ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಗಣಿತ ಕಾರ್ಯಾಗಾರ ೨ 2018
ಕಾರ್ಯಾಗಾರದ ಗುರಿಗಳು
- ಹಂಚಿಕೆ, ಕೇಳುವಿಕೆ ಮತ್ತು ಕಲಿಕೆಗಾಗಿ ಕಲಿಕಾ ಸಮುದಾಯಕ್ಕೆ ಪರಿಚಿತವಾಗಲು ಮತ್ತು ಪ್ರೋತ್ಸಾಹಿಸಲು ಬಳಸಲಾಗುವುದು.
- ಡಿಜಿಟಲ್ ಉಪಕರಣಗಳು ಮತ್ತು ಪ್ರಕ್ರಿಯೆಗಳ ಬಳಕೆಯಲ್ಲಿ ಸಾಮರ್ಥ್ಯಗಳನ್ನು ನಿರ್ಮಿಸುವುದು ಹಾಗು ಬಲಪಡಿಸುವುದು.
- ಜಿಯೋಜಿಬ್ರಾ ಬಳಸಿಕೊಂಡು ನಿರ್ದಿಷ್ಟ ವಿಷಯಗಳಿಗೆ ಸಂಪನ್ಮೂಲಗಳನ್ನು ರಚಿಸುವುದು. ಜಿಯೋಜಿಬ್ರಾಲ್ಲಿ ಪರಿಕಲ್ಪನೆಗಳು - ಸಿದ್ಧಾಂತಗಳು, ನಕ್ಷೆಗಳು (ರೇಖೀಯ ಸಮೀಕರಣಗಳು), ವೃತ್ತಗಳು, ತ್ರಿಕೋನಮಿತಿಯ ಮೂಲಭೂತ ವಿಷಯಗಳು.
- ಜಿಯೋಜಿಬ್ರಾ ಬಳಸಿಕೊಂಡು ಪಾಠಗಳ ಅಭಿವೃದ್ಧಿಯನ್ನು ಅರ್ಥಮಾಡಿಕೊಳ್ಳುವುದು.
- ಸಮಸ್ಯೆಗಳ ಪರಿಹಾರದಲ್ಲಿ ಜಿಯೋಜಿಬ್ರಾ ಬಳಕೆಯನ್ನು ಅರ್ಥಮಾಡಿಕೊಳ್ಳುವುದು.
ಸಭಾ ಯೋಜನೆ
ಸಮಯ | ಅಧಿವೇಶನದ ಹೆಸರು | ಅಧಿವೇಶನದ ವಿವರಣೆ | ಕಾರ್ಯಗಾರದ ಸಂಪನ್ಮೂಲಗಳು | ನಿರೀಕ್ಷಿತ ಫಲಿತಾಂಶಗಳು |
ದಿನ 1 | ||||
9.30 – 10.00 | ಸ್ವಾಗತ ಮತ್ತು ನಿರೀಕ್ಷೆಗಳ ಹಂಚಿಕೆ | ಈ ಕಾರ್ಯಗಾರಕ್ಕೆ ನಿರೀಕ್ಷೆಗಳ ಹಂಚಿಕೆ
ಕಾರ್ಯಗಾರದ ಸಭಾ ಯೋಜನೆಯ ಚರ್ಚೆ |
ಭಾಗಿದಾರರ ಕೈಪತ್ರದಲ್ಲಿ ಕಾರ್ಯಗಾರದ ಕಾರ್ಯಸೂಚಿ ಹಾಗು ಸುತ್ತೋಲೆಯ ಪ್ರತಿ | ಕಲಿಕೆ ಒಂದು ಸಾಮೂಹಿಕ ಜವಾಬ್ದಾರಿ ಎಂಬ ಕಲ್ಪನೆಯನ್ನು ಬಲಪಡಿಸುವುದು |
10.00 – 12.30 | ವಿವಿಧ ಪಾಠಗಳಿಗೆ ಚಿತ್ರಗಳನ್ನು ಮಾಡಲು ಜಿಯೋಜಿಬ್ರಾ ಬಳಸುವುದು | ಈ ಕೆಳಗಿನ ರೇಖಾಚಿತ್ರಗಳನ್ನು ಮಾಡುವುದು
|
ಜಿಯೋಜಿಬ್ರಾ ಕಲಿಕೆ
ಜಿಯೋಜಿಬ್ರಾ ಬಳಸಿ ಚಿತ್ರಗಳನ್ನು ಬರೆಯುವುದನ್ನು ಕಲಿಯುವುದು |
ಭಾಗಿದಾರರು ಜಿಯೋಜಿಬ್ರಾ ಬಳಸುವಲ್ಲಿ ಆರಾಮದಾಯಕವಾಗುತ್ತಾರೆ ಮತ್ತು ರೇಖಾಚಿತ್ರಗಳನ್ನು ತಯಾರಿಸಲು ವಿವಿಧ ಸಾಧನಗಳನ್ನು ಬಳಸುತ್ತಾರೆ |
12.30 – 1.15 | ಭೋಜನ | ಭೋಜನ
ಸಮಸ್ಯೆಗಳ ಕೋಶಕ್ಕೆ ಸಂಪನ್ಮೂಲ ಸೃಷ್ಟಿಗಾಗಿ ಕೊಡುಗೆ ನೀಡುವುದು (ಕಷ್ಟದ ಸಮಸ್ಯೆಗಳು/ಪ್ರಮೇಯಗಳು) |
ಶಿಕ್ಷಕರು ಪಠ್ಯದಿಂದ ಒಂದು ಸಮಸ್ಯೆಯನ್ನು/ಪ್ರಮೇಯವನ್ನು ಆರಿಸುತ್ತಾರೆ | ಜ್ಯಾಮಿತಿ ಬೋಧನೆ (ಪರಿಕಲ್ಪನೆಗಳು / ಪ್ರಮೇಯಗಳು) ಯಲ್ಲಿ ಸಂಭವನೀಯ ಕಠಿಣ ತಾಣಗಳ ಗುರುತಿಸುವಿಕೆ |
1.15 – 2.30 | ಸಂಪರ್ಕ ಹಾಗು ಕಲಿಕೆಗಾಗಿ ತಂತ್ರಜ್ಞಾನ | ಪಠ್ಯ ಸಂಪಾದಕವನ್ನು ಬಳಸಿ, ಗಣಿತ ಸಂಪನ್ಮೂಲಗಳನ್ನು ಸೃಷ್ಟಿಸುವುದು - ದ್ವಿಭಾಷೆ | ಲಿಬ್ರೇ ಆಫೀಸ್ ಕಲಿಯಿರಿ | ಭಾಗಿದಾರರು ಲಿಬ್ರೇ ಆಫೀಸ್ ಬಳಸಿ ಮಾದರಿ ಗಣಿತ ಸಂಪನ್ಮೂಲಗಳನ್ನು ಮಾಡುತ್ತಾರೆ |
2.30 – 4.00 | ಜಿಯೋಜಿಬ್ರಾ ಬಳಸಿಕೊಂಡು ಪಾಠದ ಅಭಿವೃದ್ಧಿ ಹಾಗು ಅಂತರ್ಜಾಲದಲ್ಲಿಸಂಪನ್ಮೂಲಗಳ ಪ್ರವೇಶ | 1. ಭಾಗಿದಾರರು ಗುಂಪಿನಿಂದ ಜಿಯೋಜಿಬ್ರಾ ಕಡತವೊಂದನ್ನು ತೆಗೆದುಕೊಳ್ಳುತ್ತಾರೆ.
2. ಕಡತವನ್ನು ಬೋಧಿಸುವ ಯೋಜನೆಯನ್ನು ಅಭಿವೃದ್ಧಿಪಡಿಸುವುದು. 3. ಪಾಠಗಳನ್ನು ಹಂಚಿಕೊಳ್ಳುವುದು |
ಜಿಯೋಜಿಬ್ರಾ ಬಳಸಿಕೊಂಡು ಪಾಠಗಳನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಟಿಪ್ಪಣಿ | ಅವರು ಆಯ್ಕೆ ಮಾಡಿದ ವಿಷಯದ ಬಗ್ಗೆ ಭಾಗಿದಾರರು ಪಾಠವನ್ನು ಅಭಿವೃದ್ಧಿಸುತ್ತಾರೆ. ಜಿಯೋಜೀಬ್ರಾ, ಚಟುವಟಿಕೆಗಳ ಮೇಲೆ ಅಭ್ಯಾಸ, ಇತರ ವೆಬ್ ಆಧಾರಿತ ಸಂಪನ್ಮೂಲಗಳನ್ನು ಸಂಯೋಜಿಸುವ ಪಾಠ ಯೋಜನೆಯ ಅಭಿವೃದ್ಧಿ. |
ಮನೆಗೆಲಸಕ್ಕೆ ವಾಚನ | ಚತುರ್ಭುಜ ಸಮಸ್ಯೆಗೊಂದು ದೃಷ್ಟಿಕೋನ. | |||
ದಿನ 2 | ||||
9.30 – 11.00 | ಸಮಸ್ಯೆಗಳ ಪರಿಹಾರಕ್ಕೆ ಜಿಯೋಜಿಬ್ರಾ | ಮನೆಗೆಲಸದ ವಾಚನದ ಪ್ರತಿಫಲನಗಳನ್ನು ಹಂಚಿಕೊಳ್ಳುವುದು
ಸಮಸ್ಯೆ ವಿವರಿಸುವ / ಪರಿಹರಿಸಲು ಜಿಯೋಜಿಬ್ರಾ ಬಳಕೆಯ ಅನ್ವೇಷಣೆ |
ಚತುರ್ಭುಜ ಸಮಸ್ಯೆಗೊಂದು ದೃಷ್ಟಿಕೋನ. (ಕನ್ನಡ ಹಾಗು ಆಂಗ್ಲ) | ಟಿಪಿಡಿಯ ವಿಧಾನವಾಗಿ ವಾಚನದ ಪ್ರಾಮುಖ್ಯತೆಯನ್ನು ಶ್ಲಾಘಿಸುವುದು
ಟಿಪಿಡಿಯನ್ನು ಬೆಂಬಲಿಸಲು ತಂತ್ರಜ್ಞಾನದ ಪಾತ್ರವನ್ನು ಶ್ಲಾಘಿಸುವುದು |
11.00 – 12.30 | ಮಾದರಿ ಉದಾಹರಣೆಗಳ ಪ್ರದರ್ಶನ | KOER ಪುಟಗಳ ಹಂಚಿಕೆ:
ಯೂಕ್ಲಿಡ್‌ನ ಸಿದ್ಧಾಂತಗಳು, ಪೋಸ್ಟ್ಯುಲೇಟ್ಗಳು ಮತ್ತು ಸಿದ್ಧಾಂತ. |
KOER ಪುಟಗಳು- ಆನ್‌ಲೈನ್ ಹಾಗು ಆಫ್‌ಲೈನ್ | 1. ಭಾಗಿದಾರರು ಒಂದು ಉದಾಹರಣಾ ಸಂಪನ್ಮೂಲವನ್ನು ನೋಡಿ ಜಿಯೋಜಿಬ್ರಾ ಬಳಸಿಕೊಂಡು ಹೇಗೆ ಪಾಠಗಳನ್ನು ಮಾಡಬಹುದೆಂದು ನೋಡಿದ್ದಾರೆ.
2. ಭಾಗಿದಾರರು ಕಾರ್ಯಗಾರಕ್ಕೆ ಮುಂಚೆ ಹಾಗು ಅದರ ಸಮಯದಲ್ಲಿ ಸೃಷ್ಟಿಸಿದ ಸಂಪನ್ಮೂಲಗಳನ್ನು ಪ್ರವೇಶಿಸುತ್ತಾರೆ. |
12.30 – 1.15 | ಭೋಜನ | ಸಮುದಾಯ ಪಾಲ್ಗೊಳ್ಳುವಿಕೆಯನ್ನು ನಿರ್ಧರಿಸುವುದು | ಸಂಪನ್ಮೂಲಗಳು, ಅನುಭವಗಳು, ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳನ್ನು ಭಾಗಿದಾರರು ಸರದಿಯಲ್ಲಿ ಹಂಚಿಕೊಳ್ಳಬೇಕು | |
1.15 – 2.00 | ಜಿಯೋಜಿಬ್ರಾನೊಂದಿಗೆ ಪರಿಕಲ್ಪನೆಯ ಕಲಿಕೆ | 1. ಒದಗಿಸಿದ ಸಮಸ್ಯೆ ಬ್ಯಾಕ್‌ನಿಂದ ಪ್ರಶ್ನೆಗಳನ್ನು ಪರಿಹರಿಸಲು / ವಿವರಿಸಲು ಜಿಯೋಜಿಬ್ರಾ ಬಳಸಿ
ಸಮಸ್ಯೆಯ ಪ್ರಮುಖ ಪರಿಕಲ್ಪನೆಗಳನ್ನು / ಕಲ್ಪನಾತ್ಮಕ ತೊಂದರೆಗಳನ್ನು / ತಪ್ಪುಗ್ರಹಿಕೆಗಳನ್ನು ಗುರುತಿಸುವುದು. 2. ವಿದ್ಯಾರ್ಥಿಗಳಲ್ಲಿ ಪರಿಕಲ್ಪನಾ ಚಿಂತನೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ನಿರ್ಮಿಸುವ ಸಂವಾದಾತ್ಮಕ ಪಾಠವನ್ನು ನಿರ್ಮಿಸಲು ಜಿಯೋಜಿಬ್ರಾವನ್ನು ಬಳಸುವುದು |
ಜಿಯೋಜಿಬ್ರಾ ಕಲಿಕೆ
ಜಿಯೋಜಿಬ್ರಾ ಬಳಸಿ ಚಿತ್ರಗಳನ್ನು ಬರೆಯುವುದನ್ನು ಕಲಿಯುವುದು |
1. ಭಾಗಿದಾರರು ಒಂದು ಉದಾಹರಣಾ ಸಂಪನ್ಮೂಲವನ್ನು ನೋಡಿ ಜಿಯೋಜಿಬ್ರಾ ಬಳಸಿಕೊಂಡು ಹೇಗೆ ಪಾಠಗಳನ್ನು ಮಾಡಬಹುದೆಂದು ನೋಡಿದ್ದಾರೆ.
2. ಭಾಗಿದಾರರು ಕಾರ್ಯಗಾರಕ್ಕೆ ಮುಂಚೆ ಹಾಗು ಅದರ ಸಮಯದಲ್ಲಿ ಸೃಷ್ಟಿಸಿದ ಸಂಪನ್ಮೂಲಗಳನ್ನು ಪ್ರವೇಶಿಸುತ್ತಾರೆ. |
2.00 – 2.30 | ವಲಯ ಕಾರ್ಯಕ್ರಮಕ್ಕೆ ಅನಿಸಿಕೆಗಳು | ಮುಂದಿನ ಕಾರ್ಯಾಗಾರದಲ್ಲಿ ಸೇರಿಸಬೇಕಾದವುಗಳು ಯಾವುವು
ಯಾವ ರೀತಿಯ ಶಾಲಾ ಮಧ್ಯಸ್ಥಿಕೆಗಳು ಉಪಯುಕ್ತವಾಗುತ್ತವೆ |
ಹಂಚಿದ ಪಠ್ಯಕ್ರಮದ ಅಭಿವೃದ್ಧಿ | |
2.30 – 4.00 | ಜಿಯೋಜಿಬ್ರಾ ಅಭ್ಯಾಸ | ಮೊದಲನೇ ದಿನ ಹಂಚಿಕೊಂಡ ಜಿಯೋಜಿಬ್ರಾ ಕಡತಗಳನ್ನು/ ಪಾಠಗಳನ್ನು ಮರುಸೃಷ್ಟಿಸುವುದು | ಜಿಯೋಜಿಬ್ರಾ ಕಲಿಕೆ
ಜಿಯೋಜಿಬ್ರಾ ಬಳಸಿ ಚಿತ್ರಗಳನ್ನು ಬರೆಯುವುದನ್ನು ಕಲಿಯುವುದು |
|
ಹಿಮ್ಮಾಹಿತಿ ಹಾಗು ಹಾಜರಾತಿ ಪತ್ರ |
ಕಾರ್ಯಗಾರದ ಸಂಪನ್ಮೂಲಗಳು
ಗಣಿತ ಸಂಪನ್ಮೂಲಗಳು
- NCERT ಗಣಿತ ಪಠ್ಯಪುಸ್ತಕಗಳು
- ಗಣಿತ ಬೋಧನೆಗೆ NCF 2005 ಪತ್ರ
- Adding it up - Strands of Mathematical Proficiency
- ವಿಷಯವಸ್ತುಗಳಿಗೆ ಸಂಬಂಧಿಸಿದ ಜಿಯೋಜಿಬ್ರಾ ಕಡತಗಳು
- ಜಿಯೋಜಿಬ್ರಾ ಕಡತಗಳೊಂದಿಗೆ BHS ಶಾಲೆಯಲ್ಲಿ ಅನುಷ್ಠಾನಕ್ಕೆ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ.
- ಸೆಪ್ಟೆಂಬರ್ ಕಾರ್ಯಗಾರಕ್ಕೆ ಜಿಯೋಜಿಬ್ರಾ ಅಭ್ಯಾಸ ಚಟುವಟಿಕೆಗಳ ತಪಶೀಲಪಟ್ಟಿ
- ಕೆಲವು ಪ್ರಮುಖ ಗಣಿತ ವಿಷಯ ತಾಣಗಳು
- ಚತುರ್ಭುಜ.pdf
ಡಿಜಿಟಲ್ ಸಾಕ್ಷರತೆಗೆ ಸಂಪನ್ಮೂಲಗಳು
- ಮೂಲಭೂತ ಡಿಜಿಟಲ್ ಸಾಕ್ಷರತೆ
- ಉಬುಂಟು ಕಲಿಯಿರಿ
- ಫೈರ್‌ಫಾಕ್ಸ್ ಕಲಿಯಿರಿ
- ಪಠ್ಯ ಸಂಪಾದನೆ ಕಲಿಯಿರಿ
- ಅಂತರ್ಜಾಲ ಹಾಗು ವೆಬ್‌ಗೆ ಪರಿಚಯ
- ವೃತ್ತಿಪರ ಕಲಿಕಾ ಸಮುದಾಯಗಳೆಂದರೆ ಏನು?
- ವೈಯಕ್ತಿಕ ಡಿಜಿಟಲ್ ಗ್ರಂಥಾಲಯವನ್ನು ಕಟ್ಟುವುದು
- ಜಿಮೇಲ್ ಕಲಿಯಿರಿ
- ಜಿಯೋಜಿಬ್ರಾ ಕಲಿಯಿರಿ
- ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ತಂತ್ರಜ್ಞಾನದ ಬಳಕೆ
ಮುಂದಿನ ಯೋಜನೆಗಳು
ಕಾರ್ಯಗಾರದ ಹಿಮ್ಮಾಹಿತಿ ನಮೂನೆ
ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ