ವೃತ್ತಛೇದಕ ಮತ್ತು ಸ್ಪರ್ಶಕ
Jump to navigation
Jump to search
ಸ್ಪರ್ಶಕವು ಒಂದು ಹಂತದಲ್ಲಿ ವೃತ್ತವನ್ನು ಸ್ಪರ್ಶಿಸುವ ರೇಖೆ. ವೃತ್ತಛೇದಕ ಎನ್ನುವುದು ವೃತ್ತದ ಮೇಲೆ ಎರಡು ವಿಭಿನ್ನ ಬಿಂದುಗಳ ಮೂಲಕ ಹಾದುಹೋಗುವ ರೇಖೆಯಾಗಿದೆ.
ಕಲಿಕೆಯ ಉದ್ದೇಶಗಳು :
ವೃತ್ತದ ಸ್ಪರ್ಶಕ ಮತ್ತು ವೃತ್ತಛೇದಕದ ಬಗ್ಗೆ ಅರ್ಥಮಾಡಿಕೊಳ್ಳಲು.
ಅಂದಾಜು ಸಮಯ:
30 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ಕಾರ್ಯಪ್ರತಿ (ವರ್ಕ್ಶೀಟ್ ) ಮತ್ತು ಪೆನ್ಸಿಲ್, ಕೈವಾರ, ದಾರಗಳು
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ವಿದ್ಯಾರ್ಥಿಗಳಿಗೆ ವೃತ್ತ ಮತ್ತು ಅದಕ್ಕೆ ಸಂಬಂಧಿಸಿದ ಪದಗಳ ಬಗ್ಗೆ ಪೂರ್ವ ಜ್ಞಾನವಿರಬೇಕು.
ತ್ರಿಜ್ಯ, ವ್ಯಾಸ, ಜ್ಯಾ, ವೃತ್ತಛೇದಕ ಮತ್ತು ಸ್ಪರ್ಶಕಗಳ ನಡುವಿನ ಸ್ಪಷ್ಟ ವ್ಯತ್ಯಾಸವನ್ನು ಅವರು ತಿಳಿದಿರಬೇಕು.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ಶಿಕ್ಷಕರು ಜಿಯೋಜಿಬ್ರಾ ಕಡತವನ್ನು ತೋರಿಸಬಹುದು.
- ಬಿಂದುಗಳನ್ನು ಪರಿಧಿಯ ಮೇಲೆ ಸರಿಸಿ ಮತ್ತು ವೃತ್ತಛೇದಕವನ್ನು ವಿವರಿಸಿ.
- ವೃತ್ತಛೇದಕದ ಎರಡೂ ಅಂತಿಮ ಬಿಂದುಗಳು ಭೇಟಿಯಾದಾಗ, ಅದು ಸ್ಪರ್ಶಕವಾಗುತ್ತದೆ.
- ವೃತ್ತದ ಪರಿಧಿಯ ಮೇಲಿನ ಬಿಂದುಗಳನ್ನು ಹೆಸರಿಸಿ.
- ರೇಖೆಯು ಎಷ್ಟು ಬಿಂದುಗಳಲ್ಲಿ ವೃತ್ತವನ್ನು ಸ್ಪರ್ಷಿಸುತ್ತಿದೆ?
- ರೇಖೆಯನ್ನು ಏನೆಂದು ಕರೆಯಲಾಗುತ್ತದೆ?
ಮೌಲ್ಯ ನಿರ್ಣಯ ಪ್ರಶ್ನೆಗಳು
- ವೃತ್ತಛೇದಕ ಮತ್ತು ಸ್ಪರ್ಶಕದ ನಡುವಿನ ವ್ಯತ್ಯಾಸವೇನು?
- ಜ್ಯಾ ಮತ್ತು ವೃತ್ತಛೇದಕದ ನಡುವಿನ ವ್ಯತ್ಯಾಸವೇನು?
- ವೃತ್ತದಲ್ಲಿ 3 ಬಿಂದುಗಳನ್ನು ಸ್ಪರ್ಷಿಸುವ ವೃತ್ತಛೇದಕವನ್ನು ನೀವು ಎಳೆಯಬಹುದೇ?
- ಸ್ಪರ್ಶಕವು ಎಷ್ಟು ಬಿಂದುಗಳಲ್ಲಿ ವೃತ್ತವನ್ನು ಸ್ಪರ್ಶಿಸುತ್ತದೆ?
- ವೃತ್ತಕ್ಕೆ ಎಷ್ಟು ಸ್ಪರ್ಶಕಗಳನ್ನು ಎಳೆಯಬಹುದು?
- ಯಾವುದೇ ಒಂದು ಬಿಂದುವಿನಲ್ಲಿ ಎಷ್ಟು ಸ್ಪರ್ಶಕಗಳನ್ನು ವೃತ್ತಕ್ಕೆ ಎಳೆಯಬಹುದು?
- ವೃತ್ತವು ಎಷ್ಟು ಸಮಾಂತರ ಸ್ಪರ್ಶಕಗಳನ್ನು ಹೊಂದಬಹುದು?