ರಚನಾ ವಿಜ್ಞಾನ 9 ಶಿಕ್ಷಕರ ಕೈಪಿಡಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಶಿಕ್ಷಕರ ಕೈಪಿಡಿ

ವಿಜ್ಞಾನ ಎಂದರೆ ಕುತೂಹಲ, ಅಚ್ಚರಿ, ತರ್ಕ, ಪ್ರಯೋಗಶೀಲತೆ, ನಿಖರತೆ, ಸರಳತೆ, ಸ್ಪಷ್ಟತೆ, ವಿಮರ್ಶೆ. ವಿಜ್ಞಾನವು ಮಗುವಿನ ಸರ್ವತೋಮುಖ ಬೆಳವಣಿಗೆಗೆ ತನ್ನದೇ ರೂಪ ಮತ್ತು ಭಾಷೆಯಲ್ಲಿ ಸಹಕಾರಿ. ಹೊಸ ಶಿಕ್ಷಣ ವ್ಯವಸ್ಥೆಯು ಮಗುವಿನ ಜ್ಞಾನವನ್ನು ಪುನಾರಚನೆ ಹಾಗೂ ಮಗುವಿನ ಕಲಿಕಾ ಸಂವೇದನೆಗಳಿಗೆ ಅವಕಾಶ ಕಲ್ಪಿಸುವುದನ್ನು ಬಯಸುತ್ತದೆ. ಈ ರೀತಿಯ ಕಲಿಕೆಗೆ ವಿನೂತನ ಕಲಿಕಾ ಶೈಲಿಗಳಾದ ರಚನಾವಾದ ತತ್ವ ಮತ್ತು ವಿಮರ್ಶಾತ್ಮಕ ಶಿಕ್ಷಣ ಶಾಸ್ತ್ರಗಳು ಅವಶ್ಯಕ. ಈ ಸಂಚಿಕೆಯಲ್ಲಿ ಇದಕ್ಕೆ ಮುನ್ನೆಜ್ಜೆ ಇಡಲಾಗಿದೆ.

ಮಗುವಿನಲ್ಲಿರುವ ಕ್ರಿಯಾಶೀಲ ಚಿಂತನೆ, ಆಲೋಚನೆಗಳನ್ನು ತಿಳಿಯಲು ಶಿಕ್ಷಕರ ಸಂಚಿ ದಾರಿ ತೋರಿಸುತ್ತದೆ. ಮಕ್ಕಳಿಗೆ ಗುಣಮಟ್ಟಾಧಾರಿತ ಶಿಕ್ಷಣ ನೀಡಲು ಇದು ಸಹಕಾರಿಯಾಗಿದೆ. ಮಗುವಿನ ಜ್ಞಾನಾರ್ಜನೆಯನ್ನು ಸುಗಮಗೊಳಿಸಲು ಅಣಿಗೊಳಿಸುತ್ತಿರುವುದೇ ಈ ಶಿಕ್ಷಕರ ಸಂಚಿ.

ಶಿಕ್ಷಕರ ಕೈಪಿಡಿಯ ಉದ್ದೇಶಗಳು

ಟ ಹೊಸ ಪಠ್ಯಪುಸ್ತಕದಲ್ಲಿರುವ ಪಾಠಗಳನ್ನು ಯಾವ ರೀತಿ ನಿರ್ವಹಿಸುವುದು ಎಂಬ ಬಗ್ಗೆ ಶಿಕ್ಷಕರಿಗೆ ಮಾರ್ಗದರ್ಶನ ನೀಡುವುದು.

ಟ ಶಿಕ್ಷಕರಲ್ಲಿ ಸ್ವಯಂ ಕಲಿಕೆಗೆ ಅನುಕೂಲಿಸುವುದು.

ಟ ಶಿಕ್ಷಕರ ಸಹಜ ಕೌಶಲಗಳು ಹಾಗೂ ಮಾನಸಿಕ ಸಾಮಥ್ರ್ಯಗಳನ್ನು ಹೆಚ್ಚಿಸಿಕೊಳ್ಳಲು ಅಗತ್ಯ ಬೆಂಬಲ ನೀಡುವುದು.

ಟ ಕ್ಲಿಷ್ಟ ವಿಷಯಗಳನ್ನು ಸರಳವಾಗಿ ಅರ್ಥೈಸಿಕೊಳ್ಳಲು ಅಗತ್ಯವಾದ ವಿವರಣೆ ನೀಡುವುದು.

ಟ ತರಗತಿ ಪ್ರಕ್ರಿಯೆಗಳನ್ನು ಅನುಭವಾತ್ಮಕಗೊಳಿಸಲು ಅಗತ್ಯ ಚಿಂತನೆ ಹುಟ್ಟುಹಾಕುವುದು.

ಟ ಶಿಕ್ಷಕರ ಕ್ರಿಯಾಶೀಲ ಚಿಂತನೆಗೆ ಅವಕಾಶ ಕಲ್ಪಿಸುವುದು.

ಟ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ನಿರಂತರವಾಗಿ ಮೌಲ್ಯಮಾಪನ ಮಾಡುವ ವಿಧಾನಗಳನ್ನು ಪರಿಚಯಿಸುವುದು.

ಕೈಪಿಡಿಯ ಸ್ವರೂಪ

ಶಿಕ್ಷಣದಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ಅರ್ಥೈಸಿಕೊಳ್ಳಲು ಮತ್ತು ಅನುಭವಗಳ ಮೂಲಕ ಶಿಕ್ಷಣ ಪಡೆಯಲು ಶಿಕ್ಷಕರ ಕೈಪಿಡಿ ಕೈಗನ್ನಡಿಯಾಗಿದೆ. ಶಿಕ್ಷಕರಿಗೆ ಉತ್ತಮ ಮಾರ್ಗದರ್ಶನವನ್ನು ಒದಗಿಸಿದೆ. ಶಿಕ್ಷಕರಿಗೆ ವಿದ್ಯಾರ್ಥಿಯ ಕಲಿಕೆಯನ್ನು ದಾಖಲಿಸಲು ಸಹಕಾರಿಯಾಗಿದೆ. ಕೆಳಕಂಡ ಪ್ರಮುಖ ಅಂಶಗಳನ್ನು ಶಿಕ್ಷಕರ ಸಂಚಿ ತನ್ನ ಸಂಚಿಯಲ್ಲಿ ಅಳವಡಿಸಿದೆ.

ಟ ಘಟಕಕ್ಕೆ ಸಂಬಂಧಿಸಿದಂತೆ, ಕಲಿಕಾ ಉಪಕರಣಗಳ ಪಟ್ಟಿ, ಸಂಗ್ರಹ ಬಳಕೆ.

ಉದಾ:- ಶಬ್ದ ಉತ್ಪತ್ತಿಯ ವಿವಿಧ ಮೂಲಗಳಾವುವು ಎಂಬುದನ್ನು ಪಟ್ಟಿ ಮಾಡುತ್ತಾರೆ.

ಟ ಅನುಭವಾತ್ಮಕ ಕಲಿಕೆಗೆ ಬೇಕಾಗುವ ಸನ್ನಿವೇಶಗಳನ್ನು ಸೃಷ್ಟಿಸುವುದು ಉದಾ:- `ಉಷ್ಣ' ಪಾಠ ಮಾಡುವಾಗ ವಿದ್ಯಾರ್ಥಿಗಳ ಎರಡೂ ಕೈಗಳನ್ನು ಉಜ್ಜಲು ಹೇಳಿ ಅವರಿಗಾದ ಅನುಭವವನ್ನು ಅವರು ತಮ್ಮ ತಮ್ಮಲ್ಲಿ ಚರ್ಚಿಸಿ ದಾಖಲಿಸುವುದು.

ಟ ವಸ್ತುನಿಷ್ಠ ಕಲಿಕೆಗೆ ಹತ್ತಿರವಾದ ಅಂಶಗಳನ್ನು ಪಟ್ಟಿಮಾಡುವುದು. ಉದಾ: ಬೆಳಕು ಪಾಠ ಮಾಡುವಾಗ ಟಾರ್ಚ್ ಲೈಟನ್ನು ಕನ್ನಡಿ ಮೇಲೆ ಹಾಯಿಸಿದಾಗ ಅದರಿಂದ ಹೊರ ಹೊಮ್ಮುವ ಬೆಳಕಿನ ಬಗ್ಗೆ ವಿದ್ಯಾರ್ಥಿಗಳ ಬಳಿ ಮಾಹಿತಿ ಪಡೆಯುವುದು.

ಟ ಘಟಕಕ್ಕೆ ಸಂಬಂಧಿಸಿದಂತೆ ಸಮೂಹ ಮಾಧ್ಯಮಗಳ ಬಗ್ಗೆ ಮಾಹಿತಿ.

ಉದಾ: ರೇಡಿಯೋ ಎಂಬುದರ ಅರ್ಥ, ಪ್ರಸಾರ, ಕಾರ್ಯ ನಿರ್ವಹಿಸುವಿಕೆ, ಟಿ.ವಿ. ಎಂಬುದರ ಅರ್ಥ, ಪ್ರಸಾರ, ಕಾರ್ಯ ನಿರ್ವಹಿಸುವಿಕೆ.

ಟ ಪರಿಸರ ಸಂರಕ್ಷಣೆಗೆ ದಾರಿ.

ಉದಾ: ಘಟಕಕ್ಕೆ ಸಂಬಂಧಿಸಿದಂತೆ, ಪ್ರಕೃತಿಯ ಸಂಪನ್ಮೂಲವಾದ ನೀರಿನ ಪ್ರಾಮುಖ್ಯತೆ, ವಾತಾವರಣದಲ್ಲಿರುವ ಜೀವಿಗಳ ಸಂರಕ್ಷಣೆ, ನಮ್ಮ ಪರಿಸರದ ಅಧ್ಯಯನ ಘಟಕಗಳಿಗೆ ಒತ್ತು.

ಟ ಪ್ರಯೋಗಶೀಲತೆಗೆ ಅವಕಾಶ

ಉದಾ: ನಿತ್ಯಜೀವನದಲ್ಲಿ ರಾಸಾಯನಿಕಗಳು ಘಟಕದಲ್ಲಿ ನೀಲಿ ಲಿಟ್ಮಸ್ ಕೆಂಪು ಬಣಕ್ಕೆ, ಕೆಂಪು ಲಿಟ್ಮಸ್ ನೀಲಿ ಬಣ್ಣಕ್ಕೆ ತಿರುಗುವುದನ್ನು ಮಕ್ಕಳು ಪ್ರಯೋಗ ಮಾಡುವುದು.

ಟ ಶಬ್ದಗಳ ವ್ಯುತ್ಪತ್ತಿಯ ಮೂಲಕ ವಿಜ್ಞಾನ ಇತಿಹಾಸವನ್ನು ಪರಿಕಲ್ಪನೆಗಳ ಉಗಮ ಮತ್ತು ವಿಕಾಸಗಳನ್ನು ಪರಿಚಯಿಸುವುದು.

ಶಿಕ್ಷಕರ ಕೈಪಿಡಿಯ ಉಪಯೋಗಗಳು

ಟ ಕಲಿಕಾ ಪ್ರಕ್ರಿಯೆಯನ್ನು ಸುಗಮಗೊಳಿಸಲು ಅಗತ್ಯವಾದ ಪಾಠ ಯೋಜನೆಯನ್ನು ಸಿದ್ಧಪಡಿಸುವುದಕ್ಕೆ ಉಪಯೋಗವಾಗುತ್ತದೆ.

ಟ ಕಲಿಕಾಂಶಕ್ಕೆ ಪೂರಕವಾದ ಪಾಠಯೋಜನೆಯನ್ನು ಬಳಸಿಕೊಳ್ಳುವಾಗ ಪ್ರತಿಯೊಂದು ಹಂತದಲ್ಲಿ ಯಾವುದನ್ನು ಹೇಗೆ ಬಳಸಿಕೊಳ್ಳಬೇಕೆಂದು ಅಧ್ಯಾಪಕರು ತಮ್ಮ ಯೋಜನೆಯಲ್ಲಿ ದಾಖಲಿಸುವುದು ಸಾಧ್ಯವಾಗುತ್ತದೆ.

ಟ ಪಾಠದ ಉದ್ದೇಶಗಳನ್ನು ಮೀರಿದ ವಿಷಯ ಸಂಗ್ರಹಣೆ.

ಟ ತರಗತಿಗಳಲ್ಲಿ ವಿದ್ಯಾರ್ಥಿಗಳಿಂದ ಬರಬಹುದಾದ ಪ್ರಶ್ನೆಗಳಿಗೆ ಉತ್ತರಿಸುವ ಸಾಮಥ್ರ್ಯ ಒದಗಿಸುತ್ತದೆ.

ಟ ವಿದ್ಯಾರ್ಥಿಗಳಿಗೆ ಪ್ರೇರೇಪಣೆಯನ್ನು ಉಂಟು ಮಾಡುವ ಸಾಮಥ್ರ್ಯ ಬೆಳೆಸಿಕೊಳ್ಳಲು ಪೂರಕವಾಗಿರುತ್ತದೆ.

ಟ ಶಿಕ್ಷಕನ ವೈಯಕ್ತಿಕ ಜ್ಞಾನಾಭಿವೃದ್ಧಿಗೆ ಪೂರಕವಾಗಿರುತ್ತದೆ.

ಟ ಜ್ಞಾನದ ಪುನಾರಚನೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪಠ್ಯವಸ್ತು ರೂಪುಗೊಂಡಿದೆ.

ಟ ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ ಕ್ರಮವನ್ನು ಅನುಸರಿಸಲು ಸಹಾಯ ಮಾಡುತ್ತದೆ.

ಟ ಬದಲಾದ ಪಠ್ಯವಸ್ತು ಹೊಸ ಹೊಸ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ.

ವಿದ್ಯಾರ್ಥಿಗಳ ವರ್ಕ್‍ಬುಕ್

ತರಗತಿಯಲ್ಲಿ ಕಲಿತ ವಿಷಯಗಳನ್ನು ಅಭ್ಯಾಸ ಮಾಡಲು ಹಾಗೂ ಪುನರ್ಬಲನಗೊಳಿಸಲು ವಿದ್ಯಾರ್ಥಿಗಳ ವರ್ಕ್‍ಬುಕ್ ಸಹಕಾರಿ. ಇದರೊಂದಿಗೆ ತರಗತಿ ಅಥವಾ ಶಾಲೆಯಲ್ಲಿ ತಾನು ಏನನ್ನು ಕಲಿತಿರುವೆ, ಎಷ್ಟು ಕಲಿತಿರುವೆ ಮತ್ತು ಹೇಗೆ ಕಲಿತಿರುವೆ ಎನ್ನುವುದನ್ನು ಮಗುವೇ ತನ್ನ ಸ್ವ ಕಲಿಕೆಯ ಆಧಾರದ ಮೇಲೆ ಮೌಲ್ಯಮಾಪನವನ್ನು ಮಾಡಿಕೊಳ್ಳುವುದಕ್ಕೆ ಕೂಡಾ ಈ ವರ್ಕ್‍ಬುಕ್ ಅನುಕೂಲ ಮಾಡಿಕೊಡುತ್ತದೆ. ಮಗುವಿನ ನಿಖರವಾದ ಕಲಿಕೆಗೆ ಇದು ಮಾರ್ಗದರ್ಶನವನ್ನು ನೀಡುತ್ತದೆ.

ವರ್ಕ್‍ಬುಕ್‍ನ ಉದ್ದೇಶಗಳು

ಟ ಮಗುವಿನ ಕಲಿಕಾ ಪ್ರಮಾಣವನ್ನು ತಿಳಿದು ಅಗತ್ಯ ಬೆಂಬಲ ಕಾರ್ಯಕ್ರಮ ರೂಪಿಸಲು ಶಿಕ್ಷಕರಿಗೆ ಅನುಕೂಲ ಮಾಡಿಕೊಡುವುದು.

ಟ ಮಗುವಿನ ಸ್ವ ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸುವುದು.

ಟ ಪ್ರಶ್ನೆಗಳೊಂದಿಗೆ ವಸ್ತು ವಿಷಯವನ್ನು ಅರ್ಥೈಸಿಕೊಳ್ಳಲು ಅನುಕೂಲಿಸುವುದು.

ಟ ಮಕ್ಕಳ ಸಹಜ ಕೌಶಲಗಳು ಮತ್ತು ಮಾನಸಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಲು ಅವಕಾಶ ನೀಡುವುದು.

ಟ ಮಗುವಿನ ಭಾವನತ್ಮಕ ವಲಯಗಳ ಮೌಲ್ಯಮಾಪನವಾಗಲು ಅವಕಾಶ ಕಲ್ಪಿಸುವುದು.

ಟ ಕಲಿಕೆಯ ಪುನರ್‍ಮನನಕ್ಕೆ ಉತ್ತಮ ಅವಕಾಶ ಕಲ್ಪಿಸುವುದು.

ಟ ಮಗುವಿನಲ್ಲಿ ಅಡಗಿರುವ ಸುಪ್ತ ಅನುಭವಗಳನ್ನು ಹೊರಹೊಮ್ಮಿಸಲು ಅವಕಾಶ ಕಲ್ಪಿಸುವುದು.

ಟ ಮಗುವಿಗೆ ಕಲಿಕಾ ದಾಖಲೆಯಾಗಿ ವರ್ಕ್‍ಬುಕ್‍ನ್ನು ಬಳಸುವುದು.

ಟ ವರ್ಕ್‍ಬುಕ್ ಮಗುವಿನ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಿ ಕಲಿಕಾಂಶ, ಸಾಮಥ್ರ್ಯ ಮತ್ತು ಕಲಿಕಾ ಸ್ವರೂಪವನ್ನು ಅರ್ಥೈಸುವುದು.

ಟ ಮಗು ತಾನು ಕಲಿತದ್ದನ್ನು ತನ್ನ ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದು.

ಟ ಮಗುವಿನಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವುದು.

ಟ ಮಗುವಿನ ಆರೋಗ್ಯ, ಆಹಾರದ ಬಗ್ಗೆ ಪರಿಕಲ್ಪನೆಯನ್ನು ಬಳಸಿ ನಿರಂತರ ಪರಿಸರ ಕಾಳಜಿಯನ್ನು ಮಗು ಅನುಸರಿಸುವಂತೆ ಪ್ರೇರಣೆ ನೀಡುವುದು.

ಟ ಕ್ಲಿಷ್ಟ ವಿಷಯಗಳನ್ನು ಸರಳೀಕರಿಸಿ ಅರ್ಥೈಸುವಂತಹ ಚಟುವಟಿಕೆಗಳನ್ನು ಅಳವಡಿಸಿ, ಮಗುವೇ ಕ್ಲಿಷ್ಟ ವಿಷಯಗಳನ್ನು ಅರ್ಥೈಸಿಕೊಳ್ಳುವಂತೆ ಅವಕಾಶ ಕಲ್ಪಿಸುವುದು.

ಟ ಮಗುವಿನ ಜ್ಞಾನಾರ್ಜನೆ ಸುಗುಮವಾಗಿ ಆಗುವಂತೆ ಮಾಡುವುದು.

ಟ ಗುಣಮಟ್ಟದ ಕಲಿಕೆಯ ಜೊತೆಗೆ ವಾಸ್ತವ ಕಲಿಕೆಗೆ ಅವಕಾಶ ಮಾಡಿಕೊಡುವುದು.

ವರ್ಕ್‍ಬುಕ್‍ನ ಸ್ವರೂಪ

ವರ್ಕ್‍ಬುಕ್ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ವರ್ಕ್‍ಬುಕ್ ವಿದ್ಯಾರ್ಥಿಗಳಿಗೆ ಸಕ್ರಿಯವಾಗಿ ಕಲಿವಿನ ಅನುಭವವನ್ನು ಉಂಟುಮಾಡುವಂತದ್ದು. ಕಲಿವಿನ ಎಲ್ಲಾ ಸನ್ನಿವೇಶಗಳಲ್ಲೂ ತಾನು ಕಲಿತ ಎಲ್ಲಾ ಅನುಭವಗಳ ವಿನ್ಯಾಸದೊಂದಿಗೆ ವಿವಿಧ ಕಲಿಕಾ ಸನ್ನಿವೇಶಗಳನ್ನು ಅರ್ಥೈಸಿಕೊಳ್ಳುವಂತಹ ವರ್ಕ್‍ಬುಕ್‍ನ ಸ್ವರೂಪವನ್ನು ನಾವು ಅರಿಯಬಹುದಾಗಿದೆ.

ಈ ವರ್ಕ್‍ಬುಕ್ ಪ್ರತಿ ಘಟಕಕ್ಕೆ ವಿಭಿನ್ನವಾಗಿದ್ದು, ನಿರ್ದಿಷ್ಟ ಉದ್ದೇಶಗಳನ್ನು ಪೂರೈಸುವುದಲ್ಲದೆ, ಘಟಕಾಧಾರಿತ ಪ್ರಶ್ನೆ ಚಟುವಟಿಕೆ, ಮಾರ್ಗದರ್ಶನ ಮುಂತಾದ ಅಂಶಗಳನ್ನು ಒಳಗೊಂಡಿರುತ್ತದೆ.

ಟ ವಿವಿಧ ಉದ್ದೇಶಗಳನ್ನು ಒಳಗೊಂಡಂತೆ ಪ್ರಶ್ನೆಗಳನ್ನು ರಚಿಸಲಾಗಿರುತ್ತದೆ.

ಟ ನಿರ್ದಿಷ್ಟಪಡಿಸಲಾದ ಪ್ರಶ್ನೆಗಳ ಸಂಖ್ಯಾ ಪ್ರಮಾಣವನ್ನು ಹೊಂದಿರುತ್ತದೆ.

ಟ ಪ್ರಶ್ನೆಗಳ ವಿವಿಧ ಸ್ವರೂಪಗಳನ್ನು ಒಳಗೊಂಡಿರುತ್ತದೆ.

ಟ ಪ್ರಶ್ನೆಗಳು ನಿರ್ದಿಷ್ಟವಾದ ಉತ್ತರವನ್ನು ನಿರೀಕ್ಷಿಸುವಂತೆ ಇರುತ್ತದೆ.

ಟ ಪ್ರಶ್ನೆಗಳು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತಿದ್ದು, ಸರಳತೆಯಿಂದ ಕ್ಲಿಷ್ಟತೆ ಅಂಶವನ್ನು ಅರ್ಥೈಸುಕೊಳ್ಳುವಂತಿರುತ್ತದೆ.

ಟ ಚಟುವಟಿಕೆ ಮತ್ತು ಪ್ರಶ್ನೆಗಳು ಘಟಕದಿಂದ ಘಟಕಕ್ಕೆ ವಿಭಿನ್ನತೆಯನ್ನು ಹೊಂದಿದ್ದು, ಅವುಗಳ ಉದ್ದೇಶವೂ ಸಹ ಮಗುವಿನ ಕಲಿವಿನ ಸಾಮಥ್ರ್ಯವನ್ನು ಹೆಚ್ಚಿಸುವಂತಿರುತ್ತದೆ.

ಟ ಮಗುವಿಗೆ ನೀಡಿರುವ ಚಟುವಟಿಕೆಯು ಸರಳವಾಗಿಯೂ, ಚಿಂತನಶೀಲವಾಗಿಯೂ ಇರುತ್ತವೆ.

ಟ ಪ್ರಧಾನವಾಗಿ ಗುಂಪು ಚಟುವಟಿಕೆಗಳಿಗೆ ಆದ್ಯತೆ ನೀಡುತ್ತದೆ.

ಟ ಶಾಲೆಯಲ್ಲಿ ಕೈಗೊಳ್ಳುವ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ಪೂರಕವಾಗಿರುತ್ತದೆ.

ಹೊಸ ಪಠ್ಯಪುಸ್ತಕದಲ್ಲಿ ಜ್ಞಾನರಚನೆ, ಪುನಾರಚನೆಗೆ ಇರುವ ಅವಕಾಶಗಳು

ಓಅಈ-2005ರ ಪ್ರಧಾನ ಆಶಯವೆಂದರೆ, ಮಗುವಿನ ಪೂರ್ವಜ್ಞಾನದ ಅನುಭವದ ಮೇಲೆ ಪ್ರಸಕ್ತ ಕಲಿಕಾ ಸನ್ನಿವೇಶವನ್ನು ಸಜ್ಜುಗೊಳಿಸುವುದು. ಈ ಹಿನ್ನೆಲೆಯಲ್ಲಿ ವಿಜ್ಞಾನ ಪಠ್ಯಪುಸ್ತಕದಲ್ಲಿ ಮಗುವಿನ ದಿನನಿತ್ಯದ ಅನುಭವಗಳನ್ನು ಕಲಿಕಾ ಸನ್ನಿವೇಶದಲ್ಲಿ ಬಳಸಿಕೊಳ್ಳಲು ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ. ಈ ಸಂದರ್ಭದಲ್ಲಿ ಶಿಕ್ಷಕರು ತನ್ನ ಪಾತ್ರದಲ್ಲಿ `ಬೋಧಕ' ಎಂಬುದಕ್ಕೆ ಬದಲಾಗಿ ಮಗುವಿನ ಕಲಿಕೆಯ ಸುಗಮಕಾರ ಅಥವಾ ಅನುಕೂಲಿಸುವವರಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಆದರೆ ಮಗುವು ತೊಡಗಿಸಿಕೊಂಡಿರುವ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಅಗತ್ಯವಿದ್ದಲ್ಲಿ ಮಗುವಿಗೆ ಪ್ರಶ್ನೆಗಳ ಮೂಲಕ ಕಲಿಕೆ ಅನುಕೂಲಿಸುವಂತಹಾ ಶಿಕ್ಷಕರಾಗಬೇಕಿದೆ.

ವಿಜ್ಞಾನ ಪಠ್ಯಪುಸ್ತಕದಲ್ಲಿ ವಿದ್ಯಾರ್ಥಿಗಳೇ ತೊಡಗಿಕೊಳ್ಳಬಹುದಾದ ಚಟುವಟಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಮಕ್ಕಳು ಕಲಿಕಾ ಸಾಮಗ್ರಿಗಳನ್ನು ತಾವೇ ಮುಟ್ಟಿ ಅನುಭವಿಸುತ್ತಾ ಅವಲೋಕಿಸುವ, ಗುಂಪುಗೂಡಿಸುವ, ಅವುಗಳ ಗುಣಗಳನ್ನು ತಿಳಿಯುತ್ತಾ ಪಟ್ಟಿ ಮಾಡುವ, ಅವುಗಳ ಬಳಕೆಯ ಬಗ್ಗೆ ತಮ್ಮ ಪೂರ್ವಜ್ಞಾನದ ಅನುಭವದಿಂದ ವಿಜ್ಞಾನದ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳುತ್ತಾ ಕಲಿಯುವಂತಿವೆ. ಈ ರೀತಿಯಿಂದ ಕಲಿಕೆಗೆ ಅಗತ್ಯವಾದ ಕೌಶಲ್ಯಗಳನ್ನು ಹಾಗೂ ಸ್ವಯಂ ತೀರ್ಮಾನ ತೆಗೆದುಕೊಳ್ಳುವ ಕೌಶಲ್ಯಗಳನ್ನು ಮಕ್ಕಳು ಬೆಳೆಸಿಕೊಳ್ಳುವರು ಎಂದು ಭಾವಿಸಿದೆ.

ವಿಜ್ಞಾನ ಪಠ್ಯದಲ್ಲಿ ರಚನಾವಾದದ ಪ್ರಕ್ರಿಯೆಯು 5 ಅಂಶಗಳನ್ನೊಳಗೊಂಡಿದೆ. ಇವುಗಳಿಗೆ 5ಇಗಳು ಎನ್ನಬಹುದು.

1) ತೊಡಗಿಸಿಕೋ (ಇಓಉಂಉಇ)

2) ಅನ್ವೇಷಿಸು (ಇಘಿPಐಔಖಇ)

3) ಅಭಿವ್ಯಕ್ತಿಸು (ಇಘಿPಖಇSS)

4) ವಿಸ್ತರಿಸು (ಇಐಂಃಔಖಂಖಿಇ)

5) ಮೌಲ್ಯಮಾಪಿಸು (ಇಗಿಂಐUಂಖಿಇ)


ಟ ವಿದ್ಯಾರ್ಥಿಗಳು ಪ್ರಶ್ನೆ ಕೇಳುವ ಮೂಲಕ ಅಥವಾ ಕಲಿಕಾ ಸಾಮಗ್ರಿಗಳೊಂದಿಗೆ ಪ್ರಯೋಗಗಳನ್ನು ಮಾಡುವುದರ ಮೂಲಕ ಕಲಿಕಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಟ ತಮ್ಮ ತಮ್ಮಲ್ಲಿ ಚರ್ಚಿಸಿ, ತಾರ್ಕಿಕವಾಗಿ ಆಲೋಚಿಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗಗಳನ್ನು ತಾವೇ ಆವಿಷ್ಕರಿಸುತ್ತಾರೆ. ಶಿಕ್ಷಕರು ಇದನ್ನು ಉತ್ತೇಜಿಸುತ್ತಾರೆ.

ಟ ತಮ್ಮ ಅಭಿಪ್ರಾಯ ಅಥವಾ ಅನುಭವಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾರೆ.

ಟ ತಮ್ಮ ಆಲೋಚನೆಗಳನ್ನು ಕ್ರೋಢಿಕರಿಸಲು ಮತ್ತು ವಿಸ್ತರಿಸಲು ಶಿಕ್ಷಕರು ಅನುಕೂಲಿಸುತ್ತಾರೆ.

ಟ ತಾವು ಕಂಡುಕೊಂಡ ಪರಿಹಾರೋಪಾಯಗಳನ್ನು ಪರಿಶೀಲಿಸಿ, ಮೌಲ್ಯೀಕರಿಸಿ ಸ್ವಯಂ ನಿರ್ಧರಿಸಲು ಶಿಕ್ಷಕರು ಅನುಕೂಲಿಸುತ್ತಾರೆ.

ಕಲಿಕೆ ಅಥವಾ ಜ್ಞಾನ ಕಟ್ಟಿಕೊಳ್ಳಲು ಅನುಕೂಲಿಸುವುದು : ರಚನಾವಾದ ಮತ್ತು ವಿಮರ್ಶಾಯುಕ್ತ ಶಿಕ್ಷಣ ಕ್ರಮಗಳು.

ರಚನಾವಾದ

ರಾ.ಪ.ಚೌ 05ರನಂತರ ರಚನಾವಾದಿ ತತ್ತ್ವ ಹೆಚ್ಚು ಗಮನಸೆಳೆಯುವ ಕಲಿಕಾ ಪ್ರಕ್ರಿಯೆವೆನಿಸಿದೆ. ಕಲಿಕೆಯನ್ನು ಜ್ಞಾನ ಕಟ್ಟಿಕೊಳ್ಳುವ ಪ್ರಕ್ರಿಯೆ ಎಂದೂ ಅರ್ಥೈಸಿಕೊಳ್ಳಬಹುದು. ಹೀಗೆ ನೋಡಿದಾಗ ಮಗು ಎಷ್ಟು ಕಲಿಯಿತು ಎನ್ನುವುದಕ್ಕಿಂತಲೂ ಹೇಗೆ ಕಲಿಯಿತು ಎನ್ನುವುದು ಮುಖ್ಯವಾಗುತ್ತದೆ. ಹೇಗೆ ಕಲಿತೆ ಎನ್ನುವುದರ ಮೇಲೆ ಆ ಮಗುವಿನ ನಿಜವಾದ ಕಲಿಕೆ ಅಡಗಿದೆ ಎಂದರೆ ತಪ್ಪಾಗಲಾರದು.

ರಚನವಾದಿ ತತ್ತ್ವ ಎಂದನ್ನುವಾಗಲೇ ಅಂತರ್ಗತವಾಗಿ ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವ ಅಭಿವ್ಯಕ್ತಿ ಇದೆ. ಮಕ್ಕಳು ತಮ್ಮತಮ್ಮ ಜ್ಞಾನವನ್ನು ತಮ್ಮತಮ್ಮದೇ ರೀತಿಗಳಲ್ಲಿ ಕಟ್ಟಿಕೊಳ್ಳುತ್ತಾರೆ. ಅಂತಹ ಕಲಿಕೆಗೆ ಅವಕಾಶ ಮಾಡಿಕೊಟ್ಟಾಗ ಆ ಕಲಿಕೆ ವ್ಯಕ್ತಿತ್ವದ ಒಂದು ಭಾಗವೇ ಆಗಿಬಿಡುತ್ತದೆ. ಅದಕ್ಕಾಗಿ ಕಲಿಕಾ ಅನುಭವಗಳನ್ನು ತರಗತಿಯಲ್ಲಿ ಹೇಗೆ ನೀಡಬಹುದು ಎನ್ನುವುದು ಮುಖ್ಯವಾಗುತ್ತದೆ.

ಕಲಿಕೆಯು ಶಬ್ದದ ವರ್ಗಾವಣೆಯಾದಾಗ ನೀರಸತೆಯ ಬೇಸರ ಮಗುವಿಗೆ ಆಗುತ್ತದೆ. ಅನುಭವವನ್ನು ರೂಪಿಸಿಕೊಂಡು ಅದನ್ನು ಭಾಷೆಗೆ ಅನುವಾದಿಸುವಾಗ ಗ್ರಹಿಕೆ ಹಾಗೂ ಆ ಗ್ರಹಿಕೆಯನ್ನು ಮಾತಿನಲ್ಲಿ ವ್ಯಕ್ತಪಡಿಸುವ ಕಲೆ ರೂಪುಗೊಳ್ಳುತ್ತದೆ.

ರಚನಾವಾದಿ ತತ್ತ್ವ ಅಂತಿಮವಾಗಿ ಒಂದು ಬೇರೆಯೇ ಪಠ್ಯಕ್ರಮವನ್ನು ಸೂಚಿಸುತ್ತದೆ ಎಂದೇನೂ ತಿಳಿಯಬೇಕಾಗಿಲ್ಲ. ಅದು ಕಲಿಕೆಯ ಅನುಭವಗಳನ್ನು ಸಂಘಟಿಸುವ ಒಂದು ವಿಧಾನ. ಪಠ್ಯವಸ್ತು ಯಾವುದೇ ಇದ್ದರೂ ಅದನ್ನು ಅನುಭವಾತ್ಮಕ ಕಲಿಕೆಗೆ ಒಗ್ಗಿಸಿಕೊಳ್ಳುವುದು ಹೇಗೆ ಎನ್ನುವುದು ಇಲ್ಲಿನ ಪ್ರಶ್ನೆ. ಹೀಗೇ ನೋಡಿದಾಗ ರಚನಾವಾದಿ ಪಠ್ಯಕ್ರಮದೊಳಗೆ ಎಲ್ಲವೂ ಮುಖ್ಯ ಆದರೆ ಯಾವುದೂ ಅನಿವಾರ್ಯವಲ್ಲ ಎಂಬ ಸತ್ಯ ಗೋಚರವಾಗುತ್ತದೆ. ಪಠ್ಯಪುಸ್ತಕಗಳು ತರಗತಿ ಕಲಿಕೆU

ಅನಿವಾರ್ಯ ಎಂದು ಸಾಮಾನ್ಯವಾಗಿ ತಿಳಿಯಲಾಗುತ್ತದೆ. ಆದರೆ ಜ್ಞಾನವನ್ನು ಕಟ್ಟಿಕೊಳ್ಳುವ ಕಲಿಕಾರ್ಥಿ ಯಾವುದೋ ಒಂದು ಪಠ್ಯಪುಸ್ತಕಕ್ಕೆ ತನ್ನೆಲ್ಲ ಜ್ಞಾನದ ಕಟ್ಟಿಕೊಳ್ಳುವಿಕೆಯನ್ನು ಸೀಮಿತಗೊಳಿಸಿದರೆ ಅದರಿಂದ ನಷ್ಟವೇ ಜಾಸ್ತಿ ಎಂಬುದನ್ನು ನಾವು ಗಮನಿಸಬೇಕಾಗಿದೆ. ಕಲಿಕಾದಾರರಿಗೆ ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಲು ಅನುಕೂಲಿಸಿದರೆ ಅವರುಗಳು ತಮ್ಮ ಜ್ಞಾನ ಕಟ್ಟಿಕೊಳ್ಳಲು ಒಂದು ವಿಶಾಲವಾದ ಬುನಾದಿ ನಿರ್ಮಿಸಲು ಸಾಧ್ಯವಾಗುತ್ತದೆ. ಇದು ಆಗಬೇಕಾದ ಕೆಲಸ. ಎಂದರೆ ಪಠ್ಯಪುಸ್ತಕವು ರಚನವಾದಿ ತತ್ವದ ಅನುಷ್ಠಾನಕ್ಕೆ ಅತ್ಯಂತ ಅನಿವಾರ್ಯವೇನೂ ಅಲ್ಲ. ಪಠ್ಯಪುಸ್ತಕ ಕೂಡಾ ಕಲಿಕಾದಾರರಿಗೆ ಲಭ್ಯವಿರುವ ಒಂದು ಮಾಹಿತಿಯ ಆಕರವಾಗಿರುತ್ತದೆ. ಅಂತೆಯೇ ಕಲಿಕೋಪಕರಣಗಳು ಎಷ್ಟು ಮುಖ್ಯ ಎಂದು ಕೇಳಿಕೊಳ್ಳುವುದಕ್ಕಿಂತಲೂ ಅವನ್ನು ಬಳಸುವುದು ಹೇಗೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಕಲಿಕೋಪಕರಣವು ಪ್ರದರ್ಶನಕ್ಕಿರುವ ವಸ್ತುವಲ್ಲ. ಕಲಿಕಾರ್ಥಿ ಅದನ್ನು ನೋಡಬೇಕು, ಮುಟ್ಟಬೇಕು, ಬಳಸಬೇಕು ಹಾಗೂ ಆ ಅನುಭವಗಳನ್ನು ತನ್ನ ಅನುಭವಗಳೊಡನೆ ಸಮೀಕರಿಸಿಕೊಳ್ಳಬೇಕು. ಅವುಗಳ ಕುರಿತಾಗಿ ಅಧಿಚಿಂತನೆಯಲ್ಲಿ (meಣಚಿಣhiಟಿಞiಟಿg) ತೊಡಗಬೇಕು ಹಾಗೂ ಕೊನೆಯಲ್ಲಿ ನಿರ್ಧಾರಗಳನ್ನು ಕೈಗೊಂಡು ತನ್ನ ಜ್ಞಾನ ಕಟ್ಟಿಕೊಳ್ಳಬೇಕು. ತರಗತಿಯ ಕಲಿಕಾ ಪ್ರಕ್ರಿಯೆ ಈ ಎಲ್ಲಕ್ಕೂ ಎಡೆಮಾಡಿಕೊಡಬೇಕು. ಇಂತಹ ಕಲಿಕಾ ಪ್ರಕ್ರಿಯೆಗಳನ್ನು ತರಗತಿಗಳಲ್ಲಿ ಯಾವ ರೀತಿ ಸಂಘಟಿಸಬಹುದು ಎಂದು ನೋಡೋಣ.

ರಚನವಾದಿ ತಳಹದಿಯ ಮೇಲೆ ರೂಪಿಸುವ ತರಗತಿ ಪಠ್ಯಪುಸ್ತಕವನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಬೇಕು, ವಿಷಯವಾರು, ಪಾಠವಾರು ಅಲ್ಲ. ಜ್ಞಾನವು ಸಂಯೋಜಿತ-ಸಮ್ಮಿಳಿತದ ರೀತಿಯಲ್ಲಿರುತ್ತದೆಯೇ ಹೊರತು ಪ್ರತ್ಯೇಕ ಪ್ರತ್ಯೇಕವಾಗಿ ಇರುವುದಿಲ್ಲ. ವಿವಿಧ ವಿಷಯಗಳ ನಡುವೆ ಇರುವ ಗಡಿರೇಖೆಗಳು ಅತೀ ಸೂಕ್ಷ್ಮವಾಗಿದ್ದು ಅವುಗಳನ್ನು ಮೀರಿ ಕಲಿಕೆಯು ಸಮಗ್ರವಾಗಿ ಆಗಬೇಕಿದೆ. ಜ್ಞಾನವು ಅನುಭವಗಳಿಂದ ಕಟ್ಟಿಕೊಳ್ಳುತ್ತದೆ. ವೈಯಕ್ತಿಕ ನೆಲೆಯಲ್ಲಿ ಸಂಬಂಧೀಕರಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೆ ಜ್ಞಾನ ಕಲಿಕಾದಾರರಿಗೆ ಅರ್ಥಪೂರ್ಣವಾಗಲಾರದು ಎಂಬ ಪೂರ್ವಕಲ್ಪನೆ ಹೊಂದಿದೆ.

ಹಲವು ಕಾರಣಗಳಿಗಾಗಿ ನಾವು ತರಗತಿಯಲ್ಲಿ ಕಲಿಯಬೇಕಾದ ವಿಷಯಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಗುರುತಿಸಿದ್ದೇವೆ. ಸ್ವಲ್ಪ ನಿಜ ಜೀವನವನ್ನು ಅವಲೋಕಿಸಿ. ಅಲ್ಲಿ ಗಣಿತ, ಪರಿಸರ ವಿಜ್ಞಾನ ಅಥವಾ ಕನ್ನಡ ಬೇರೆ ಬೇರೆಯಾಗಿಯೇ ಇರುತ್ತವೆಯೇ? ಅಲ್ಲಿ "ಜ್ಞಾನ" ಎಂಬೊಂದು ವಿಷಯ ಇರುತ್ತದೆಯೇ? ಅಲ್ಲಿ ಒಂದು ಸಮಗ್ರ ಅನುಭವವಿರುತ್ತದೆ ಅಷ್ಟೆ. ಈ ಅನುಭವವೇ ಸ್ವಾಭಾವಿಕ. ಉಳಿದಂತೆ ವಿಷಯಗಳನ್ನು ಪ್ರತ್ಯೇಕವಾಗಿ ಗುರುತಿಸುವುದು ಕೃತಕ. ಮನೆಯಿಂದ ಶಾಲೆಗೆ ಬರುವ ಮಗುವಿಗೆ ಮೊದಲನೆಯ ಆಘಾತ ಇದುವೆಯೇ. ಒಟ್ಟಾರೆಯಾಗಿ ಅನುಭವಿಸುತ್ತಿದ್ದ ಜೀವನವನ್ನು ವಿವಿಧ ಭಾಗಗಳ ಸಂಗ್ರಹವಾಗಿ ನೋಡುವುದು, ಅರ್ಥೈಸಿಕೊಳ್ಳುವುದು ಒಂದು ಸಮಸ್ಯೆಯೇ. ಶಾಲೆ ಮಗುವಿಗೆ ವಿವಿಧ ವಿಷಯಗಳ ಅನುಭವಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ನೀಡಿ ಮಗುವೇ ಅದನ್ನು ಅವಶ್ಯಕತೆಗನುಸಾರ ಜೀವನದಲ್ಲಿ ಅಳವಡಿಸಿಕೊಳ್ಳುತ್ತದೆ ಎಂದು ಭಾವಿಸುತ್ತದೆ. ಆದರೆ ಮೌಲ್ಯಮಾಪನದ ಪರಿಕಲ್ಪನೆಗಳು ಶಾಲಾ ಕಲಿಕೆಗೆ ಸೀಮಿತವಾಗಿದ್ದು ನಿಜಜೀವನಕ್ಕೆ ಸಂಬಂಧಪಡದಂತೆ ಇರುವುದರಿಂದ ಮಗುವಿಗೆ ಶಾಲಾ ಕಲಿಕೆಯನ್ನು

ಜೀವನಕ್ಕೆ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಹುಟ್ಟುವುದೇ ಇಲ್ಲ. ಗಣಿತದಲ್ಲಿ ನಾವೆಲ್ಲ ಕಲಿತಿದ್ದ ಕಠಿಣ ಸೂತ್ರಗಳನ್ನು ಅದೆಷ್ಟು ಬಾರಿ ನಿಜಜೀವನದಲ್ಲಿ ಬಳಸಿದ್ದೇವೆ ಎಂದು ಪ್ರಶ್ನಿಸಿಕೊಳ್ಳಿ. ಒಗಟುಗಳನ್ನು ಬಿಡಿಸುವ ಪ್ರಯತ್ನದ ಭಾಗವಾಗಿ ಬೀಜಗಣಿತ ಕಲಿತರೆ ಅದು ಜೀವನಕ್ಕೆ ಸಮೀಪವಾದ ಕಲಿಕೆಯ ಅನುಭವವಾಗುತ್ತದೆ. ಅದರ ಬದಲಿಗೆ ಯಾಂತ್ರಿಕವಾಗಿ ಬೀಜಾಕ್ಷರಗಳನ್ನು ಪರಿಚಯಿಸುವಲ್ಲಿಂದ ಆರಂಭಿಸಿದರೆ ಗಣಿತಕ್ಕೂ ಜೀವನಕ್ಕೂ ಯಾವ ಸಂಬಂಧವೂ ಇರುವುದಿಲ್ಲ. ಕಲಿಕೆ ಅನುಭವವಾಗಿ ಕಟ್ಟಿಕೊಳ್ಳುವುದೇ ಇಲ್ಲ. ಸುತ್ತಲಿನ ಪ್ರಕೃತಿಯನ್ನು ಗಮನಿಸುವಲ್ಲಿಂದ ಆರಂಭವಾಗುವ ವಿಜ್ಞಾನ ಕಲಿಕೆ ಮಕ್ಕಳ ಅನುಭವಕ್ಕೆ ಸಮೀಪವಾಗಿರುತ್ತದೆ. ಕಲಿಕೆಯನ್ನು ಹಚ್ಚು ಕ್ರಮವಾಗಿ ಸಂಘಟಿಸುವುದಕ್ಕಾಗಿ ವಿಷಯಗಳನ್ನು ಗುರುತಿಸಿರಬಹುದು. ಆದರೆ ಆರಂಭಿಕ ಹಂತಗಳಲ್ಲಿ ಅದುವೇ ಒಂದು ತೊಡಕಾಗಬಾರದಲ್ಲ. ಆದರೆ ಈಗಿನ ಶಾಲಾ ಪಠ್ಯಕ್ರಮದಲ್ಲಿ ವಿಷಯಗಳನ್ನು ಬೇರೆ ಬೇರೆಯಾಗಿಯೇ ನೋಡುವುದೇ ಕ್ರಮ. ಹೀಗಿದ್ದಾಗ ಶಿಕ್ಷಕರ ಜವಾಬ್ದಾರಿಯನ್ನು ಪುನವ್ರ್ಯಾಖ್ಯಾನಿಸಬೇಕಾಗುತ್ತದೆ. ಮಕ್ಕಳು ತಮ್ಮ ಜ್ಞಾನವನ್ನು ಕಟ್ಟಿಕೊಳ್ಳಲು ಅನುಕೂಲಿಸಬೇಕಾದರೆ ವಿಷಯಗಳ ಅರ್ಥೈಸಿಕೊಳ್ಳುವಿಕೆಯಲ್ಲಿ ಸಮಗ್ರತೆ ಇರುವುದನ್ನು ಮೊದಲಿಗೆ ಅನುಕೂಲಗಾರರಾದ ಶಿಕ್ಷಕರು ಗಮನಿಸಿರಬೇಕು. ಇದ್ನು ಸುಲಭವಾಗಿ ಹೀಗೆ ಅರ್ಥೈಸಿಕೊಳ್ಳಬಹುದು. ಸಮಾಜ ವಿಜ್ಞಾನ ಅಥವಾ ಗಣಿತದ ಬಗ್ಗೆ ಮಾತನಾಡುವ ಮಗು ಕನ್ನಡವನ್ನೂ ಬಳಸುತ್ತದೆ. ಅಂತೆಯೇ ಪರಿಸರಕ್ಕೆ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸುವಾಗ ಅಲ್ಲೊಂದಷ್ಟು ಲೆಕ್ಕಾಚಾರಗಳು ಬರಬಹುದು. ಮಕ್ಕಳಿಗೆ ಎರಡು ತಿಂಗಳುಗಳ ಕಾಲ ತಮ್ಮ ಮನೆಯ ಖರ್ಚು ವೆಚ್ಚಗಳನ್ನು ಬರೆದಿಡಲು ತಿಳಿಸಿ. ಬಳಿಕ ತರಗತಿಯಲ್ಲಿ ಅದನ್ನು ವಿಶ್ಲೇಷಿಸಿ. ಇಲ್ಲಿ ಗಣಿತದ ಮೂಲ ಕ್ರಿಯೆಗಳ ಅಭ್ಯಾಸ ಮಾಡಬಹುದು. ತಮ್ಮ ಮನೆಯ ಚಟುವಟಿಕೆಗಳು ಎಷ್ಟು ಪರಿಸರ ಸ್ನೇಹಿ, ಆರೋಗ್ಯಕ್ಕೆ ಪೂರಕ ಎಂಬಿತ್ಯಾದಿ ವಿಷಯಗಳ ಬಗ್ಗೆ ಅವಲೋಕಿಸಿಕೊಳ್ಳಬಹುದು. ಈ ಎರಡು ಚಟುವಟಿಕೆಗಳನ್ನು ನಡೆಸುವಾಗ ಸಾಕಷ್ಟು ಭಾಷೆಯ ಬಳಕೆಯೂ ಆಗುತ್ತದೆ. ಇಲ್ಲಿ ಮಕ್ಕಳು ಅಭ್ಯಸಿಸಿರುವ ಪಠ್ಯ ಅವರದ್ದೇ ಆಗಿದೆ, ಹೊರಗಿನಿಂದ ಹೇರಿದ್ದಲ್ಲ. ಅದಕ್ಕೇ ಇಂತಹ ಚಟುವಟಿಕೆಗಳು ಮಕ್ಕಳು ಒಂದು ಸಮಗ್ರ ನೆಲೆಯಿಂದ ತಮ್ಮ ಜ್ಞಾನ ಕಟ್ಟಿಕೊಳ್ಳಲು ಸಹಾಯಕವಾಗಿವೆ. ಕಲಿಕಾಂಶಗಳ ಸಮಗ್ರತೆಯ ಅರಿವಿರುವ ಶಿಕ್ಷಕರು ಅವುಗಳ ಕಲಿಕೆಯನ್ನು ಅನುಕೂಲಿಸುವಾಗ ಆ ನೆಲೆಯಿಂದಲೇ ಯೋಚಿಸಲು ಹಾಗೂ ಪಾಠಗಳನ್ನು ಯೋಜಿಸಲು ಸಾಧ್ಯವಾಗುತ್ತದೆ. ಮೇಲಿನ ತರಗತಿಗಳಿಗೆ ಹೋದಂತೆ ವಿಷಯವಾರು ಕಲಿಕೆಯ ಒತ್ತಡ, ಪ್ರಮಾಣ ಜಾಸ್ತಿಯಾಗಬಹುದು. ಆದರೆ ಈ ಸಮಗ್ರತೆಯ ಅರಿವಿನಿಂದ ಕೈಗೊಳ್ಳುವ ಎಲ್ಲಾ ಕಲಿಕೆಯ ಪ್ರಯತ್ನಗಳೂ ಕಲಿಕೆಯನ್ನು ಹೆಚ್ಚು ವೈಯಕ್ತಿಕವೂ, ತನ್ಮೂಲಕ ಹೆಚ್ಚು ಅರ್ಥಪೂರ್ಣವೂ ಮಾಡುತ್ತವೆ.

ಶಿಕ್ಷಕರು ಮೂಲವಸ್ತುಗಳ, ಸಂಯುಕ್ತವಸ್ತುಗಳ ರಾಸಾಯನಿಕ ಹೆಸರುಗಳನ್ನು ಕಪ್ಪುಹಲಗೆ ಮೇಲೆ ಬರೆಯುತ್ತಾರೆ ಹಾಗೂ ಮಕ್ಕಳು ಅವನ್ನು ಕಲಿಯುತ್ತಾರೆ. ಮಗು ತರಗತಿಯಲ್ಲಿ ಕಲಿಯದಿರುವ ಒಂದು ಸಂಯುಕ್ತವಸ್ತುವಿನ ರಾಸಾಯನಿಕ ಹೆಸರು ಏನು ಎಂದು ಮಗುವನ್ನು ಕೇಳಿ ನೋಡಿ. ಅದನ್ನು ಶಿಕ್ಷಕರು ಹೇಳಿಕೊಟ್ಟಿಲ್ಲ ಎನ್ನುವ ಉತ್ತರ ಬರುತ್ತದೆ! ಇದಕ್ಕೆ ಸಂಬಂಧಿಸಿದ ಮೂಲ ಆಕರಗಳನ್ನೇ

ನೀಡಿದರೂ ಮಗು ಆ ಆಕರಗಳನ್ನು ಪರಾಮರ್ಶಿಸುವುದಿಲ್ಲ. ಎಷ್ಟು ಕಲಿಯಿತು ಎನ್ನುವುದಕ್ಕೆ ಈ ಉದಾಹರಣೆಯಲ್ಲಿ ಒಳ್ಳೆಯ ಉತ್ತರವಿದೆ. ಆದರೆ ಮಗು ಹೇಗೆ ಕಲಿಯಿತು ಎಂದು ಯೋಚಿಸಿದರೆ ಉತ್ತರವೇ ಸಿಗುವುದಿಲ್ಲ. ಒಂದು ವೇಳೆ ಮಗುವಿಗೆ ಮಾಹಿತಿಯ ಮೂಲಗಳನ್ನು ಪರಾಮರ್ಶಿಸಲು ಹೇಳಿಕೊಟ್ಟಿದ್ದಾರೆ. ಈ ಸಮಸ್ಯೆಯೇ ಬರುತ್ತಿರಲಿಲ್ಲ. ಮಗು ಹೇಗೆ ಕಲಿಯುತ್ತದೆ ಎನ್ನುವುದರಲ್ಲಿಯೇ ನಿಜವಾದ ಕಲಿಕೆ ಇರುವುದು ಯಾಕೆಂದರೆ ಅದು ಕಲಿಯಲು ಕಲಿಯುವ ಪ್ರಕ್ರಿಯೆ. ಹೇಗೆ ಕಲಿಯುವುದು ಎಂದು ತಿಳಿದವರು ಜೀವನಪೂರ್ತಿ ಕಲಿಯುತ್ತಿರುತ್ತಾರೆ. ಅವರಲ್ಲಿ ಜ್ಞಾನ ರಚನೆ ಪುನಾರಚನೆಯ ಕಾರ್ಯ ನಡೆಯುತ್ತಲೇ ಇರುತ್ತದೆ. ಈ ರೀತಿ ಜ್ಞಾನರಚನೆ ಪುನಾರಚನೆಯ ಪ್ರಕ್ರಿಯೆಯನ್ನು ಅನುಕೂಲಿಸುವುದೇ ರಚನವಾದಿ ಪಠ್ಯಕ್ರಮದ ಮೂಲ ತತ್ವ.

ರಚನಾವಾದವು ಈ ಕೆಳಗಿನ ನಾಲ್ಕು ಸ್ತರಗಳಲ್ಲಿ ಸಾಧಿಸಬಹುದಾಗಿದೆ.

ಟ ಕಲಿಕಾರ್ಥಿ ಮತ್ತು ಅನುಕೂಲಿಸುವವರ ನಡುವಿನ ಒಡನಾಟದಿಂದ.

ಟ ಕಲಿಕಾರ್ಥಿಗಳ ಗುಂಪುಗಳ ನಡುವಿನ ಒಡನಾಟದಿಂದ

ಟ ಕಲಿಕಾರ್ಥಿ ಮತ್ತು ಕಲಿಕಾ ವಸ್ತುಗಳಿಂದ.

ಟ ಕಲಿಕಾರ್ಥಿ ಮತ್ತು ಅವನ/ಳ ಹೊರಗಿನ ಅನುಭವಗಳಿಂದ.

ಈಗ ಒಂದು ಚಟುವಟಿಕೆ. ಅಂತೆಯೇ ಯಾವುದಾದರೊಂದು ಸಸ್ಯದ ವೈಜ್ಞಾನಿಕ ಹೆಸರು ಕೇಳಿ. ಅಥವಾ ಅದನ್ನು ತಿಳಿಯುವುದು ಹೇಗೆ ಎಂದು ಕೇಳಿ. ಕೊನೇಪಕ್ಷ ಹೇಗೆ ತಿಳಿಯುವುದು ಎಂಬುದನ್ನಾದರೂ ಹೇಳಿ. ನಿಮಗೆ ನೀಡುವ ಸಮಯ 30 ಸೆಕೆಂಡ್‍ಗಳು ಮಾತ್ರ. ಇದೇ ಪ್ರಶ್ನೆಯನ್ನು ನಮ್ಮ ಸ್ನೇಹಿತರಿಗೂ ಕೇಳಿ ನೋಡಿ. ಎಷ್ಟು ಮಂದಿ ತಕ್ಷಣವೇ ಹೇಳುತ್ತಾರೆ ಎಂದು ಗಮನಿಸಿ ನೋಡಿ.

ವಿಮರ್ಶಾಯುಕ್ತ ಶಿಕ್ಷಣ ಕ್ರಮ

ಮಕ್ಕಳನ್ನು ಶಾಲೆಯಲ್ಲಿಯೇ ಸಮಾಜ ಜೀವನಕ್ಕೆ ಅಣಿಗೊಳಿಸುವುದು ಇಂದಿನ ಶಿಕ್ಷಣದ ಮುಖ್ಯ ಕಾಳಜಿ. ಸಾಮಾಜಿಕ ಜೀವನದ ವಿವಿಧ ಸಂಘರ್ಷಗಳು ಇಲ್ಲಿ ಕಲಿಕಾ ಪ್ರಕ್ರಿಯೆಯ ಕೇಂದ್ರಬಿಂದು ಗಳಾಗುತ್ತವೆ. ಇಂತಹ ಸಂಘರ್ಷಗಳಿಂದ ಮುಕ್ತರಾಗಲು ಶಾಲಾ ಹಂತದಲ್ಲಿಯೇ ಮಾರ್ಗದರ್ಶನ ನೀಡಬೇಕಾದ ಪ್ರಾಮುಖ್ಯವನ್ನು ಎಸ್.ಸಿ.ಎಫ್-2005ರಲ್ಲಿ ವಿಮರ್ಶಾಯುಕ್ತ ಶಿಕ್ಷಣ ಕ್ರಮದ ಪರಿಕಲ್ಪನೆಗೆ ಹೆಚ್ಚಿನ ಒಲವು ನೀಡಿದೆ.

ತಮ್ಮ ಅನುಭವಗಳ ಬಗ್ಗೆ ಅವಲೋಕಿಸಿಕೊಂಡು ಇತರರೊಡನೆ ಅವನ್ನು ಹಂಚಿಕೊಂಡಾಗ ಬೆಳೆಯುವ ಅರಿವಿನ ಭಿನ್ನಾಭಿಪ್ರಾಯಗಳಿಗೆ ಹೆದರುವ ಬದಲಾಗಿ ಅವುಗಳೊಡನೆ ಸಂಬಂಧೀಕರಿಸಿಕೊಳ್ಳಲು ಈ ವಿಮರ್ಶಯುಕ್ತ ಶಿಕ್ಷಣಕ್ರಮ ನೆರವಾಗಲಿದೆ. ಮಕ್ಕಳು ತಮ್ಮ ಸಾಮಾಜಿಕ ಅನುಭವಗಳನ್ನು


ತರಗತಿಗೆ ತರಬೇಕೆಂದಾದರೆ ಸಂಘರ್ಷಗಳು ಕೂಡಾ ತರಗತಿಗೆ ಬರುವುದು ಅನಿವಾರ್ಯವಾಗುತ್ತದೆ. ಹೀಗಿರುವಾಗ ಮಕ್ಕಳು ಈ ಸಂಘರ್ಷಗಳ ಕುರಿತಾಗಿ ಸರಿಯಾದ ನಿರ್ಧಾರಗಳನ್ನು ಕೈಗೊಂಡು ಅವುಗಳಿಗೆ ಸರಿಯಾದ ಕ್ರಿಯೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.

ಸಂಘರ್ಷಗಳನ್ನು ಶಿಕ್ಷಣ ಕ್ರಮದಲ್ಲಿ ಬಳಸುವುದೆಂದರೆ ಮಕ್ಕಳನ್ನು ಸಂಘರ್ಷಗಳೊಡನೆ ವ್ಯವಹರಿಸಲು ಸಮರ್ಥರನ್ನಾಗಿಸುವುದು ಹಾಗೂ ಸಂಘರ್ಷಗಳ ರೀತಿ ಹಾಗೂ ಅವರ ಜೀವನದಲ್ಲಿ ಅವುಗಳ ಪಾತ್ರದ ಬಗೆಗೆ ಅರಿವನ್ನು ಮೂಡಿಸುವುದಾಗಿದೆ. ಇದರಲ್ಲಿ ಮಕ್ಕಳ ಪೂರ್ವ ಚಿಂತನೆ ಮತ್ತು ಪೂರ್ವ ವಿಶ್ಲೇಷಣೆಯ ಗುಣಗಳನ್ನು ಬೆಳೆಸುವುದು ಉದ್ದೇಶ. ಇದರಿಂದ ಪ್ರತಿಯೊಬ್ಬರೂ ತನ್ನನ್ನು ತಾನು ವಿಮರ್ಶಿಸಿಕೊಳ್ಳಲು ಹಾಗೂ ಇತರರನ್ನು ತಿಳಿಯಲು ಸಮರ್ಥನಾಗುತ್ತಾನೆ/ಳೆ. ಇದಕ್ಕೆ ಬೇಕಾದ ಕಲಿಕಾ ಅನುಭವಗಳನ್ನು ವಿಮರ್ಶಾಯುಕ್ತ ಶಿಕ್ಷಣ ಕ್ರಮ ನೀಡುತ್ತಿದೆ. ವಿಭಿನ್ನ ದೃಷ್ಠಿಕೋನಗಳನ್ನು ಗೌರವಿಸುವುದು ಮತ್ತು ಚರ್ಚೆಯ ಮೂಲಕ ಸಾಂಘಿಕ ನಿರ್ಧಾರಗಳನ್ನು ಕೈಗೊಳ್ಳುವುದು ಇದರ ಉದ್ದೇಶವಾಗಿದೆ. ಭಿನ್ನಾಭಿಪ್ರಾಯಗಳೊಂದಿಗೆಯೇ ಮಾನವ ಸಂಬಂಧಗಳನ್ನು ಮುಂದುವರಿಸಿಕೊಂಡು ಹೋಗುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬಹಳ ಮುಖ್ಯ ಲಕ್ಷಣ. ಯಾವುದೇ ಪೂರ್ವಾಗ್ರಹಗಳಿಲ್ಲದೇ ಇತರರ ದೃಷ್ಟಿಕೋನಗಳನ್ನು ಅರ್ಥ ಮಾಡಿಕೊಂಡು ಗೌರವಿಸುವುದು. ಭಿನ್ನಾಭಿಪ್ರಾಯಗಳನ್ನು ಯಾವುದೇ ರೀತಿಯಲ್ಲಿ ಜನರಿಗೆ ತೊಂದರೆಯಾಗದಂತೆ ಅಭಿವ್ಯಕ್ತಿಸುವುದು ವಿಮರ್ಶಾಯುಕ್ತ ಶಿಕ್ಷಣ ಕ್ರಮದ ಒಂದು ಮುಖ್ಯ ಆಯಾಮ.

ಸಂಘರ್ಷಗಳ ಬಗ್ಗೆ ನಮಗೆಲ್ಲಾ ತಿಳಿದಿದೆ. ಅವುಗಳ ಬಗ್ಗೆ ನಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿದ್ದೇವೆ. ಕೆಲವೊಮ್ಮೆ ನಮ್ಮ ಅಭಿಪ್ರಾಯಗಳನ್ನೇ ಮಕ್ಕಳ ಮೇಲೂ ಹೇರುತ್ತೇವೆ. `ಮಕ್ಕಳಿಗೇನು ಗೊತ್ತು?' ಎಂಬ ಭಾವನೆಯನ್ನೂ ಹೊಂದಿರುತ್ತೇವೆ. ಇದನ್ನೇ ನಿಜವಾದ ಸಮಸ್ಯೆಯೆಂದು ವಿಮರ್ಶಾಯುಕ್ತ ಶಿಕ್ಷಣ ತೋರಿಸುತ್ತದೆ.

ವಿಮರ್ಶಾಯುಕ್ತ ಶಿಕ್ಷಣ ಕ್ರಮ ಹೊಸ ಶಿಕ್ಷಣಕ್ರಮ ಎಂದು ತಿಳಿಯಬೇಕಾಗಿಲ್ಲ. ಮನೆಯಲ್ಲಿ ಪಾಲಕರು ಹಾಗೂ ಮಕ್ಕಳ ನಡುವಿನ ಭಿನ್ನಾಭಿಪ್ರಾಯಗಳೊಂದಿಗೆ ಆರಂಭವಾಗಿ ಶಾಲೆ, ಗೆಳೆಯರು, ಗುಂಪುಗಳು ಸಮಾಜ ಹೀಗೆ ಎಲ್ಲಾ ವಿಭಾಗಗಳಲ್ಲಿಯೂ ಹರಡಿಕೊಂಡಿದೆ. ನಾವು ಇಂತಹಾ ಸಂಘರ್ಷಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಮೇಲೆ ಸಾಮಾಜಿಕ ಜೀವನದಲ್ಲಿ ನಮ್ಮ ಯಶಸ್ಸನ್ನು ನಿರ್ಧರಿತವಾಗಿರುತ್ತದೆ.

ಇಲ್ಲಿ ಅನುಕೂಲಿಸುವವರು ಪೂರ್ವಾಗ್ರಹ ಪೀಡಿತರಾಗದೇ ಸ್ವೀಕೃತ ಜ್ಞಾನವನ್ನು ರಚನಾತ್ಮಕವಾಗಿ ಪ್ರಶ್ನಿಸುತ್ತಾ ಅದರ ಬಗೆಗೆ ತಮ್ಮದೇ ಆದ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಲು ಅವಕಾಶ ನೀಡಿದಾಗ ಮಕ್ಕಳು ಸ್ವತಂತ್ರ ಚಿಂತನೆ ಬೆÉಳೆಸಿಕೊಳ್ಳಲು ಸಮರ್ಥರಾಗುತ್ತಾರೆ. ಇಂತಹಾ ಅಂಶಗಳನ್ನು ಪಾಠ ಯೋಜನೆಯಲ್ಲಿ ಬೆÉಳೆಸಿಕೊಂಡು ಚರ್ಚಿಸಿ ನಿರ್ಧಾರ ಕೈಗೊಳ್ಳುವ ಚಟುವಟಿಕೆಗಳನ್ನು ನೀಡಬೇಕಾಗಿದೆ.

ವಿಮರ್ಶಾತ್ಮಕ ಶಿಕ್ಷಣ ಕ್ರಮವನ್ನು ಅಳವಡಿಸಿಕೊಂಡಾಗ ಈ ಕೆಳಗಿನ ಕೆಲವು ಗುಣಗಳನ್ನು ರೂಢಿಸಿಕೊಳ್ಳಬೇಕಾಗಿದೆ.

ಟ ಇತರರನ್ನು ತಾಳ್ಮೆಯಿಂದ ಅರ್ಥ ಮಾಡಿಕೊಳ್ಳುವುದು.

ಟ ಎಲ್ಲರ ಅಭಿಪ್ರಾಯಗಳಿಗೂ ಮನ್ನಣೆ ನೀಡುವುದು.

ಟ ಇತರರ ಮೇಲೆ ಟೀಕೆ ಮಾಡುವ ಅಭ್ಯಾಸ ಬಿಡುವುದು.

ಟ ಎಲ್ಲರ ಅಭಿಪ್ರಾಯಗಳನ್ನು ಸ್ವ-ಅವಲೋಕನಕ್ಕೆ ಹಬ್ಬುವಂತೆ ಮಾಡುವುದು.

ಟ ಹಿಮ್ಮಾಹಿತಿ(ಈeeಜbಚಿಛಿಞ) ನೀಡುವ ಮೊದಲು ಎಲ್ಲಾ ಅಂಶಗಳನ್ನು ಪರಿಗಣಿಸಿ ವಿಶ್ಲೇಷಿಸುವುದು.

ಟ ನಿರ್ಧಾರ ಕೈಗೊಳ್ಳುವಾಗ ವಿಷಯ ಮುಖ್ಯವೇ ಹೊರತು ವ್ಯಕ್ತಿಯಲ್ಲ ಎಂದು ತಿಳಿಯುವುದು.

ಟ ಸಂಘರ್ಷಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು.

ಟ ಎಲ್ಲರ ಪಾಲ್ಗೊಳ್ಳುವಿಕೆ ಹಾಗೂ ಅಭಿಪ್ರಾಯ ವಿನಿಮಯಗಳಿಗೆ ಒತ್ತು ಕೊಡುವುದು.

ಟ ಪ್ರತಿ ವಿಷಯವನ್ನೂ ಒಂದು ಸಮಗ್ರ ಚೌಕಟ್ಟಿನೊಳಗೆ ನೋಡುವ ಅಭ್ಯಾಸ ಬೆಳೆಸಿಕೊಳ್ಳುವುದು.

ಟ ಪ್ರತಿ ಹಿಮ್ಮಾಹಿತಿಗೂ ಅಗತ್ಯ ಬೆಂಬಲ ನೀಡುವ ಸಾಮಥ್ರ್ಯವಿರುವುದು.

ವಿಮರ್ಶಾಯುಕ್ತ ಶಿಕ್ಷಣದ ತರಗತಿ ಪ್ರಕ್ರಿಯೆಗೆ ಒಂದು ಉದಾಹರಣೆ

ಪ್ಲಾಸ್ಟಿಕ್ ಬಳಿಕೆ ನಿಷೇಧ ಕುರಿತಂತೆ ತರಗತಿಯಲ್ಲಿ ಒಂದು ಚರ್ಚೆ ಆರಂಭಿಸಿ. ಪ್ಲಾಸ್ಟಿಕ್ ಬಳಕೆ ಕುರಿತ ಎಲ್ಲ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳನ್ನು ಮಕ್ಕಳು ಹೇಳಲಿ. ಆ ಅಂಶಗಳನ್ನು ಕಪ್ಪುಹಲಗೆ ಮೇಲೆ ಪಟ್ಟಿ ಮಾಡಿ. ಈಗ ಪ್ಲಾಸ್ಟಿಕ್ ಬಳಕೆ ನಿಷೇಧ ನಿಜಕ್ಕೂ ಸಾಧ್ಯವೇ. ಸಾಧ್ಯವಿಲ್ಲವಾದರೆ ಅದರ ಬಳಕೆಯನ್ನು ಯಾವೆಲ್ಲ ರೀತಿ ಮಿತಗೊಳಿಸಬಹುದು ಎಂದು ಕೇಳಿ. ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಒಂದು ವಾಸ್ತವಕ್ಕೆ ಮುಖಾಮುಖಿಯಾಗುತ್ತಾರೆ. ಅದರ ವೈಜ್ಞಾನಿಕ, ಸಾಮಾಜಿಕ, ಆರ್ಥಿಕ, ಆರೋಗ್ಯ ಸಂಬಂಧಿ ಆಯಾಮಗಳನ್ನು ಪರಿಶೋಧಿಸುತ್ತಾರೆ. ಆ ಕುರಿತು ಅವರೇ ಒಂದು ನಿರ್ಧಾರ ಕೈಗೊಳ್ಳುತ್ತಾರೆ.

ಇದೇ ರೀತಿ ಎಲ್ಲ ಕಲಿಕೆಯ ವಿಷಯಗಳಿಗೆ ಸಂಬಂಧಿಸಿದಂತೆಯೂ ಇರಬಹುದಾದ ಚರ್ಚಾಸ್ಪದ ಅಂಶಗಳನ್ನು ತರಗತಿಯಲ್ಲಿ ಚರ್ಚೆಗೊಳಪಡಿಸಬಹುದು. ಇದರಿಂದ ಮಕ್ಕಳು ವಿಮರ್ಶಾಯುಕ್ತ ಚಿಂತನೆ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.


ತರಗತಿಯಲ್ಲಿ ಕಲಿಕೆ ಅನುಕೂಲಿಸುವ ವಿಧಾನಗಳು

ಎಲ್ಲ ವಿದ್ಯಾರ್ಥಿಗಳೂ ಕಲಿಕಾ ಪ್ರಕ್ರಿಯೆಯ ಭಾಗೀದಾರರಾಗಿರುತ್ತಾರೆ. ಎಲ್ಲರಲ್ಲಿಯೂ ಜ್ಞಾನ ಕಟ್ಟಿಕೊಳ್ಳುವಿಕೆಯ ಸಾಮಥ್ರ್ಯ ಮತ್ತು ತುಡಿತವಿರುತ್ತದೆ. ಅದು ಒಬ್ಬರಲ್ಲಿ ಹೆಚ್ಚು ಇರಬಹುದು, ಮತ್ತೊಬ್ಬರಲ್ಲಿ ಕಡಿಮೆಯಿರಬಹುದು. ಪ್ರತಿ ವಿದ್ಯಾರ್ಥಿಯೂ ಜ್ಞಾನವನ್ನು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡುವಂತಹ ಚಟುವಟಿಕೆಗಳನ್ನು ರೂಪಿಸುವುದು ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ. "ವಿಜ್ಞಾನ ವಿಷಯದ ಪಾಠಗಳನ್ನು ಪರಿಣಾಮಕಾರಿಯಾಗಿ ಕಲಿಸಲು ಅನೇಕ ವಿಧಾನಗಳನ್ನು ಈಗಾಗಲೇ ಕಂಡುಕೊಳ್ಳಲಾಗಿದೆ. ಆದರೆ ಒಂದು ಅಧ್ಯಾಯಕ್ಕೆ ಅಥವಾ ಪರಿಕಲ್ಪನೆಗೆ ಒಂದು ವಿಧಾನವೆಂಬ ಭಾವನೆ ಸಲ್ಲದು. ಒಂದೇ ಘಟಕದ ಬೇರೆ ಬೇರೆ ಕಲಿಕಾಂಶಗಳಿಗೆ ಬೇರೆ ಬೇರೆ ಅನುಕೂಲಿಸುವ ವಿಧಾನಗಳನ್ನು ಬಳಸಲು ಶಿಕ್ಷಕರು ಸ್ವತಂತ್ರರು. ತನ್ನ ಶಾಲಾ ಪರಿಸರ, ವಿಧ್ಯಾರ್ಥಿಗಳ ಅಭಿರುಚಿ, ಲಭ್ಯವಿರುವ ಪರಿಕರಗಳು ಇವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸೂಕ್ತ ವಿಧಾನ ಆಯ್ಕೆ ಮಾಡಿಕೊಂಡಲ್ಲಿ ರಚನಾತ್ಮಕ ಕಲಿಕೆಯೆಡೆಗೆ ಸಾಗುವುದು ಸುಲಭ ಸಾಧ್ಯ. "ಇveಟಿ ಣhe besಣ ಛಿuಡಿಡಿiಛಿuಟm ಚಿಟಿಜ ಣhe mosಣ ಠಿeಡಿಜಿeಛಿಣ sಥಿಟಟಚಿbus ಡಿemಚಿiಟಿs ಜeಚಿಜ uಟಿಟess quiಛಿಞeಟಿeಜ iಟಿ ಣo ಟiಜಿe bಥಿ ಣhe ಡಿighಣ meಣhoಜs oಜಿ ಣeಚಿಛಿhiಟಿg ಚಿಟಿಜ ಣhe ಡಿighಣ ಞiಟಿಜ oಜಿ ಣeಚಿಛಿheಡಿs'-ಇಜuಛಿಚಿಣioಟಿ ಅommissioಟಿ.

ಕಲಿಕೆ ಅನುಕೂಲಿಸುವ ವಿಧಾನಗಳು

ಕಲಿಕೆ ಎಂದರೆ ಶಿಕ್ಷಕರು ಹೇಳಿದ್ದನ್ನೆಲ್ಲ ಮಕ್ಕಳು ಕಲಿಯುವುದಲ್ಲ. ಕಲಿಕೆ ಮಕ್ಕಳೇ ಕ್ರಿಯಾಶೀಲರಾಗಿ ತೊಡಗಿಕೊಂಡು ಅನುಭವಗಳ ಮೂಲಕ ತಮ್ಮ ಜ್ಞಾನ ಕಟ್ಟಿಕೊಳ್ಳುವ ಪ್ರಕ್ರಿಯೆ. ನ್ಯೂಟನ್ನನ ನಿಯಮ ಏನು ಎಂದು ಕಂಠಪಾಠ ಮಾಡಿ ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರಿಸಿ ಉತ್ತಮ ಅಂಕಗಳನ್ನು ಪಡೆಯುವುದು ವಿಜ್ಞಾನ ಶಿಕ್ಷಣವಲ್ಲ. ಈ ನಿಯಮಗಳನ್ನು ಪ್ರಶ್ನಿಸಿ ಅವುಗಳ ಸತ್ಯಾಸತ್ಯತೆ ಪರಿಶೀಲಿಸಿ ಅರ್ಥಮಾಡಿ ಕೊಳ್ಳುವುದೇ ನಿಜವಾದ ವಿಜ್ಞಾನ ಕಲಿಕೆ. ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳಸದ ವಿಜ್ಞಾನ ತರಗತಿ ಬರೀ ಧಾರ್ಮಿಕ ತರಗತಿಯಂತಾಗುತ್ತದೆ, ಅಷ್ಟೆ. ಮಕ್ಕಳು ಪ್ರಶ್ನೆಗಳನ್ನು ಕೇಳುತ್ತಾ, ಗುಂಪು ಚರ್ಚೆಯಲ್ಲಿ ಸಹವರ್ತಿಗಳ ಜೊತೆ ಚರ್ಚೆಯಲ್ಲಿ, ಅನುಭವ ಹಂಚಿಕೆಯಲ್ಲಿ ಸಹಕಲಿಕೆಯಲ್ಲಿ ತೊಡಗಿಕೊಂಡು ವೈಯಕ್ತಿಕವಾಗಿ ಹಾಗೂ ಗುಂಪಿನಲ್ಲಿ ಶಿಕ್ಷಕರೊಂದಿಗೆ ಆತ್ಮೀಯವಾಗಿ, ಆತ್ಮವಿಶ್ವಾಸದಿಂದ ಚರ್ಚಿಸುವಂತಾಗಬೇಕು. ಈ ಎಲ್ಲಾ ವಿಧಾನಗಳಲ್ಲೂ ಮಕ್ಕಳು ಕ್ರಿಯಾಶೀಲರಾಗಿರುತ್ತಾರೆಯೇ ಹೊರತು ಕೇವಲ ಶಿಕ್ಷಕರು ಹೇಳಿದ್ದನ್ನು ಆಲಿಸುವವರಾಗಿರುವುದಿಲ್ಲ.

ತರಗತಿಯಲ್ಲಿ ಕಲಿಕೆ ಅನುಕೂಲಿಸುವ ವಿಧಾನಗಳು

1. ಸ್ವತಃ ಓದಿಕೊಳ್ಳುವುದು.

2. ಗುಂಪು ಚಟುವಟಿಕೆ

3. ದತ್ತಾಂಶಗಳ ಪಟ್ಟಿ ವಿಶ್ಲೇಷಣೆ

4. ಪತ್ರ ವೀಕ್ಷಣೆ

5. ಪ್ರಯೋಗಗಳು ಮತ್ತು ಪ್ರಾತ್ಯಕ್ಷಿಕೆ ಪದ್ಧತಿ

6. ವಿವಿಧ ರೀತಿಯ ಸ್ಪರ್ಧೆಗಳು.

7. ಉದಾಹರಣೆಗಳ ಮೂಲಕ ವಿಷದೀಕರಿಸುವುದು


8. ಯೋಜನಾ ಕಾರ್ಯ (Pಡಿoರಿeಛಿಣ)

ಎ) ವೈಯಕ್ತಿಕ

ಬಿ) ಗುಂಪು

9. ಕಾರ್ಯಯೋಜನೆ (ಂssigಟಿmeಟಿಣ)

10. ಶಿಕ್ಷಕರಿಂದ ವಿಷಯ ಮಂಡನೆ ಮತ್ತು ವಿವರಣೆ

11. ಗುಂಪು ಚರ್ಚೆ

12. ಕ್ಷೇತ್ರ ಭೇಟಿ (ದರ್ಶನ)

13. ಅತಿಥಿ ಉಪನ್ಯಾಸ

14. ಚಲನಚಿತ್ರ / ಸಾಕ್ಷಚಿತ್ರ / ಪ್ರದರ್ಶನ

15. ಕಥೆ ಹೇಳುವುದು / ನಾಟಕ / ಕವನ / ಕಾವ್ಯ

16. ವಸ್ತು ಪ್ರದರ್ಶನ

17. ಪ್ರಶ್ನೋತ್ತರ

18. ಕಲಿಕೋಪಕರಣಗಳ ಬಳಕೆ

ಎ) ಮಾದರಿ

ಬಿ) ಸಿ.ಡಿ.

ಸಿ) ಓ.ಹೆಚ್.ಪಿ.

ಡಿ) ಟಿ.ವಿ.

ಇ) ರೇಡಿಯೋ

ಎಫ್) ಕಂಪ್ಯೂಟರ್

19. ಸ್ಥಳೀಯ ಪರಿಣಿತರ ಸಹಾಯ ಮತ್ತು ಸಹಾಯ

ಶಿಕ್ಷಕರು ದೈನಂದಿನ ಕಲಿಕಾಂಶದ ಸ್ವರೂಪವನ್ನು ಅರ್ಥೈಸಿಕೊಂಡು ಯಾವು ವಿಧಾನದಿಂದ ಸುಲಭವಾಗಿ, ಗುಣಾತ್ಮಕವಾಗಿ ವಿದ್ಯಾರ್ಥಿಗಳಲ್ಲಿ ಕಲಿಕೆಯನ್ನು ಮೈಗೂಡಿಸಬಹುದೆಂಬುದನ್ನು ಯೋಚಿಸಿ, ಯೋಚಿಸಿ ಕಾರ್ಯಪ್ರವೃತ್ತರಾದರೆ ಅವರ ಉದ್ದೇಶವು ಈಡೇರುವುದರಲ್ಲಿ ಸಂಶಯವಿಲ್ಲ. ಇಂಥ ಶಿಕ್ಷಕರು ಮತ್ತು ಉತ್ತಮ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬಲ್ಲರು.

ಉದ್ದೇಶಗಳು :

ಟ ವಿದ್ಯಾರ್ಥಿಯ ಸಾಧನೆಯನ್ನು ಸಮಗ್ರವಾಗಿ ಅವಲೋಕನಕ್ಕೊಳಪಡಿಸುವುದು.

ಟ ಪ್ರತೀ ಸಾಮಥ್ರ್ಯದಲ್ಲಿಯೂ ವಿದ್ಯಾರ್ಥಿಯ ಸಾಧನೆಯನ್ನು ದಾಖಲಿಸಿಕೊಳ್ಳುವುದು.

ಟ ನಿರೀಕ್ಷಿತ ಮತ್ತು ಕೇಳಿಸಿದ ಕಲಿಕೆಯನ್ನು ವಿಶ್ಲೇಷಿಸುವುದು.

ಟ ಕಲಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಸಮಯ-ಸನ್ನಿವೇಶಕ್ಕೆ ತಕ್ಕಂತೆ ಅಗತ್ಯವಾದ ಹಿಮ್ಮಾಹಿತಿ ಪಡೆದುಕೊಳ್ಳುವುದು.

ಟ ಲಿಖಿತ ಪರೀಕ್ಷೆಗಳ ಒತ್ತಡವನ್ನು ಕಡಿಮೆ ಮಾಡುವುದು.

ಟ ಸಾಧನ ಸಲಕರಣೆಗಳು ಮತ್ತು ಅವಶ್ಯಕ ತಂತ್ರಗಳನ್ನು ಉಪಯೋಗಿಸಿ ಲಿಖಿತ, ಮೌಖಿಕ, ವೀಕ್ಷಣೆ, ಸಂದರ್ಶನ, ದರ್ಜಾಮಾಪನ, ಸಾಂದರ್ಭಿಕ ದಾಖಲೆ, ಗುಂಪು ರಚನೆಯ ಮೂಲಕ ಕಲಿಕಾ ಪ್ರಗತಿಯನ್ನು ವಿವಿಧ ಆಯಾಮಗಳಲ್ಲಿ ಒರೆ ಹಚ್ಚುವುದು.

ಟ ಸಂತಸದಾಯಕ ಮತ್ತು ವಿದ್ಯಾರ್ಥಿ ಸ್ನೇಹಿ ವಿಧಾನಗಳನ್ನು ಅನುಸರಿಸಿ ಮಕ್ಕಳ ಕಲಿಕೆಯನ್ನು ಅರ್ಥಮಾಡಿಕೊಳ್ಳುವುದು.

ಟ ವಿದ್ಯಾರ್ಥಿಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವೈಯಕ್ತಿಕ ದಾಖಲೆ ಇಡುವುದು.

ಟ ವಿದ್ಯಾರ್ಥಿಯ ಹಾಜರಾತಿ, ವೈಯಕ್ತಿಕ ಸ್ವಚ್ಛತೆ, ಕ್ರಮಬದ್ಧತೆ, ಮನೋಧೋರಣೆ, ಪರಿಸರ ಸಂರಕ್ಷಣೆ ಕಾಳಜಿ, ಭಾಗವಹಿಸುವಿಕೆ, ಸಹಕಾರ ಇತ್ಯಾದಿಗಳನ್ನು ಮೌಲ್ಯಮಾಪನದ ಪರಿಧಿಯೊಳಕ್ಕೆ ತರುವುದು.

ಟ ಕಲಿಕಾ ಪ್ರಕ್ರಿಯೆಯು ನಿರಂತರ ವಿಶ್ಲೇಷಣೆಯಿಂದ ಕ್ಲಿಷ್ಟ ಕ್ಷೇತ್ರಗಳನ್ನು ಗುರ್ತಿಸಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಸಹಾಯ ಮಾಡುವುದು.

ಟ ಮಕ್ಕಳ ಪ್ರಗತಿಯ ಬಗ್ಗೆ ಪೆÇೀಷಕರು ಮತ್ತು ಸಮುದಾಯದ ಸದಸ್ಯರಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ಹಿಮ್ಮಾಹಿತಿ ನೀಡುವುದು.

ಟ ಮೌಲ್ಯಮಾಪನ ಪ್ರಕ್ರಿಯೆಯಿಂದ ಹೊರಬರುವ ಫಲಿತಾಂಶಗಳು ಧನಾತ್ಮಕ ಬದಲಾವಣೆಗೆ ಪೂರಕವಾಗುವಂತೆ ನೋಡಿಕೊಳ್ಳುವುದು. ಸ್ವ ಮೌಲ್ಯಮಾಪನ ಮಾಡಿಕೊಳ್ಳುವ ಸಾಮಥ್ರ್ಯವನ್ನು ಹೆಚ್ಚಿಸುವುದು.

ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ ಅಳವಡಿಸಿಕೊಳ್ಳಲು ಇರುವ ಅವಕಾಶಗಳು.

ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಯ ಸಾಧನೆ, ಶಾಲಾ ಸನ್ನಿವೇಶದಲ್ಲಿನ ಪಾಲ್ಗೊಳ್ಳುವಿಕೆ ಮತ್ತು ಪ್ರಗತಿಯನ್ನು ವಿವಿಧ ತಂತ್ರಗಳ ಮೂಲಕ ಸಮಗ್ರವಾಗಿ ದಾಖಲಿಸಿಕೊಂಡು ವಿಶ್ಲೇಷಿಸಿ, ಮಗುವಿನ ಸರ್ವಾಂಗೀಣ ಅಭಿವೃದ್ಧಿ ಅನುಕೂಲಿಸುವ ಪ್ರಕ್ರಿಯೆಗೆ ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ಎನ್ನಬಹುದು.

ಸಾಧನಗಳು

ನಿರ್ದಿಷ್ಟ ಕ್ಷೇತ್ರ

ತಂತ್ರಗಳು

ಅವಧಿ

ವರದಿ

ಶಾಲೆಯಲ್ಲಿನ ನಿರಂತರ ಹಾಗೂ ಸಮಗ್ರ ಮೌಲ್ಯಪಾಮನದ ಸಾಧನಗಳು ಮತ್ತು ತಂತ್ರಗಳು

ಸಾಧನಗಳು

ನಿರ್ದಿಷ್ಟ ಕ್ಷೇತ್ರ

ತಂತ್ರಗಳು

ಮೌಖಿಕ ಪ್ರಶ್ನೆಗಳು ಅಭ್ಯಾಸ ಪ್ರಶ್ನೆಗಳು ಅಭ್ಯಾಸ ಚಟುವಟಿಕೆಗಳು ಪ್ರಶ್ನೆಪತ್ರಿಕೆ ನಿಯೋಜಿತ ಕಾರ್ಯಗಳು ಅವಲೋಕನ

ವಿಜ್ಞಾನ

ಮೌಖಿಕ ಪರೀಕ್ಷೆ ಲಿಖಿತ ಪರೀಕ್ಷೆ ನೈದಾನಿಕ ಪರೀಕ್ಷೆ ಯೋಜನಾ ಕಾರ್ಯ ಪ್ರಾಯೋಗಿಕ ಪರೀಕ್ಷೆ ಅವಲೋಕನ ಡೈರಿ ನಿರ್ವಹಣೆ ಗುಂಪು ಚರ್ಚೆ/ಕ್ಷೇತ್ರ ಭೇಟಿ ರಸಪ್ರಶ್ನೆ

ಪ್ರತಿ ಅವಧಿ ಮಾಸಿಕ / ಘಟಕದ ಕಿರುಪರೀಕ್ಷೆ ಸೆಮಿಸ್ಟರ್ / ಅರ್ಧ ವಾರ್ಷಿಕ ಪರೀಕ್ಷೆ ವಾರ್ಷಿಕ ಪರೀಕ್ಷೆ