ವೃತ್ತದ ಕೇಂದ್ರಕ್ಕೆ ಜ್ಯಾದ ಉದ್ದ ಮತ್ತು ಅದರ ದೂರ
Jump to navigation
Jump to search
ಜ್ಯಾಕ್ಕೆ ಕೇಂದ್ರದಿಂದ ದೂರವು ಜ್ಯಾದ ಲಂಬವಾದ ಅಂತರವಾಗಿದ್ದು ಅದು ಕೇಂದ್ರದ ಮೂಲಕ ಹಾದುಹೋಗುತ್ತದೆ.
ಕಲಿಕೆಯ ಉದ್ದೇಶಗಳು :
ಜ್ಯಾದ ಉದ್ದ ಮತ್ತು ಕೇಂದ್ರದಿಂದ ಇರುವ ದೂರದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಿ
ಅಂದಾಜು ಸಮಯ:
30 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ಕಾರ್ಯಪ್ರತಿ (ವರ್ಕ್ಶೀಟ್) ಮತ್ತು ಪೆನ್ಸಿಲ್, ಕೈವಾರ, ದಾರಗಳು
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ಬಿಂದುಗಳು, ರೇಖೆಗಳು, ಕೋನಗಳು ಮತ್ತು ಬಹುಭುಜಾಕೃತಿಗಳ ಪೂರ್ವ ಜ್ಞಾನ
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ವೃತ್ತದ ಜ್ಯಾಗೆ ವೃತ್ತದ ಕೇಂದ್ರದ ಮೂಲಕ ಲಂಬ ರೇಖೆಯನ್ನು ನಿರ್ಮಿಸಿ.
- ವೃತ್ತದ ಕೇಂದ್ರದ ಕಡೆಗೆ ಜ್ಯಾವನ್ನು ಸರಿಸಿ, ಕಾರ್ಯಪ್ರತಿಯಲ್ಲಿ (ವರ್ಕ್ಶೀಟ್) ಲಂಬ ದೂರವನ್ನು ಬರೆಯಿರಿ.
- ಜ್ಯಾದ ಉದ್ದ ಮತ್ತು ಲಂಬ ಅಂತರ(ದೂರ)ದ ನಡುವೆ ನೀವು ಏನು ಗಮನಿಸಬಹುದು? ಯಾವಾಗ ಲಂಬ ದೂರ ಶೂನ್ಯಕ್ಕೆ ಸಮವಾಗುತ್ತದೆ?
ಅವಲೋಕನ | ಜ್ಯಾ ೧ ಉದ್ದ | ಕೇಂದ್ರದಿಂದ ದೂರ | ಜ್ಯಾ ೨ ಉದ್ದ | ಕೇಂದ್ರದಿಂದ ದೂರ |