೆಚ್ಚದಾಯಕವಾಗಿವೆ. ಸುಲಭವಾಗಿ ಹೆಚ್ಚುವರಿ ಸಂಪನ್ಮೂಲಗಳು ಸಿಗುವ ಸಾಧ್ಯತೆ ಇದ್ದರು ಸ್ಥಳೀಯ ಅಗತ್ಯಗಳು ಹಾಗೂ ಸಂದರ್ಭಗಳಲ್ಲಿ ಮಾರ್ಪಡಿಸಲಾಗಲು ಸಾಧ್ಯವಾಗುವುದಿಲ್ಲ. ವಿಮರ್ಶಾತ್ಮಕ ಮತ್ತು ವೈವಿಧ್ಯಮಯ ದೃಷ್ಟಿಕೋನಗಳು ಬರಬೇಕಾದರೆ ಬಹುವಿಧದ ಸಂಪನ್ಮೂಲಗಳು ಲಭ್ಯವಿರಬೇಕು. ಜ್ಞಾನದ ನಿರ್ಮಾಣ ಮತ್ತು ಹಂಚಿಕೆ ಮಾಡಿಕೊಳ್ಳಲು ಹೆಚ್ಚಿನ ಸಾಧ್ಯತೆಗಳು ಇರಬೇಕು. ಕೆಲವು ಜ್ಞಾನದ ಸ್ವರೂಪಗಳನ್ನು ಅಂದರೆ ಮುಖ್ಯವಿರುವ ವಿಷಯಗಳನ್ನು ಉಳಿಸಿಕೊಂಡು ಉಳಿದವು ನಾಶವಾಗುತ್ತವೆ. ಜ್ಞಾನದ ಹಂಚಿಕೆ ಮುಕ್ತವಾಗಿ ಆಗಬೇಕಾದರೆ, ಶೈಕ್ಷಣಿಕ ಸಂಪನ್ಮೂಲಗಳು ಕೂಡ ಮುಕ್ತವಾಗಿ ಲಭ್ಯವಾಗಬೇಕು, ಹಂಚಿಕೆ ಮಾಡಲು ಮತ್ತು ತಮ್ಮ ಸ್ಥಳೀಯ ಪರಿಸರಕ್ಕೆ ತಕ್ಕಂತೆ ಬದಲಾವಣೆ, ಅವಶ್ಯಕತೆ ಮತ್ತು ಸಂದರ್ಭಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳಲು ಮುಕ್ತವಾಗಿರಬೇಕು. ಜ್ಞಾನದ ರಚನೆ, ಹಂಚಿಕೆ ಮತ್ತು ವಿತರಣೆಯಲ್ಲಿ ಐಸಿಟಿಯ ಪಾತ್ರವನ್ನು ನೀವು ಐಸಿಟಿ ಮತ್ತು ಸಮಾಜ ವಿಭಾಗದಲ್ಲಿ ಅಭ್ಯಾಸ ಮಾಡಬಹುದು. ಮೇಲೆ ಹೇಳಿದ ರೀತಿಯ ಸಂಪನ್ಮೂಲಗಳನ್ನು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು (OERs) ಎಂದು ಕರೆಯುತ್ತಾರೆ. ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಎಲ್ಲಾವು ಮುಕ್ತವಾಗಿ ಲಭ್ಯವಾಗುವ ವಿದ್ಯುನ್ಮಾನ ಸಂಪನ್ಮೂಲಗಳಾಗಿರುತ್ತವೆ, ಇವುಗಳು ಬಹು ಸ್ವರೂಪಗಳಲ್ಲಿ ಅಂದರೆ ಪಠ್ಯ, ಆಡೀಯೋ, ವೀಡಿಯೋಗಳಲ್ಲಿ ಕಲಿಕಾರ್ಥಿಗಳ ಅಗತ್ಯತೆಗೆ ಅನುಗುಣವಾಗಿ ಲಭ್ಯವಾಗುತ್ತವೆ. ೨೦೦೧ ರಲ್ಲಿ ಜಾಗತಿಕ ವಿದ್ಯಮಾನವು ವಿಕಿಪಿಡಿಯದಿಂದ ಆರಂಭವಾಯಿತು,(www.wikipedia.org). ಜ್ಞಾನವು ರಚನೆಯಾಗಿ ಅದು ಅನೇಕ ವ್ಯಕ್ತಿಗಳೊಂದಿಗೆ ಹಂಚಿಕೆ ಆಗಬೇಕು, ಕೇವಲ ಒಬ್ಬ ವ್ಯಕ್ತಿ ಹತ್ತಿರ ಅದು ನಿರ್ಭಂಧವಾಗಬಾರದು. ಅಮೇರಿಕಾದ ಪ್ರಸಿದ್ಧ ವಿಶ್ವವಿದ್ಯಾಲಯವಾದ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ೨೦೦೧ ರಲ್ಲಿ ಅನೇಕ ಕೋರ್ಸ್ ಸಾಮಗ್ರಿಗಳನ್ನು ಮುಕ್ತವಾಗಿ ಬಿಡುಗಡೆ ಮಾಡಿತು ಇದನ್ನು open courseware ಎನ್ನುವರು. ಸಬ್ ಸಹಾರನ್ ಆಫ್ರಿಕಾದಲ್ಲಿ ಶಿಕ್ಷಕರ ಶಿಕ್ಷಣದಲ್ಲಿ ಎಲ್ಲಾರ ಸಹಯೋಗದೊಂದಿಗೆ ಶೈಕ್ಷಣಿಕ ಸಂಪನ್ಮೂಲಗಳನ್ನು ಶಿಕ್ಷಕರ ಶಿಕ್ಷಣಕ್ಕಾಗಿ ಬೆಳವಣಿಗೆ ಮಾಡಿದರು ಮತ್ತು ಇದನ್ನು http://www.tessafrica.net ಪ್ರಕಟಮಾಡಿದರು. ಆರಂಭದಲ್ಲಿ ಪ್ರಕಟವಾದ ಕೆಲವು ಮುಕ್ತ ಸಂಪನ್ಮೂಲಗಳು. ಈಗ ಪ್ರಪಂಚದಾದ್ಯಂತ ಬೋಧನೆ ಮತ್ತು ಕಲಿಕೆಗಾಗಿ ಅನೇಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಬಳಕೆಗೆ ಲಭ್ಯಯಿವೆ. ರಾಷ್ಟ್ರೀಯ ತಂತ್ರಜ್ಞಾನ ವರದಿಯಾದ ಕಲಿಕಾ ಕಾರ್ಯಕ್ರಮ (NPTEL) (http://nptel.iitk.ac.in) ಮತ್ತು ಇಗ್ನೋದಲ್ಲಿ ಮುಕ್ತ ಶೈಕ್ಷಣಿಕ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಅನೇಕ ಕೋರ್ಸಗಳನ್ನು ಅಭ್ಯಾಸ ಮಾಡಲು ಅವಕಾಶವಿದೆ.
ಮುಕ್ತ ಶೈಕ್ಷಣಿಕ ಸಂಪನ್ಮೂಲ OERs ಪ್ರಕಾರಗಳು
ಮುಕ್ತ ಶೈಕ್ಷಣಿಕ ಸಂಪನ್ಮೂಲ ಗಳಲ್ಲಿ ಅನೇಕ ಪ್ರಕಾರಗಳಿವೆ. ಈಗಾಗಲೇ ರಚಿತವಾದ ಸಂಪನ್ಮೂಲಗಳನ್ನು ಮುಕ್ತ ವಾಗಿ ಹಂಚಿಕೆ ಮಾಡುವುದು. www.khanacademy.org; www.tessafrica.net ಮುಕ್ತ ಪಠ್ಯ ಸಾಮಾಗ್ರಿಗಳನ್ನು ಮತ್ತು ಕೋರ್ಸಗಳನ್ನು ರೂಪಿಸುವುದು www.nroer.metastudio.org; www.edx.org; www.coursera.org ; www.nptel.iitk.ac.in ಸಹಯೋಜಿತ ಸಂಪನ್ಮೂಲ ರಚನೆ . ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ಯೋಜನೆಯು DSERT ಕರ್ನಾಟಕ ದ ಯೋಜನೆಯಾಗಿದೆ, ಶೈಕ್ಷಣಿಕ ಸಂಪನ್ಮೂಲಗಳನ್ನು ರಚನೆ ಮತ್ತು ಹಂಚಿಕೆ ಮಾಡಲು ಶಿಕ್ಷಕರಿಗೆ ಬೆಂಬಲವನ್ನು ನೀಡುತ್ತದೆ.
ಮುಕ್ತ ಶೈಕ್ಷಣಿಕ ಸಂಪನ್ಮೂಲ OERs ತತ್ವಗಳು:
ಮುಕ್ತ ಶೈಕ್ಷಣಿಕ ಸಂಪನ್ಮೂಲದಲ್ಲಿನ ಸಂಪನ್ಮೂಲಗಳು ಕಲಿಕಾರ್ಥಿಗಳಿಗೆ/ಬಳಕೆದಾರರಿಗೆ ಕೆಲವೊಂದು ಸ್ವಾತಂತ್ರವನ್ನು ಒದಗಿಸಿಕೊಟ್ಟಿದೆ. ಆ ಸ್ವಾತಂತ್ರಗಳು ಈ ಕೆಳಗಿನಂತಿವೆ :
- ಸಂಪನ್ಮೂಲಗಳನ್ನು ಮುಕ್ತವಾಗಿ ಪಡೆದು, ಅವುಗಳನ್ನು ಬಳಕೆ ಮತ್ತು ಮರುಬಳಕೆ ಮಾಡಬಹುದು.
- ಸಂಪನ್ಮೂಲಗಳನ್ನು ಪರಿಷ್ಕರಿಸಿ ಮತ್ತು ತಮಗೆ ಸೂಕ್ತವಾಗುವಂತೆ ಅಳವಡಿಕೆ ಮಾಡಿಕೊಳ್ಳಬಹುದು.
- ಸಂಪನ್ಮೂಲಗಳನ್ನು ಮರು ಮಿಶ್ರಣ ಮತ್ತು ಸಂಯೋಜನೆ ಮಾಡಿ ಹೊಸ ಸಂಪನ್ಮೂಲಗಳನ್ನು ರಚನೆ ಮಾಡಬಹುದು.
- ಸಂಪನ್ಮೂಲಗಳನ್ನು ಮರು ಹಂಚಿಕೆ ಮಾಡಬಹುದು- ಪರಿಷ್ಕೃತ/ಮರುಮಿಶ್ರಣ ಮಾಡಿ ಮರು ಹಂಚಿಕೆ ಮಾಡಬಹುದು. ಇವುಗಳನ್ನು ನಾವು '4 ಆರ್'ಗಳು - ಮರುಬಳಕೆ, ಪರಿಷ್ಕರಿಸು, ಮರು ಮಿಶ್ರಣ ಮತ್ತು ಮರು ವಿತರಣೆ (re-use, re-vise, re-mix and re-distribute) ಎನ್ನುತ್ತೇವೆ .
ಪರವಾನಿಗೆ ಮತ್ತು ಹಕ್ಕುಸ್ವಾಮ್ಯ
ಹಕ್ಕುಸಾಮ್ಯತೆಯನ್ನು ಪಡೆದುಕೊಂಡು ಸಂಪನ್ಮೂಲ ಹಂಚಿಕೆ ಆಗುತ್ತವೆ, ಹಕ್ಕುಸಾಮ್ಯತೆಗೆ ಒಳಪಡುವ ಸಂಪನ್ಮೂಲಗಳು ಕಡಿಮೆ ನಿಭಂದನೆಗಳನ್ನು ಒಳಗೊಂಡಿರುತ್ತದೆ. ಮತ್ತು ಎಲ್ಲಾರಿಗೂ ಅನುಮತಿ ಇರುತ್ತದೆ ಅಥವ 4 ಆರ್ಗಳಾದ ಮರುಬಳಕೆ, ಪರಿಷ್ಕರಿಸು, ಮರು ಮಿಶ್ರಣ ಮತ್ತು ಮರುವಿತರಣೆಗಳನ್ನು ಒಳಗೊಂಡಿರುತ್ತದೆ. ಸಂಪನ್ಮೂಲ ರಚನೆ ಮಾಡುವಾಗ ಕ್ರಿಯೇಟಿವ್ ಕಾಮನ್ಸ್ ಎಂಬ ಹಕ್ಕು ಸ್ವಾಮ್ಯತೆಯನ್ನು ಬಳಕೆ ಮಾಡುವರು. "ಕ್ರಿಯೇಟಿವ್ ಕಾಮನ್ಸ್" ಒಂದು ಹಕ್ಕು ಸ್ವಾಮ್ಯತೆಯ ಒಂದು ವಿಧ(ಕೆಲವೊಂದು ಬಾರಿ ಇದನ್ನು ಕಾಪಿಲೆಫ್ಟ್ ಆಗಿದೆ ಎನ್ನುವರು) ಅದು ನಿಮಗೆ ಸಂಪನ್ಮೂಲ ಬಳಕೆ ಮಾಡಲು, ಮರು ಮಿಶ್ರಣಮಾಡಲು, ಪರಿಷ್ಕರಿಸಲು ಮತ್ತು ಮರು ವಿತರಣೆಗೆ ಅವಕಾಶ ಮಾಡಿಕೊಡುತ್ತದೆ, ಯಾವಾಗ ನೀವು ಸಂಪನ್ಮೂಲಗಳನ್ನು ಪಡೆಯುತ್ತೀರಾ/ ಹಂಚಿಕೆ ಮಾಡುತ್ತಿರಾ? ಅವುಗಳೆಲ್ಲಾ ನೀವು ಕ್ರಿಯೇಟಿವ್ ಕಾಮನ್ಸ್ " ಹಕ್ಕು ಸಾಮ್ವತೆಯ ಮೂಲಕ ಇವುಗಳನ್ನು OER ನಲ್ಲಿ ಹಂಚಿಕೆಮಾಡಿದಾಗ. ನಿಮ್ಮ ಪಠ್ಯದಲ್ಲಿ- 'ಕ್ರಿಯೇಟಿವ್ ಕಾಮನ್ಸ್ ಕೃತಿಸ್ವಾಮ್ಯ ಸ್ಪಷ್ಟವಾಗಿ ನಮೂದಿಸಬೇಕು ಇಲ್ಲದಿದ್ದಲ್ಲಿ ಎಲ್ಲಾ ಹಕ್ಕುಗಳನ್ನು ಕಾಯ್ದಿರಸಲಾಗಿದೆ ಎಂದು ತಿಳಿಯಲಾಗುವುದು. ಒಂದು ರಾಷ್ಟ್ರೀಯ ಆದ್ಯತೆಯಾಗಿ ಮುಕ್ತ ಶೈಕ್ಷಣಿಕ ಸಂಪನ್ಮೂಲ OERs - ರಾಷ್ಟ್ರ ಮಟ್ಟದ ಮುಕ್ತ ಶೈಕ್ಷಣಿಕ ಸಂಪನ್ಮೂಲವನ್ನು NCERT ನಿರ್ವಹಣೆ ಮಾಡುತ್ತದೆ ಮತ್ತು ಇದು ರಾಷ್ಟ್ರೀಯ ಭಂಢಾರವಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ. NROER, click http://nroer.gov.in/home . ಹಾಗೆಯೇ 'ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ'ವು ಒಂದು ಸಂಪನ್ಮೂಲ ಭಂಡಾರವಾಗಿದೆ, ಇದು ಕರ್ನಾಟಕದ ಶಿಕ್ಷಕರಿಂದ ರಚನೆಯಾಗುತ್ತಿದೆ, OER ತತ್ವಗಳಿಂದಲೇ ಇದು ಕೂಡ ಸಂಘಟಿತವಾಗಿದೆ, ಇದು ವಿಕಿಪಿಡಿಯಾದ ವೇದಿಕೆಯಾದ ವಿಕಿಯಿಂದ ನಿರ್ಮಾಣಗೊಂಡಿದೆ. ಅರ್ಥಪೂರ್ಣ, ಸ್ಥಳೀಯ ಅಗತ್ಯತೆಗೆ ಮತ್ತು ಕ್ರಿಯಾಶೀಲ ಸಂಪನ್ಮೂಲಗಳನ್ನು ರಚಿಸುವಲ್ಲಿ ಶಿಕ್ಷಕರು ಮತ್ತು ಪ್ರಶಿಕ್ಷಕರು ಅತ್ಯಂತ ಮುಖ್ಯ ಪಾತ್ರ ವಹಿಸಿದ್ದಾರೆ.
ಕೊಯರ್ ಉದ್ದೇಶಗಳು
- ಸಹಯೋಗದ ವಾತಾವರಣವುಳ್ಳ ಸಹವರ್ತಿ ಜಾಲಗಳ ನಿರ್ಮಾಣದ ಮೂಲಕ ಕಲಿಕೆ, ಹಂಚಿಕೆ ಮತ್ತು ತಯಾರಿ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸುವುದು.
- ಸಂಪನ್ಮೂಲ ತಯಾರಿ ಮತ್ತು ಸಂಗ್ರಹ ಕೋಶಗಳು ಈ ನಿರಂತರ ಕಲಿಕೆಯ ಉದ್ದೇಶ ಮತ್ತು ಮಾರ್ಗಗಳಾಗಿವೆ.
- ಶೈಕ್ಷಣಿಕ ಫಲಿತಾಂಶಗಳನ್ನು ಉನ್ನತೀಕರಿಸಲು ಪೂರಕವಾಗುವಂ ತಹ ಶೈಕ್ಷಣಿಕ ಸ೦ಪನ್ಮೂಲಗಳನ್ನು ತಯಾರಿಸುವ ಮತ್ತು ಹಂಚಿಕೆ ಮಾಡುವಂತಹ ಸುಸ್ಥಿರ ಮಾದರಿಯನ್ನು ಒದಗಿಸುವುದು.
- ಬೋಧನಾ ಸಂಪನ್ಮೂಲಗಳ ಸಂಗ್ರಹ ಕೋಶ - ಶಿಕ್ಷಕರಿಗೆ, ಪ್ರಶಿಕ್ಷಕರಿಗೆ ಹಾಗೂ ಬೋಧನಾ ಶಿಕ್ಷಣದ ಸಂಪನ್ಮೂಲ ನೆಲೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ. http://karnatakaeducation.org.in/KOER/en/index.php/KOER_background-note