ಶ್ಯೂ ನನ್ನ ಹೆಸರಲ್ಲ - ಧ್ವನಿ ಕಥೆಯ ಚಟುವಟಿಕೆ ಪುಟ
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಕಂದುಬಣ್ಣದ ನಾಯಿಮರಿ ಕಣ್ಣಿಗೆ ಬಿದ್ದರೆ ಸಾಕು ಎಲ್ಲ ಹೇಳುವ ಮಾತು “ಶ್ಯೂ!” ಪುಟ್ಟ ಹುಡುಗನೊಬ್ಬ ಅದಕ್ಕೆ ತನ್ನ ಊಟದಲ್ಲಿ ಪಾಲು ಕೊಡುತ್ತಿದ್ದ. ಒಂದು ದಿನ ಅದು ಅವನ ಮನೆವರೆಗೆ ಹಿಂಬಾಲಿಸಿಕೊಂಡು ಹೋಯಿತು. “ಶ್ಯೂ!” ಎನ್ನುವುದು ತನ್ನ ಹೆಸರಲ್ಲ ಎನ್ನುವುದು ನಾಯಿಮರಿಗೆ ಆಗ ಗೊತ್ತಾಯಿತು!
ಉದ್ದೇಶಗಳು :
ಪ್ರಸ್ತುತ ಕಥೆಯ ಮೂಲಕ ಮಕ್ಕಳಿಗೆ ಸಾಕು ಪ್ರಾಣಿಗಳು ಯಾವುವು, ಮನುಷ್ಯನೊಂದಿಗೆ ಅವುಗಳ ವರ್ತನೆ ಹೇಗಿರುತ್ತದೆ ಹಾಗೂ ಪ್ರಾಣಿಗಳು ಆಹಾರಕ್ಕಾಗಿ ಪಡುವ ಅವಸ್ಥೆಗಳ ಕುರಿತು ಚರ್ಚಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :
ಕಥಾ ವಸ್ತು : ಪ್ರೀತಿ, ಕರುಣೆ ಮತ್ತು ಕಾಳಜಿ, ಪ್ರಾಣಿ ಮತ್ತು ಪಕ್ಷಿಗಳು
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Shoo%20Nanna%20Hesaralla.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಶಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆಗಳು
- ಅಭಿನಯ ಗೀತೆ - ಹೆಬ್ಬೆರಳು ತೋರುಬೆರಳು ಕುಣಿಯುತ್ತಿದೆ. DC ಉಮಾಶಂಕರ್ (Youtube)
ಆಲಿಸುವಿಕೆಯ ಪೂರ್ವ ಚಟುವಟಿಕೆಗಳು
- ನೀನು ನೋಡಿರುವ ಪ್ರಾಣಿಗಳು ಯಾವುವು?
- ನಿನಿಗೆ ಇಷ್ಟವಾದ ಪ್ರಾಣಿ ಯಾವುದು?
- ನೀನು ಯಾವುದಾದರೂ ಪ್ರಾಣಿಯನ್ನು ಸಾಕಿದ್ದೀಯಾ?
- ನಿನಿಗೆ ಇಷ್ಟವಾದ ಪ್ರಾಣಿಯನ್ನು ಹೇಗೆ ಆರೈಕೆ ಮಾಡುವೆ?
- ನಿನಿಗೆ ಇಷ್ಟವಿಲ್ಲದ ಪ್ರಾಣಿ ಮನೆಗೆ ಬಂದರೆ ನೀನು ಹೇಗೆ ಓಡಿಸುವೆ?
ಆಲಿಸುವ ಸಂಧರ್ಭದ ಚಟುವಟಿಕೆಗಳು
- Pause 1 : ಅಂಗಡಿಯವ ಗದರಿದ.
- ಅಂಗಡಿಯವ ಯಾರಿಗೆ ಗದರಿರಬಹುದು?
- Pause 2 : ನೀನು ಓದುವ ಸಮಯ
- ಹುಡುಗ ಪ್ರಾಣಿಯೊಂದಿಗೆ ವರ್ತಿಸಿದ್ದು ಸರಿಯೇ?
- ನಿನಿಗೆ ಯಾರಾದರು ಹೀಗೆ ಬೈದ್ದಿದ್ದಾರೆಯೇ? ಬೈದ್ದಿದ್ದರೆ ಆಗ ನೀನು ಏನು ಮಾಡಿದೆ?
- ಮುಂದೆ ಆ ಕಥೆಯಲ್ಲಿ ಏನಾಗಿರಬಹುದು?
- Pause 3 : ಆದಿತ್ಯ ನಾಯಿಯನ್ನು ಕಂಡಾಗ
- ಆದಿತ್ಯ ನಾಯಿಯನ್ನು ಕಂಟು ಏನು ಮಾಡಿರಬಹುದು?
- ಅವನೂ ಕೂಡ ಮೊದಲಿನ ಹುಡುಗನ ಹಾಗೆ ತೊಂದರೆಕೊಟ್ಟಿರಬಹುದಾ?
ಆಲಿಸಿದ ನಂತರದ ಚಟುವಟಿಕೆಗಳು
- ಚಿತ್ರ ಬಿಡಿಸುವುದು
- ಕಥೆಯಲ್ಲಿನ ಪಾತ್ರಗಳನ್ನು ಹೆಸರಿಸಿರಿ
- ನಿನ್ನ ಇಷ್ಟದ ಪಾತ್ರವನ್ನು ಅಭಿನಯಿಸಿ
- ಹಲವು ಪ್ರಾಣಿಗಳ ಚಿತ್ರವನ್ನು ನೋಡಿ ಅದರಲ್ಲಿ ಸಾಕು ಪ್ರಾಣಿ ಮತ್ತು ಕಾಡು ಪ್ರಾಣಿಗಳನ್ನು ವಿಭಾಗಿಸಿ.