ಸಮದ್ವಿಬಾಹು ತ್ರಾಪಿಜ್ಯವನ್ನು ರಚಿಸಿ ಮತ್ತು ಅದರ ಗುಣಲಕ್ಷಣಗಳನ್ನು ಅಧ್ಯಯನ ಮಾಡಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಅಂದಾಜು ಸಮಯ

40 ನಿಮಿಷಗಳು.

ಬೇಕಾಗುವ ಸಂಪನ್ಮೂಲಗಳು

ಲ್ಯಾಪ್‌ಟಾಪ್, ಜಿಯೋಜಿಬ್ರಾ ಕಡತ, ಪ್ರೊಜೆಕ್ಟರ್ ಮತ್ತು ಪಾಯಿಂಟರ್.

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

ವಿದ್ಯಾರ್ಥಿಗಳು ಸಮಾಂತರ ರೇಖೆಗಳು, ಲಂಬ ರೇಖೆಗಳು ಮತ್ತು ಆಯತದ ಪರಿಕಲ್ಪನೆಗಳನ್ನು ತಿಳಿದಿರಬೇಕು.

ಸಮಾಂತರ ರೇಖೆಗಳು ಮತ್ತು ಲಂಬ ರೇಖೆಗಳಂತಹ ಮೂಲ ರಚನೆಗಳನ್ನು ಅವರು ತಿಳಿದಿರಬೇಕು.

ಬಹುಮಾಧ್ಯಮ ಸಂಪನ್ಮೂಲಗಳು

ವೆಬ್‌ಸೈಟ್ ಸಂವಾದಾತ್ಮಕ / ಲಿಂಕ್‌ಗಳು / / ಜಿಯೋಜಿಬ್ರಾ ಕಡತಗಳು : ಈ ಜಿಯೋಜಿಬ್ರಾ ಕಡತವನ್ನು ಅನ್ನು ಐಟಿಎಫ್‌ಸಿ ಶಿಕ್ಷಣ ತಂಡದಿಂದ ಮಾಡಲಾಗಿದೆ.

ವಿಧಾನ/ಬೆಳವಣಿಗೆಯ ಪ್ರಶ್ನೆಗಳು

  1. ತ್ರಾಪಿಜ್ಯದ ಚಿತ್ರ ಮತ್ತು ಅದರ ಗುಣಲಕ್ಷಣಗಳನ್ನು ನೆನಪಿಸಿಕೊಳ್ಳಿ.
  2. ಎರಡು ಸಮಾಂತರವಲ್ಲದ ಬಾಹುಗಳನ್ನು ಹೊಂದಿರುವ ತ್ರಾಪಿಜ್ಯವನ್ನು ಸಮದ್ವಿಬಾಹು ತ್ರಾಪಿಜ್ಯ ಎಂದು ಹೇಳಿ.
  3. ತ್ರಾಪಿಜ್ಯದ ಶೃಂಗಗಳನ್ನು ಚಲಿಸುವ ಮೂಲಕ, ತ್ರಾಪಿಜ್ಯದ ವಿಭಿನ್ನ ಗಾತ್ರಗಳು ಮತ್ತು ಆಕಾರಗಳನ್ನು ನೀವು ಗಮನಿಸಬಹುದು.
  4. ನಿಮ್ಮ ತ್ರಾಪಿಜ್ಯ ಆಯತಕ್ಕೆ ತಿರುಗಿದಾಗ ನೀವು ಗಮನಿಸಿರುವುದನ್ನು ಖಚಿತಪಡಿಸಿಕೊಳ್ಳಿ.
  5. ಸಮದ್ವಿಬಾಹು ತ್ರಾಪಿಜ್ಯದ ಸಮಮಿತಿಯನ್ನು ಗಮನಿಸಿ.
  6. ಅದರ ಗುಣಲಕ್ಷಣಗಳನ್ನು ಅಧ್ಯಯನ ಮಾಡಿ.
  7. ತ್ರಾಪಿಜ್ಯದ ಶೃಂಗಗಳನ್ನು ಎಳೆಯಿರಿ ಮತ್ತು ಕೋನದ ಅಳತೆಗಳನ್ನು ಗಮನಿಸಿ.
  8. ಸಮದ್ವಿಬಾಹು ತ್ರಾಪಿಜ್ಯದ ಮೂಲ ಕೋನಗಳ ಬಗ್ಗೆ ಒಂದು ಊಹೆಯನ್ನು ಮಾಡಿ. (ಸಮಾಂತರ ಎರಡೂ ಬಾಹುಗಳನ್ನು ಪಾದ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ತ್ರಾಪಿಜ್ಯದ ಎರಡು ಜೋಡಿ ಮೂಲ ಕೋನಗಳನ್ನು ಹೊಂದಿರುತ್ತದೆ.)

ಅಭಿವೃದ್ಧಿ ಪ್ರಶ್ನೆಗಳು:

  1. ಸಮಾಂತರ ರೇಖೆಗಳು ಯಾವುವು?
  2. ತ್ರಾಪಿಜ್ಯ ಎಂದರೇನು?
  3. ತ್ರಾಪಿಜ್ಯ ಚತುರ್ಭುಜವೇ?
  4. ತ್ರಾಪಿಜ್ಯದ ವಿಶಿಷ್ಟ ಗುಣಲಕ್ಷಣಗಳು ಯಾವುವು?
  5. ಸಮಾಂತರವಲ್ಲದ ಬಾಹುಗಳ ಬಗ್ಗೆ ನೀವು ಏನು ಗಮನಿಸುತ್ತೀರಿ?
  6. ನೀವು ಎಷ್ಟು ಆಂತರಿಕ ಕೋನಗಳನ್ನು ನೋಡುತ್ತೀರಿ?
  7. ಯಾವುದೇ ಚತುರ್ಭುಜದ 4 ಕೋನಗಳ ಮೊತ್ತ ಎಷ್ಟು?
  8. ಆಂತರಿಕ ಕೋನಗಳ ಬಗ್ಗೆ ನೀವು ಏನು ತೀರ್ಮಾನಿಸಬಹುದು?
  9. ಸಮದ್ವಿಬಾಹು ತ್ರಾಪಿಜ್ಯದಲ್ಲಿ ಕರ್ಣಗಳ ವಿಶೇಷತೆ ಏನು?

ಮೌಲ್ಯ ನಿರ್ಣಯ ಪ್ರಶ್ನೆಗಳು

  • ಎಲ್ಲಾ ತ್ರಾಪಿಜ್ಯಗಳು ಸಮದ್ವಿಬಾಹು ಆಗಿದೆಯೇ?
  • ಎಲ್ಲಾ ತ್ರಾಪಿಜ್ಯಗಳು ಚತುರ್ಭುಜಗಳೇ?
  • ಆಯತವನ್ನು ಸಮದ್ವಿಬಾಹು ತ್ರಾಪಿಜ್ಯ ಎಂದು ಪರಿಗಣಿಸಬಹುದೇ?

ಪ್ರಶ್ನೆ ಕಾರ್ನರ್:

ಸಮದ್ವಿಬಾಹು ತ್ರಾಪಿಜ್ಯದ ಗುಣಲಕ್ಷಣಗಳನ್ನು ತಿಳಿಸಿ?